Wordle: ನ್ಯೂಯಾರ್ಕ್ ಟೈಮ್ಸ್ ಈ ಗೇಮ್​ ಖರೀದಿಸಿದ ನಂತರ ಜನರು ಹೆಚ್ಚು ಚೀಟ್ ಮಾಡುತ್ತಿದ್ದಾರಂತೆ!

Wordle Game: ಜನರಿಗೆ ಆನ್​ಲೈನ್ ನಲ್ಲಿ ಈ ರೀತಿಯ ಆಟಗಳಲ್ಲಿ ಶಬ್ದ ಹುಡುಕಲು ನೆರವು ಕೊಡುವ ಇನ್ನೊಂದು ಸಂಸ್ಥೆಯಾದ ವರ್ಡ್ ಫೈಂಡರ್ ಎಂಬ ಸಂಸ್ಥೆಯು ತನ್ನ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.

ವರ್ಡಲ್ / Wordle

ವರ್ಡಲ್ / Wordle

  • Share this:
    ಏನಪ್ಪಾ ಇದು ವರ್ಡಲ್ (Wordle) ಅಂತ ನಿಮಗೆ ಅನಿಸಬಹುದು. ಇದು ಸಾಮಾನ್ಯವಾಗಿ ಎಲ್ಲ ವೃತ್ತ ಪತ್ರಿಕೆಗಳಲ್ಲಿ (Paper), ವಾರಪತ್ರಿಕೆಗಳಲ್ಲಿ (Weekly) ಬರುವ ಪದಬಂಧದ ರೀತಿಯಲ್ಲೇ ಇರುವ ಶಬ್ದವನ್ನು ಊಹಿಸುವ ಒಂದು ಆಟದ ಸ್ಪರ್ಧೆ. ಈ ವರ್ಷದ ಜನವರಿ ತಿಂಗಳಿನ ಅಂತ್ಯದಲ್ಲಿ ನ್ಯೂಯಾರ್ಕ್ ಟೈಮ್ಸ್ (Newyork Times) ಸುದ್ದಿ ಸಂಸ್ಥೆಯು ಈ 'ವರ್ಡಲ್' ಆಟವನ್ನು ಕೊಂಡುಕೊಂಡಿತ್ತು. ಇದೀಗ ಬಂದಿರುವ ವರದಿಯ ಪ್ರಕಾರ, ಈ ಹಿಂದಿನಕ್ಕಿಂತಲೂ ಜನರು ಅದರಲ್ಲಿ ಶಬ್ದ ಊಹಿಸಲು ಗೂಗಲ್ ಸರ್ಚ್ (Google Search) ಅನ್ನು ಹೆಚ್ಚಾಗಿ ಬಳಸುವ ಮೂಲಕ ಮೋಸ ಮಾಡುತ್ತಿದ್ದಾರೆಂದು ಹೇಳಲಾಗಿದೆ.

    ಜನರಿಗೆ ಆನ್​ಲೈನ್ ನಲ್ಲಿ ಈ ರೀತಿಯ ಆಟಗಳಲ್ಲಿ ಶಬ್ದ ಹುಡುಕಲು ನೆರವು ಕೊಡುವ ಇನ್ನೊಂದು ಸಂಸ್ಥೆಯಾದ ವರ್ಡ್ ಫೈಂಡರ್ ಎಂಬ ಸಂಸ್ಥೆಯು ತನ್ನ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. ಅದು ತನ್ನ ವರದಿಯಲ್ಲಿ ಹೇಳಿರುವಂತೆ "ಟುಡೇ'ಸ್ ವರ್ಡಲ್" ಎಂಬ ಕೀ ಪದವನ್ನ ಜನವರಿ ಅಂತ್ಯದ ನಂತರದಲ್ಲಿ ಗೂಗಲ್ ಸರ್ಚ್ ನಲ್ಲಿ ಹೆಚ್ಚಾಗಿ ಬಳಸಲಾಗಿದೆ ಎಂದು ಹೇಳಿದೆ. ಆದರೆ ವರ್ಡ್ ಫೈಂಡರ್ ನೀಡಿರುವ ಈ ದತ್ತಾಂಶವು ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾಗಿದ್ದು ಇತರೆ ಪ್ರದೇಶಗಳಲ್ಲಿ ಈ ಬಗ್ಗೆ ದತ್ತಾಂಶ ಸಂಗ್ರಹಿಸಲಾಗಿಲ್ಲ.

    ಈ ಬಗ್ಗೆ ವರ್ಡ್ ಫೈಂಡರ್ ಸಂಸ್ಥೆಯು ತನ್ನ ಬ್ಲಾಗ್ ಪೋಸ್ಟ್ ನಲ್ಲಿ "ನಾವು ಕಳೆದ ಮೂರು ತಿಂಗಳುಗಳಲ್ಲಿ ಟ್ರೆಂಡ್ ಆಗಿರುವ ದತ್ತಾಂಶ ಮಾತ್ರ ಸಂಗ್ರಹಿಸಿದ್ದು ಅದರಲ್ಲಿ ಎಷ್ಟು ಬಾರಿ ವರ್ಡಲ್ ಗೆ ಸಂಬಂಧಿಸಿದಂತೆ ಜನರು ಸರ್ಚ್ ಇಂಜಿನ್ ನ ಸಹಾಯ ಪಡೆಯುವ ಮೂಲಕ ಆಟದಲ್ಲಿ ಮೋಸ ಮಾಡಿದ್ದಾರೆ ಎಂಬುದನ್ನಷ್ಟೆ ಲೆಕ್ಕ ಹಾಕಿದ್ದೇವೆ" ಎಂದು ಬರೆದುಕೊಂಡಿದೆ.

    ಸಾಮಾನ್ಯವಾಗಿ ಗೂಗಲ್ ಸರ್ಚ್ ಇಂಜಿನ್ ತನ್ನಲ್ಲಿ ಹುಡುಕಲಾಗುವ ಅತಿ ಹೆಚ್ಚು ಶಬ್ದಗಳ ಜನಪ್ರೀಯತೆ ಆಧರಿಸಿ ಅದಕ್ಕೆ 0-100 ವರೆಗೆ ಕ್ರಮಾಂಕ ನೀಡುತ್ತದೆ. ವರದಿಯ ಪ್ರಕಾರ, "SWILL" ಹಾಗೂ "AROMA" ಎಂಬ ಪದಗಳು ನೂರು ಕ್ರಮಾಂಕವನ್ನು ಪಡೆದಿರುವುದಾಗಿ ಹೇಳಲಾಗಿದೆ. ಫೆಬ್ರುವರಿ 19ರ ವರ್ಡಲ್ ಆಟದಲ್ಲಿ "SWILL" ದಿನದ ಶಬ್ದವಾಗಿತ್ತು ಹಾಗೂ ಫೆಬ್ರುವರಿ 15ರ ವರ್ಡಲ್ ಆಟದಲ್ಲಿ "AROMA" ದಿನದ ವರ್ಡಲ್ ಶಬ್ದವಾಗಿತ್ತು ಎಂದು ತಿಳಿದುಬಂದಿದೆ. ಅಲ್ಲದೆ ಬಹಳಷ್ಟು ಜನರು ಬೆಳಗಿನ 7 ಮತ್ತು 8 ಗಂಟೆಯ ಮಧ್ಯೆ ಗೂಗಲ್ ನಲ್ಲಿ "ಟುಡೇ'ಸ್ ವರ್ಡಲ್" ಎಂಬ ಕೀ ಪದವನ್ನ ಅತಿ ಹೆಚ್ಚು ಶೋಧ ಮಾಡುತ್ತಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: BSNL: ಈ ಪ್ರಿಪೇಯ್ಡ್ ಪ್ಲಾನ್ ಮಿಸ್ ಮಾಡ್ಕೋಬೇಡಿ, 270GB ಉಚಿತ ಡೇಟಾ ಮತ್ತೆಂದೂ ಸಿಗದು!

    ಇಷ್ಟೆ ಅಲ್ಲದೆ ಈ ವರದಿಯು ಇನ್ನೂ ಅನೇಕ ಆಸಕ್ತಿಕರ ವಿಷಯಗಳನ್ನು ಹೊರಹಾಕಿದೆ. ಅದರಲ್ಲಿ, ನ್ಯೂ ಹ್ಯಾಂಪ್ಶೈರ್ ಜನರು ವರ್ಡಲ್ ನಲ್ಲಿ ಪದ ಹುಡುಕುವಿಕೆಗೆ ಸಂಬಂಧಿಸಿದಂತೆ ಹೆಚ್ಚು ಗೂಗಲ್ ಸರ್ಚ್ ಬಳಸಿ ಮೋಸ ಎಸಗುತ್ತಿದ್ದಾರೆಂದು ಹೇಳಲಾಗಿದೆ. ಇನ್ನುಳಿದಂತೆ ವರ್ಡಲ್ ಪದ ಹುಡುಕಲು ಗೂಗಲ್ ಬಳಸಿ ಹೆಚ್ಚು ಹೆಚ್ಚು ಮೋಸ ಮಾಡುತ್ತಿರುವ ಜನರು ರೋಡ್ ಐಲ್ಯಾಂಡ್, ವೆರ್ಮಾಂಟ್, ವಾಷಿಂಗ್ಟನ್, ಮಸ್ಸಾಚುಸೆಟ್ಸ್, ಹಾಗೂ ಮೈನ್ ಪ್ರದೇಶಗಳ ವಾಸಿಗಳಗಿದ್ದಾರೆಂದೂ ಸಹ ವರದಿಯಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: MWC 2022: ಹಾನರ್​ ಕಂಪನಿ ಮೊಬೈಲ್​ ವರ್ಲ್ಡ್​ ​ ಕಾಂಗ್ರೆಸ್​ನಲ್ಲಿ ಏನೆಲ್ಲಾ ಪ್ರದರ್ಶಿಸಿದೆ ಗೊತ್ತಾ? ಇಲ್ಲಿದೆ ಮಾಹಿತಿ

    ವರ್ಡ್‌ಫೈಂಡರ್‌ನ ಗೂಗಲ್ ಟ್ರೆಂಡ್‌ಗಳ ಗ್ರಾಫ್‌ಗಳನ್ನು ಗಮನಿಸಿದಾಗ ಜನವರಿಯ ಆರಂಭದಲ್ಲಿ ವರ್ಡಲ್ ಬಳಕೆದಾರರು ವಂಚನೆಯ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದ್ದರೆಂದು ತಿಳಿದುಬಂದಿದ್ದು ಆದರೆ, ಜನವರಿ 31 ರ ನಂತರ ಇದರ ಪ್ರಮಾಣವು ಹೆಚ್ಚಾಗಿರುವುದು ಕಂಡುಬಂದಿದೆ, ಕಾರಣ ಹೆಚ್ಚಿನ ಬಳಕೆದಾರರು ಆನ್‌ಲೈನ್ ಶೀರ್ಷಿಕೆಯನ್ನು ಆಡಲು ಪ್ರಾರಂಭಿಸಿದರು. ಹೆಚ್ಚುವರಿಯಾಗಿ, ಅನೇಕ ಪ್ರಕಟಣೆಗಳು ಮತ್ತು ಕ್ಲಿಕ್-ಬೈಟ್ ವೆಬ್‌ಸೈಟ್‌ಗಳು ಸಹ ಪದ ಹುಡುಕಲು ಹೆಣಗಾಡುವ ಆಟಗಾರರಿಗೆ ಸಹಾಯ ಮಾಡಲು 'ದಿನದ ಪ್ರಪಂಚ' ಎಂಬ ಶಿರ್ಷಿಕೆಯನ್ನು ಪ್ರಾರಂಭಿಸಿವೆ.
    Published by:Harshith AS
    First published: