ಇತ್ತೀಚೆಗೆ ಈ ಉದ್ಯೋಗ ಜಗತ್ತಿನಲ್ಲಿ ಭಾರಿ ಸುದ್ದಿ ಮಾಡಿರುವಂತಹ ಒಂದು ವಿಚಾರವೆಂದರೆ ಅದು ಟ್ವಿಟರ್ನಿಂದ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಬರೀ ಟ್ವಿಟರ್ (Twitter) ಅಲ್ಲದೆ ಬೇರೆ ಬೇರೆ ಐಟಿ ಕ್ಷೇತ್ರದಲ್ಲಿರುವಂತಹ ದೈತ್ಯ ಕಂಪನಿಗಳಲ್ಲಿಯೂ ಸಹ ಇದೇ ರೀತಿಯಾದಂತಹ ಪರಿಸ್ಥಿತಿ ಉದ್ಯೋಗಿಗಳದ್ದಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಎಲಾನ್ ಮಸ್ಕ್ (Elon Musk) 44 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಟ್ವಿಟರ್ನ ಮಾಲೀಕತ್ವವನ್ನು ವಹಿಸಿಕೊಂಡ ನಂತರ ಅವರು ಮಾಡಿದ ಮೊದಲ ಕೆಲಸವೇ ಟ್ವಿಟರ್ ಸಿಇಒ ಆಗಿದ್ದ ಪರಾಗ್ ಅಗರ್ವಾಲ್ (Parag Agarwal) ಸೇರಿದಂತೆ ಉನ್ನತ ಕಾರ್ಯನಿರ್ವಾಹಕರನ್ನು ಕಂಪನಿಯ ಕೆಲಸದಿಂದ ವಜಾಗೊಳಿಸಿದ್ದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.
ನಂತರ ಟ್ವಿಟರ್ ಉದ್ಯೋಗಿಗಳ ಸಾಮೂಹಿಕ ನಿರ್ಗಮನವನ್ನು ಸಹ ಕಂಡಿತು. ಕಂಪನಿಯ ಕಚೇರಿಗಳಿಗೆ ಇತ್ತೀಚೆಗೆ ಬೀಗ ಹಾಕಲಾಯಿತು. ಹೊಸ ಟ್ವಿಟರ್ನಲ್ಲಿ ಇರಬೇಕಾದರೆ ತುಂಬಾನೇ ಶ್ರಮ ವಹಿಸಿ ಕೆಲಸ ಮಾಡಬೇಕು. ಇಲ್ಲ ಅಂದ್ರೆ ಕೆಲಸಕ್ಕೆ ರಾಜೀನಾಮೆ ನೀಡಬೇಕು ಎಂಬ ಎಲಾನ್ ಮಸ್ಕ್ ಅವರ ಮಾತಿಗೆ ಮಣಿಯುವ ಬದಲು ನೂರಾರು ಉದ್ಯೋಗಿಗಳು ರಾಜೀನಾಮೆ ನೀಡಿದರು.
ಟ್ವಿಟರ್ ಈಗ ಗೊಂದಲದ ಗೂಡು
ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮವಾದ ಟ್ವಿಟರ್ ಕಂಪನಿಯನ್ನು ವಹಿಸಿಕೊಂಡಾಗಿನಿಂದ ಮತ್ತು ಇದ್ದಕ್ಕಿದ್ದಂತೆ ಅದರ ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದಾಗಿನಿಂದ ಟ್ವಿಟರ್ ಗೊಂದಲಮಯ ಕಾರ್ಯಕ್ಷೇತ್ರವಾಗಿದೆ ಎಂದು ವರದಿಯಾಗಿದೆ.
ಸಾಮೂಹಿಕ ವಜಾಗಳ ನಂತರ ಟ್ವಿಟರ್ನಲ್ಲಿ ಸಾಮೂಹಿಕ ರಾಜೀನಾಮೆಗಳು ನಡೆದವು, ಗಡುವನ್ನು ಪೂರೈಸಲು "ಹಾರ್ಡ್ಕೋರ್" ಕೆಲಸದ ವಾತಾವರಣಕ್ಕೆ ಬದ್ಧರಾಗಲು ಎಲೋನ್ ಮಸ್ಕ್ ಅವರ ಅಂತಿಮ ಗಡುವು ಪ್ರೇರಣೆ ನೀಡಿತು. ಇತ್ತೀಚಿನ ಕೆಲವು ವಾರಗಳಲ್ಲಿ ಕೆಲಸದಿಂದ ತೆಗೆದುಹಾಕುವಿಕೆ ಮತ್ತು ಅನೇಕ ಉದ್ಯೋಗಿಗಳ ನಿರ್ಗಮನವು ಅನೇಕ ಬಾರಿ ಸುದ್ದಿಯಾಗಿದೆ.
ಮಸ್ಕ್ ಬರುವ ಮುಂಚೆ ಟ್ವಿಟರ್ ಹೇಗಿತ್ತು ನೋಡಿ
ಕೆನಡಾದ ಯೂಟ್ಯೂಬರ್ ಸ್ವತಃ ಎಲೋನ್ ಮಸ್ಕ್ ಅವರೇ ಟ್ವೀಟ್ ಮಾಡಿದ ಕಚೇರಿ ಫೋಟೋದಲ್ಲಿ ಹೆಚ್ಚು ಗಂಭೀರ ಸಮಸ್ಯೆಯತ್ತ ಬೊಟ್ಟು ಮಾಡಿ ತೋರಿಸಿದ್ದಾರೆ. ಇದಕ್ಕೆ "ಎಲಾನ್ ಮಸ್ಕ್ ಬರುವ ಮುಂಚೆ ಇದ್ದಂತಹ ಟ್ವಿಟರ್ ಮತ್ತು ಮಸ್ಕ್ ಬಂದ ನಂತರದ ಟ್ವಿಟರ್" ಎಂದು ಅದಕ್ಕೆ ತಮಾಷೆಯಾಗಿ ಶೀರ್ಷಿಕೆಯೊಂದನ್ನು ಸಹ ನೀಡಿದ್ದಾರೆ.
ಯೂಟ್ಯೂಬರ್ ಲಾರೆನ್ ಚೆನ್, ಟ್ವಿಟರ್ ಕಚೇರಿಯಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದರಿಂದ, ನೆಟ್ಟಿಗರು "ಟ್ವಿಟರ್ ಆಫ್ಟರ್ ಎಲೋನ್ ಮಸ್ಕ್" ಫೋಟೋದಲ್ಲಿ ಕಡಿಮೆ ಸಂಖ್ಯೆಯ ಮಹಿಳೆಯರನ್ನು ಗುರುತಿಸಿದರು.
ಮಸ್ಕ್ ಬಂದ ನಂತರ ಟ್ವಿಟರ್ ಹೇಗಾಗಿದೆ ನೋಡಿ
ಮೊದಲ "ಟ್ವಿಟರ್ ಬಿಫೋರ್ ಎಲೋನ್" ಫೋಟೋದಲ್ಲಿ ಸಾಮಾಜಿಕ ಮಾಧ್ಯಮ ಕಚೇರಿಯಲ್ಲಿ ಸಾಕಷ್ಟು ಮಹಿಳೆಯರು ಕಾಣಿಸಿಕೊಂಡರೆ, ಎರಡನೇ "ಟ್ವಿಟರ್ ಆಫ್ಟರ್ ಎಲೋನ್" ಫೋಟೋದಲ್ಲಿ ಹೆಚ್ಚಿನ ಪುರುಷರು ಇದ್ದಾರೆ ಅಂತ ಗುರುತಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋಗಳನ್ನು ನೋಡಿದ ನಂತರ ನೆಟ್ಟಿಗರಿಂದ ಅನೇಕ ರೀತಿಯ ತಮಾಷೆಯ ಮತ್ತು ಗಂಭೀರ ಪ್ರಶ್ನೆಗಳನ್ನು ಕೇಳಿಬಂದಿವೆ.
ಇದನ್ನೂ ಓದಿ: Facebook: ಹದಿಹರೆಯದವರ ಮೇಲೆ ಫೇಸ್ಬುಕ್ ಹದ್ದಿನಕಣ್ಣು! ಯಂಗಸ್ಟರ್ಸ್ ಖಾತೆಗಳು ಇನ್ನಷ್ಟು ಸೇಫ್!
ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಮೊದಲನೆಯ ಫೋಟೋದಲ್ಲಿದ್ದ ಮಹಿಳಾ ಉದ್ಯೋಗಿಗಳು ಎಲ್ಲಿದ್ದಾರೆ?" ಎಂದು ಆಶ್ಚರ್ಯ ಪಟ್ಟುಕೊಂಡು ಕೇಳಿದರು. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು “ಮಹಿಳೆಯರು ಕಷ್ಟಪಟ್ಟು ಕೆಲಸ ಮಾಡಲು ಬಯಸುವುದಿಲ್ಲವೇ? ಅಥವಾ ಕೇವಲ ಪುರುಷರು ಮಾತ್ರವೇ ಕಷ್ಟಪಟ್ಟು ಕೆಲಸ ಮಾಡುತ್ತಾರೆಯೇ” ಎಂದು ಕೇಳಿದರು.
ಇದನ್ನೂ ಓದಿ:Facebook: ನೋಟಿಫಿಕೇಶನ್ ಕಿರಿಕಿರಿಯಿಂದ ಪಾರಾಗಲು ಇಲ್ಲಿದೆ ಸುಲಭ ಉಪಾಯ!
ಟ್ವಿಟರ್ ಕೋಡ್ ಪರಿಶೀಲನಾ ಸಭೆಯ ನಂತರ ಕೆಲವು ದಿನಗಳ ಹಿಂದೆ ಎಲಾನ್ ಮಸ್ಕ್ ಅವರು "ಟ್ವಿಟರ್ ಆಫ್ಟರ್ ಎಲಾನ್" ಎಂಬ ಫೋಟೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ