• Home
  • »
  • News
  • »
  • tech
  • »
  • Moon Lighting: ಉದ್ಯೋಗಿಗಳ ಮೂನ್‌ಲೈಟಿಂಗ್ ಕಳ್ಳಾಟಕ್ಕೆ ಬ್ರೇಕ್! ಆರೋಪಿಗಳ ಪಿಎಫ್‌, ತೆರಿಗೆ ಮೇಲೂ ಕಂಪನಿ ಕಣ್ಣು!

Moon Lighting: ಉದ್ಯೋಗಿಗಳ ಮೂನ್‌ಲೈಟಿಂಗ್ ಕಳ್ಳಾಟಕ್ಕೆ ಬ್ರೇಕ್! ಆರೋಪಿಗಳ ಪಿಎಫ್‌, ತೆರಿಗೆ ಮೇಲೂ ಕಂಪನಿ ಕಣ್ಣು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು ಕಂಪನಿಯಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿರುವಾಗಲೇ, ಹೆಚ್ಚುವರಿ ಹೊಣೆಗಾರಿಕೆ ಮತ್ತು ಹೊರಗಿನ ಜಾಬ್‌ಗಳನ್ನು ಮಾಡುವುದು. ಉದ್ಯೋಗಿಗಳು ಈ ರೀತಿ ಮಾಡುವಾಗ ಉದ್ಯೋಗದಾತ ಕಂಪನಿಯ ಗಮನಕ್ಕೆ ತಂದಿರುವುದಿಲ್ಲ. ಈ ಪ್ರವೃತ್ತಿಯನ್ನೇ ಮೂನ್‌ಲೈಟಿಂಗ್‌ ಎನ್ನುತ್ತಾರೆ.

  • Share this:

ಕಾರ್ಪೊರೇಟ್‌ ಉದ್ಯೋಗ (Corporate Business) ವಲಯದಲ್ಲಿ ಕಂಪನಿಗಳಿಗೆ ಮೂನ್‌ಲೈಟಿಂಗ್ ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿನ ಸಮೀಕ್ಷೆ ಕೂಡ 73% ಉದ್ಯೋಗಿಗಳು ಮೂನ್‌ಲೈಟಿಂಗ್‌ ಪ್ರವೃತ್ತಿಯಲ್ಲಿ ತೊಡಗಿರುವ ಬಗ್ಗೆ ಬಹಿರಂಗ ಪಡಿಸಿದೆ. ಕಂಪನಿಗಳಿಗೂ ಎರಡೆರೆಡು ಉದ್ಯೋಗದಲ್ಲಿ (Business) ತೊಡಗಿರುವ ಉದ್ಯೋಗಿಗಳಿಂದ ಆದಾಯ ಮತ್ತು ಉತ್ಪಾದಕತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕಂಪನಿಯ ಮುಖ್ಯಸ್ಥರು ಹೇಳುತ್ತಲೇ ಬಂದಿದ್ದಾರೆ. ಇನ್ನೂ ಕೆಲ ಕಂಪನಿಗಳು ಈ ಪ್ರವೃತ್ತಿಯನ್ನು ಅನುಸರಿಸುತ್ತಿರುವ ನೌಕರರನ್ನು ವಜಾ ಮಾಡುವ ಮೂಲಕ ಕಠಿಣ ಕ್ರಮ ತೆಗೆದುಕೊಂಡಿವೆ. ಇನ್ಫೋಸಿಸ್, ವಿಪ್ರೋ ಮತ್ತು ಐಬಿಎಂನಂತಹ ಪ್ರಮುಖ ಐಟಿ ಕಂಪನಿಗಳು ಕಂಪನಿಯಲ್ಲಿ ಉದ್ಯೋಗದಲ್ಲಿರುವಾಗ ತಮ್ಮ ಉದ್ಯೋಗಿಗಳಿಗೆ ಎರಡನೇ ಉದ್ಯೋಗವನ್ನು ತೆಗೆದುಕೊಳ್ಳಲು ಅನುಮತಿಸದೆ ಅದರ ವಿರುದ್ಧ ಕಟ್ಟುನಿಟ್ಟಿನ ನಿಲುವು ತೆಗೆದುಕೊಂಡಿದೆ. ವಿಪ್ರೋ, ಮೂನ್‌ಲೈಟಿಂಗ್ ( Moon Lighting) ಉದ್ಯೋಗಿಗಳ ವಿರುದ್ಧ ಖಡಕ್‌ ಕ್ರಮ ತೆಗೆದುಕೊಂಡಿದ್ದು, ಈ ಪ್ರವೃತ್ತಿಯಲ್ಲಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಿದೆ.


ಮೂನ್‌ಲೈಟಿಂಗ್‌ನಲ್ಲಿ ತೊಡಗಿರುವವರನ್ನು ಕೆಲಸದಿಂದ ತೆಗೆದುಹಾಕುವ ಒಂದು ಕ್ರಮವನ್ನು ಅನುಸರಿಸಿದರೆ ಇತ್ತ ಅಂತಹ ಉದ್ಯೋಗಿಗಳ ಪತ್ತೆ ಹಚ್ಚುವಿಕೆಗೂ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ.


ಮೂನ್‌ಲೈಟಿಂಗ್ ಪ್ರಕರಣ ಬಯಲು ಮಾಡಲು ಹೊಸ ಮಾರ್ಗ


ಭವಿಷ್ಯ ನಿಧಿ ಮತ್ತು ಆದಾಯ ತೆರಿಗೆ ಡೇಟಾವನ್ನು ಟ್ರ್ಯಾಕ್‌ ಮಾಡುವ ಮೂಲಕ ಮೂನ್‌ಲೈಟಿಂಗ್ ಪ್ರಕರಣಗಳನ್ನು ಕಂಪನಿಗಳು ಪತ್ತೆ ಹಚ್ಚುತ್ತಿವೆ. ಈ ಬಗ್ಗೆ ಮಾತನಾಡಿದ Authbridge ಕಂಪನಿ ಸಂಸ್ಥಾಪಕ ಮತ್ತು CEO ಅಜಯ್ ಟ್ರೆಹಾನ್, ಐಟಿ ಮತ್ತು FMCG ಉದ್ಯಮಗಳಾದ್ಯಂತ ಉದ್ಯೋಗಿಗಳು ಎರಡನೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸುವುದು ಈಗ ಮುಖ್ಯವಾಗಿದೆ.
“ಸುಮಾರು ಆರು ತಿಂಗಳ ಹಿಂದೆ, ನಾವು ಈ ತಪಾಸಣೆಗಳನ್ನು ಮಾಡುತ್ತಿರಲಿಲ್ಲ ಮತ್ತು ಈಗ ನಾವು ತಿಂಗಳಿಗೆ ಸುಮಾರು 2,50,000 ಚೆಕ್‌ಗಳನ್ನು ಮಾಡುತ್ತಿದ್ದೇವೆ. ಈ ಪರಿಶೀಲನೆ ಕ್ರಮವನ್ನು ದೊಡ್ಡ ಎಫ್‌ಎಂಸಿಜಿ ಸಂಸ್ಥೆಗಳು, ಐಟಿ/ಐಟಿಇಎಸ್ ಕಂಪನಿಗಳು ಸೇರಿದಂತೆ ಹಲವು ಕ್ಷೇತ್ರಗಳು ತೆಗೆದುಕೊಂಡಿವೆ ”ಎಂದು ಟ್ರೆಹಾನ್ ತಿಳಿಸಿದರು.


ಎಲ್ಲಾ ಐಟಿ ಕಂಪನಿಗಳಲ್ಲೂ ಉದ್ಯೋಗಿಗಳಿಗೆ ಭವಿಷ್ಯ ನಿಧಿ ಖಾತೆ ತೆರೆಯಲಾಗುತ್ತದೆ. ಇಂಥ ಖಾತೆ ತೆರೆಯಲು ಉದ್ಯೋಗಿಗಳ ಆಧಾರ್‌ ನಂಬರ್‌, ಪಾನ್‌ ನಂಬರ್‌ ಮೊದಲಾದವುಗಳ ನಮೂದಿಸುವಿಕೆ ಕಡ್ಡಾಯ. ಹೀಗಾಗಿ ಉದ್ಯೋಗಿಯೊಬ್ಬ ಎರಡು ಕಡೆ ಕೆಲಸ ಮಾಡುತ್ತಿದ್ದರೂ, ಆತನ ಎಲ್ಲಾ ಮಾಹಿತಿ ಅಧಿಕಾರಿಗಳಿಗೆ ಒಂದೇ ಕಡೆ ಸಿಗುತ್ತದೆ. ಈ ಮೂಲಕ ಈ ಪ್ರವೃತ್ತಿಯಲ್ಲಿ ತೊಡಗಿರುವ ಉದ್ಯೋಗಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಇದೇ ಕ್ರಮಕ್ಕೆ ಸದ್ಯ ಹಲವು ಕಂಪನಿಗಳು ಮುಂದಾಗಿವೆ.


ಇಂದು ಲಭ್ಯವಿರುವ ಅಲ್ಗಾರಿದಮ್‌ಗಳು ಸೇವಾ ಪೂರೈಕೆದಾರರಿಗೆ ಉದ್ಯೋಗಿ ಡೇಟಾವನ್ನು ಸಾಮೂಹಿಕವಾಗಿ ಪರಿಶೀಲಿಸಲು ಮತ್ತು ಅದನ್ನು ಉದ್ಯೋಗದಾತರಿಗೆ ವರದಿ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಟ್ರೆಹಾನ್ ಹೇಳಿದರು. ಮೂಲಭೂತ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಲ್ಯಾಪ್‌ಟಾಪ್‌ಗಳಂತಹ ಉದ್ಯೋಗಿಗಳಿಗೆ ನೀಡಲಾದ ಸಾಧನಗಳಲ್ಲಿ ಹೆಚ್ಚಿನ ದೊಡ್ಡ ಸಂಸ್ಥೆಗಳು ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿರುವ ಸಾಂಪ್ರದಾಯಿಕ ಪರಿಶೀಲನೆಗಳಲ್ಲದೆ, ಲಭ್ಯವಿರುವ ಹಣಕಾಸಿನ ಡೇಟಾಗಳಾದ ಇಪಿಎಫ್‌ಒ ಠೇವಣಿಗಳು ಮತ್ತು ಫಾರ್ಮ್ 26 ಎಎಸ್‌ನಲ್ಲಿ ಪ್ರತಿಬಿಂಬಿಸುವ ಮೂಲದಲ್ಲಿ ತೆರಿಗೆ ಕಡಿತವನ್ನು ದ್ವಿ ಉದ್ಯೋಗವನ್ನು ಪರಿಶೀಲಿಸಲು ಬಳಸಿಕೊಳ್ಳುತ್ತವೆ ಎಂದಿದ್ದಾರೆ.


ಪಿಎಫ್‌ ಮತ್ತು ಟ್ಯಾಕ್ಸ್‌ ಡೆಟಾಗಳ ಮೂಲಕ ಪತ್ತೆ


“ಉದ್ಯೋಗದಾತರು ಪಿಎಫ್‌ ಅನ್ನು ಪರಿಶೀಲಿಸುವ ಮೂಲಕ ಮತ್ತು ಉದ್ಯೋಗಿ ಒಂದಕ್ಕಿಂತ ಹೆಚ್ಚು ಕಂಪನಿಗಳಿಂದ ಸಂಬಳ, ಪಿಎಫ್‌ ಅನ್ನು ಸ್ವೀಕರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬಹುದು. ಉದ್ಯೋಗಿ ಬೇರೊಂದು ಕಂಪನಿಯಲ್ಲಿ ನೇರವಾಗಿ ಕೆಲಸ ಮಾಡದೇ ಇರಬಹುದು ಆದರೆ ಕಚೇರಿ ಸಮಯದ ನಂತರ ಅವರು ಮಾಡುತ್ತಿರುವ ಯಾವುದೋ ಒಂದು ಸಲಹಾ ಶುಲ್ಕವನ್ನು ಪಡೆಯುತ್ತಿರುತ್ತಾರೆ. ಸಂಸ್ಥೆಯು ಶುಲ್ಕವನ್ನು ಪಾವತಿಸುವಾಗ ಟಿಡಿಎಸ್‌ ಅನ್ನು ಕಡಿತಗೊಳಿಸುತ್ತದೆ. ಅದು 26AS ಅನ್ನು ಪ್ರತಿಬಿಂಬಿಸುತ್ತದೆ" ಎಂದು ಟ್ರೆಹಾನ್ ಹೇಳಿದರು.


ಇದನ್ನೂ ಓದಿ: ಜಿಯೋ ಆಯ್ತು, ಏರ್​ಟೆಲ್​ ಆಯ್ತು, ಇದೀಗ ವೊಡಾಫೋನ್‌ನಿಂದ ಆಫರ್! ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಸುದ್ದಿ


ಕೋವಿಡ್‌ ಲಾಕ್‌ಡೌನ್‌ ವೇಳೆ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದ ವೇಳೆ ಮೂನ್‌ಲೈಟಿಂಗ್‌ ಪ್ರಕರಣ ಹೆಚ್ಚಾಗಿತ್ತು. ಈಗಿನ ಉದ್ಯೋಗ ವಜಾಗೊಳಿಸುವಿಕೆಯಂತಹ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಮತ್ತಷ್ಟು ಈ ಪ್ರಕರಣಗಳು ಹೆಚ್ಚಾಗಿವೆ. ಉದ್ಯೋಗ ಅನಿಶ್ಚಿತತೆಯಿಂದ ಉದ್ಯೋಗಿಗಳು ಈ ಕ್ರಮ ಅನುಸರಿದಿದರೂ ಸಹ ನೇರವಾಗಿ ಇದು ಕಂಪನಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲ ಕಂಪನಿಗಳು ಮತ್ತು ನೌಕರರು ಇದನ್ನು ಅನೈತಿಕ ಕ್ರಮ ಎಂದು ಸಹ ಹೇಳಿದ್ದಾರೆ.

First published: