ಬಾರ್ಸಿಲೋನಾದಲ್ಲಿ ಆಯೋಜಿಸಲಾಗುವ ವರ್ಲ್ಡ್ ಮೊಬೈಲ್ ಕಾಂಗ್ರೆಸ್ನಲ್ಲಿ ಎನರ್ಜೈಜರ್ (Energizer) ಎಂಬ ಕಂಪೆನಿ ತನ್ನ ನೂತನ 26 ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿರುವ ಸಂಸ್ಥೆಯು ಮೊಬೈಲ್ ವಿನ್ಯಾಸದ ಕುರಿತಾದ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಇದರಲ್ಲಿ ಕೆಲ ಸ್ಮಾರ್ಟ್ಫೋನ್ ಬರೋಬ್ಬರಿ 18,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿಸಿದೆ.
Energizer ನ ಈ ಹೊಸ ಮೊಬೈಲ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಎನ್ನಲಾಗುತ್ತಿದೆ. ಈ ಮೊಬೈಲ್ನಲ್ಲಿ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ, ಫೋಲ್ಡೇಬಲ್ ಡಿಸ್ಪ್ಲೇ ನೀಡಲಾಗಿದೆ ಎಂದು ಹೇಳಲಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನೂತನ ಸ್ಮಾರ್ಟ್ಫೋನ್ ಗಮನ ಸೆಳೆಯುತ್ತಿರುವುದು ಬ್ಯಾಟರಿ ಸಾಮರ್ಥ್ಯದಿಂದಲೇ ಎನ್ನಬೇಕು. 18,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಯಾವುದೇ ಸ್ಮಾರ್ಟ್ಫೋನ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಪ್ರಸ್ತುತ 4 ರಿಂದ 6 ಸಾವಿರ mAh ಬ್ಯಾಟರಿಗಳೇ ಅತಿ ಹೆಚ್ಚು ಸಾಮರ್ಥ್ಯವಿರುವ ಸ್ಮಾರ್ಟ್ಫೋನ್ಗಳಾಗಿ ಗುರುತಿಸಿಕೊಂಡಿದೆ. ಹೀಗಾಗಿ ಎನರ್ಜೈಜರ್ ಬಿಡುಗಡೆಯಾದರೆ ಜಾರ್ಜಿಂಗ್ ಸಮಸ್ಯೆಯು ದೂರವಾಗಲಿದೆ.
18000 mAh!! Well, if a phone is going to bear the Energizer brand name, it'd better have a long-lasting battery #MWC19 🐰🥁🕶️🐇 pic.twitter.com/dLZuPTo5As
— Bryan Ma (@bryanbma) January 25, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ