ಎಲೋನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡಾಗಿನಿಂದ ಒಂದಲ್ಲಾ ಒಂದು ಬೆಳವಣಿಗೆಗಳು ಈವೆರಗೂ ನಡೆಯುತ್ತಲೇ ಇವೆ. ಇತ್ತೀಚಿನ ಬೆಳವಣಿಗೆಯಲ್ಲಿ ಟ್ವಿಟರ್ (Twitter) ಸಂಸ್ಥೆಯು ಅಧಿಕೃತ ಖಾತೆಗಾಗಿ ನೀಡಿದ್ದ ಬ್ಲೂಟಿಕ್ ಅನ್ನು ತೆಗೆದುಹಾಕಿದೆ. ಈ ಹಿಂದೆಯೇ ಎಲೋನ್ ಮಸ್ಕ್ (Elon Musk) ಒಡೆತನದ ಸಂಸ್ಥೆಯು ನೀಲಿ ಮಾರ್ಕ್ ಕುರಿತು ಪ್ರಕಟನೆಯನ್ನು ನೀಡಿತ್ತು. ಹಣ ಪಾವತಿ ಮಾಡಿದರೆ ಬ್ಲೂ ಟಿಕ್ (Blue Tick) ಮೊದಲಿನಂತೆಯೇ ಇರುತ್ತದೆ, ಇಲ್ಲದಿದ್ದರೆ ಬ್ಲೂ ಟಿಕ್ ಇರುವುದಿಲ್ಲ ಎಂದು ಹೇಳುತ್ತಾ ಬಂದಿತ್ತು.
ಖ್ಯಾತ ಸೆಲೆಬ್ರಿಟಿಗಳ ಟ್ವಿಟರ್ ಬ್ಲೂ ಟಿಕ್ ಕಣ್ಮರೆ
ಕೆಲವರು ಸೂಚನೆ ಮೇರೆಗೆ ಪಾವತಿ ಮಾಡಿ ಬ್ಲೂ ಟಿಕ್ ಉಳಿಸಿಕೊಂಡರೆ, ಇನ್ನೂ ಕೆಲವರು ಅದರ ಕುರಿತಾದ ಗೊಂದಲದ ಕಾರಣ ಟಿಕ್ ಅನ್ನು ಕಳೆದುಕೊಂಡಿದ್ದಾರೆ. ಈ ಕುರಿತಾಗಿ ಹಲವಾರು ವಿರೋಧಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ.
ಬಾಲಿವುಡ್ ಸ್ಟಾರ್‌ಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ ಸೇರಿ, ಕನ್ನಡದ ಸ್ಟಾರ್‌ಗಳಾದ ಸುದೀಪ್, ಯಶ್ ಹೀಗೆ ಹಲವು ಕಲಾವಿದರ ಮತ್ತು ಗಣ್ಯರ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಕಣ್ಮರೆಯಾಗಿದೆ.
ಟ್ವಿಟರ್ ಕಾರ್ಯದ ಬಗ್ಗೆ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಕಿಡಿ
ಈ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಕೂಡ ಟ್ವಿಟರ್ ನವೀಕರಣದ ವಿರುದ್ಧ ಹರಿಹಾಯ್ದಿದ್ದಾರೆ. ಟ್ವಿಟರ್ ಉಪಸ್ಥಿತಿಯ ಮೇಲೆ ತಮ್ಮ ನಿಯಂತ್ರಣದ ಕೊರತೆಯ ಬಗ್ಗೆ ಹಲವಾರು ಸೆಲೆಬ್ರಿಟಿಗಳು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಕುರಿತಾಗಿ ಎಲೋನ್ ಮಸ್ಕ್‌ಗೆ ಪತ್ರ ಮರೆದ ಮನೀಶ್ ಮಹೇಶ್ವರಿ, ರತನ್ ಟಾಟಾ, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಸೇರಿ ಹಲವು ಗಣ್ಯರ ಖಾತೆಯ ಮುಂದಿದ್ದ ವೆರಿಫೈಯ್ಡ್ ಟಿಕ್ ಅನ್ನು ತೆಗೆದಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ.
ಭಾರತದಲ್ಲಿ ಟ್ವಿಟರ್ ಜನಪ್ರಿಯವಾಗಲು ರತನ್ ಟಾಟಾ, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಜೋನಾಸ್, ರೆಹಮಾನ್, ವೀರ್ ದಾಸ್ ಮತ್ತು ರಾಮ್ ಚರಣ್ ಸೇರಿ ಹಲವು ಸೆಲಿಬ್ರಿಟಿಗಳು ಕಾರಣರಾಗಿದ್ದರು. ಆದರೆ ಈ ಬಗ್ಗೆ ಅವರ ಜೊತೆ ಕೂತು ಇತ್ತೀಚಿನ ಪರಿಶೀಲನಾ ನೀತಿ ಬದಲಾವಣೆ ಬಗ್ಗೆ ಸಮಾಲೋಚಿಸಲೇ ಇಲ್ಲ. ಟ್ವಿಟರ್ ನೀತಿಯಿಂದಾಗಿ ಡಿಜಿಟಲ್ ಖ್ಯಾತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಬರೆದಿದ್ದಾರೆ.
"ಜನಪ್ರಿಯತೆಗೆ ಕಾರಣರಾದ ಸೆಲೆಬ್ರಿಟಿಗಳನ್ನು ಟ್ವಿಟರ್ ಕಡೆಗಣಿಸಿದೆ"
ಹಲವು ಸೆಲೆಬ್ರಿಟಿಗಳು ಬ್ಲೂ ಟಿಕ್ ಮಾಯವಾದ ನಂತರ ಹಣ ಪಾವತಿಸಿ ಮರಳಿ ಪಡೆದರೂ ಸಹ ಟ್ವಿಟರ್ ಮೇಲಿದ್ದ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈ ಹಿಂದೆ ಅನೇಕ ಸೆಲೆಬ್ರಿಟಿಗಳನ್ನು ಟ್ವಿಟರ್ ವೇದಿಕೆಗೆ ಸೇರಲು ವೈಯಕ್ತಿಕವಾಗಿ ಆಹ್ವಾನಿಸಲಾಗಿತ್ತು ಮತ್ತು ಭಾರತದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಂತಹ ಪ್ರತಿಸ್ಪರ್ಧಿಗಳ ವಿರುದ್ಧ ಟ್ವಿಟರ್ ಖ್ಯಾತಿಯನ್ನು ಎತ್ತರಕ್ಕೇರಿಸಲು ಹಿಂದಿನ ತಂಡ ಶ್ರಮಿಸಿತ್ತು.
ಆದಾಗ್ಯೂ, ಇತ್ತೀಚಿನ ಘಟನೆಗಳು ಈ ಕೆಲವು ಪ್ರಭಾವಿ ವ್ಯಕ್ತಿಗಳು ತಮ್ಮ ಟ್ವಿಟರ್ ಉಪಸ್ಥಿತಿಯ ಮೇಲೆ ತಮ್ಮ ನಿಯಂತ್ರಣದ ಕೊರತೆಯ ಬಗ್ಗೆ ನನ್ನಲ್ಲಿ ಅವಿಶ್ವಾಸವನ್ನು ವ್ಯಕ್ತಪಡಿಸಲು ಕಾರಣವಾಗಿವೆ ಎಂದಿದ್ದಾರೆ."ಟ್ವಿಟ್ಟರ್‌ನ ಸಾಮರ್ಥ್ಯವು ಅಪಾರವಾಗಿದೆ, ಆದರೆ, ಭಾರತದಲ್ಲಿ ಟ್ವಿಟರ್‌ನ ಯಶಸ್ಸಿಗೆ ಪ್ರಮುಖವಾದ ಸೃಷ್ಟಿಕರ್ತರು ಮತ್ತು ಸೆಲೆಬ್ರಿಟಿಗಳ ಕೊಡುಗೆಗಳು ಟ್ವಿಟರ್ ಕಡೆಗಣಿಸಿದೆ" ಎಂದಿದ್ದಾರೆ.
ಇದರ ಜೊತೆಗೆ ಉತ್ತಮ ವ್ಯಾಪಾರ ಮಾದರಿಯನ್ನು ಹೊಂದಲು ಸಾಮಾಜಿಕ ಮಾಧ್ಯಮ ವೇದಿಕೆಗೆ ಮಾರ್ಗದರ್ಶನ ನೀಡಲು ಟ್ವಿಟ್ ಮುಖ್ಯಸ್ಥ ಎಲೋನ್ ಮಸ್ಕ್ ಮತ್ತೆ ಏನು ಮಾಡಬಹುದು ಎಂಬುದರ ಬಗ್ಗೆ ಮನೀಶ್ ಕೆಲ ಅಂಶಗಳನ್ನು ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: Yash-Rashmika: ಯಶ್ ಶೋ ಆಫ್ ನಟ ಎಂದಿದ್ದ ರಶ್ಮಿಕಾ, ಈಗ ರಾಕಿ ಭಾಯ್ ಬಗ್ಗೆ ಹೇಳಿದ್ದೇನು ಗೊತ್ತಾ?
* ಮೊದಲನೆಯದಾಗಿ, ಸೆಲೆಬ್ರಿಟಿಗಳ ಮೇಲೆ ಪರಿಣಾಮ ಬೀರುವ ಪ್ರಮುಖ ನೀತಿ ಬದಲಾವಣೆಗಳನ್ನು ಕಾರ್ಯಗತಗೊಳಿಸುವ ಮೊದಲು ಅವರ ಜೊತೆ ಚರ್ಚೆ ನಡೆಸಿ ವಿಶ್ವಾಸ ಗಳಿಸಬೇಕು.
* ಟ್ವಿಟರ್ ಸೃಜನಾತ್ಮಕ ಸ್ವಾತಂತ್ರ್ಯವನ್ನು ಸಂರಕ್ಷಿಸುವಾಗ ವಿತರಣೆ ಮತ್ತು ಹಣಗಳಿಕೆಗಾಗಿ ಪರಿಕರಗಳು ಮತ್ತು ಅವಕಾಶಗಳನ್ನು ಹೆಚ್ಚಿಸಬೇಕು.
* ಚಂದಾದಾರಿಕೆ ವೆಚ್ಚದ ಮೇಲೆ ಹೆಚ್ಚಿನ ಗಮನಹರಿಸಬೇಕು.
* ಕೊನೆಯದಾಗಿ, ನೆಟ್‌ವರ್ಕ್ ಎಫೆಕ್ಟ್ ಲೀಡ್ ಅನ್ನು ಕಾಪಾಡಿಕೊಳ್ಳಲು ಮತ್ತು ಉತ್ಪನ್ನ ಅನುಭವ ಮತ್ತು ಸಮುದಾಯ ನಿರ್ಮಾಣವನ್ನು ಸುಧಾರಿಸಲು ಅವರು ಶಿಫಾರಸು ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ