HOME » NEWS » Tech » ELON MUSK OLD PHOTO FROM WHEN HE WAS 17 PROVES TESLA CEO HAS ALWAYS BEEN DIFFERENT STG HG

ಟೆಸ್ಲಾ ಸಿಇಒ ಯಾವಾಗಲೂ ವಿಭಿನ್ನ ಅನ್ನೋದನ್ನ ಪ್ರೂವ್ ಮಾಡ್ತಿದೆ ಎಲಾನ್ ಮಸ್ಕ್ ಅವರ 17 ವರ್ಷ ಹರೆಯದ ಫೋಟೋ..!

‘Weird Historyಎನ್ನುವ ಟ್ವಿಟ್ಟರ್ ಖಾತೆಯಲ್ಲಿ ಪ್ರತಿದಿನವೂ ವಿಚಿತ್ರವಾದ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಮೈಕ್ರೋಬ್ಲಾಗಿಂಗ್ ವೇದಿಕೆ ಮೂಲಕ ಅನೇಕ ವಿಷಯವನ್ನು ಹಂಚಿಕೊಳ್ಳಲಾಗುತ್ತದೆ.

news18-kannada
Updated:April 19, 2021, 8:46 PM IST
ಟೆಸ್ಲಾ ಸಿಇಒ ಯಾವಾಗಲೂ ವಿಭಿನ್ನ ಅನ್ನೋದನ್ನ ಪ್ರೂವ್ ಮಾಡ್ತಿದೆ ಎಲಾನ್ ಮಸ್ಕ್ ಅವರ 17 ವರ್ಷ ಹರೆಯದ ಫೋಟೋ..!
Image credits: Twitter/Weird History.
  • Share this:
ಎಲಾನ್ ಮಸ್ಕ್ ಏನೇ ಮಾಡಿದರು ಅದರಲ್ಲೊಂದು ವಿಭಿನ್ನತೆ ಇರುತ್ತದೆ. ಅವರ ಆಲೋಚನೆಗಳು ಯಾವಾಗಲೂ ಔಟ್ ಆಫ್ ದಿ ಬಾಕ್ಸ್ ಅಲ್ಲ, ಔಟ್ ಆಫ್ ದಿ ಪ್ಲಾನೆಟ್ ಅನ್ನೋದನ್ನ ಪದೇ ಪದೇ ಪ್ರೂ ಮಾಡುತ್ತನೇ ಇರುತ್ತಾರೆ ಟೆಸ್ಲಾ ಸಿಇಒ. ಮಂಗಳ ಗ್ರಹದಲ್ಲಿ ವಸಾಹತ್ತು ಮಾಡುವುದಕ್ಕೂ ಜೈ, ಚಂದ್ರನ ಅಂಗಳದಲ್ಲಿ ಡಾಗಿ ಕಾಯಿನ್( ಬಿಟ್ ಕಾಯಿನ್ ರೀತಿಯದ್ದು) ಹಾಕೋದ್ದಕ್ಕೂ ಸೈ. ಟೆಸ್ಲಾ ಸಿಇಒ ಮತ್ತು ಸ್ಟೇಸ್ ಎಕ್ಸ್‌ನ ಬಾಸ್ ರನ್ನು ಕ್ರೇಜಿ ಜೀನಿಯಸ್ ಎಂದು ಜನರು ಪರಿಗಣಿಸುತ್ತಾರೆ.

ಎಲಾನ್ ಮಸ್ಕ್ ಅವರ ಆಲೋಚನೆಗಳು ಮತ್ತು ನಂಬುವುದಕ್ಕೆ ಅಸಾಧ್ಯವೆನಿಸುವಂತಹ ಯೋಜನೆಗಳಾದ ಬಾಹ್ಯಾಕಾಶದಲ್ಲಿ ಕಾರ್ ಲಾಂಚ್ ಬಗ್ಗೆ ಜನರು ಈ ಹಿಂದೆ ಆಲೋಚನೆಯೂ ಕೂಡ ಮಾಡಿಲ್ಲ. ಅಲ್ಲದೇ ರಾತ್ರೋ ರಾತ್ರಿ ವಿಚಿತ್ರವೆನಿಸುವಂತಹ ಮೀಮ್ಸ್‌ಗಳನ್ನು ಶೇರ್ ಮಾಡುವುದು, ಈ ಕಾರಣದಿಂದ ಎಲಾನ್ ಮಸ್ಕ್ ಒಬ್ಬರು ಏಲಿಯನ್ ಇರಬಹುದು ಎಂದು ಇಂಟರ್​​ನೆಟ್‌ನಲ್ಲಿ ಜೋಕ್‌ಗಳು ಹರಿದಾಡುತ್ತವೆ. ಸ್ವತಃ ಎಲಾನ್ ಮಸ್ಕ್ ಅವರೇ ಇದನ್ನು ಅಲ್ಲಗಳೆದಿಲ್ಲ. ಆ ಮೂಲಕ ಅವರು ಕೂಡ ತಾವು ವಿಭಿನ್ನ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಹಾಗಿದ್ದರೆ ಮಸ್ಕ್ ಮೊದಲಿನಿಂದಲೂ ಇಷ್ಟೇ ವಿಭಿನ್ನವಾಗಿದ್ರಾ ಅನ್ನೋದು ನಿಮ್ಮ ಪ್ರಶ್ನೆಯಾದರೆ ಇದಕ್ಕೆ ಉತ್ತರ ಹೌದು ಎನ್ನಬಹುದು. ‘Weird History'ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ಪ್ರತಿದಿನವೂ ವಿಚಿತ್ರವಾದ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಮೈಕ್ರೋಬ್ಲಾಗಿಂಗ್ ವೇದಿಕೆ ಮೂಲಕ ಅನೇಕ ವಿಷಯವನ್ನು ಹಂಚಿಕೊಳ್ಳಲಾಗುತ್ತದೆ. ಇದೇ ಖಾತೆಯಲ್ಲಿ ಇತ್ತೀಚೆಗೆ ಎಲಾನ್ ಮಸ್ಕ್ ಅವರು 17 ವರ್ಷದವರಿದ್ದಾಗ ತೆಗೆದ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಎಲಾನ್ ಮಸ್ಕ್ ಅವರು 17 ವರ್ಷದರಿದ್ದಾಗ ಕೆನಡಾದಲ್ಲಿ ತಮ್ಮ ಸಂಬಂಧಿಯೊಬ್ಬರ ಫಾರ್ಮ್‌ಗೆ ಭೇಟಿ ನೀಡಿದ್ದರು. ಅಲ್ಲಿ ಎಲಾನ್ ಮಸ್ಕ್ ಅವರು ಟೋಪಿಯೊಂದನ್ನು ಧರಿಸಿ, ಅದರ ಮೇಲೆ ಇನ್ನೊಂದು ಟೋಪಿಯನ್ನು ಧರಿಸಿದ್ದಾರೆ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಟೋಪಿ ಮೇಲೆ ಟೋಪಿ ಎಂದರೆ ಕೆಲವೊಂದಕ್ಕೆ ಹೆಚ್ಚಿನದನ್ನು ಅನಗತ್ಯವಾಗಿ ಸೇರಿಸುವುದು. ಹಾಗೆ ನೋಡಿದರೆ ಆ ಹೆಚ್ಚುವರಿಯ ಅಗತ್ಯವೇ ಇರುವುದಿಲ್ಲ. ಅಂದರೆ ಒಂದು ಟೋಪಿ ಸಾಕು. ಅದುವೇ ತನ್ನ ಕೆಲಸ ನಿರ್ವಹಿಸುತ್ತದೆ. ಆದರೆ ಎಲಾನ್ ಅದರ ಮೇಲೆ ಇನ್ನೊಂದು ಟೋಪಿ ಹಾಕಿಕೊಂಡಿದ್ದಾರೆ. ಆ ಮೂಲಕ ಎಲಾನ್ ತಾವು ಏನೇ ಮಾಡಿದ್ರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ ಎನ್ನವುದನ್ನು ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಎಲಾನ್ ರೀವ್ ಮಸ್ಕ್ ಎಂಜಿನಿಯರ್, ಉದ್ದಿಮೆದಾರ, ಖಾಸಗಿ ಬಾಹ್ಯಾಕಾಶ ನೌಕೆ ಸ್ಪೇಸ್ ಎಕ್ಸ್‌ನ ಸಂಸ್ಥಾಪಕರು ಹೌದು. ಟೆಸ್ಲಾ ಕಾರಿನ ರೂವಾರಿ. ಪ್ರಪಂಚದ ಅತ್ಯಂತ ಶ್ರೀಮಂತರ ಪೈಕಿ ಎಲಾನ್ ಮಸ್ಕ್ ಕೂಡ ಒಬ್ಬರು.
ಇಷ್ಟೆಲ್ಲಾ ಸಾಧಿಸಿರುವ ಎಲಾನ್ ಅವರು ಬಾಲ್ಯದಿಂದಲೂ ಬೇರೆಯದೇ ವ್ಯಕ್ತಿತ್ವ ಅನ್ನೋದನ್ನ ನಿರೂಪಿಸುವ ಹಲವು ಅಂಶಗಳಿದ್ದವು. ಎಲಾನ್ ಮಸ್ಕ್ ಹತ್ತು ವರ್ಷದೊಳಗಿರುವಾಗಲೇ ಬಹುತೇಕ ಎಲ್ಲಾ ಪುಸ್ತಕಗಳನ್ನು ಕೂಡ ಓದಿ ಮುಗಿಸಿದ್ದರು. 12 ವರ್ಷದವರಿದ್ದಾಗಲೇ ಬ್ಲಾಸ್ಟರ್ ಗೇಮ್ ಡಿಸೈನ್ ಕೂಡ ಮಾಡಿದ್ದರು. 500 ಡಾಲರ್ ಗೆ ಗೇಮ್ ಸೇಲ್ ಮಾಡಿದ್ದರು. ಬಾಲ್ಯದಿಂದಲೇ ಟೆಕ್ನಾಲಜಿ ಬಗ್ಗೆ ಬಹಳ ಆಸಕ್ತಿ ಕೂಡ ಇತ್ತು.
First published: April 19, 2021, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories