ಅನಾವರಣದಂದೇ ಪ್ಲಾಪ್​ ಆದ ಟೆಸ್ಲಾ; ಲಕ್ಷಾಂತರ ಜನರ ಎದುರೇ ಪುಡಿಪುಡಿಯಾಯ್ತು ಕಾರಿನ ಗಾಜು

‘ದ ಸ್ಪೈ ವೂ ಲವ್ಡ್​ ಮೀ‘ ಜೇಮ್ಸ್​​​​ ಬಾಂಡ್​  ಸಿನಿಮಾದಲ್ಲಿ ಬಳಸಲಾದ ಎಸ್ಟ್ರಿಟ್​​ ಸ್ಪೋಟ್ಸರ್​​ ಕಾರಿನಿಂದ ಪ್ರೇರಿಣೆಗೊಂಡು ಈ ನೂತನ ಎಲೆಕ್ಟ್ರಿಕ್​​​ ಟೆಸ್ಲಾ ಕಾರನ್ನು ತಯಾರಿಸಿದೆ.

news18-kannada
Updated:November 25, 2019, 9:13 AM IST
ಅನಾವರಣದಂದೇ ಪ್ಲಾಪ್​ ಆದ ಟೆಸ್ಲಾ; ಲಕ್ಷಾಂತರ ಜನರ ಎದುರೇ ಪುಡಿಪುಡಿಯಾಯ್ತು ಕಾರಿನ ಗಾಜು
Elon Musk Tesla Cybertruck has unbreakable glass that broke at the launch
  • Share this:
ಅಮೆರಿಕದ ಕ್ಯಾಲಿಫೋರ್ನಿಯ ಮೂಲದ ಎಲೆಕ್ಟ್ರಿಕ್​​​ ಕಾರು ಉತ್ಪಾದಕ ಕಂಪೆನಿ ಟೆಸ್ಲಾ ಕಾರನ್ನು ಸಿದ್ಧಪಡಿಸಿತ್ತು. ಹೊಸ ವಿನ್ಯಾಸ, ಹೊಸ ಫೀಚರ್​ ಅಳವಡಿಸುದರ ಮೂಲಕ ಈ ಕಾರನ್ನು ಅನಾವರಣಗೊಳಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಎಲೆಕ್ಟ್ರಿಕ್​ ಟೆಸ್ಲಾ ಅನಾವರಣದಂದು ಕಾರಿನ ಪ್ಲಾಪ್​ ಶೋ ಆಗಿದೆ.

‘ದ ಸ್ಪೈ ವೂ ಲವ್ಡ್​ ಮೀ‘ ಜೇಮ್ಸ್​​​​ ಬಾಂಡ್​  ಸಿನಿಮಾದಲ್ಲಿ ಬಳಸಲಾದ ಎಸ್ಟ್ರಿಟ್​​ ಸ್ಪೋಟ್ಸರ್​​ ಕಾರಿನಿಂದ ಪ್ರೇರಿಣೆಗೊಂಡು ಈ ನೂತನ ಎಲೆಕ್ಟ್ರಿಕ್​​​ ಟೆಸ್ಲಾ ಕಾರನ್ನು ತಯಾರಿಸಲಾಗಿದೆ. ಮಾರುಕಟ್ಟೆಗೆ ಅನಾವರಣಗೊಳಿಸುವ ಸಂದರ್ಭದಲ್ಲಿ  ಟೆಸ್ಲಾ ಕಂಪನಿ ಸಿಇಒ ಎಲಾನ್​ ಮಸ್ಕ್​ ಅವರು, ಕಾರಿನ ಗಾಜು ಎಷ್ಟು ಗಟ್ಟಿಯಾಗಿದೆ ಎಂದು ಪರೀಕ್ಷೆಗಾಗಿ ಮುಂದಾಗುತ್ತಾರೆ. ಅದಕ್ಕಾಗಿ ಲೋಹದ ಚೆಂಡಿನಿಂದ ಕಾರಿನ ಗಾಜಿಗೆ ಹೊಡೆಯಲು ವಿನ್ಯಾಸಗಾರನಿಗೆ ಹೇಳಿತ್ತಾರೆ.

 
ವಿನ್ಯಾಸಗಾರ ಲೋಹದ ಚೆಂಡಿನಿಂದ ಕಾರಿನ ಗಾಜಿಗೆ ಹೊಡೆಯುತ್ತಿದ್ದಂತೆ ಗಾಜು ಪುಡಿಪುಡಿಯಾಗಿದೆ. ಇದನ್ನು ಗಮನಿಸುತ್ತಿದ್ದಂತೆ ಎಲಾನ್​ ಮಸ್ಕ್​ , ಓಹ್​ ನನ್ನ ದೇವರೇ, ಏನಿದು? ಎಂದು ಆಶ್ಚರ್ಯಚಕಿತರಾಗಿದ್ದಾರೆ. ಈ  ಮೂಲಕ ಕಾರು ಅನಾವರಣ ಕಾರ್ಯಕ್ರಮ ನಗೆಪಾಟಲಿಗೀಡಾಗಿದೆ.

ಟೆಸ್ಲಾ ಎಲೆಕ್ಟ್ರಿಕ್​ ಕಾರು ಅನಾವರಣ ಸಂದರ್ಭದಲ್ಲಿ ಎಷ್ಟು ಗಟ್ಟಿಮುಟ್ಟಾಗಿದೆ ಎಂಬುದನ್ನು ತೋರ್ಪಡಿಸಲು ಮುಂದಾದ ಸಂದರ್ಭದಲ್ಲಿ ಈ ಪ್ಲಾಪ್​ ಶೋ ನಡೆದಿದೆ. ಅಮೆರಿಕದಲ್ಲಿ ಟೆಸ್ಲಾ ಕಂಪೆನಿ ಕಾರು ಮುಂಚೂಣಿಯಲ್ಲಿದೆ. ನೂತನ ಎಲೆಕ್ಟ್ರಿಕ್​ ಟೆಸ್ಲಾ ಕಾರಿನ ಬೆಲೆ 39,900 ಡಾಲರ್​ ಆಗಿದೆ.
First published: November 25, 2019, 9:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading