EPF Balance: ಉಮಂಗ್​ ಆ್ಯಪ್​ ಮುಖಾಂತರ ನಿಮ್ಮ ಪಿಎಫ್​ ಚೆಕ್​ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಪಿಎಫ್​ ಖಾತೆಯನ್ನು ಪರೀಕ್ಷಿಸಲು ತಡಕಾಡುತ್ತಿದ್ದ ಗ್ರಾಹಕರಿಗೆ ಉಮಂಗ್​ ಆ್ಯಪ್​ ಸಹಕಾರಿಯಾಗಿದೆ. ಇದರ ಮೂಲಕ ಎಪಿಏಫ್​ ಬ್ಯಾಲೆನ್ಸ್​, ಕಂಪನಿ ಡೆಪಾಸಿಟ್​​ ಮಾಡುವ ಮೊತ್ತ. ಒಟ್ಟು ಉಳಿತಾಯದ ಮೊತ್ತ ಹೀಗೆ ಕೆಲವು ಮಾಹಿತಿಗಳನ್ನು ಪಡೆಯಬಹುದಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
    ಎಂಪ್ಲಾಯಿ​ ಪ್ರಾವಿಡೆಂಟ್ ಫಂಡ್(EPF). ಉದ್ಯೋಗಿಗಳಿಗೆ ನಿವೃತ್ತಿ ನಂತರ ತಮ್ಮ ಜೀವನಕ್ಕೆ ಸಿಗುವಂತಹ ಉತ್ತಮ ಯೋಜನೆ.  ಅನೇಕರಿಗೆ ತಮ್ಮ ಪಿಎಫ್ ಹಣ ಎಷ್ಟು ಹೂಡಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಇನ್ನು ಕೆಲವರು ಬೇರೆ ವಿಧಾನಗಳ ಮೂಲಕ ಪಿಎಫ್​ ಖಾತೆಯನ್ನು ಪರೀಕ್ಷಿಸುತ್ತಾರೆ. ಆದರೆ ಉಮಂಗ್​ ಆ್ಯಪ್​ ಮೂಲಕ ಎಂಪ್ಲಾಯಿ ಪ್ರಾವಿಡೆಂಡ್​​ ಖಾತೆಯನ್ನು ಸುಲಭವಾಗಿ ಪರೀಕ್ಷಿಸಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

    ಪಿಎಫ್​ ಖಾತೆಯನ್ನು ಪರೀಕ್ಷಿಸಲು ತಡಕಾಡುತ್ತಿದ್ದ ಗ್ರಾಹಕರಿಗೆ ಉಮಂಗ್​ ಆ್ಯಪ್​ ಸಹಕಾರಿಯಾಗಿದೆ. ಇದರ ಮೂಲಕ ಎಪಿಏಫ್​ ಬ್ಯಾಲೆನ್ಸ್​, ಕಂಪನಿ ಡೆಪಾಸಿಟ್​​ ಮಾಡುವ ಮೊತ್ತ. ಒಟ್ಟು ಉಳಿತಾಯದ ಮೊತ್ತ ಹೀಗೆ ಕೆಲವು ಮಾಹಿತಿಗಳನ್ನು ಪಡೆಯಬಹುದಾಗಿದೆ.

    ಇನ್ನು ಪಿಎಫ್​ ಖಾತೆಯನ್ನು ಪರಿಶೀಲಿಸಬೇಕಾದರೆ ಯುನಿವರ್ಸಲ್​​ ಅಕೌಂಟ್​​ (ಯುಎನ್​ಎ) ನಂಬರ್​ ಮತ್ತು ಪಿಎಫ್​​ ಖಾತೆಗೆ ನೋಂದಣಿಯಾಗಿರುವ ಮೊಬೈಲ್​ ನಂಬರ್​ ಇರಬೇಕು.

    ಉಮಂಗ್​ ಆ್ಯಪ್


    • ಮೊದಲಿಗೆ ಪ್ಲೇಸ್ಟೋರ್​ನಲ್ಲಿರುವ ಅಧಿಕೃತ ಉಮಂಗ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಇನ್​ಸ್ಟಾಲ್​​ ಮಾಡಬೇಕು. ಬಳಿಕ ರಿಜಿಸ್ಟರ್​ ಮೊಬೈಲ್​ ಸಂಖ್ಯೆಯನ್ನ ನಮೂದಿಸಬೇಕು.

    • ನಂತರ ಉಮಂಗ್​ ಆ್ಯಪ್​ ತೆರೆದು ಇಪಿಎಫ್​ಒ ಎಂದು ಸರ್ಚ್​ ಮಾಡಬೇಕು

    • ಆನಂತರ ಲೀಸ್ಟ್​​ ಒಂದು ತೆರೆದುಕೊಳ್ಳುತ್ತದೆ ಅದರಲ್ಲಿ ಎಂಪ್ಲಾಯ್​​​ ಸೆಂಟ್ರಿಕ್​​ ಸರ್ವಿಸ್​​​ ಆಯ್ಕೆಯ ಮೇಲೆ ಕ್ಲಿಕ್​ ಮಾಡಿರಿ.

    • ಇದಾದ ಬಳಿಕ ಪಿಎಫ್​ ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು. ಅಲ್ಲಿ ಎಂಪ್ಲಾಯ್​​​ ಸೆಂಟ್ರಿಕ್​​ ಸರ್ವಿಸಸ್​​ನಲ್ಲಿ ಪಾಸ್​ಬುಕ್​ ವೀಕ್ಷಣೆಗೆ ಮಾಡಲು ಆಯ್ಕೆ ಸಿಗುತ್ತದೆ.

    • ನಂತರ ಯುಎನ್​ಎ ಮತ್ತು ರಿಜಿಸ್ಟರ್​ ಮಾಡಿಕೊಂಡಾಗ ಬಂದಿರುವ ಒಟಿಪಿ ಮೂಲಕ ಲಾಗಿನ್​ ಮಾಡಬೇಕು. ಆ ಬಳಿಕ ಪಿಎಫ್​ ಖಾತೆಯ ಬ್ಯಾಲೆನ್ಸ್​​ ವಿವರ ಸಿಗುತ್ತದೆ.


    ಉಮಂಗ್​ ಆ್ಯಪ್ ಮೂಲಕ​​ ಪಾನ್​, ಆಧಾರ್​, ಗ್ಯಾಸ್​ ಬುಕ್ಕಿಂಗ್​ ಹೀಗೆ ಇನ್ನಿತರ ಸೇವೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
    Published by:Harshith AS
    First published: