ಆನ್​ಲೈನ್​ ಮಾರುಕಟ್ಟೆ ಮೇಲೆ ಸರ್ಕಾರದ ಕಣ್ಣು; ಗ್ರಾಹಕರ ರಿಯಾಯಿತಿಗೆ ಕತ್ತರಿ?

news18
Updated:July 31, 2018, 9:40 PM IST
ಆನ್​ಲೈನ್​ ಮಾರುಕಟ್ಟೆ ಮೇಲೆ ಸರ್ಕಾರದ ಕಣ್ಣು; ಗ್ರಾಹಕರ ರಿಯಾಯಿತಿಗೆ ಕತ್ತರಿ?
news18
Updated: July 31, 2018, 9:40 PM IST
-ನ್ಯೂಸ್ 18 ಕನ್ನಡ

ಆನ್​ಲೈನ್ ಶಾಪಿಂಗ್ ಪ್ರಿಯರಿಗೊಂದು ಶಾಕಿಂಗ್ ಸುದ್ದಿ ಕಾದಿದೆ. ರಿಯಾಯಿತಿ ದರದಲ್ಲಿ ಕುಳಿತಲ್ಲೇ ಶಾಪಿಂಗ್ ನಡೆಸುತ್ತಿದ್ದವರಿಗೆ ಸರ್ಕಾರದ ಈ ಹೊಸ ನಿಯಮ ಭಾರೀ ಹೊಡೆತ ನೀಡುವ ಸಾಧ್ಯತೆಯಿದೆ. ಆನ್​ಲೈನ್​ ಉತ್ಪನ್ನಗಳ ಮೇಲೆ ನೀಡಲಾಗುತ್ತಿರುವ ರಿಯಾಯಿತಿಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಮುಂಬರುವ ದಿನಗಳಲ್ಲಿ ಇಂತಹ ಉತ್ಪನ್ನಗಳ ಮೇಲೆ ನೀಡಲಾಗುವ ಭಾರೀ ರಿಯಾಯಿತಿಗಳನ್ನು ಬಿಗಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

ಭಾರತದಲ್ಲಿ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ಸೇರಿದಂತೆ ಹಲವು ಇ-ಕಾಮರ್ಸ್​ ಕಂಪನಿಗಳು ಗ್ರಾಹಕರಿಗೆ ಹಲವು ರೀತಿಯ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಸೋಮವಾರ ಸರಕಾರಿ ಅಧಿಕಾರಿಗಳು ಇ-ಕಾಮರ್ಸ್ ನಿಯಮಗಳ ಕುರಿತು ಸ್ಟೇಕ್​ಹೋಲ್ಡರ್ಸ್​ ಜೊತೆ ಚರ್ಚೆ ನಡೆಸಿದ್ದು, ಒಂದು ನಿರ್ದಿಷ್ಟ ದಿನಾಂಕದ ಬಳಿಕ ಇಂತಹ ರಿಯಾಯಿತಿ ಬೆಲೆ ನೀತಿಗಳನ್ನು ನಿಯಂತ್ರಿಸಬೇಕೆಂದು ಪ್ರಸ್ತಾಪಿಸಲಾಗಿದೆ.

ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ಭಾರತದ ಇ-ಕಾಮರ್ಸ್​ ಉದ್ಯಮಕ್ಕೆ ಇದು ಹೊಡೆತ ನೀಡಲಿದ್ದು, ಇದೇ ಮೊದಲ ಬಾರಿ ದೇಶದ ಆನ್​ಲೈನ್ ರಿಟೇಲ್ ಮೇಲೆ ನಿಯಂತ್ರಣ ಹೊಂದಲು ಸರ್ಕಾರ ಮುಂದಾಗಿದೆ. ಈ ಹೊಸ ಮಸೂದೆ ನಿಯಮದಡಿಯಲ್ಲಿ Swiggy, Zomato ಸೇರಿದಂತೆ ಹಲವು ಆಹಾರ ಉತ್ಪನ್ನಗಳ ವೆಬ್​ಸೈಟ್​ಗಳು ಸಹ ಸೇರಿದೆ. UrbanClap, Paytm, ಪಾಲಿಸಿ ಬಜಾರ್​ನಂತ ಪೆಮೆಂಟ್​ ಸೇವೆ ಒದಗಿಸುವ ಆನ್​ಲೈನ್​ ಸಂಸ್ಥೆಗಳನ್ನು ಈ ನಿಯಮಕ್ಕೆ ಒಳಪಡಿಸಲಿದೆ. ದೇಶದ ಇ-ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳು ಸಹ ಬಂಡವಾಳ ಹೂಡಿದ್ದು ಇಲ್ಲಿನ ಗ್ರಾಹಕರ ಡೇಟಾಗಳು ಸೋರಿಕೆಯಾಗುವುದನ್ನು ತಡೆಯುವ ಉದ್ದೇಶವನ್ನು ಈ ಹೊಸ ನಿಯಮ ಹೊಂದಿದೆ.

ವಿಶ್ವ ಇ-ಕಾಮರ್ಸ್​ ಸಂಸ್ಥೆಗಳಿಗೆ ಭಾರತವೇ ಮಾರುಕಟ್ಟೆ
ಅನೇಕ ಉದ್ದೇಶಗಳೊಂದಿಗೆ ಸರ್ಕಾರವು ಈ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಅದರಲ್ಲಿ ಮುಖ್ಯವಾಗಿ ಗ್ರಾಹಕರ ರಕ್ಷಣೆ, ಡೇಟಾ ಸುರಕ್ಷತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಮನ ಹರಿಸಲಾಗುತ್ತದೆ. ಜನರು ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಪಡೆದ ಬಳಿಕ ಈ ವಿಧೇಯಕದಲ್ಲಿ ಬದಲಾವಣೆಯನ್ನು ತರಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಪ್ರಸ್ತುತ ಭಾರತದ ಇ-ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ವಾಲ್​ಮಾರ್ಟ್​, ಸಾಫ್ಟ್​ಬ್ಯಾಂಕ್​, ಅಲಿಬಾಬಾ ಸೇರಿದಂತೆ ಹಲವಾರು ಜಾಗತಿಕ ಕಂಪನಿಗಳು ನಿರ್ಧರಿಸಿದ್ದು, ಇವುಗಳ ಮೇಲೆ ಸರ್ಕಾರದ ನಿಯಂತ್ರಣವಿರಲು ಹೊಸ ಮಸೂದೆ ಜಾರಿ ಮಾಡಲಾಗುತ್ತಿದೆ ಎನ್ನಲಾಗಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...