• Home
  • »
  • News
  • »
  • tech
  • »
  • Twitter Story: ಎಲಾನ್ ಮಸ್ಕ್ ಮಾಜಿ ಗೆಳತಿಯ ಟ್ವಿಟರ್ ಖಾತೆ ಕಣ್ಮರೆ! ಇದರ ಅಸಲಿ ಕಥೆ ಏನು ಗೊತ್ತಾ?

Twitter Story: ಎಲಾನ್ ಮಸ್ಕ್ ಮಾಜಿ ಗೆಳತಿಯ ಟ್ವಿಟರ್ ಖಾತೆ ಕಣ್ಮರೆ! ಇದರ ಅಸಲಿ ಕಥೆ ಏನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲಾನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಕೆಲವು ದಿನಗಳ ನಂತರ, ಅಂಬರ್ ಹರ್ಡ್ ಅವರ ಖಾತೆಯು ಕಣ್ಮರೆಯಾಗಿದೆ. ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ಪಡೆದ  ಮೇಲೆ ಈ ರೀತಿಯ ಹಲವಾರು ಬದಲಾವಣೆಗಳು ಆಗಿವೆ.

  • Share this:

    ಎಲಾನ್ ಮಸ್ಕ್ (Elon musk) ಅವರೊಂದಿಗೆ ವಿಚ್ಛೇದನದ (Divorce) ನಂತರ ಅಂಬರ್ ಹರ್ಡ್ (Amber heard) 2016 ಮತ್ತು 2018 ರ ನಟ ಜಾನಿ ಡೆಪ್‌ (Jony depp) ಅವರೊಂದಿಗೆ ಸಂಬಂಧ ಹೊಂದಿದ್ದರು. ಕೆಲ ತಿಂಗಳ ಹಿಂದೆ ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ರವರ ವಿವಾಹದ ವಿಷಯ ಬಾರಿ ಚರ್ಚೆಯಾಗಿತ್ತು. ಇದೀಗ ಅಂಬರ್ ಹರ್ಡ್ ರವರ ಟ್ವಿಟರ್ (Twitter) ಖಾತೆ (Account) ಕಣ್ಮರೆಯಾದ ಸುದ್ದಿ ಮತ್ತೊಮ್ಮೆ ಚರ್ಚಿಸುವಂತೆ ಮಾಡಿದೆ. ಟ್ವಿಟರ್‌ನಲ್ಲಿ ಅಂಬರ್ ಹರ್ಡ್ ರವರ ಖಾತೆ ಮಾತ್ರವಲ್ಲದೆ ಸುಮಾರು 54,000 ಸಾವಿರ ಖಾತೆಗಳು ಬ್ಯಾನ್ ಆಗಿರುವುದು ಸಹಾ ಈ ಸಂದರ್ಭದಲ್ಲಿ ಚರ್ಚಿಸುವಂತೆ ಮಾಡಿದೆ.  ಇದರ ಅಸಲಿ ಕಥೆ ಏನು ಗೊತ್ತಾ?


    ಎಲಾನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಕೆಲವು ದಿನಗಳ ನಂತರ, ಅಂಬರ್ ಹರ್ಡ್ ಅವರ ಖಾತೆಯು ಕಣ್ಮರೆಯಾಗಿದೆ. ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ಪಡೆದ  ಮೇಲೆ ಈ ರೀತಿಯ ಹಲವಾರು ಬದಲಾವಣೆಗಳು ಆಗಿವೆ.


    ನಿಮ್ಮ  ಟ್ವಿಟರ್  ಹ್ಯಾಂಡಲ್‌ನ ಹೆಸರಿನ ಮುಂದೆ ನೀಲಿ ಟಿಕ್ ಇದ್ದರೆ ಅದನ್ನು ಮತ್ತೊಮ್ಮೆ ಹಣ ಪಾವತಿಸಿ ಅದನ್ನು ಉಳಿಸಬೇಕಾಗುತ್ತದೆ. ಇಲ್ಲದಿದಲ್ಲಿ ನೀಲಿ ಟಿಕ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ಟ್ವಿಟರ್ ನಲ್ಲಿ ನೀಲಿ ಟಿಕ್ ಹೊಸದಾಗಿ ನಿಮಗೆ ಬೇಕಾದರೆ ನೀವು 20$ ಡಾಲರ್ ಪಾವತಿಸಬೇಕಾಗುತ್ತದೆ ಎನ್ನಲಾಗುತ್ತಿದೆ.


    Elon Musk's ex-wife's Twitter account seems to have disappeared. What a real story!
    ಮಾಜಿ ಗೆಳತಿಯೊಂದಿಗೆ ಎಲಾನ್ ಮಸ್ಕ್


    ಇದನ್ನೂ ಓದಿ: Twitter: ಟ್ವಿಟರ್ ಸ್ವಾಧೀನಪಡಿಸಲು ಶಕ್ತಿ ತುಂಬಿದಾತನನ್ನೇ ಹೊರಗಟ್ಟಿದ್ದೇಕೆ ಮಸ್ಕ್? ಪರಾಗ್​ ವಜಾಗೊಳ್ಳಲು ಇದೇ ಕಾರಣ!


    ಮಿಸ್ ಹರ್ಡ್ ಅವರ ಖಾತೆಯ ಕಣ್ಮರೆಯನ್ನು ಯೂಟ್ಯೂಬರ್ ಮ್ಯಾಥ್ಯೂ ಲೆವಿಸ್ ಎನ್ನುವವರು ಮೊದಲು ಗಮನಿಸಿದರು. ಬಳಿಕ ಈ ಕುರಿತು ಅವರು  ಟ್ವೀಟ್ ಸಹಾ ಮಾಡಿದ್ದಾರೆ. 


    Elon Musk's ex-wife's Twitter account seems to have disappeared. What a real story!
    ಸಾಂಕೇತಿಕ ಚಿತ್ರ


    ಮೇಲೆ ಕಾಣುವ ಸ್ಕ್ರೀನ್‌ಶಾಟ್ ಈ ಖಾತೆಯು ಅಸ್ತಿತ್ವದಲ್ಲಿಲ್ಲ ಎಂಬ ಸಂದೇಶವನ್ನು ತಿಳಿಸಲು. ಯೂಟ್ಯೂಬರ್ ಪೋಸ್ಟ್ ಮಾಡಿದ್ದರು. 


    ಮಿಸ್ ಹಾರ್ಡ್ ಏನು ಹೆಳಿದ್ದಾರೆ ಗೊತ್ತಾ?


    ಮಿಸ್ ಹಾರ್ಡ್ ತನ್ನ ಖಾತೆಯನ್ನು ಯಾವಾಗ, ಏಕೆ ತೆಗೆದು ಹಾಕಿದ್ದಾರೆ. ಇದಕ್ಕೆ ಕಾರಣವೇನು ಎನ್ನುವುದು ಇನ್ನು ನನಗೆ ತಿಳಿದುಬಂದಿಲ್ಲ ಎಂದಿದ್ದಾರೆ.


    ಇದನ್ನೂ ಓದಿ: Twitter: ಟ್ವಿಟರ್‌ಗೆ ಮತ್ತೆ ಮರಳಲಿದ್ದಾರೆ ಶ್ರೀರಾಮ್‌ ಕೃಷ್ಣನ್‌, ಎಲಾನ್​ ಮಸ್ಕ್​ ಪ್ಲ್ಯಾನ್​ ಗೆಸ್ಸ್​​​ ಮಾಡೋದೇ ಕಷ್ಟ!


    ಕಳೆದ ವಾರ ಟ್ವಿಟರ್ ನಿಂದ ಬ್ಯಾನ್ ಮಾಡಲಾದ ಸೆಲೆಬ್ರಿಟಿಗಳು ಯಾರೆಲ್ಲ ಗೊತ್ತಾ?


    • ಟೋನಿ ಬ್ರಾಕ್ಸ್ಟನ್

    • ನಟಿ ಶೋಂಡಾ ರೈಮ್ಸ್ 

    • ನಿವೃತ್ತ ವೃತ್ತಿಪರ ಕುಸ್ತಿಪಟು ಮಿಕ್ ಫೋಲೆ


    ಮುಂತಾದ ಸೆಲೆಬ್ರಿಟಿಗಳನ್ನು ಬ್ಯಾನ್ ಮಾಡಲಾಗಿದೆ.


    ವಿಚಾರಣೆಯಲ್ಲಿ ಎಲಾನ್ ಮಸ್ಕ್ ರವರು ಸಾಕ್ಷಿಯಾಗುತ್ತಾರೆ ಎಂಬುದಾಗಿ ನಿರೀಕ್ಷಿಸಲಾಗಿತ್ತು. ಆದರೆ ಅವರು ವೈಯಕ್ತಿಕವಾಗಿ ಅಥವಾ ವಾಸ್ತವಿಕವಾಗಿ ನಿಲುವನ್ನು ತೆಗೆದುಕೊಂಡಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿಬರುತ್ತಿದೆ.


    ಟ್ವಿಟರ್​ನಲ್ಲಿರುವ ಬ್ಲೂಟಿಕ್‌ನ ಫೀಚರ್ಸ್ ಏನು ಗೊತ್ತಾ?


    ಯೂಸರ್ ವೆರಿಫಿಕೇಶನ್ ಪ್ರಕ್ರಿಯೆಯನ್ನು ಮರುಪರಿಶೀಲಿಸಲಾಗುವುದು ಎಂದು ಎಲಾನ್ ಮಸ್ಕ್ ತಮ್ಮ ಟ್ವೀಟ್​ನಲ್ಲಿ ಹೇಳಿದ್ದರು. ಆದರೆ ಇದರ ಒಂದು ದಿನದ ನಂತರ ಟ್ವಿಟರ್ ಬ್ಲೂ ಟಿಕ್ ಸಬ್​ಸ್ಕ್ರಿಪ್ಷನ್ ವಿಷಯದಲ್ಲಿ ಹಲವಾರು ನಿಯಮಗಳು ಬರಲಿವೆರ ಎಂದು ಕೆಲವೊಂದು ವರದಿಗಳು ಬಂದಿವೆ. ಟ್ವಿಟರ್‌ ಒಂದು ವರ್ಷದ ಹಿಂದೆ ಟ್ವಿಟರ್ ಬ್ಲೂ ಸಬ್​ಸ್ಕ್ರಿಪ್ಷನ್ ಆರಂಭಿಸಲಾಗಿತ್ತು. ಈ ಬ್ಲೂಟಿಕ್‌ ಹೊಂದಿರುವವರು ಜಾಹೀರಾತು ಇಲ್ಲದೇ ಕೆಲ ಪ್ರಕಾಶಕರ ಲೇಖನಗಳನ್ನು ಓದಲು ಮತ್ತು ಹೋಮ್ ಸ್ಕ್ರೀನ್ ಬಣ್ಣ ಬದಲಾಯಿಸುವುದು ಮುಂತಾದ ಫೀಚರ್​ಗಳನ್ನು ಹೊಂದಿದೆ.

    First published: