• Home
  • »
  • News
  • »
  • tech
  • »
  • Youtube Issue: ಸ್ವಲ್ಪ ಎಚ್ಚರ ತಪ್ಪಿದ್ರೂ ಡಿಲೀಟ್ ಆಗುತ್ತೆ​ ನಿಮ್ಮ ಯೂಟ್ಯೂಬ್ ಚಾನೆಲ್! ಇದೇನು ಹೊಸ ನಿಯಮ

Youtube Issue: ಸ್ವಲ್ಪ ಎಚ್ಚರ ತಪ್ಪಿದ್ರೂ ಡಿಲೀಟ್ ಆಗುತ್ತೆ​ ನಿಮ್ಮ ಯೂಟ್ಯೂಬ್ ಚಾನೆಲ್! ಇದೇನು ಹೊಸ ನಿಯಮ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಯೂಟ್ಯೂಬ್ ತನ್ನ ವೀಕ್ಷಕರಿಗೆ ಮತ್ತು ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ಅದೇನೆಂದರೆ ಯೂಟ್ಯೂಬ್ 3 ತಿಂಗಳುಗಳಲ್ಲಿ ಅಪ್ಲಿಕೇಶನ್​ನಿಂದ 56 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ಡಿಲೀಟ್​ ಮಾಡಿದೆಯಂತೆ. ಕಾರಣವೇನು ಅಂತ ನೀವೇ ಓದಿ.

  • Share this:

    ಯೂಟ್ಯೂಬ್ (Youtube) ಎಂಬುದು ವಿಡಿಯೋ ಸ್ಟ್ರೀಮಿಂಗ್​ನಲ್ಲಿ (Video Streaming) ಬಹಳಷ್ಟು ಪ್ರಸಿದ್ಧಿಯನ್ನು ಪಡೆದಂತಹ ಒಂದು ಅಪ್ಲಿಕೇಶನ್ (Application) ಆಗಿದೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್​ ಒಂದು ಉದ್ಯೋಗ ಸೃಷ್ಟಿಸುವ ವೇದಿಕೆಯೂ ಹೌದು. ಯಾವುದೇ ಸಮಯದಲ್ಲಿ ಇಂಟರ್​ನೆಟ್​ನ (Internet) ಸಹಾಯದಿಂದ ಯೂಟ್ಯೂಬ್​ನಲ್ಲಿ ಬಳಕೆದಾರರಿಗೆ ಬೇಕಾದ ವಿಷಯಗಳನ್ನು ನೋಡಬಹುದಾಗಿದೆ. ಕ್ಷಣಮಾತ್ರದಲ್ಲಿ ಯೂಟ್ಯೂಬ್ ಮೂಲಕ ಗೊತ್ತಿಲ್ಲದ ವಿಷಯಗಳನ್ನು ವಿಡಿಯೋ ಮೂಲಕ ನೋಡಿ ತಿಳಿದುಕೊಳ್ಳಬಹುದಾಗಿದೆ. ಕೆಲವರು ಯೂಟ್ಯೂಬ್​ನಲ್ಲೇ ಚಾನೆಲ್ (Youtube Channel) ಮಾಡಿಕೊಂಡು ವಿಡಿಯೋ ಮಾಡುವ ಮೂಲಕ ಅದ್ರಲ್ಲೂ ಹಣ ಸಂಪಾದಿಸುತ್ತಿದ್ದಾರೆ. ಆದರೆ ಇದೀಗ ಯೂಟ್ಯೂಬ್ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ಯೂಟ್ಯೂಬ್ 3 ತಿಂಗಳುಗಳಲ್ಲಿ 56 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ಡಿಲೀಟ್ (Video Delete) ಮಾಡಿದೆಯಂತೆ.


    ಇತ್ತೀಚೆಗೆ ಯೂಟ್ಯೂಬ್ ತನ್ನ ವೀಕ್ಷಕರಿಗೆ ಮತ್ತು ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ಅದೇನೆಂದರೆ ಯೂಟ್ಯೂಬ್ 3 ತಿಂಗಳುಗಳಲ್ಲಿ ಅಪ್ಲಿಕೇಶನ್​ನಿಂದ 56 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ಡಿಲೀಟ್​ ಮಾಡಿದೆಯಂತೆ. ಕಾರಣವೇನು ಅಂತ ನೀವೇ ಓದಿ.


    ಭಾರತದಲ್ಲೇ 17 ಲಕ್ಷ ವಿಡಿಯೋ ಡಿಲೀಟ್​


    ಈ ವರ್ಷದ ಜುಲೈನಿಂದ ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ಜಗತ್ತಿನಾದ್ಯಂತ 5.6 ಮಿಲಿಯನ್ ಅಂದರೆ 56 ಲಕ್ಷ ವಿಡಿಯೋಗಳನ್ನು ಯೂಟ್ಯೂಬ್ ಫ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದ್ದು, ಭಾರತ ಒಂದರಲ್ಲೇ 1.7 ಮಿಲಿಯನ್ ಅಂದರೆ 17 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿರುವುದಾಗಿ ಯೂಟ್ಯೂಬ್ ಸಂಸ್ಥೆ ಮಾಹಿತಿ ನೀಡಿದೆ.


    ಇದನ್ನೂ ಓದಿ: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!


    ನಿಯಮ ಉಲ್ಲಂಘಿಸಿದ್ದಕ್ಕೆ ವಿಡಿಯೋ ಡಿಲೀಟ್ ಮಾಡಿದ ಯೂಟ್ಯೂಬ್


    ಯೂಟ್ಯೂಬ್​ ಪ್ಲಾಟ್​ಫಾರ್ಮ್​ ಮೂಲಕ ಯಾರು ಬೇಕಾದರು ಸ್ವಂತ ಚಾನೆಲ್ ರಚಿಸಿ ತಮಗೆ ಇಷ್ಟಬಂದ ಜನರು ನೋಡುವಂತಹ ವಿಡಿಯೋಗಳನ್ನು ಅಪ್​​ಲೋಡ್​ ಮಾಡಬಹುದಾಗಿದೆ. ಆದರೆ ಈ ವಿಡಿಯೋಗಳನ್ನು ತಮ್ಮ ಚಾನೆಲ್​ಗಳಲ್ಲಿ ಹಾಕಬೇಕಾದರೆ ಯೂಟ್ಯೂಬ್​ನ ಕೆಲವೊಂದು ನಿಯಮಗಳಿವೆ.


    ಸಾಂಕೇತಿಕ ಚಿತ್ರ


    ಈ ನಿಯಮಗಳನ್ನು ಪ್ರತಿಯೊಬ್ಬರೂ ವಿಡಿಯೋ ಅಪ್​ಲೋಡ್​ ಮಾಡುವಾಗ ಪಾಲಿಸುವುದು ಕಡ್ಡಾಯ. ಆದರೂ ಈ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಗಳನ್ನು ಹಾಕಿದ್ದಾರೆ. ಆದರೆ ಈ ವಿಷಯವನ್ನು ಯೂಟ್ಯೂಬ್ ತನ್ನ ಟೆಕ್ನಾಲಜಿ ಮೂಲಕ ಕಂಡುಹಿಡಿದಿದೆ. ಆ ನಂತರ ವಿಡಿಯೋವನ್ನು 10 ಜನರು ನೋಡುವ ಮೊದಲೇ ಆ ವಿಡಿಯೋವನ್ನು ಯೂಟ್ಯೂಬ್ ಡಿಲೀಟ್​ ಮಾಡಿದೆ ಎಮದು ಹೇಳಿದೆ.


    ವಿಡಿಯೋವನ್ನು 10 ಜನರೂ ನೋಡುವ ಮೊದಲೇ ಡಿಲೀಟ್​


    ನಿಯಮಗಳನ್ನು ಉಲ್ಲಂಘಿಸಿದ ವಿಡಿಯೋಗಳಲ್ಲಿ ಶೇಕಡಾ 94 ಕ್ಕಿಂತ ಹೆಚ್ಚು ವಿಡಿಯೋಗಳನ್ನು ಯೂಟ್ಯೂಬ್ ತನ್ನ ಟೆಕ್ನಿಕ್​​ ಮೂಲಕ ಗುರುತಿಸಲಾಗಿದೆ. ಹೀಗೆ ಪತ್ತೆಯಾದ ವಿಡಿಯೋಗಳಲ್ಲಿ ಶೇಕಡಾ 36 ರಷ್ಟು ವಿಡಿಯೋಗಳು ಒಂದು ವೀಕ್ಷಣೆ ಪಡೆಯುವ ಮೊದಲೇ ಡಿಲೀಟ್​ ಮಾಡಲಾಗಿದೆ.


    ಸಾಂಕೇತಿಕ ಚಿತ್ರ


    ಶೇಕಡಾ 31 ರಷ್ಟು ವಿಡಿಯೋಗಳು ಒಂದರಿಂದ ಹತ್ತು ವೀಕ್ಷಣೆ ಪಡೆಯುವ ಮೊದಲು ಹಾಗೂ ಶೇಕಡಾ 67 ಕ್ಕಿಂತ ಹೆಚ್ಚಿನ ವಿಡಿಯೋಗಳು 10 ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೊದಲೇ ಡಿಲೀಟ್ ಆಗಿವೆ ಎಂದು ಯೂಟ್ಯೂಬ್ ತಿಳಿಸಿದೆ.


    ಕದ್ದು ಮಾಡಿದ ಕಂಟೆಂಟ್​ ವಿಡಿಯೋ ಕೂಡ ಡಿಲೀಟ್​


    ಯೂಟ್ಯೂಬ್‌ನಲ್ಲಿ ಡಿಲೀಟ್ ಆಗಿರುವ ವೀಡಿಯೋಗಳಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ರಿಪೋರ್ಟ್​ ಮಾಡಿದ ವಿಡಿಯೋಗಳನ್ನು ಕೂಡ ಯೂಟ್ಯೂಬ್​ ಟ್ರ್ಯಾಕ್​ ಮಾಡುವ ಮೂಲಕ ಡಿಲೀಟ್ ಮಾಡಿದೆ. ಯೂಟ್ಯೂಬ್​ನಲ್ಲಿ ಎಷ್ಟೋ ಕಂಟೆಂಟ್​ ಕ್ರಿಯೇಟರ್ಸ್​ ತಮ್ಮ ಟ್ಯಾಲೆಂಟ್​ ಮೂಲಕ ವಿಡಿಯೋ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಇದನ್ನೂ ಕೆಲವರು ಕದ್ದು ತಮ್ಮ ಚಾನೆಲ್​ಗಳಲ್ಲಿ ಹಾಕುತ್ತಾರೆ.


    ಆಗ ನಿಜವಾದ ಕಂಟೆಂಟ್​ ಕ್ರಿಯೇಟರ್​ಗಳಿಗೆ ಆ ಚಾನೆಲ್​ ಅನ್ನು ರಿಪೋರ್ಟ್​ ಮಾಡುವ ಅವಕಾಶ ಇರುತ್ತದೆ. ಇದನ್ನು ಯೂಟ್ಯೂಬ್ ತನ್ನ ತಂತ್ರಜ್ಞಾನದ ಮೂಲಕ ಬೇಗನೆ ಕಂಡುಹಿಡಿಯುತ್ತದೆ. ಆ ನಂತರದಲ್ಲಿ  ಯಾರಾದರೂ ಕದ್ದ ಕಂಟೆಂಟ್ ವಿಡಿಯೋಗಳನ್ನು ಹಾಕಿದ್ದರೆ ಆ ವಿಡಿಯೋವನ್ನು ಕೆಲವೇ ಕ್ಷಣದಲ್ಲಿ ಡಿಲೀಟ್​ ಮಾಡುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು