USB-C chargers: ಇನ್ಮುಂದೆ ಆ್ಯಪಲ್​ ಐಫೋನ್ ಸೇರಿ ಎಲ್ಲಾ ಫೋನ್​​ಗಳಿಗೂ ಟೈಪ್-ಸಿ ಚಾರ್ಜರ್!

USB-C chargers: ಯುರೋಪಿಯನ್​ ಕಮಿಷನ್​ ಹೇಳಿರುವಂತೆ ಮೊಬೈಲ್​ ಫೋನ್​, ಟ್ಯಾಬ್ಲೆಟ್​ ಮತ್ತು ಹೆಡ್​ಫೋನ್​ ಸಾಮಾನ್ಯ ಜಾರ್ಜಿಂಗ್​ ಪೋರ್ಟ್​​ ಇರಬೇಕೆಂದು ಸೂಚಿಸಿದೆ. ಅಂತೆಯೇ ಯುಎಸ್​ಬಿ-ಸಿ ಕನೆಕ್ಟರ್​ ಎಲ್ಲಾ ಸ್ಮಾರ್ಟ್​ಫೋನ್​ಗಳು, ಟ್ಯಾಬ್ಲೆಟ್​ಗಳು, ಹೆಡ್​ಫೋನ್​ಗಳು, ಫೋರ್ಟಬಲ್​ ಸ್ಪೀಕರ್​ಗಳು ಮತ್ತು ಹ್ಯಾಂಡ್​​ಹೆಲ್ಡ್​ ವಿಡಿಯೋಗೇಮ್​ ಕನ್ಸೋಲ್​ಗಳಿಗೆ  ಪ್ರಮಾಣಿತ ಪೋರ್ಡ್​ ನೀಡಬೇಕು ಎಂದಿದೆ.

(ಫೋಟೋ: ಗೂಗಲ್​)

(ಫೋಟೋ: ಗೂಗಲ್​)

  • Share this:
    ಐಫೋನ್ (Iphone)​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳ (Android Smartphone) ಚಾರ್ಜರ್​ಗೆ ವಿಭಿನ್ನವಾಗಿದೆ. ಇದರ ನಡುವೆ ವೈರ್​ಲೆಸ್​ ಚಾರ್ಜರ್​ಗಳು ಕೂಡ ಮಾರುಕಟ್ಟೆಗೆ ಆಗಮಿಸುತ್ತಿದೆ. ಮತ್ತೊಂದೆಡೆ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಟೈಪ್​- ಸಿ ಚಾರ್ಜರ್​ (USB -C Charger) ನೀಡಲಾಗುತ್ತಿದೆ. ಹೀಗಿರುವಾಗ ಇದನ್ನು ಗಮನಿಸಿದ ಯುರೋಪಿಯನ್​ ಕಮಿಷನ್​ ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ (Ipad)​ ಹಾಗೂ ಇಯರ್​ ಫೋನ್​​ಗಳಿಗೆ (Earphone) ಒಂದೇ ವಿಧದ ಚಾರ್ಜರ್​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

    ಮೊದಲೇ ಹೇಳಿದಂತೆ ಮಾರುಕಟ್ಟೆಯಲ್ಲಿ ನಾನಾ ವಿಧಧ ಚಾರ್ಜರ್​ಗಳಿವೆ. ಆ್ಯಂಡ್ರಾಯ್ಡ್​ ಮತ್ತು ಐಫೋನ್​ಗಳ ಚಾರ್ಜರ್​ ಭಿನ್ನವಾಗಿದೆ. ಐಪಾಡ್​ ಮತ್ತು ಇಯರ್​ ಫೋನ್​ಗಳಿಗೂ ಪ್ರತ್ಯೇಕ ಚಾರ್ಜರ್​ಗಳಿವೆ. ಅಷ್ಟು ಮಾತ್ರವಲ್ಲದೆ, ಆ್ಯಂಡ್ರಾಯ್ಡ್​ ಬಳಕೆದಾರರು ಟೈಪ್​- ಸಿ ಚಾರ್ಜರ್​, ಮೈಕ್ರೊ ಯುಎಸ್​ಬಿ (Micro USB) ಬಳಸುತ್ತಿದ್ದಾರೆ. ಈ ಚಾರ್ಜರ್​​ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಪ್ರಯಾಣದ ವೇಳೆ ಎಲ್ಲಾ ಚಾರ್ಜರ್​ಗಳನ್ನು ಹಿಡಿದುಕೊಂಡು ಹೋಗಬೇಕಿದೆ. ಇದರಿಂದ ಅನೇಕರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಯುರೋಪಿಯನ್​ ಕಮಿಷನ್​ ಎಲ್ಲಾ ಫೋನ್​, ಐಪ್ಯಾಡ್​, ಇಯರ್​ಫೋನ್​ಗೂ ಒಂದೇ ಚಾರ್ಜರ್​ ನೀಡುವ ಆದೇಶ ಹೊರಡಿಸಿದೆ.

    ಯುರೋಪಿಯನ್​ ಕಮಿಷನ್​ ಹೇಳಿರುವಂತೆ ಮೊಬೈಲ್​ ಫೋನ್​, ಟ್ಯಾಬ್ಲೆಟ್​ ಮತ್ತು ಹೆಡ್​ಫೋನ್​ ಸಾಮಾನ್ಯ ಜಾರ್ಜಿಂಗ್​ ಪೋರ್ಟ್​​ ಇರಬೇಕೆಂದು ಸೂಚಿಸಿದೆ. ಅಂತೆಯೇ ಯುಎಸ್​ಬಿ-ಸಿ ಕನೆಕ್ಟರ್​ ಎಲ್ಲಾ ಸ್ಮಾರ್ಟ್​ಫೋನ್​ಗಳು, ಟ್ಯಾಬ್ಲೆಟ್​ಗಳು, ಹೆಡ್​ಫೋನ್​ಗಳು, ಫೋರ್ಟಬಲ್​ ಸ್ಪೀಕರ್​ಗಳು ಮತ್ತು ಹ್ಯಾಂಡ್​​ಹೆಲ್ಡ್​ ವಿಡಿಯೋಗೇಮ್​ ಕನ್ಸೋಲ್​ಗಳಿಗೆ  ಪ್ರಮಾಣಿತ ಪೋರ್ಡ್​ ನೀಡಬೇಕು ಎಂದಿದೆ.

    ಈ ವಿಚಾರ ತಿಳಿದು ಆ್ಯಪ್​ ಸಂಸ್ಥೆ ಯುರೋಪಿಯನ್​ ಕಮಿಷನ್ ಹೊರಡಿಸಿರುವ ಆದೇಶವನ್ನು ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಿಕ್​ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಮತ್ತು ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂದಿದೆ.

    Read Also ⇒ Audi e-tron GT: 0-100 ಕಿ.ಮೀ ಕ್ರಮಿಸಲು ಕೇವಲ 3.3 ಸೆಕೆಂಡು ಸಾಕು! ಇದು ಹೊಸ ಎಲೆಕ್ಟ್ರಿಕ್​ ಆಡಿ e-tron GT ಕಾರಿನ ವಿಶೇಷತೆ

    ಚೀನಾ, ಜಪಾನ್​,ಅಮೆರಿಕ ಸೇರಿದಂತೆ ಹಲವು ದೇಶಗಳು ವಿಭಿನ್ನವಾದ ಆ್ಯಂಡ್ರಾಯ್ಡ್​ ಮತ್ತು ಐಫೊನ್​ ಅನ್ನಯ ಉತ್ಪಾದಿಸುತ್ತಾ ಬಂದಿದೆ. ಇವೆಲ್ಲವು ಒಂದಕ್ಕಿಂತ ಒಂದು ರೀತಿಯ ಚಾರ್ಜರ್​ ಪೋರ್ಟ್​ ಹೊಂದಿದೆ. ಅದರಲ್ಲೂ ಅದೇ ಕಂಪನಿಗಳು ತಯಾರಿಸುವ ಇಯರ್​ಫೋನ್​ ಮತ್ತು ಚಾರ್ಜರ್​ ಫೋರ್ಟ್​ಗಳು ಭಿನ್ನವಾಗಿದೆ.
    Published by:Harshith AS
    First published: