ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹೆಚ್ಚು ಮಾತುಕತೆಯಲ್ಲಿದ್ದ ಟ್ವಿಟರ್ (Twitter) ಈಗ ಮತ್ತೆ ಹೊಸ ಫೀಚರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ ಅನ್ನು ಖರೀದಿಸಿದ ನಂತರ ಟ್ವಿಟರ್ನಲ್ಲಿ ಏನಾದರೊಂದು ಬದಲಾವಣೆಗಳು ಆಗುತ್ತಲೇ ಇದೆ. ಹಿಂದೊಮ್ಮೆ ಟ್ವಿಟರ್ನಲ್ಲಿ ಬ್ಲೂಟಿಕ್ (Twitter Blue Tick) ಯಾರಿಗೆ ಬೇಕಾದರು ಪಡೆಯಬಹುದೆಂದು ವರದಿಯಾಗಿತ್ತು. ಆದರೆ ಈ ಫೀಚರ್ ಸ್ವಲ್ಪ ದಿನಗಳ ನಂತರ ಒಂದು ದೊಡ್ಡ ಮಟ್ಟಿನ ಚರ್ಚೆಗೆ ಆಸ್ಪದವಾಗಿತ್ತು. ಇದೀಗ ಟ್ವಿಟರ್ನಿಂದ ಮತ್ತೊಂದು ಬದಲಾವಣೆ ಬರುತ್ತಿದೆ. ಇದುವರೆಗೆ ಇದ್ದ ಬ್ಲೂಟಿಕ್ ಫೀಚರ್ ಜೊತೆಗೆ ಹೊಸದಾಗಿ ಚಿನ್ನ (Gold) ಮತ್ತು ಬೂದು ಬಣ್ಣದ (Grey) ಮಾರ್ಕ್ಗಳು ಬರಲಿವೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಟ್ವಿಟರ್ನಲ್ಲಿ ಬ್ಲೂ ಟಿಕ್ ಜೊತೆಗೆ ಚಿನ್ನ ಮತ್ತು ಬೂದು ಬಣ್ಣದ ಟಿಕ್ಗಳನ್ನು ಕೂಡ ಅಳವಡಿಸಲಾಗುತ್ತಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಡಿಸೆಂಬರ್ 2 ಶುಕ್ರವಾರ ಟ್ವಿಟರ್ ತನ್ನ ಬ್ಲೂ ಟಿಕ್ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದೆ.
ಕಂಪನಿಗಳಿಗೆ ಚಿನ್ನದ ಟಿಕ್
ಎಲಾನ್ ಮಸ್ಕ್ ಅವರ ವಿವರಗಳ ಪ್ರಕಾರ, ಟ್ವಿಟರ್ನಲ್ಲಿನ ಕಂಪನಿ ಖಾತೆಗಳು ಈಗ ಚಿನ್ನದ ಚೆಕ್ ಗುರುತು ಮತ್ತು ಸರ್ಕಾರಿ ಖಾತೆಗಳು ಬೂದು ಬಣ್ಣದ ಚೆಕ್ ಗುರುತು ಹೊಂದಿರುತ್ತವೆ. ಜನರು ನೀಲಿ ಚೆಕ್ ಗುರುತು ಪಡೆಯುತ್ತಾರೆ. ಇಲ್ಲಿ ಬ್ಲೂ ಟಿಕ್ಗಳನ್ನು ಸೆಲೆಬ್ರೆಟಿಗಳಿಗೆ ಮಾತ್ರವಲ್ಲದೆ ಯಾರು ಕೂಡ ಪಡೆಯಬಹುದಾಗಿದೆ. ಆದರೆ ಎಲ್ಲವನ್ನೂ ಪರಿಶೀಲಿಸಿದ ನಂತರವೇ ಈ ಚೆಕ್ ಗುರುತುಗಳನ್ನು ಸಕ್ರಿಯಗೊಳಿಸಲಾಗುತ್ತದೆ.
ಇದನ್ನೂ ಓದಿ: ವಾಟ್ಸಪ್ ಸ್ಟೇಟಸ್ನಲ್ಲಿ ಇನ್ಮುಂದೆ ವಾಯ್ಸ್ ಮೆಸೇಜ್ ಕೂಡ ಹಂಚಿಕೊಳ್ಬಹುದು! ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ
ಎಂಟು ಡಾಲರ್ಗಳಿಗೆ ಟಿಕ್ ಮಾರ್ಕ್
ಎಲಾನ್ ಮಸ್ಕ್ ಟ್ವಿಟರ್ ಬ್ಲೂಟಿಕ್ ಗೆ ಚಂದಾದಾರರಾಗಲು ಎಂಟು ಡಾಲರ್ ಬೆಲೆಯನ್ನು ನಿಗದಿಪಡಿಸಿದ್ದಾರೆ. ಡಿಸೆಂಬರ್ನಲ್ಲಿ ಮತ್ತೆ ಪ್ರಾರಂಭವಾಗುವ ಈ ಸೇವೆಗೆ ಅದೇ ಬೆಲೆ ಅನ್ವಯಿಸುತ್ತದೆ. ಈ ತಿಂಗಳ ಆರಂಭದಲ್ಲಿ, ಕಂಪನಿಗಳು, ವ್ಯಕ್ತಿಗಳು ಮತ್ತು ಇತರ ಸಂಸ್ಥೆಗಳ ಟ್ವಿಟರ್ ಖಾತೆಗಳಿಗೆ ಎಂಟು ಡಾಲರ್ಗಳನ್ನು ಪಾವತಿಸಿದ ಮಸ್ಕ್ ಬ್ಲೂಟಿಕ್ ನೀಡಿದ್ದರು. ಇದರಿಂದಾಗಿ ಹಲವು ನಕಲಿ ಖಾತೆಗಳೂ ಬಯಲಾಗಿವೆ. ಹಾಗಾಗಿ ಆ ಸೇವೆಯನ್ನು ತಾತ್ಕಾಲಿಕವಾಗಿ ಎಲಾನ್ ಮಸ್ಕ್ ಅವರು ರದ್ದುಗೊಳಿಸಿದರು.
ಮುನ್ನೆಚ್ಚರಿಕೆಯ ಜೊತೆಗೆ ಈ ಸೇವೆ ಮರುಸ್ಥಾಪನೆ:
ಈ ಹಿಂದೆ, ಎಲಾನ್ ಮಸ್ಕ್ ಈ ನಕಲಿ ಖಾತೆಗಳಿಗೆ ಬ್ಲೂ ಮಾರ್ಕ್ ಕುರಿತು ಟ್ವೀಟ್ ಮಾಡಿದ್ದರು. ಅನೇಕ ಬೋಗಸ್ ಖಾತೆಗಳು ಬ್ಲೂ ಟಿಕ್ ಆಗುತ್ತಿದ್ದು, ಇವುಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಬ್ಲೂಟಿಕ್ ಸೇವೆಯನ್ನು ನಿಲ್ಲಿಸುತ್ತಿದ್ದೇವೆ ಎಂದಿದ್ದರು. ಆದರೆ ಇನ್ನುಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದು ಮುಖ್ಯವೆಮದು ಮಸ್ಕ್ ಅವರು ಹೇಳಿದ್ದಾರೆ. ಆದರೆ ಯಾವುದೇ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾಹಿತಿಯನ್ನು ಹೊರಬಿಟ್ಟಿಲ್ಲ.
ಎಲಾನ್ ಮಸ್ಕ್ ಅವರ ಈ ಕುರಿತು ಟ್ವೀಟ್:
'ತಡವಾಗಿದ್ದಕ್ಕೆ ಕ್ಷಮೆ ಇರಲಿ. ಶುಕ್ರವಾರ ಪರಿಶೀಲಿಸಲಾದ ಟ್ವಿಟರ್ ಬ್ಲೂ ಟಿಕ್ ಅನ್ನು ನಾವು ತಾತ್ಕಾಲಿಕವಾಗಿ ಮರುಪ್ರಾರಂಭಿಸುತ್ತಿದ್ದೇವೆ. ಇದು ಕಂಪನಿಗೆ ಅವಶ್ಯಕವಾಗಿದೆ" ಎಂದು ಮಸ್ಕ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
4 ಲಕ್ಷ ಟ್ವಿಟರ್ ಖಾತೆಗಳಿಗೆ ಬ್ಲೂಟಿಕ್:
ಈ ಟಿಕ್ಗಳನ್ನು ನೀಡುವ ಮೊದಲು ಎಲ್ಲಾ ಖಾತೆಗಳನ್ನು ಪರಿಶೀಲಿಸಿದ ನಂತರವೇ ಬ್ಲೂಟಿಕ್ ಅನ್ನು ನೀಡಲಾಗುತ್ತದೆ ಎಂದು ಎಲಾನ್ ಮಸ್ಕ್ ತಮ್ಮ ಟ್ವಿಟರ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಇದುವರೆಗೆ 4 ಲಕ್ಷ ಟ್ವಿಟರ್ ಖಾತೆಗಳನ್ನು ಬ್ಲೂ ಟಿಕ್ ಮಾಡಲಾಗಿದೆ. ಆ ಖಾತೆಗಳೆಲ್ಲ ರಾಜಕೀಯ ನಾಯಕರು, ನಟರು, ಕೈಗಾರಿಕೋದ್ಯಮಿಗಳಂತಹ ಪ್ರಮುಖರ ಖಾತೆಗಳಾಗಿವೆ. ಆದರೆ ಈ ಕಾರ್ಯವಿಧಾನದ ಪ್ರಕಾರ ಎಲ್ಲಾ ವೈಯಕ್ತಿಕ ಖಾತೆಗಳಿಗೆ ಒಂದೇ ವೆರಿಫಿಕೇಶನ್ ಟಿಕ್ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ