• Home
  • »
  • News
  • »
  • tech
  • »
  • Internet: ಒಂದೇ ಒಂದು ಸೆಕೆಂಡ್​ನಲ್ಲಿ ಇಡೀ ಪ್ರಪಂಚದ ಇಂಟರ್ನೆಟ್ ಟ್ರಾಫಿಕ್ ರವಾನಿಸುವ ಚಿಪ್ ಸಂಶೋಧನೆ

Internet: ಒಂದೇ ಒಂದು ಸೆಕೆಂಡ್​ನಲ್ಲಿ ಇಡೀ ಪ್ರಪಂಚದ ಇಂಟರ್ನೆಟ್ ಟ್ರಾಫಿಕ್ ರವಾನಿಸುವ ಚಿಪ್ ಸಂಶೋಧನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಧ್ಯಯನದಲ್ಲಿ ಪಾಲ್ಗೊಂಡಿರುವ ವಿಜ್ಞಾನಿಗಳ ಪ್ರಕಾರ ಸಂಶೋಧನೆಯು ಮುಂಬರುವ ದಶಕಗಳಲ್ಲಿ ಭವಿಷ್ಯದ ಸಂವಹನ ವ್ಯವಸ್ಥೆಗಳ ವಿನ್ಯಾಸದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಡೇಟಾ ಬಳಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.

  • News18 Kannada
  • Last Updated :
  • New Delhi, India
  • Share this:

    ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾನಿಲಯ ಮತ್ತು ಚಾಲ್ಮರ್ಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಒಂದೇ ಬೆಳಕಿನ ಮೂಲ ಹಾಗೂ ಒಂದೇ ಆಪ್ಟಿಕಲ್ ಚಿಪ್ (Optical Chip) ಬಳಸಿಕೊಳ್ಳಲಾಗಿದೆ. ಇಲ್ಲಿ ಲೇಸರ್ ಅನ್ನು ಚಿಪ್‌ಗೆ ಹಾಯಿಸಲಾಗಿದೆ. ಇದು ಬೆಳಕನ್ನು ನೂರಾರು ವಿಭಿನ್ನ ಆವರ್ತನಗಳು ಹಾಗೂ ಬಣ್ಣಗಳಾಗಿ ವಿಭಜಿಸುತ್ತದೆ. ನೇಚರ್ ಫೋಟೊನಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಸಂಶೋಧಕರು ಕಸ್ಟಮ್ ಆಪ್ಟಿಕಲ್ ಕಂಪ್ಯೂಟರ್ ಚಿಪ್ ಅನ್ನು ಬಳಸಿದ್ದು, ಇದು ನೂರಾರು ಆವರ್ತನಗಳ ಬೆಳಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು (Internet Traffic In A Second)  ಹೊಂದಿದೆ ಎಂದು ತಿಳಿಸಿದ್ದಾರೆ.


    ಪ್ರತಿಯೊಂದು ಆವರ್ತನಗಳ ವಿಶಾಲ ಹಂತ ಹಾಗೂ ಧ್ರುವೀಕರಣವನ್ನು ನಿಯಂತ್ರಿಸುವ ಮೂಲಕ ಈ ಅಂಕಿ ಅಂಶವನ್ನು ಬೆಳಕಿಗೆ ಕೋಡ್ ಮಾಡಲಾಗುತ್ತದೆ. ನಂತರ ಅದನ್ನು ಆಪ್ಟಿಕಲ್ ಫೈಬರ್ ಮೂಲಕ ರವಾನಿಸಲಾಗುತ್ತದೆ.


    ಈ ಪ್ರಯೋಗಕ್ಕೆ ಸಂಶೋಧಕರು 37 ಪ್ರತ್ಯೇಕ ಕೋರ್‌ಗಳನ್ನು ಒಳಗೊಂಡಿರುವ 7.9 ಕಿಲೋಮೀಟರ್ ಉದ್ದದ ಆಪ್ಟಿಕಲ್ ಫೈಬರ್‌ ಅನ್ನು ಬಳಸಿದ್ದು, 223 ತರಂಗಾಂತರ ಚಾನಲ್‌ಗಳ ಮೂಲಕ ಡೇಟಾವನ್ನು ರವಾನಿಸುವಂತೆ ಹೊಂದಿಸಿದ್ದಾರೆ.


    ಇಂಟರ್ನೆಟ್ ಪ್ರಾಬಲ್ಯ ಹೆಚ್ಚಲಿದೆ
    ಇಂದು ಬಳಕೆಯಲ್ಲಿರುವ ಅತ್ಯಾಧುನಿಕ ವಾಣಿಜ್ಯ ಚಿಪ್ ತಂತ್ರಜ್ಞಾನವನ್ನು ಬಳಸುವುದರಿಂದ, ಒಂದೇ ಲೇಸರ್ ಅನ್ನು ಬಳಸುವುದಕ್ಕಿಂತ ಒಂದು ಸೆಕೆಂಡ್ ಸಮಯದ ಚೌಕಟ್ಟಿನಲ್ಲಿ ಒಂದೇ ಪ್ರಮಾಣದ ಡೇಟಾವನ್ನು ರವಾನಿಸಲು 1,000 ಲೇಸರ್‌ಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಹೊಸ ಚಿಪ್ ಇಂಟರ್ನೆಟ್ ಮೂಲಸೌಕರ್ಯವನ್ನು ಹೆಚ್ಚು ಶಕ್ತಿಯ ಕಾರ್ಯವನ್ನುಂಟು ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.


    ಈ ಸಂಶೋಧನೆಯು ಇಂಟರ್ನೆಟ್ ಹಬ್ ಹಾಗೂ ಡೇಟಾ ಕೇಂದ್ರಗಳಲ್ಲಿರುವ ನೂರಾರು ಸಾವಿರ ಲೇಸರ್‌ಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಲೇಸರ್‌ಗಳು ವಿದ್ಯುತ್ ಅನ್ನು ಹೆಚ್ಚು ಬಳಸುತ್ತವೆ ಹಾಗೂ ಶಾಖ ಉತ್ಪಾದನೆಗೆ ಕಾರಣವಾಗಿವೆ ಎಂಬುದಾಗಿ ಸಂಶೋಧನೆಯ ಪ್ರಮುಖ ಪ್ರೊಫೆಸರ್ ಲೀಫ್ ಕಟ್ಸುವೊ ಆಕ್ಸೆನ್‌ಲೋವ್ ತಿಳಿಸಿದ್ದಾರೆ.


    ಸಮರ್ಥ ವ್ಯವಸ್ಥೆ
    ಜಾಗತಿಕ ಇಂಟರ್ನೆಟ್ ಆವರ್ತನ ಶ್ರೇಣಿಯನ್ನು ಪ್ರತಿ ಸೆಕೆಂಡಿಗೆ ಸುಮಾರು 1 Pbit ಎಂದು ಅಂದಾಜಿಸಲಾಗಿದೆ. ಹೀಗಾಗಿ ಉತ್ತಮ ಪ್ರಮಾಣದ ಆವರ್ತನ ಶ್ರೇಣಿಯೊಂದಿಗೆ ಎಲ್ಲವನ್ನೂ ನಿಭಾಯಿಸುವ ಸಮರ್ಥ ವ್ಯವಸ್ಥೆಯನ್ನು ಸಂಶೋಧನೆಯು ಬಹಿರಂಗಪಡಿಸಿದೆ. ಈ ವ್ಯವಸ್ಥೆಯು ಹಿಂದಿನ ದಾಖಲೆಯಾದ ಪ್ರತಿ ಸೆಕೆಂಡಿಗೆ 1.02 Pbut ಗಿಂತ ವೇಗವಾಗಿದ್ದು, ಇದನ್ನು ಈ ವರ್ಷದ ಮೇ ತಿಂಗಳಲ್ಲಿ ಹೊಂದಿಸಲಾಗಿತ್ತು.


    ಇದನ್ನೂ ಓದಿ: Netflix: ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಇನ್ನೊಬ್ಬರಿಗೆ ನೀಡಿದರೆ ದಂಡ ಗ್ಯಾರಂಟಿ! ಅಕೌಂಟ್‌ ಶೇರ್‌ ಮಾಡುವ ಮುನ್ನ ಇದನ್ನ ರೀಡ್ ಮಾಡಿ


    ಆದರೂ ಈ ಹಳೆಯ ದಾಖಲೆಯನ್ನು ಮುರಿಯುವ ವಿಷಯದಲ್ಲಿ ಹೊಸ ಚಿಪ್ ಕೊನೆಯ ಹಂತವನ್ನು ತಲುಪಿಲ್ಲ. ಸಿಸ್ಟಮ್‌ನ ಡೇಟಾ ಆವರ್ತನೆಯನ್ನು ಅಳೆಯಲು ಕಂಪ್ಯೂಟೇಶನಲ್ ಮಾದರಿಯನ್ನು ಬಳಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಪ್ರತಿ ಸೆಕೆಂಡ್‌ಗೆ 100 Pbit ವರೆಗೆ ಸಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


    ತಂತ್ರಜ್ಞಾನದ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ
    ಅಧ್ಯಯನದ ಪ್ರೊಫೆಸರ್ ಆಕ್ಸೆನ್‌ಲೋವ್ ತಿಳಿಸುವಂತೆ ಸಂಶೋಧನೆಯಿಂದ ದೊರೆತಿರುವ ಪರಿಹಾರವು ಉತ್ತಮ ಎಂದೆನಿಸಿದ್ದು ಆವರ್ತನಗಳನ್ನು ರಚಿಸುವ ವಿಷಯದಲ್ಲಿ ಆವರ್ತನವನ್ನು ವಿಭಜಿಸುವ ಪ್ರಕ್ರಿಯೆಯಲ್ಲಿ ಹಾಗೂ ಸಮಾನಾಂತರವಾಗಿ ಬಳಸುವುದರಿಂದ ಡೇಟಾ ರವಾನಿಸಬಹುದು ಎಂದು ತಿಳಿಸಿದ್ದಾರೆ.


    ಅಧ್ಯಯನ ತಂಡವು ಪರಿಕಲ್ಪನೆಯ ಅಧ್ಯಯನವನ್ನು ನಡೆಸಿದ್ದು, ಅದು ಹೊಸ ವಿನ್ಯಾಸದ ಒಂದು ಚಿಪ್ ಅನ್ನು ಸೆಕೆಂಡಿಗೆ 100 ಪೆಟಾಬಿಟ್‌ಗಳವರೆಗೆ ಡೇಟಾವನ್ನು ರವಾನಿಸಲು ಅಳೆಯಬಹುದು ಎಂಬುದಾಗಿ ಸೂಚಿಸಿದೆ.


    ಇದನ್ನೂ ಓದಿ: 5G Mobiles: 5G ಸೇವೆ ಆರಂಭದ ಬೆನ್ನಲ್ಲೇ ಸ್ಮಾರ್ಟ್‌ಪೋನ್‌ ಖರೀದಿಗೆ ಈ ವರ್ಷ ಸೂಕ್ತವಲ್ಲ ಎನ್ನುತ್ತಿರುವ ತಜ್ಞರು!


    ಚಿಪ್ ಅನ್ನು ಪ್ರಾಯೋಗಿಕವಾಗಿ ಬಳಸುವ ಮೊದಲು ತಂತ್ರಜ್ಞಾನದ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ ಎಂಬುದನ್ನು ಸಂಶೋಧನೆಯು ಮನಗಂಡಿದ್ದು ಆದರೂ ಅಧ್ಯಯನದಲ್ಲಿ ಪಾಲ್ಗೊಂಡಿರುವ ವಿಜ್ಞಾನಿಗಳ ಪ್ರಕಾರ ಸಂಶೋಧನೆಯು ಮುಂಬರುವ ದಶಕಗಳಲ್ಲಿ ಭವಿಷ್ಯದ ಸಂವಹನ ವ್ಯವಸ್ಥೆಗಳ ವಿನ್ಯಾಸದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಡೇಟಾ ಬಳಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: