• Home
  • »
  • News
  • »
  • tech
  • »
  • Elon Musk: ಟ್ವಿಟರ್ ಫೈಲ್ಸ್ ಎಂದರೇನು? ಎಲಾನ್​ ಮಸ್ಕ್ ಬಹಿರಂಗಪಡಿಸಿದ ರಹಸ್ಯ ವಿಷಯ ಇದು

Elon Musk: ಟ್ವಿಟರ್ ಫೈಲ್ಸ್ ಎಂದರೇನು? ಎಲಾನ್​ ಮಸ್ಕ್ ಬಹಿರಂಗಪಡಿಸಿದ ರಹಸ್ಯ ವಿಷಯ ಇದು

ಎಲಾನ್​ ಮಸ್ಕ್​

ಎಲಾನ್​ ಮಸ್ಕ್​

ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಒದಗಿಸದೆಯೇ ಲಿಂಕ್‌ಗಳನ್ನು ನಿರ್ಬಂಧಿಸುವುದು ಸಮ್ಮತವಲ್ಲ ಎಂದು ಜ್ಯಾಕ್ ಡಾರ್ಸೆ ನಂತರ ಟ್ವೀಟ್ ಮಾಡಿದ್ದರು ಮತ್ತು ಬಿಡೆನ್ ಸುದ್ದಿಯನ್ನು ನಿರ್ಬಂಧಿಸಿದ ಸ್ವಲ್ಪ ಸಮಯದ ನಂತರ ಟ್ವಿಟರ್ ತನ್ನ ನೀತಿಗಳನ್ನು ಬದಲಾಯಿಸಿತು.

  • Share this:

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟಿಕ್‌ಟಾಕ್‌ನಂತಹ ಇತರ ಸಾಮಾಜಿಕ ತಾಣಗಳಿಗೆ ಹೋಲಿಸಿದಾಗ ಟ್ವಿಟರ್ ಗಾತ್ರದಲ್ಲಿ ಸಣ್ಣದಾಗಿದ್ದರೂ ಪ್ರಬಲ ವೇದಿಕೆ ಎಂದೇ ಪರಿಗಣಿತವಾಗಿದೆ. ಮೈಕ್ರೋ ಬ್ಲಾಗಿಂಗ್ ಒಡೆತನವನ್ನು ಎಲೋನ್ ಮಸ್ಕ್ ತಮ್ಮ ಅಧೀನಕ್ಕೆ ಪಡೆದುಕೊಂಡ ನಂತರ ಉನ್ನತದ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಬಿಲಿಯನೇರ್ ಮಸ್ಕ್ ಹಿಂದಿನ ರಹಸ್ಯ ಟ್ವೀಟ್‌ಗಳು ಹಾಗೂ ಕೆಲವೊಂದು ವ್ಯವಹಾರದ ಸಂದಿಗ್ಧತೆಗಳನ್ನು ತಾಣದಲ್ಲಿ ಪ್ರಕಟಿಸುವ ಮೂಲಕ ಕೆಲವೊಂದು ರಹಸ್ಯಗಳನ್ನು ಸ್ಫೋಟಿಸಿದ್ದಾರೆ. ಟ್ವಿಟರ್ ಫೈಲ್ಸ್ ಮೂಲಕ ಮಸ್ಕ್ ಇದನ್ನು ಸಾಧಿಸಲು ಯತ್ನಿಸುತ್ತಿದ್ದಾರೆ.


ಈ ರಹಸ್ಯಗಳನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸುವುದನ್ನು ಮಸ್ಕ್ ಟ್ವಿಟರ್ ಫೈಲ್ಸ್ ಎಂದು ಕರೆದಿದ್ದು, ಟ್ವಿಟರ್ ಫೈಲ್‌ಗಳ ಭಾಗ 1 ರ ಲೇಖಕರಾಗಿರುವ ಮ್ಯಾಟ್ ತೈಬ್ಬಿ ಅವರ ಅಧಿಕೃತ ಟ್ವಿಟರ್ ಖಾತೆಯ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಇದುವರೆಗೆ ಕಾಪಾಡಿಕೊಂಡು ಬಂದಿದ್ದ ಈ ರಹಸ್ಯಗಳನ್ನು ಎಲೋನ್ ಸ್ಫೋಟಿಸಿದ್ದಾರೆ ಎಂದೇ ಹೇಳಬಹುದು.


ಉನ್ನತ ಮಟ್ಟದ ಕಾರ್ಯನಿರ್ವಾಹಕರ ನಡುವಿನ ಆಂತರಿಕ ಸಂವಹನಗಳು ಬಹಿರಂಗ


ಈ ಹಂತದಲ್ಲಿ ಟ್ವಿಟರ್ ಕೆಲವೊಂದು ರಹಸ್ಯವಾದ ಉನ್ನತ ಮಟ್ಟದ ಕಾರ್ಯನಿರ್ವಾಹಕರ ನಡುವಿನ ಆಂತರಿಕ ಸಂವಹನಗಳನ್ನು ಬಹಿರಂಗಪಡಿಸಿದೆ. 2020 ರ ಯುಎಸ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಉತ್ತುಂಗದಲ್ಲಿ ನಡೆದ ಕೆಲವೊಂದು ಸಂವಾದಗಳನ್ನು ಬಹಿರಂಗಪಡಿಸಿದೆ. ಜೋ ಬಿಡೆನ್ ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಾಥಮಿಕ ಡೆಮಾಕ್ರಟಿಕ್ ಅಭ್ಯರ್ಥಿಯಾಗಿದ್ದರು. ಟ್ಯಾಬ್ಲೈಡ್ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಬಿಡೆನ್ ಪುತ್ರ ಹಂಟರ್ ಬಿಡೆನ್ ಹಾಗೂ ಅವರ ಲ್ಯಾಪ್‌ಟಾಪ್‌ನಿಂದ ಸೋರಿಕೆಯಾದ ಕೆಲವು ಬಹುಮುಖ್ಯ ವಿವರಗಳನ್ನು ಹಂಚಿಕೊಂಡಿರುವುದನ್ನು ಟ್ವಿಟರ್ ಹೊರಹಾಕಿದೆ.


ರಹಸ್ಯ ಸಂವಾದಗಳು ಹಾಗೂ ಕೆಲವೊಂದು ಬಹುಮುಖ್ಯ ಬಹಿರಂಗಪಡಿಸುವಿಕೆಗಳನ್ನು ಟ್ವಿಟರ್ ಫೈಲ್ಸ್ ಮಾಡುತ್ತಿದೆ. ಇದೊಂದು ರೀತಿಯಲ್ಲಿ ಬಾಂಬ್ ದಾಳಿ ಎಂದು ಮಸ್ಕ್ ಪಾಪ್‌ಕಾರ್ನ್ ಎಮೋಜಿಯೊಂದಿಗೆ ಸುದ್ದಿಯನ್ನು ಲೇವಡಿ ಮಾಡಿದ್ದಾರೆ. ಟ್ವೀಟ್ ಥ್ರೆಡ್‌ನಲ್ಲಿ ವಿವರಗಳನ್ನು ಹಂಚಿಕೊಂಡಿರುವ ಸಬ್‌ಸ್ಟ್ಯಾಕ್ ಬರಹಗಾರ ಮ್ಯಾಟ್ ತೈಬ್ಬಿ ಕೆಲವೊಂದು ಷರತ್ತುಗಳ ಮೇರೆಗೆ ಇಮೇಲ್‌ಗಳನ್ನು ಒದಗಿಸಲಾಗುವುದು ಎಂದು ತಿಳಿಸಿರುವ ಟ್ವೀಟ್ ಕೂಡ ಬಹಿರಂಗಗೊಂಡಿದೆ.


ಟ್ವಿಟರ್ ಫೈಲ್ಸ್ ಎಂದರೇನು?


ತೈಬ್ಬಿ ಅವರ ಸ್ಕ್ರೀನ್‌ಶಾಟ್‌ಗಳ ಭಾಗವಾಗಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡಿರುವ ಫೈಲ್‌ಗಳು 2020 ರಲ್ಲಿ ಟ್ವಿಟರ್‌ನಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ವಿವರಿಸಿದೆ. ಟ್ಯಾಬ್ಲಾಯ್ಡ್ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ವಿವರಕ್ಕೆ ಕತ್ತರಿ ಪ್ರಯೋಗ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದು,  ಈ ವಿವರದಲ್ಲಿ ಉಕ್ರೇನ್‌ನಲ್ಲಿ ಹಂಟರ್ ಬಿಡೆನ್ ಮಾಡಿರುವ ವ್ಯಾಪಾರ ಚಟುವಟಿಕೆಗಳ ಬಗ್ಗೆ ಪರಿಶೀಲಿಸದೇ ಇರುವ ಹಕ್ಕುಗಳಿವೆ. ಈ ವಿವರಗಳು ಟ್ವಿಟರ್‌ನ ಹ್ಯಾಕ್ ಮಾಡಲಾದ ವಸ್ತುಗಳು ನೀತಿಯನ್ನು ಉಲ್ಲಂಘಿಸಿದ ಕಾರಣ ಇದು ವಿವರಕ್ಕೆ ಕತ್ತರಿ ಪ್ರಯೋಗ ಮಾಡಿತ್ತು ಎಂದು ತಿಳಿಸಿತ್ತು.


 ಯಾವ ಮಾಹಿತಿ ತಿಳಿಸಿವೆ?


ಯಾವುದೇ ರಾಜಕೀಯ ಪಕ್ಷ ಅಥವಾ ಗುಪ್ತಚರ ಸಂಸ್ಥೆಯು ಕಂಪನಿಯ ಮೇಲೆ ಯಾವುದೇ ರೀತಿಯ ನಿಯಂತ್ರಣವನ್ನು ಬೀರದೆಯೇ ಟ್ವಿಟರ್ ಸ್ವತಂತ್ರವಾಗಿ ಮಾಹಿತಿ ಹರಡುವಿಕೆಯನ್ನು ಮಿತಿಗೊಳಿಸಲು ನಿರ್ಧರಿಸಿದೆ ಎಂದು  ಖಚಿತಪಡಿಸುತ್ತವೆ. ತೈಬ್ಬಿ ಅವರ ಹೇಳಿಕೆಗಳ ಪ್ರಕಾರ, ಆ ಸಮಯದ ಒಂದು ಸಂದೇಶದಲ್ಲಿ, ಟ್ವಿಟರ್‌ನ ಸಂವಹನ ತಂಡದ ಸದಸ್ಯರಾದ ಟ್ರೆಂಟನ್ ಕೆನಡಿ ಅವರು ಕಾನೂನು ಮತ್ತು ನೀತಿ ಮುಖ್ಯಸ್ಥ ವಿಜಯಾ ಗಡ್ಡೆ ಮತ್ತು ಸೈಟ್ ಸಮಗ್ರತೆಯ ಮುಖ್ಯಸ್ಥ ಯೋಯೆಲ್ ರಾತ್ ಸೇರಿದಂತೆ ಸುದ್ದಿಯನ್ನು ಏಕೆ ನಿರ್ಬಂಧಿಸಲಾಗಿದೆ ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಿದ್ದರು ಎಂಬುದನ್ನು ತಿಳಿಸಿದೆ.


ಪ್ರಮುಖರ ಖಾತೆ ಲಾಕ್ ಮಾಡಿದ್ದ ಟ್ವಿಟರ್


ಈ ಸುದ್ದಿಯನ್ನು ಟ್ವಿಟರ್ ಅಸುರಕ್ಷಿತವೆಂದು ಹೇಗೆ ನಿರ್ಧರಿಸಿದೆ ಎಂದು ಪ್ರಶ್ನಿಸಿರುವ ತೈಬ್ಬಿ ಇದಕ್ಕೆ ಸಂಬಂಧಿತ ಟ್ವೀಟ್‌ಗಳು ಹಾಗೂ ಸಂದೇಶಗಳನ್ನು ಹೇಗೆ ನಿಗ್ರಹಿಸಿದೆ ಎಂಬುದನ್ನು ಎದ್ದುಗಾಣಿಸಿದ್ದಾರೆ. ಸುದ್ದಿಯನ್ನು ನಿಯಂತ್ರಣದಲ್ಲಿರಿಸಲು ಟ್ವಿಟರ್ ಅಸಾಧಾರಣ ಕ್ರಮಗಳನ್ನು ಕೈಗೊಂಡಿದೆ ಎಂದು ತೈಬಿ ತಿಳಿಸಿದ್ದು, ಸಂಬಂಧಿತ ಲಿಂಕ್‌ಗಳನ್ನು ತೆಗೆದುಹಾಕಿದ್ದು ಬಳಕೆದಾರರಿಗೆ ಎಚ್ಚರಿಕೆಗಳನ್ನು ಪೋಸ್ಟ್ ಮಾಡಿದೆ. ಸುದ್ದಿಯ ಕುರಿತು ಟ್ವಿಟ್ ಮಾಡಿದ್ದಕ್ಕಾಗಿ ಪ್ಲ್ಯಾಟ್‌ಫಾರ್ಮ್ ತನ್ನ ಖಾತೆಯಿಂದ ಕಲೀಗ್ ಮೆಕ್‌ನಾನಿಯಂತಹ ಕೆಲವು ಪ್ರಮುಖ ಬಳಕೆದಾರರನ್ನು ಲಾಕ್ ಮಾಡಿದೆ.


ಮಾಜಿ ಸಿಇಒ ಜ್ಯಾಕ್ ಡೋರ್ಸ್ ನಿರ್ಧಾರದಲ್ಲಿ ಭಾಗಿಯಲ್ಲ


ಆ ಸಮಯದಲ್ಲಿ ಟ್ವಿಟರ್‌ನ ಸಂವಹನ ಮುಖ್ಯಸ್ಥ ಬ್ರ್ಯಾಂಡನ್ ಬೋರ್ಮನ್ ಕೂಡ ಕಂಪನಿಯ ಹಿರಿಯ ನಾಯಕತ್ವಕ್ಕೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು ಸಂಸ್ಥೆಯ ನೀತಿಯ ಭಾಗವಾಗಿದೆ ಎಂಬುದಾಗಿ ಇದನ್ನು ಒಪ್ಪಿಕೊಳ್ಳಬಹುದೇ ಎಂದು ಕೇಳಿದ್ದರು. ಟ್ವಿಟರ್ ಥ್ರೆಡ್‌ನಲ್ಲಿ ತೈಬ್ಬಿ ಕಂಪನಿಯ ಮಾಜಿ ಸಿಇಒ ಜ್ಯಾಕ್ ಡೋರ್ಸ್ ಈ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾವುದೇ ಭಾಗಿಯಲ್ಲ ಎಂದು ತಿಳಿಸಿದ್ದಾರೆ. ಕಂಪನಿಯನ್ನು ಮುನ್ನಡೆಸಲು ಎಲೋನ್ ಮಸ್ಕ್ ಸೂಕ್ತ ವ್ಯಕ್ತಿ ಎಂಬುದನ್ನು ಡೋರ್ಸ್ ಈ ಹಿಂದೆ ತಿಳಿಸಿದ್ದರು.


ಇದನ್ನೂ ಓದಿ: Ambrane Smart Watch: ಕಡಿಮೆ ಬೆಲೆಗೆ ಸಿಗುತ್ತದೆ ಈ ಸ್ಮಾರ್ಟ್​ವಾಚ್​! ಏನಿದರ ವಿಶೇಷತೆ ನೋಡಿ


ಟ್ವಿಟರ್‌ನ ಆಂತರಿಕ ಸಂವಹನಗಳನ್ನು ತೈಬ್ಬಿ ಹೇಗೆ ಪಡೆದುಕೊಂಡರು ಎಂಬುದನ್ನು ಬಹಿರಂಗಪಡಿಸದೇ ಇದ್ದರೂ ಮಸ್ಕ್ ತಮ್ಮ ವೈಯಕ್ತಿಕ ಖಾತೆಯಿಂದ ಸುದ್ದಿಯ ಕುರಿತು ಪ್ರಚಾರಗಳನ್ನು ನಡೆಸುತ್ತಿದ್ದರೂ ಸುದ್ದಿಯನ್ನು ನಿಗ್ರಹಿಸಲು ಟ್ವಿಟರ್ ಅಸಾಧಾರಣ ಕ್ರಮವನ್ನು ಕೈಗೊಂಡಿದೆ ಎಂಬುದಾಗಿ ತೈಬ್ಬಿ ತಿಳಿಸಿದ್ದಾರೆ.


ಟ್ವಿಟರ್ ಕತ್ತರಿ ಪ್ರಯೋಗ ಮಾಡಿದೆ ಎಂದು ಹೇಳಲಾದ ಹಂಟರ್ ಬಿಡೆನ್ ಸುದ್ದಿ ಏನು?


ಅಕ್ಟೋಬರ್ 2020 ರಲ್ಲಿ, 2020 ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮೂರು ವಾರಗಳ ಮೊದಲು, ನ್ಯೂಯಾರ್ಕ್ ಪೋಸ್ಟ್ ಒಂದು ವಿಶೇಷವಾದ ಕಥೆಯನ್ನು ಪ್ರಕಟಿಸಿದ್ದು ಇದು ಬಿಡೆನ್ಸ್ ಸೀಕ್ರೆಟ್ ಇಮೇಲ್‌ಗಳು ಹಾಗೂ ಸರಕಾರಕ್ಕೆ ಸಂಬಂಧಿಸಿದ ಮಹತ್ವದ ವಿವರಗಳನ್ನೊಳಗೊಂಡಿತ್ತು. ಕಂಪ್ಯೂಟರ್ ರಿಪೇರಿ ಅಂಗಡಿಯ ಮಾಲೀಕರು ಅಧ್ಯಕ್ಷ ಬಿಡೆನ್ ಅವರ ಎರಡನೇ ಮಗ ಹಂಟರ್ ಬಿಡೆನ್‌ಗೆ ಸೇರಿದ್ದ ಹಾಗೂ ಬಿಟ್ಟ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲಾಯ್ಡ್‌ ನ್ಯೂಯಾರ್ಕ್ ಪೋಸ್ಟ್ ಕಚೇರಿಗೆ ತಲುಪಿಸಿದ್ದರು ಹಾಗೂ ಲ್ಯಾಪ್‌ಟಾಪ್‌ನಲ್ಲಿದ್ದ ವಿಷಯಗಳನ್ನು ವರದಿ ಮಾಡಲು ಸುದ್ದಿಪತ್ರಿಕೆ ಉದ್ದೇಶಿಸಿತ್ತು. ಆ ಸಮಯದಲ್ಲಿ ಬಿಡೆನ್ ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿದ್ದರು.


ಲ್ಯಾಪ್‌ಟಾಪ್‌ನಲ್ಲಿತ್ತು ಕೆಲವೊಂದು ರಹಸ್ಯಗಳು


ಲ್ಯಾಪ್‌ಟಾಪ್‌ನಲ್ಲಿ ಕಂಡುಬರುವ ಇಮೇಲ್‌ಗಳು ಮತ್ತು ಫೈಲ್‌ಗಳು ಹಂಟರ್ ಬಿಡೆನ್ ಉಕ್ರೇನಿಯನ್ ಉದ್ಯಮಿಗಳೊಂದಿಗೆ ಹೇಗೆ ಪ್ರಭಾವ ಬೀರಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಪೋಸ್ಟ್ ಹೇಳಿಕೊಂಡಿದೆ - ಮತ್ತು ಹಂಟರ್ ಬಿಡೆನ್‌ನ ನಿಕಟ ಕ್ಷಣಗಳನ್ನು ತೋರಿಸುವ 12 ನಿಮಿಷಗಳ ವೀಡಿಯೊವನ್ನು ಅನ್ನು ಸಹ ಒಳಗೊಂಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.


ಟ್ವಟರ್ ಕೈಗೊಂಡ ನಿರ್ಧಾರಗಳೇನು?


ಈ ಸುದ್ದಿ ಪ್ರಕಟಗೊಂಡ ನಂತರ ಟ್ವಿಟರ್ ಸುದ್ದಿಯ ಲಿಂಕ್ ಅನ್ನು ಟ್ವೀಟ್ ಮಾಡುವುದು ಹಾಗೂ ನೇರ ಸಂದೇಶದ ಮೂಲಕ ಸುದ್ದಿಯನ್ನು ಹ್ಯಾಕ್ ಮಾಡಲಾದ ಅಂಶವೆಂದು ಗುರುತಿಸುವುದನ್ನು ನಿರ್ಬಂಧಿಸಿತು. ಕಂಪನಿಯು ಪೋಸ್ಟ್‌ನ ಖಾತೆಯನ್ನು ಬಹು ದಿನಗಳವರೆಗೆ ಅಮಾನತುಗೊಳಿಸಿತು, ಅದನ್ನು ಮತ್ತಷ್ಟು ಟ್ವೀಟ್ ಮಾಡದಂತೆ ತಡೆಯಿತು.


ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಒದಗಿಸದೆಯೇ ಲಿಂಕ್‌ಗಳನ್ನು ನಿರ್ಬಂಧಿಸುವುದು ಸಮ್ಮತವಲ್ಲ ಎಂದು ಜ್ಯಾಕ್ ಡಾರ್ಸೆ ನಂತರ ಟ್ವೀಟ್ ಮಾಡಿದ್ದರು ಮತ್ತು ಬಿಡೆನ್ ಸುದ್ದಿಯನ್ನು ನಿರ್ಬಂಧಿಸಿದ ಸ್ವಲ್ಪ ಸಮಯದ ನಂತರ ಟ್ವಿಟರ್ ತನ್ನ ನೀತಿಗಳನ್ನು ಬದಲಾಯಿಸಿತು, ಇದು ಸುದ್ದಿಗಳಿಗೆ ಲಿಂಕ್‌ಗಳನ್ನು ನಿರ್ಬಂಧಿಸುವ ಬದಲು ಸಂದರ್ಭವನ್ನು ಒದಗಿಸಲು ಟ್ವೀಟ್‌ಗಳನ್ನು ಲೇಬಲ್ ಮಾಡುತ್ತದೆ" ಎಂದು ತಿಳಿಸಿದರು.


ಟ್ವಿಟರ್ ಸುದ್ದಿ ನಿಗ್ರಹ ಕೈಗೊಳ್ಳಲು ಕಾರಣವೇನು? ಈ ಮಾಹಿತಿಯನ್ನು ಏಕೆ ಬಹಿರಂಗಪಡಿಸಲಿಲ್ಲ?


ಸುದ್ದಿಗಳ ಬಹಿರಂಗಪಡಿಸುವಿಕೆಯನ್ನು ಮಸ್ಕ್ ಬಾಂಬ್ ದಾಳಿ ಎಂದು ತಿಳಿಸಿದ್ದು, ತೈಬ್ಬಿ ಮಾಡಿರುವ ಟ್ವೀಟ್‌ಗಳು ನಿರೀಕ್ಷಿಸಿದ ಪರಿಣಾಮವನ್ನುಂಟು ಮಾಡಲು ವಿಫಲವಾಗಿವೆ. ಪೋಸ್ಟ್‌ನಲ್ಲಿರುವ ಸುದ್ದಿಯನ್ನು ನಿಗ್ರಹಿಸಲು ಕಂಪನಿಯು ಹೇಗೆ ನಿರ್ಧರಿಸಿದೆ ಎಂಬುದನ್ನು ಸ್ಕ್ರೀನ್‌ಶಾಟ್‌ಗಳು ತೋರಿಸುತ್ತಿದ್ದು, ಈ ನಿರ್ಧಾರ ಏಕೆ ಕೈಗೊಳ್ಳಲಾಗಿದೆ ಎಂಬ ಅಂಶವನ್ನು ಸ್ಕ್ರೀನ್‌ಶಾಟ್‌ಗಳು ಬಹಿರಂಗಗೊಳಿಸಿಲ್ಲ. ಸಂಸ್ಥೆಯನ್ನು ವಿಷಯ ಮಾರ್ಪಾಡು ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಹಾಗೂ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜಕೀಯ ಪ್ರಭಾವ ಉಂಟಾಗಿದೆಯೇ ಅಥವಾ ರಾಜಕೀಯ ವಲಯದ ಹಸ್ತಕ್ಷೇಪ ಉಂಟಾಗಿದೆ ಎಂಬ ಅಂಶವನ್ನು ತಿಳಿಸಿಲ್ಲ


ಟ್ವಿಟರ್ ಬಹಿರಂಗಪಡಿಸುವಿಕೆ ಅಪಾಯಕಾರಿ ಏಕೆ?


ಇಮೇಲ್ ವಿಳಾಸಗಳಂತಹ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಜನರ ವೈಯಕ್ತಿಕ ವಿವರಗಳನ್ನು ಸಾರ್ವಜನಿಕಗೊಳಿಸುವುದಕ್ಕಾಗಿ ಟ್ವಿಟರ್ ಬಹಿರಂಗಪಡಿಸುವಿಕೆಗಳನ್ನು ಟೀಕಿಸಲಾಗಿದೆ. ಕಂಟೆಂಟ್ ಮಾಡರೇಶನ್‌ನಲ್ಲಿ ತೊಡಗಿರುವ ಖ್ಯಾತ ಉದ್ಯೋಗಿಗಳ ಹೆಸರು ಹಾಗೂ ಅವರ ವಿವರಗಳನ್ನು ಸಾರ್ವಜನಿಕವಾಗಿ ಪೋಸ್ಟ್ ಮಾಡುವುದು ಅವರಿಗೆ ಹಾನಿಯನ್ನುಂಟು ಮಾಡಬಹುದು ಹಾಗೂ ಇದು ಸ್ವೀಕಾರಾರ್ಹ ವಿಷಯವಲ್ಲ ಎಂದು ಟ್ವೀಟ್‌ಗಳಲ್ಲಿ ಹೆಸರಿಸಲಾದ ಉದ್ಯೋಗಿಗಳಲ್ಲಿ ಒಬ್ಬರಾದ ಮಾಜಿ ಟ್ವಿಟರ್ ಟ್ರಸ್ಟ್ ಮತ್ತು ಸೇಫ್ಟಿ ಮುಖ್ಯಸ್ಥ ಯೋಯೆಲ್ ರಾತ್ ಸಾಮಾಜಿಕ ವೇದಿಕೆಯಲ್ಲಿ ತಿಳಿಸಿದ್ದಾರೆ.

First published: