2019ರ ಆ್ಯಂಡ್ರಾಯ್ಡ್​​ ಫೋನ್​ಗಳ ಎಮೋಜಿ ಪಟ್ಟಿಯಲ್ಲಿ ‘ಹಿಂದು‘ ದೇವಸ್ಥಾನ ಸೇರಿ ಹಲವು ಹೊಸ ಸೇರ್ಪಡೆ

ಈ ಬಾರಿ ಭಾರತೀಯ ಸಂಸ್ಕೃತಿಯನ್ನು ಒಳಗೊಂಡ ಇಮೋಜಿಯನ್ನು ತಯಾರಿಸಲಾಗಿದ್ದು ಹಿಂದು ದೇವಸ್ಥಾನ, ಮಹಿಳೆಯರು ಧರಿಸುವ ಸೀರೆ ಇವನ್ನು ಚಿತ್ರಿಸಲಾಗಿದೆ. ಜೊತೆಗೆ ಆಟೋರಿಕ್ಷಾ, ವೀಲ್​ ಚಯರ್​, ಗೋರಿಲ್ಲಾ ಮುಂತಾದವುಗಳನ್ನು ರೂಪಿಸಿವೆ.  ಹೆಚ್ಚಾಗಿ ಮಾನವನ ಕೆಲಸ ಕಾರ್ಯ, ಪ್ರಾಣಿಗಳ ಬಗ್ಗೆ ಜಾಸ್ತಿ ಗಮನ ಹರಿಸಿ ತಯಾರಿಸಲಾಗಿದೆ.

news18
Updated:February 6, 2019, 5:14 PM IST
2019ರ ಆ್ಯಂಡ್ರಾಯ್ಡ್​​ ಫೋನ್​ಗಳ ಎಮೋಜಿ ಪಟ್ಟಿಯಲ್ಲಿ ‘ಹಿಂದು‘ ದೇವಸ್ಥಾನ ಸೇರಿ ಹಲವು ಹೊಸ ಸೇರ್ಪಡೆ
ಇಮೋಜಿ
news18
Updated: February 6, 2019, 5:14 PM IST
ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​, ವಾಟ್ಸ್​ಆ್ಯಪ್​ನಲ್ಲಿ ಮಾತಿಗಿಂತ ಜಾಸ್ತಿ ಎಮೋಜಿಗಳನ್ನು ಹೆಚ್ಚಾಗಿ ಬಳಸುತ್ತೇವೆ. ನಾವು ಕಳುಹಿಸುವ ಸಂದೇಶವನ್ನು  ಸುಲಭವಾಗಿ ರೂಪಾಂತರಿಸಲು ಎಮೋಜಿಗಳ ಬಹಳ ಉಪಯುಕ್ತವಾಗಿದೆ. ಆದರೆ ಇದೀಗ ಎಮೋಜಿಗಳನ್ನು 12.0 ವರ್ಷನ್​ಗೆ ನವೀಕರಿಸಲಾಗಿದ್ದು, 230 ಹೊಸ ಎಮೋಜಿಯನ್ನು ಬಿಡುಗಡೆಗೊಳಿಸಲು ಕಂಪೆನಿ ಮುಂದಾಗಿದೆ.

ಈ ಬಾರಿ ಭಾರತೀಯ ಸಂಸ್ಕೃತಿಯನ್ನು ಒಳಗೊಂಡ ಎಮೋಜಿಯನ್ನು ತಯಾರಿಸಲಾಗಿದ್ದು ಹಿಂದು ದೇವಸ್ಥಾನ, ಮಹಿಳೆಯರು ಧರಿಸುವ ಸೀರೆ ಇವನ್ನು ಚಿತ್ರಿಸಲಾಗಿದೆ. ಜೊತೆಗೆ ಆಟೋರಿಕ್ಷಾ, ವೀಲ್​ ಚಯರ್​, ಗೋರಿಲ್ಲಾ ಮುಂತಾದವುಗಳನ್ನು ರೂಪಿಸಿವೆ.  ಹೆಚ್ಚಾಗಿ ಮಾನವನ ಕೆಲಸ ಕಾರ್ಯ, ಪ್ರಾಣಿಗಳ ಬಗ್ಗೆ ಜಾಸ್ತಿ ಗಮನ ಹರಿಸಿ ತಯಾರಿಸಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಬ್ಯಾಟರಿ ಖಾಲಿ ಎಂದು ಹೇಳುವಂತಿಲ್ಲ: ಬರುತ್ತಿದೆ 18 ಸಾವಿರ mAh ಸಾಮರ್ಥ್ಯದ ಸ್ಮಾರ್ಟ್​ಫೋನ್

ವಿಶೇಷವೆಂದರೆ ಭಾರತೀಯ ಸಂಸ್ಕೃತಿಯ ಕುರಿತಾಗಿ ಮುಂಬೈ ಇಂಡಿಯನ್​​ ಇನ್ಸಿಟ್ಯೂಟ್​ ಆಫ್​ ಟೆಕ್ನಾಲಜಿ ಸಂಸ್ಥೆಯ ಗಿರೀಶ್​ ದಳವಾಯ್​​ ಮತ್ತು ರಾಜ್ಯ ಮರಾಠಿ ವಿಕಾಸ್​ ಸಂಸ್ಥೆಯ ಮಯಾಂಕ್​ ಚರ್ತುವೇಧಿ ಅವರು ರಚಿಸಿದ್ದಾರೆ. 2017ರ ವೇಳೆಯಲ್ಲಿ ತಯಾರಿಸಲಾದ ಈ ಇಮೋಜಿಯು ಭಾರತೀಯರಿಗೆ ನೀಡಿದ ಕೊಡುಗೆಯಾಗಿದೆ. ಈ ಬಗ್ಗೆ ಮಾತನಾಡಿದ ಅವರು ‘‘ಎಮೋಜಿಗಳಲ್ಲಿ ಭಾರತೀಯ ಧರ್ಮಕ್ಕೆ ಅನುಗುಣವಾದ  ಎಮೋಜಿಗಳು ಇರಲಿಲ್ಲ, ಆ ಕಾರಣಕ್ಕಾಗಿ ಕೆಲವು ಎಮೋಜಿಗಳನ್ನು ರಚಿಸಲಾಗಿದೆ‘‘ ಎಂದು  ಹೇಳಿದ್ದಾರೆ.

ಹೊಸತಾಗಿ ರೂಪಿಸಿದ ಎಮೋಜಿಗಳು ಆ್ಯಪಲ್​, ಗೂಗಲ್​, ಫೇಸ್​ಬುಕ್​, ಅಡೋಬೆ, ಹುವಾಯ್​, ಐಬಿಎಮ್​, ಮೈಕ್ರೊಸಾಫ್ಟ್​​, ನೆಟ್​ಫ್ಲಿಕ್ಸ್​​, ಒರಾಕಲ್​, ಸ್ಯಾಪ್​, ಶೋಫಿಪೈ ಸಂಸ್ಥೆಗಳಿಗೆ ಬಹು ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಎಮೋಜಿಗಳು ಗೂಗಲ್​ ಆ್ಯಂಡ್ರಾಯಿಡ್​ ಫೋನ್​ ಮತ್ತು ಆ್ಯಪಲ್​ ಐಫೋನ್​ ಸ್ಮಾರ್ಟ್​ ಫೋನ್​ಗಳಿಗೆ ಬರಲಿದೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ