ಇಂತಿಪ್ಪ ದೇಶದೊಳ್, ಒಂದು ರೋಬೋ ನ್ಯೂಸ್ ಓದಲಿದೆ!

ಎರಿಕಾಳನ್ನ ಸೃಷ್ಟಿಸಿರೋ ಡಾಕ್ಟರ್ ಇಶಿಗುರೋಗೆ ಬೇರೆ ಕೆಲಸಾನೆ ಇಲ್ಲ. ರೋಬೋಗಳನ್ನ ಸೃಷ್ಟಿ ಮಾಡ್ತಾನೆ ಇದಾನೆ. ಎರಿಕಾಳನ್ನ ತನ್ನ ಕಂಪನಿ, ಇಂಟಲಿಜೆಂಟ್ ರೋಬೋಟಿಕ್ ಲ್ಯಾಬೊರೇಟರಿ ಮೂಲಕ ತಯಾರು ಮಾಡಿದ್ದಾನೆ. ರೋಬೋಟಿಕ್ ಲ್ಯಾಬೊರೇಟರಿ ಜಪಾನ್​ನ ಒಸಾಕಾ ಯೂನಿವರ್ಸಿಟಿಯಲ್ಲಿದೆ. ಇಂಟರೆಸ್ಟಿಂಗ್ ಅಂದ್ರೆ ತನ್ನನ್ನೇ ಹೋಲುವಂಥ ಒಂದು ರೋಬೊನ ಸೃಷ್ಟಿಸಿ ಇಶಿಗುರೋ ಸುದ್ದಿಯಾಗಿದ್ರು.


Updated:February 1, 2018, 9:10 PM IST
ಇಂತಿಪ್ಪ ದೇಶದೊಳ್, ಒಂದು ರೋಬೋ ನ್ಯೂಸ್ ಓದಲಿದೆ!
ಜಪಾನೀ ರೋಬೋ ಎರಿಕಾ

Updated: February 1, 2018, 9:10 PM IST
- ರವಿ ಅಜ್ಜೀಪುರ, ನ್ಯೂಸ್18 ಕನ್ನಡ

ಸುದ್ದಿ ಮಾಧ್ಯಮಗಳು ಅಬ್ಬರಿಸೋದಕ್ಕೆ ಶುರುವಾದ ಮೇಲೆ ಮಹಿಳಾ ಆ್ಯಂಕರ್​ಗಳ ಭರಾಟೆಯೂ ಶುರುವಾಯ್ತು. ಎಷ್ಟು ಚಾನೆಲ್ಸ್​. ಎಷ್ಟು ಆ್ಯಂಕರ್ಸ್​. ಒಬ್ಬರಿಗಿಂತ ಒಬ್ಬರು ಸ್ಮಾರ್ಟ್​. ಒಬ್ಬರಿಗಿಂತ ಒಬ್ಬರು ಬ್ಯೂಟಿಫುಲ್​. ಇಂಟರೆಸ್ಟಿಂಗ್ ಏನು ಅಂದ್ರೆ, ಸ್ಟಾರ್ ಆಕ್ಟರ್​ಗಳಿಗೆ ಅಭಿಮಾನಿಗಳಿಗಿದ್ದಂತೆ  ಸ್ಟಾರ್​ ಆ್ಯಂಕರ್​ಗೂ ಅಭಿಮಾನಿಗಳಿದಾರೆ. ಹಿತೈಷಿಗಳಿದಾರೆ. ಈಗ ಇಂಥದ್ದೇ ಆ್ಯಂಕರ್​ ಪ್ರೋಗ್ರಾಮ್ ಬರುತ್ತೆ ಅಂತ ಕಾದು ಕೂರೋ ಫ್ಯಾನ್ಸ್ ಇದಾರೆ. ಅಂದ್ರೆ ಬ್ಯೂಟಿಫುಲ್ ಆದ, ಚುರುಕಾದ ಆ್ಯಂಕರ್ಸ್ ಇಲ್ಲ ಅಂದ್ರೆ ಚಾನೆಲ್ ಸಪ್ಪೆಸಪ್ಪೆ. ಆದ್ರೆ ಈ ಆ್ಯಂಕರ್ಸ್​ಗಳನ್ನೆಲ್ಲಾ ಮೀರಿಸೋ ಒಬ್ಬ ಆ್ಯಂಕರ್​ ಅಖಾಡಕ್ಕಿಳಿಯೋದಕ್ಕೆ ಸಜ್ಜಾಗಿದ್ದಾಳೆ. ಅವಳೇ ಎರಿಕಾ.

ಜಗತ್ತಿನಲ್ಲಿ ಏನೇನೋ ಬದಲಾವಣೆ ನಡಿತಾ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಬದುಕಿನ ಗತಿಯೇ ಫಾಸ್ಟ್ ಆಗಿ ಬದಲಾಗಿದೆ. ಭೂಮಿ ಆಕಾಶಗಳನ್ನ ಒಂದು ಮಾಡೋ ಪ್ರಯತ್ನವೂ ಭರ್ಜರಿಯಾಗಿ ನಡೀತಾ ಇದೆ. ಅದರ ಜೊತೆಗೆ ಮಾನವರಿಗೆ ಸರಿಸಮನಾಗಿ ನಿಲ್ಲಬಲ್ಲ, ಥಿಂಕ್ ಮಾಡಬಲ್ಲ, ಸ್ವಯಂ ನಿರ್ಧಾರಗಳನ್ನ ತೆಗೆದುಕೊಳ್ಳಬಲ್ಲ ರೋಬೋಗಳ ಜನನವೂ ಆಗಿದೆ. ಎರಿಕಾ ಕೂಡ ಅಂಥದ್ದೇ ಒಂದು ಸೃಷ್ಟಿ.

ರೋಬೋಗಳು ಜೀವನದ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಳ್ತಿವೆ. ಮನೆಗೆಲಸದಿಂದ ಹಿಡಿದು ಮ್ಯಾನೇಜ್​ಮೆಂಟ್​ ತನಕ ದಾಂಗುಡಿ ಇಟ್ಟಾಗಿದೆ. ಆಸ್ಪತ್ರೆಯಿಂದ ಹಿಡಿದು ಆಕಾಶದ ತನಕ ಕೆಲಸ ಮಾಡ್ತಿವೆ. ಈಗ ಟಿವಿ ಕ್ಷೇತ್ರಕ್ಕೂ ರೋಬೋ ಎರಿಕಾ​ ಕಾಲಿಡೋದಕ್ಕೆ ಸಜ್ಜಾಗಿದ್ದಾಳೆ. ಹಾಗಾದ್ರೆ ಎಲ್ಲಿ ಈ ಚೆಲುವೆ ಆ್ಯಂಕರಿಂಗ್ ಮಾಡ್ತಾಳೆ?

ಜಪಾನ್​ನ ಚಾನೆಲ್​ ಒಂದರಲ್ಲಿ ನ್ಯೂಸ್​ ಆಂಕರ್​ ಆಗಿ ಕೆಲಸ ಮಾಡಲು ಎರಿಕಾ ಸಿದ್ಧವಾಗ್ತಿದ್ದಾಳೆ. ಈಕೆ ನ್ಯೂಸ್ ಆ್ಯಂಕರ್ ಆಗಿ ಕ್ಲಿಕ್ ಆಗೇ ಆಗ್ತಾಳೆ. ಜನ ಗ್ಯಾರಂಟಿ ಇಷ್ಟಪಡ್ತಾರೆ ಅನ್ನೋ ನಂಬಿಕೆ ಅದನ್ನ ತಯಾರಿಸಿದ ಡಾ.ಹಿರೋಷಿ ಇಶಿಗುರೋ ಅಂಟ್ ಟೀಮ್​​ಗಿದೆ. ನಿಜ ಹೇಳಬೇಕು ಅಂದ್ರೆ, ಎರಿಕಾ ಸಿಕ್ಕಾಪಟ್ಟೆ ಮಾತಾಡ್ತಾಳಂತೆ. ಅರಳು ಹುರಿದಂತೆ ಮಾತಾಡ್ತಾಳಂತೆ. ಸಿಂಪಲ್ ಆಗಿ ಹೇಳಬೇಕು ಅಂದ್ರೆ ಎರಿಕಾ ಆ್ಯಂಕರ್​ ಆಗೋಕೆ ಫಿಟ್ ಅಂಡ್ ಫೈನ್​.

ಇಲ್ಲೊಂದು ವಿಷಯವನ್ನ ಹೇಳಲೇಬೇಕು. ಎರಿಕಾ ಒಂದು ಆ್ಯಂಡ್ರಾಯ್ಡ್ ರೋಬೋ. ಸಖತ್ ಆಧುನಿಕವಾದ ರೋಬೋ. ಹಿರೋಷಿ ಇಶಿಗುರೋ ಹೇಳೋ ಪ್ರಕಾರ, ಎರಿಕಾ ಜಗತ್ತಿನಲ್ಲೇ ಮೋಸ್ಟ್ ಅಡ್ವಾನ್ಸಡ್​  ಆರ್ಟಿಫಿಷಿಯಲ್ ಸ್ಪೀಚ್​ ಸಿಸ್ಟಮ್ ಹೊಂದಿರೋ ರೋಬೋ. ಅಂದ್ರೆ ಈಗ ಇರೋ ಆಂಡ್ರಾಯ್ಡ್ ರೋಬೋಗಳಿಗಿಂತ ಸಖತ್ ಬುದ್ದಿವಂತೆ. ನ್ಯೂಸ್ ಆಂಕರ್​ ಆಗಿ ಬ್ಯೂಟಿಫುಲ್ ಹುಡುಗಿರ ಜೊತೆ ಕಾಂಪಿಟ್ ಮಾಡೋ ಅಷ್ಟು ಜಾಣ್ಮೆ ಎರಿಕಾಳಿಗಿದೆಯಂತೆ.

ಆಂಡ್ರಾಯ್ಡ್ ರೋಬೋಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿರ್ತಾರೆ. ಇದೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ನಿಂದಾನೆ ಎರಿಕಾ ನ್ಯೂಸ್ ಆಂಕರ್ ಆಗಿ ಕೆಲಸ ಮಾಡೋದು. ಅಂದರೆ ಒಬ್ಬ ಆಂಕರ್​ಗೆ ಬೇಕಾದಂತಹ ನಿರರ್ಗಳ ಮಾತು, ಜಾಣ್ಮೆ ಎಲ್ಲವನ್ನೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ ಎರಿಕಾಳಿಗೆ ಒದಗಿಸಿ ಕೊಡುತ್ತಂತೆ. ಹಾಗಾಗಿಯೇ ಎರಿಕಾ ಮುಂದಿನ ಏಪ್ರಿಲ್​ ತಿಂಗಳಿನಲ್ಲಿ ನ್ಯೂಸ್ ಓದುವ ಸಂಭವ ಇದೆ.
Loading...

2015 ರಲ್ಲಿ ಚೀನಾದಲ್ಲಿ ಒಂದು ಬ್ರೇಕಿಂಗ್ ನ್ಯೂಸ್ ಆಗಿತ್ತು. ಫಸ್ಟ್​​ ಟೈಮ್,​ ಕ್ಸಿಯಾಲ್ಸ್ ಅನ್ನೊ ಆಂಡ್ರಾಯ್ಡ್ ರೋಬೋ ಶಾಂಗೈ ಡ್ರಾಗನ್ ಟಿವಿಯಲ್ಲಿ ಹವಾಮಾನ ವರದಿ ಓದಿತ್ತು. ಜನ ಕ್ಸಿಯಾಲ್ಸ್​ ರೋಬೋ ಸ್ವೀಟ್​ ವಾಯ್ಸ್​ಗೆ ಫಿದಾ ಆಗಿಹೋಗಿದ್ರು. ಯಾಕೆಂದ್ರೆ ನಿಜವಾದ ಆ್ಯಂಕರ್​ಗೂ ಸೆಡ್ಡುಹೊಡೆಯುವಂತೆ ಸುದ್ದಿ ಓದಿದ್ಲು ಕ್ಸಿಯಾಲ್ಸ್. ಏಪ್ರಿಲ್​ನಲ್ಲಿ ಎರಿಕಾ ಏನಾದ್ರೂ ನ್ಯೂಸ್ ಚಾನೆಲ್​ನಲ್ಲಿ ಸುದ್ದಿ ಓದಿದ್ರೆ ನ್ಯೂಸ್ ಒದಿದ ಎರಡನೇ ರೋಬೋ ಆ್ಯಂಕರ್​ ಎನಿಸಲಿದ್ದಾಳೆ. ಆ ಮೂಲಕ ರೋಬೋ ಒಂದು ನ್ಯೂಸ್ ಓದಿದ್ದು  ಎರಡನೇ ಸಲ ಇತಿಹಾಸ ಸೇರಲಿದೆ.

ಎರಿಕಾಳನ್ನ ಸೃಷ್ಟಿಸಿರೋ ಡಾಕ್ಟರ್ ಇಶಿಗುರೋಗೆ ಬೇರೆ ಕೆಲಸಾನೆ ಇಲ್ಲ. ರೋಬೋಗಳನ್ನ ಸೃಷ್ಟಿ ಮಾಡ್ತಾನೆ ಇದಾನೆ. ಎರಿಕಾಳನ್ನ ತನ್ನ ಕಂಪನಿ, ಇಂಟಲಿಜೆಂಟ್ ರೋಬೋಟಿಕ್ ಲ್ಯಾಬೊರೇಟರಿ ಮೂಲಕ ತಯಾರು ಮಾಡಿದ್ದಾನೆ. ರೋಬೋಟಿಕ್ ಲ್ಯಾಬೊರೇಟರಿ ಜಪಾನ್​ನ ಒಸಾಕಾ ಯೂನಿವರ್ಸಿಟಿಯಲ್ಲಿದೆ. ಇಂಟರೆಸ್ಟಿಂಗ್ ಅಂದ್ರೆ ತನ್ನನ್ನೇ ಹೋಲುವಂಥ ಒಂದು ರೋಬೊನ ಸೃಷ್ಟಿಸಿ ಇಶಿಗುರೋ ಸುದ್ದಿಯಾಗಿದ್ರು.

ಜಪಾನ್​ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಮುಂಚೂಣಿಯಲ್ಲಿರೋ ದೇಶ. ರೋಬೋ ಬಗ್ಗೆ ವಿಶೇಷ ಆಸಕ್ತಿ ಹೊಂದಿರೋ ದೇಶ. ಅಲ್ಲಿ ರೋಬೋ ರಿಸಪ್ಷನಿಸ್ಟ್​ಗಳಿದ್ದಾರೆ. ರೋಬೋ ಸಪ್ಲೈಯರ್​ಗಳಿದ್ದಾರೆ. ರೋಬೋ ಅಡುಗೆಯವರಿದ್ದಾರೆ. ಅಷ್ಟೇ ಅಲ್ಲ ಮನೆಯ ದೇಖರೇಖಿಯನ್ನ ನೋಡಿಕೊಳ್ಳೋದಕ್ಕೂ ರೋಬೋಗಳಿವೆ. ಇಂತಿಪ್ಪ ದೇಶದೊಳ್​, ಒಂದು ರೋಬೋ ನ್ಯೂಸ್ ಓದುತ್ತೆ ಅಂದ್ರೆ ಅದರಲ್ಲೇನು ವಿಶೇಷವಿಲ್ಲ ಅಂತ  ಅನ್ನಿಸಬಹುದು. ಆದ್ರೆ ಅದು ನಿಜಕ್ಕೂ ವಿಶೇಷಾನೆ. ಹಾಗಾಗಿಯೇ ಜಪಾನ್​ನತ್ತ ಜಗತ್ತಿನ ರೋಬೋ ಎಕ್ಸ್​ಪರ್ಟ್ಸ್​ಗಳೆಲ್ಲಾ ತಿರುಗಿ ನೋಡ್ತಿದ್ದಾರೆ.

ಹಾಗಾದ್ರೆ ರೋಬೋ ಎರಿಕಾ ನ್ಯೂಸ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡೋ ಮೂಲಕ ಹೊಸ ಆಂಕರ್​ ಕ್ರಾಂತಿಗೆ ಮುನ್ನುಡಿ ಬರೆಯುತ್ತಾಳಾ? ಒಂದು ರೀತಿಯಲ್ಲಿ ಎಸ್​ ಅನಿಸುತ್ತೆ. ಯಾಕೆಂದ್ರೆ ರೋಬೋಗಳು ಯಾವುದೇ ಕ್ಷೇತ್ರವನ್ನೂ ಬಿಟ್ಟಿಲ್ಲ. ಹಾಗಾಗಿ ಒಂದಿನ ನ್ಯೂಸ್ ಕ್ಷೇತ್ರವನ್ನೂ ರೋಬೋ ಆ್ಯಂಕರ್​ಗಳೇ ಆವರಿಸಿಕೊಳ್ಳಬಹುದು ಅನ್ನೋ ಭಯ ಕೂಡ ಇದೆ. ಹಾಗೇನಾದ್ರೂ ಆದ್ರೆ ಸುದ್ದಿ ಯಾವ ರೀತಿ ಬರಬಹುದು ಅನ್ನೋದು ಕುತೂಹಲವೇ. ಟಿವಿಯಲ್ಲಿ ಬರೋ ರೋಬೋ ಆಂಕರ್​​ನ ಪ್ರೇಕ್ಷಕ ಹೇಗೆ ಸ್ವೀಕರಿಸ್ತಾನೆ ಅನ್ನೋದು ಕುತೂಹಲವೆ. ಯಾಕೆಂದ್ರೆ ಜೀವಂತ ಆಂಕರ್​ಗಳ ಆಂಕರಿಂಗೇ ಒಂದೊಂದ್ಸಲ ಬೋರ್ ಹೊಡೆಸುತ್ತೆ. ಅಂಥದ್ರಲ್ಲಿ ರೋಬೋ ಆಂಕರಿಂಗ್ ಬೋರ್ ಹೊಡೆಸದೆ ಇರುತ್ತಾ?
First published:February 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...