• Home
  • »
  • News
  • »
  • tech
  • »
  • Technology News: ತನ್ನ ಗೆಳತಿಯನ್ನು ಹಿಂಬಾಲಿಸಲು ಆಪಲ್ ಏರ್‌ಟ್ಯಾಗ್ ಬಳಸಿದ ಮಾಜಿ ಪ್ರಿಯಕರ, ಆಮೇಲೆ ಏನಾಯ್ತು?

Technology News: ತನ್ನ ಗೆಳತಿಯನ್ನು ಹಿಂಬಾಲಿಸಲು ಆಪಲ್ ಏರ್‌ಟ್ಯಾಗ್ ಬಳಸಿದ ಮಾಜಿ ಪ್ರಿಯಕರ, ಆಮೇಲೆ ಏನಾಯ್ತು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನರಿಗೆ ಉಪಯೋಗವಾಗಲಿ ಅಂತ ಮಾಡಿದ ಏರ್‌ಟ್ಯಾಗ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

  • Trending Desk
  • 2-MIN READ
  • Last Updated :
  • Share this:

ಜನರಿಗೆ ಕೆಲಸದಲ್ಲಿ ಉಪಯೋಗವಾಗಲಿ ಅಂತ ಪರಿಚಯಿಸಿದ ತಂತ್ರಜ್ಞಾನವನ್ನು (Technology) ಈಗ ಕೆಲವು ಜನರು ಹೆಗೆಲ್ಲಾ ಈ ತಂತಜ್ಞಾನದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತ ನಾವು ಪ್ರತಿದಿನ ಸುದ್ದಿಗಳಲ್ಲಿ ನೋಡುತ್ತಲೇ ಇದ್ದೇವೆ. ಇಲ್ಲಿಯೂ ಸಹ ಹಾಗೆ ಆಗಿದೆ ನೋಡಿ. ಜನರಿಗೆ ಉಪಯೋಗವಾಗಲಿ ಅಂತ ಮಾಡಿದ ಏರ್‌ಟ್ಯಾಗ್ (Airtag) ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬಳಕೆದಾರರು ತಮ್ಮ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವ ನಿಟ್ಟಿನಲ್ಲಿ ಆಪಲ್ ಏರ್‌ಟ್ಯಾಗ್ ಅನ್ನು ಪರಿಚಯಿಸಿದ್ದರು. ಆದಾಗ್ಯೂ, ಈ ಸಾಧನವನ್ನು ಕೆಲವರು ತಮ್ಮ ವಸ್ತುಗಳನ್ನು ಪತ್ತೆ ಹಚ್ಚಲು ಬಳಸದೇ, ಜನರನ್ನು ಹಿಂಬಾಲಿಸಿಲು ಇದನ್ನು ಬಳಸುತ್ತಿದ್ದಾರೆ. ಜನರು ತಮ್ಮ ಸಾಕುಪ್ರಾಣಿಗಳನ್ನು ಪತ್ತೆ ಹಚ್ಚಲು, ತಮ್ಮ ವಾಹನವನ್ನು ಟ್ರ್ಯಾಕ್ (Track) ಮಾಡಲು ಏರ್‌ಟ್ಯಾಗ್ ಅನ್ನು ಬಳಸಿದ್ದಾರೆ, ಆದರೆ ಕೆಲವರು ತಮ್ಮ ಮಾಜಿ ಗೆಳೆಯ ಮತ್ತು ಗೆಳತಿಯರನ್ನ ಹಿಂಬಾಲಿಸಲು ಅದನ್ನು ಬಳಸಿದ್ದಾರೆ. ಏರ್‌ಟ್ಯಾಗ್ ಅನ್ನು ಬಳಸಿಕೊಂಡು ಜನರನ್ನು ಹಿಂಬಾಲಿಸಿದ ಹಲವಾರು ಪ್ರಕರಣಗಳಿವೆ, ಆದರೂ ಸಹ ಆಪಲ್ ಮಾತ್ರ ಈ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಅಂತ ಹೇಳಬಹುದು.


ಮಾಜಿ ಪ್ರಿಯಕರನ ಬಗ್ಗೆ ಯುವತಿ ಮಾಡಿದ ಆರೋಪವೇನು?


ಬ್ಲೂಮ್ಬರ್ಗ್ ಪ್ರಕಾರ, ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರ ತನ್ನನ್ನು ಹಿಂಬಾಲಿಸಲು ಆಪಲ್​ನ ಏರ್‌ಟ್ಯಾಗ್ ಅನ್ನು ಬಳಸುತ್ತಿದ್ದಾನೆ ಎಂದು ತಿಳಿದಾಗ ಆಪಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ತನ್ನ ಮಾಜಿ ಪ್ರಿಯಕರ ತನ್ನ ಕಾರಿನ ವ್ಹೀಲ್ ವೆಲ್ ನಲ್ಲಿ ಏರ್‌ಟ್ಯಾಗ್ ಅನ್ನು ಫಿಕ್ಸ್ ಮಾಡಿದ್ದಾನೆ ಎಂದು ಮಹಿಳೆ  ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ. ಏರ್‌ಟ್ಯಾಗ್ ಬಳಸಿ, ಅವಳು ಎಲ್ಲಿಗೆ ಹೋಗಿದ್ದಾಳೆಂದು ಮಾಜಿ ಪ್ರಿಯಕರ ಕಂಡು ಇದನ್ನು ಹಿಡಿಯಲು ಸಾಧ್ಯವಾಯಿತು. ಹುಡುಗಿ ತನ್ನ ಮಾಜಿ ಪ್ರಿಯಕರ ತನಗೆ ಕಿರುಕುಳ ನೀಡುತ್ತಿದ್ದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ.

ಇದೇ ರೀತಿಯ ಇನ್ನೊಂದು ಪ್ರಕರಣ ಸಹ ವರದಿಯಾಗಿತ್ತು


ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ ಇನ್ನೊಬ್ಬ ಮಹಿಳೆ ಕೂಡ ಆಪಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನ್ನ ಮಗುವಿನ ಬ್ಯಾಕ್‌ಪ್ಯಾಕ್ ನಲ್ಲಿ ಏರ್‌ಟ್ಯಾಗ್ ಅನ್ನು ಇರಿಸುವ ಮೂಲಕ ತನ್ನ ಚಲನವಲನಗಳನ್ನು ಪತ್ತೆ ಹಚ್ಚಲು ತನ್ನ ಮಾಜಿ ಪತಿ ಏರ್‌ಟ್ಯಾಗ್ ಅನ್ನು ಬಳಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಹೀಗೆ ಮಾಜಿ ಪ್ರಿಯಕರರು ತಮ್ಮ ಪ್ರಿಯತಮೆಯನ್ನು ಹಿಂಬಾಲಿಸಲು ಈ ಸಾಧನವನ್ನು ಬಳಸಿರುವುದು ಇದೇನು ಮೊದಲಲ್ಲ.


ಇದನ್ನೂ ಓದಿ: OTTಯಲ್ಲಿ 3 ತಿಂಗಳು ಉಚಿತವಾಗಿ ಹೊಸ ಸಿನಿಮಾಗಳನ್ನು ನೋಡಬಹುದು


ಈ ಪ್ರಕರಣಗಳ ಬಗ್ಗೆ ಆಪಲ್ ಕಂಪನಿಯವರು ಹೇಳುವುದೇನು?


ಫೆಬ್ರವರಿಯಲ್ಲಿ, ಆಪಲ್ ಹಲವಾರು ನವೀಕರಣಗಳನ್ನು ಘೋಷಿಸಿತು, ಅದು ಏರ್‌ಟ್ಯಾಗ್ ಗಳ ಮೂಲಕ ಅನಗತ್ಯ ಟ್ರ್ಯಾಕಿಂಗ್ ಅನ್ನು ನಿಲ್ಲಿಸುತ್ತದೆ. ಅಪರಿಚಿತ ಏರ್‌ಟ್ಯಾಗ್ ತಮ್ಮೊಂದಿಗೆ ಪ್ರಯಾಣಿಸುತ್ತಿದ್ದರೆ ಈಗ ಬಳಕೆದಾರರನ್ನು ಎಚ್ಚರಿಸಲಾಗುವುದು ಎಂದು ಆಪಲ್ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ. ಬಳಕೆದಾರರು ಟೋನ್ ಅನುಕ್ರಮವನ್ನು ಬಳಸಿಕೊಂಡು ಏರ್‌ಟ್ಯಾಗ್ ಅನ್ನು ಸಹ ಕಂಡು ಹಿಡಿಯಲು ಸಾಧ್ಯವಾಗುತ್ತದೆ.


ಹೊಸ ಅಪ್ಡೇಟ್ ಗಳ ಬಗ್ಗೆ ಮಾತನಾಡಿದ ಆಪಲ್ "ಏರ್‌ಟ್ಯಾಗ್ ಅನ್ನು ಜನರು ತಮ್ಮ ವೈಯಕ್ತಿಕ ವಸ್ತುಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ, ಜನರನ್ನು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಟ್ರ್ಯಾಕ್ ಮಾಡಲು ಅಲ್ಲ ಮತ್ತು ನಮ್ಮ ಉತ್ಪನ್ನಗಳ ಯಾವುದೇ ದುರುದ್ದೇಶಪೂರಿತ ಬಳಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅನಗತ್ಯ ಟ್ರ್ಯಾಕಿಂಗ್ ಬಹಳ ಹಿಂದಿನಿಂದಲೂ ಸಾಮಾಜಿಕ ಸಮಸ್ಯೆಯಾಗಿದೆ ಮತ್ತು ಏರ್‌ಟ್ಯಾಗ್ ನ ವಿನ್ಯಾಸದಲ್ಲಿ ನಾವು ಈ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅದಕ್ಕಾಗಿಯೇ ಫೈಂಡ್ ಮೈ ನೆಟ್ವರ್ಕ್ ಅನ್ನು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಎಂಡ್-ಟು-ಎಂಡ್ ಗೂಢಲಿಪೀಕರಣವನ್ನು ಬಳಸುತ್ತದೆ ಮತ್ತು ಅನಗತ್ಯ ಟ್ರ್ಯಾಕಿಂಗ್ ಬಗ್ಗೆ ನಿಮ್ಮನ್ನು ಎಚ್ಚರಿಸಲು ನಾವು ಮೊದಲ ಬಾರಿಗೆ ಪೂರ್ವಭಾವಿ ವ್ಯವಸ್ಥೆಯೊಂದಿಗೆ ಆವಿಷ್ಕಾರ ಮಾಡಿದ್ದೇವೆ" ಎಂದು ಹೇಳಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು