• Home
 • »
 • News
 • »
 • tech
 • »
 • Jio Offer: ಫಿಫಾ ಫುಟ್​ಬಾಲ್ ವರ್ಲ್ಡ್​ಕಪ್ ಪ್ರಿಯರಿಗಾಗಿ ಜಿಯೋದಿಂದ ವಿಶೇಷ ಡೇಟಾ ಆಫರ್!

Jio Offer: ಫಿಫಾ ಫುಟ್​ಬಾಲ್ ವರ್ಲ್ಡ್​ಕಪ್ ಪ್ರಿಯರಿಗಾಗಿ ಜಿಯೋದಿಂದ ವಿಶೇಷ ಡೇಟಾ ಆಫರ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಯೋಜನೆಗಳಿಂದ ಜಿಯೋ ಗ್ರಾಹಕರು ಎಲ್ಲಿಯೂ ಕುಳಿತುಕೊಂಡು ಕತಾರ್, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿದ್ದುಕೊಂಡು ಬಹಳ ಸುಲಭವಾಗಿ ಸಂವಹನ ನಡೆಸಬಹುದಾಗಿದೆ. ಇದರಲ್ಲಿ ಒಟ್ಟು ಐದು ಪ್ರೀಪೇಯ್ಡ್ ಯೋಜನೆಗಳನ್ನು ಹೊಂದಿದೆ. ಭಾರತದಲ್ಲಿನ ಜಿಯೋ ಗ್ರಾಹಕರು ಫಿಫಾ ವಿಶ್ವಕಪ್​ ನೋಡಲೆಂದು ವಿದೇಶಕ್ಕೆ ಪ್ರಯಾಣಿಸುವಾಗ ಬಳಸಬಹುದಾದ ಸರಳ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಮುಂದೆ ಓದಿ ...
 • Share this:

  ಟೆಲಿಕಾಂ ಕಂಪನಿಗಳು (Telecom Company) ಹೊಸ ಯೋಜನೆಗಳೊಂದಿಗೆ ತನ್ನ ಕಂಪನಿಯನ್ನು ಅಭಿವೃದ್ಧಿಗೊಳಿಸಲು ನೋಡುತ್ತವೆ. ಈ ಬಾರಿ ಜಿಯೋ (Jio) ಅತೀ ಹೆ್ಚ್ಚು ಬಳಕೆದಾರರನ್ನು ಹೊಂದಿದ್ದು ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿದೆ. ರಿಲಯನ್ಸ್​ ಜಿಯೋ (Reliance Jio) ದಿನದಿಂದ ದಿನಕ್ಕೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಡೇಟಾ ಪ್ಯಾಕ್ (Data Pack), ಅನ್ಲಿಮಿಟೆಡ್ ಪ್ಯಾಕ್ (Unlimited Pack) ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ.ಇದೀಗ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ (FIFA World Cup) ವರ್ಲ್ಡ್ ಕಪ್ 2022 ಅನ್ನು ವೀಕ್ಷಿಸಲು ಬಯಸುವ ಗ್ರಾಹಕರಿಗಾಗಿ ವಿಶೇಷ ಅಂತರಾಷ್ಟ್ರೀಯ ರೋಮಿಂಗ್ (IR) ಪ್ಯಾಕ್​ಗಳನ್ನು ಹೊರ ತಂದಿದೆ.


  ಈ ಯೋಜನೆಗಳಿಂದ ಜಿಯೋ ಗ್ರಾಹಕರು ಎಲ್ಲಿಯೂ ಕುಳಿತುಕೊಂಡು ಕತಾರ್, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿದ್ದುಕೊಂಡು ಬಹಳ ಸುಲಭವಾಗಿ ಸಂವಹನ ನಡೆಸಬಹುದಾಗಿದೆ. ಇದರಲ್ಲಿ ಒಟ್ಟು ಐದು ಪ್ರೀಪೇಯ್ಡ್ ಯೋಜನೆಗಳನ್ನು ಹೊಂದಿದೆ. ಭಾರತದಲ್ಲಿನ ಜಿಯೋ ಗ್ರಾಹಕರು ಫಿಫಾ ವಿಶ್ವಕಪ್​ ನೋಡಲೆಂದು ವಿದೇಶಕ್ಕೆ ಪ್ರಯಾಣಿಸುವಾಗ ಬಳಸಬಹುದಾದ ಸರಳ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.


  ಜಿಯೋ ಎರಡು ರೀತಿಯ ಯೋಜನೆಗಳನ್ನು ನೀಡಿದೆ:


  ತನ್ನ ಎರಡು ರೀತಿಯ ಯೋಜನೆಗಳನ್ನು ಹೊಂದಿದ ಜಿಯೋದಲ್ಲಿ ಒಂದು ಧ್ವನಿ, ಡೇಟಾ ಮತ್ತು SMS ಪ್ರಯೋಜನಗಳನ್ನು ಹೊಂದಿದೆ ಮತ್ತು ಇನ್ನೊಂದು ಡೇಟಾ ಲೋಡಿಂಗ್ ಗಾಗಿ ಮಾತ್ರ ಅನುಮತಿ ನೀಡಲಾಗಿದೆ.


  ಇದನ್ನೂ ಓದಿ: ವಿಶೇಷ ಫೋಟೋದೊಂದಿಗೆ ಫಿಫಾ ಫುಟ್​​​ಬಾಲ್ ವಿಶ್ವಕಪ್ ಆಚರಿಸಿದ ಗೂಗಲ್ ಡೂಡಲ್! ಇಲ್ಲಿದೆ ನೋಡಿ ಆ ಇಮೇಜ್


  ಡೇಟಾ ಯೋಜನೆಗಳು ಹೇಗಿವೆ:


  ಮೊದಲ ಯೋಜನೆಯು 1122 ರೂಪಾಯಿಗಳಿಗೆ ಬರಲಿದೆ ಮತ್ತು 5 ದಿನಗಳ ವ್ಯಾಲಿಡಿಟಿಯನ್ನು ಈ ಯೋಜನೆ ಹೊಂದಿರುತ್ತದೆ. ಇದು 1GB ಡೇಟಾವನ್ನು ನೀಡುತ್ತದೆ. ಎರಡನೇ ಡೇಟಾ ಮಾತ್ರ ಯೋಜನೆಯು 5122 ರೂಪಾಯಿಗೆ ಬರುತ್ತದೆ ಮತ್ತು ಇದು 21 ದಿನಗಳ ವ್ಯಾಲಿಡಿಟಿಯೊಂದಿಗೆ 5GB ಡೇಟಾವನ್ನು ಬಳಕೆದಾರರಿಗೆ ನೀಡುತ್ತದೆ.


  ಕಾಲ್. ಡೇಟಾ ಮತ್ತು ಎಸ್​​ಎಮ್​​ಎಸ್ ಯೋಜನೆಗಳು:


  • ಈ ಕಾಲ್, ಡೇಟಾ ಮತ್ತು ಎಸ್​ಎಮ್​​ಎಸ್​​ನ ಯೋಜನೆಯ ಪಟ್ಟಿಯಲ್ಲಿ ಮೊದಲನೆಯದಾಗಿ 1599 ರೂಪಾಯಿಯ ಯೋಜನೆಯಾಗಿದ್ದು, ಇದು 15 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಜೊತೆಗೆ 1GB ಡೇಟಾವನ್ನು 150 ನಿಮಿಷಗಳ ಸ್ಥಳೀಯ ಧ್ವನಿ ಕರೆ + ಹೋಮ್ ವಾಯ್ಸ್ ಕರೆ ಮತ್ತು 100 SMS ಪ್ಯಾಕ್ ಅನ್ನು ಹೊಂದಿದೆ. ವಿಶೇಷವಾಗಿ ಕತಾರ್. ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಈ ಯೋಜನೆಯನ್ನು ಪಡೆಯಬಹುದಾಗಿದೆ.

  • ಎರಡನೇ ಯೋಜನೆಯು 3999 ರೂಪಾಯಿಗೆ ಬರುತ್ತದೆ. ಬಳಕೆದಾರರಿಗೆ 30 ದಿನಗಳವರೆಗೆ 3GB ಡೇಟಾವನ್ನು ನೀಡುತ್ತದೆ ಜೊತೆಗೆ 250 ನಿಮಿಷಗಳ ಸ್ಥಳೀಯ ಮತ್ತು ಹೋಮ್ ವಾಯ್ಸ್ ಕರೆ ಮತ್ತು 100 SMS ನೀಡುತ್ತದೆ. ಇದೂ ಕೂಡ ವಿದೇಶದಲ್ಲಿರುವವರಿಗೆ ಮಾತ್ರ ಅನ್ವಯವಾಗಿರುತ್ತದೆ.

  • ಮೂರನೆಯದಾಗಿ ನೀವು 6799 ರೂಪಾಯಿಯ ಪ್ಲಾನ್ ಕೂಡ ಪಡೆದುಕೊಳ್ಳಬಹುದು. ಇದರೊಂದಿಗೆ ನೀವು 5GB ಡೇಟಾ, 500 ನಿಮಿಷಗಳ ಸ್ಥಳೀಯ ಮತ್ತು ಹೋಮ್ ವಾಯ್ಸ್ ಕರೆ ಮತ್ತು 100 SMSಗಳನ್ನು ಪಡೆಯಬಹುದು.


  ಇದು ಜಿಯೋ ಗ್ರಾಹಕರಿಗಾಗಿ ವಿದೇಶ ಪ್ರಯಾಣದಲ್ಲಿ ಯಾವುದೇ ನೆಟ್​ವರ್ಕ್​ ಸಂಪರ್ಕಗಳ ತೊಂದರೆಯಾಗದಂತೆ ಎಚ್ಚರವಹಿಸಿ ಬಿಡುಗಡೆ ಮಾಡಿದ ಯೋಜನೆಗಳಾಗಿವೆ. ಕತಾರ್, ಯುಎಇ, ಸೌದಿ ಅರೇಬಿಯಾದಲ್ಲಿ ಇದ್ದುಕೋಮಡು ಸುಲಭವಾಗಿ ಸಂವಹನ ಮಾಡಲು ಈ ಯೋಜನೆಯನ್ನು ಜಿಯೋ ಪರಿಚಯಿಸಿದೆ ಎಂದು


  ಇದಕ್ಕಿಂತ ಮೊದಲು ಜಿಯೋ ತನ್ನ ಯೋಜನೆಯನ್ನು ಬಿಡುಗಡೆ ಮಾಡಿತ್ತು:


  533 ರೂಪಾಯಿಯ ಯೋಜನೆ:


  ಈ ಪ್ಲಾನ್ ರಿಚಾರ್ಜ್ ಅಥವಾ ಅಳವಡಿಸಿಕೊಂಡರೆ ದಿನಕ್ಕೆ 2GB ದೈನಂದಿನ ಮಿತಿಯೊಂದಿಗೆ ಒಟ್ಟು 112GB ಡೇಟಾ ಸಿಗುತ್ತದೆ. ಅದರೊಂದಿಗೆ, ಯೋಜನೆಯು ಅನಿಯಮಿತ ಕರೆ, ದಿನಕ್ಕೆ 100 SMS ಮತ್ತು Jio TV, Jio ಸಿನಿಮಾ, Jio ಭದ್ರತೆ ಮತ್ತು Jio ಕ್ಲೌಡ್ ಸೇರಿದಂತೆ Jio ಅಪ್ಲಿಕೇಶನ್ಗಳಿಗೆ ಪೂರಕ ಚಂದಾದಾರಿಕೆಯನ್ನು ಒಳಗೊಂಡಿದೆ. 56 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುತ್ತದೆ.

  Published by:Prajwal B
  First published: