• Home
  • »
  • News
  • »
  • tech
  • »
  • Elon Musk: ಹೂಡಿಕೆದಾರರನ್ನು ಹುಡುಕುತ್ತಿರುವ ಎಲಾನ್​ ಮಸ್ಕ್​, ಸಂಕಷ್ಟದಲ್ಲಿದೆ ಟ್ವಿಟರ್​! ಕಾರಣವೇನು ಗೊತ್ತಾ?

Elon Musk: ಹೂಡಿಕೆದಾರರನ್ನು ಹುಡುಕುತ್ತಿರುವ ಎಲಾನ್​ ಮಸ್ಕ್​, ಸಂಕಷ್ಟದಲ್ಲಿದೆ ಟ್ವಿಟರ್​! ಕಾರಣವೇನು ಗೊತ್ತಾ?

ಎಲಾನ್​ ಮಸ್ಕ್​

ಎಲಾನ್​ ಮಸ್ಕ್​

ಟ್ವಿಟರ್​ ಆರ್ಥಿಕ ಸಮಕಷ್ಟವನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಎಲಾನ್​​ ಮಸ್ಕ್​ ಹೂಡಿಕೆದಾರರ ಅನ್ವೇಷಣೆ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಎಲಾನ್​ ಮಸ್ಕ್​​ ತನ್ನ ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹಿಂದೆ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಇದೀಗ ಮತ್ತೆ ಕುಸಿತವನ್ನು ಕಾಣಿದ್ದರಿಂದ ಹೂಡಿಕೆದಾರರನ್ನು ಹುಡುಕುತ್ತಿದ್ದಾರೆಂದು ಸುದ್ದಿಯಾಗಿದೆ

ಮುಂದೆ ಓದಿ ...
  • Share this:

    ಟ್ವಿಟರ್ (Twitter) ಆರ್ಥಿಕ ಸಂಕಷ್ಟದಲ್ಲಿ ಇರುವಂತೆ ಕಾಣುತ್ತಿದ್ದು, ಹೆಚ್ಚಿನ ಬಳಕೆದಾರರು ಗುಂಪು ಗುಂಪಾಗಿ ಪ್ಲ್ಯಾಟ್‌ಫಾರ್ಮ್‌ನಿಂದ (Platfarm) ಕಣ್ಮರೆಯಾಗುತ್ತಿದ್ದಾರೆ ಹಾಗೂ ಬಿಲ್‌ಗಳ ರಾಶಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆರ್ಥಿಕ ಸಂಕಷ್ಟದಿಂದ ಇದೀಗ ಕಂಪನಿಯು ಹೊಸ ಹೂಡಿಕೆದಾರರನ್ನು ಅನ್ವೇಷಿಸುತ್ತಿದೆ. ಎಲಾನ್ ಮಸ್ಕ್ ಟ್ವಿಟರ್‌ ಇಂಕ್‌ಗಾಗಿ $54.20 ಷೇರು ಬೆಲೆಯಲ್ಲಿ ಹೊಸ ಹೂಡಿಕೆದಾರರನ್ನು ಅನ್ವೇಷಿಸುತ್ತಿದ್ದು ಮಸ್ಕ್ ಇದೇ ಬೆಲೆಯನ್ನು ಪಾವತಿಸಿ ಅಕ್ಟೋಬರ್‌ನಲ್ಲಿ ಕಂಪನಿಯನ್ನು $44 ಶತಕೋಟಿಗೆ ಸ್ವಾಧೀನಪಡಿಸಿಕೊಂಡರು ಮಾತ್ರವಲ್ಲದೆ ಸಂಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರು.


    ಅದಾಗ್ಯೂ ಟ್ವಿಟರ್ ತೀವ್ರ ಹಣಕಾಸು ಸಮಸ್ಯೆಗಳಿಂದ ಬಳಲುತ್ತಿದೆ, ಹಾಗಾಗಿಯೇ ಎಲಾನ್​ ಮಸ್ಕ್ ಹೊಸ ಹೂಡಿಕೆದಾರರ ಅನ್ವೇಷಣೆಯಲ್ಲಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.


    ಹೂಡಿಕೆದಾರರನ್ನು ಸಂಪರ್ಕಿಸಿರುವ ಎಲಾನ್ ಮಸ್ಕ್


    ಬಿಲಿಯನೇರ್ ಕುಟುಂಬದ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜೇರೆಡ್ ಬಿರ್ಚಾಲ್ ಈ ಬಗ್ಗೆ ಮಾಹಿತಿ ನೀಡಿದ್ದು ಷೇರುದಾರರನ್ನು ಎಲಾನ್ ಮಸ್ಕ್ ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: ದಾಖಲೆ ನಿರ್ಮಿಸಿದ ಜಿಯೋ ಸಿನೆಮಾ! ಡೌನ್​ಲೋಡ್​ ಆ್ಯಪ್‌ ಲೀಸ್ಟ್​ನಲ್ಲಿ ನಂ.1


    ಟ್ವಿಟರ್‌ನಲ್ಲಿ ಹೂಡಿಕೆ ಮಾಡಲು ಇಚ್ಛಿಸಿರುವ ಸಾಕಷ್ಟು ಹೂಡಿಕೆದಾರರ ವಿನಂತಿಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿರುವ ಬಿರ್ಚಾಲ್, ವರ್ಷಾಂತ್ಯದ ಮುಕ್ತಾಯವನ್ನು ಗುರಿಯಾಗಿಸಿಕೊಂಡು ಮೂಲ ಬೆಲೆ ಹಾಗೂ ನಿಯಮಗಳಲ್ಲಿ ಸಾಮಾನ್ಯ ಷೇರುಗಳಿಗೆ ಫಾಲೋ-ಆನ್ ಈಕ್ವಿಟಿ ಕೊಡುಗೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದು ಪ್ರಕಟಿಸಿದ್ದಾರೆ ಎಂದು ವರದಿ ತಿಳಿಸಿದೆ.


    ಗರ್ಬರ್ ಕವಾಸಕಿ ವೆಲ್ತ್ ಅಂಡ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಅನ್ನು ನಡೆಸುತ್ತಿರುವ ರಾಸ್ ಗರ್ಬರ್ ಹಿಂದಿನ ಟ್ವಿಟರ್ ನಿಯಂತ್ರಕ ಷೇರು ಖರೀದಿಯಲ್ಲಿ ಭಾಗವಹಿಸಿದ್ದು ಮಸ್ಕ್ ಹೊಸ ಹೂಡಿಕೆದಾರರನ್ನು ಹುಡುಕುತ್ತಿರುವುದು ನಿಜ ಎಂಬುದಾಗಿ ಸುದ್ದಿಸಂಸ್ಥೆಗೆ ಮಾಹಿತಿಯನ್ನು ದೃಢಪಡಿಸಿದ್ದಾರೆ.


    ಸಂಸ್ಥೆಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿರುವ ಮಸ್ಕ್


    ಟ್ವಿಟರ್ ಆರ್ಥಿಕ ಸಂಕಷ್ಟಗಳನ್ನೆದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸಾಕಷ್ಟು ಉದ್ಯೋಗಿಗಳನ್ನು ಮಸ್ಕ್ ವಜಾಗೊಳಿಸಿದ್ದಾರೆ ಹಾಗೂ ಕೆಲವೊಂದು ಕೆಲಸದ ಸಮಯಗಳನ್ನು ಹೆಚ್ಚಿಸಿದ್ದಾರೆ. ಅಂತೆಯೇ ನಿಷೇಧಿತ ಖಾತೆಗಳನ್ನು ಮರುಸ್ಥಾಪಿಸಿದ್ದಾರೆ. ಮಸ್ಕ್ ಅವರ ಖಾಸಗಿ ವಿಮಾನದ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಹಲವಾರು ಪತ್ರಕರ್ತರನ್ನು ಅಮಾನತುಗೊಳಿಸಿದ್ದಾರೆ.


    ಟೆಸ್ಲಾ ಇಂಕ್ ಮತ್ತು ಸ್ಪೇಸ್‌ಎಕ್ಸ್ ಅನ್ನು ಸಹ ನಡೆಸುತ್ತಿರುವ ಮಸ್ಕ್ ಅವರು ಟ್ವಿಟರ್‌ಗೆ ಹೆಚ್ಚು ಪಾವತಿಸಿ ಸಂಸ್ಥೆಯನ್ನು ಖರೀದಿಸಿದ್ದಾರೆ ಎಂಬುದನ್ನು ಅಂಗೀಕರಿಸಿದ್ದಾರೆ. ಈ ಹೆಚ್ಚುವರಿ ಖರೀದಿಯನ್ನು ಟ್ವಿಟರ್‌ನ ದೀರ್ಘಾವಧಿಯ ವ್ಯವಾಹರಗಳ ಮೂಲಕ ಗಳಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿಸ್ಸಂಶಯವಾಗಿ ನಾನು ಹಾಗೂ ಇತರ ಹೂಡಿಕೆದಾರರು ಟ್ವಿಟರ್‌ಗೆ ಅಧಿಕವಾಗಿ ಪಾವತಿಸುತ್ತಿದ್ದೇವೆ ಎಂಬುದಾಗಿ ಟೆಸ್ಲಾದ ಕಾನ್ಫರೆನ್ಸ್ ಕರೆಯಲ್ಲಿ ಎಲೋನ್ ಮಸ್ಕ್ ತಿಳಿಸಿದ್ದಾರೆ.


    ಟ್ವಿಟರ್ ದೀರ್ಘಾವಧಿಯ ಸಾಮರ್ಥ್ಯಗಳನ್ನು ಹೊಂದಿದ್ದು ಈ ಹೂಡಿಕೆ ನಿರರ್ಥಕವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೂಡಿಕೆದಾರರನ್ನು ಅನ್ವೇಷಿಸುತ್ತಿರುವ ಕುರಿತು ಟ್ವಿಟರ್ ಆಗಲಿ, ಮಸ್ಕ್ ಆಗಲಿ ರಾಯಿಟರ್ಸ್‌ಗೆ ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.


    ಟೆಸ್ಲಾ ಗ್ರಾಹಕರೇ ಟ್ವಿಟರ್ ಹೊಸ ಹೂಡಿಕೆದಾರರು


    ಟೆಸ್ಲಾದಲ್ಲಿ ಉನ್ನತ ಸ್ಥಾನಗಳಲ್ಲಿರುವ ಹೆಚ್ಚಿನ ಗ್ರಾಹಕರುಗಳಲ್ಲಿ ಹೊಸ ಹೂಡಿಕೆದಾರರನ್ನು ಎಲಾನ್ ಮಸ್ಕ್ ಅನ್ವೇಷಿಸುತಿದ್ದಾರೆ ಎಂದು ಗರ್ಬರ್ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ತಿಳಿಸಿದ ಎಲಾನ್ ಮಸ್ಕ್ ಒಪ್ಪಂದದಿಂದ ಹೊರಬರಲು ಕೆಲವು ತಿಂಗಳುಗಳನ್ನು ವ್ಯಯಿಸಿದರು.


    ಟ್ವಿಟರ್ ಖರೀದಿಯ ಹಣಕಾಸಿಗೆ ಸಂಬಂಧಿಸಿದಂತೆ ಟೆಸ್ಲಾದ ಷೇರುಗಳನ್ನು ಎಲಾನ್ ಮಸ್ಕ್ ಮಾರಾಟ ಮಾಡಿದ್ದು ಷೇರುಗಳು 57% ದಷ್ಟು ಕುಸಿತ ಕಂಡಿವೆ. ಈ ವಾರದವರೆಗೆ ಮಸ್ಕ್ ಟೆಸ್ಲಾ ಷೇರುಗಳಲ್ಲಿ ಸರಿಸುಮಾರು $40ಬಿಲಿಯನ್​​ನಷ್ಟು ಇಳಿಕೆ ಕಂಡುಕೊಂಡಿದ್ದಾರೆ.


    ಸಮಸ್ಯೆಗಳ ಸುಳಿಯಲ್ಲಿ ಎಲಾನ್ ಮಸ್ಕ್


    ಡಿಸೆಂಬರ್ ಆರಂಭದಲ್ಲಿ ಮಸ್ಕ್ ಕಂಪನಿಯ ಪ್ರಧಾನ ಕಚೇರಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಲಗುವ ಕೋಣೆಗಳನ್ನು ನಿರ್ಮಿಸಿದರು ಹಾಗೂ ಟ್ವಿಟರ್‌ನಲ್ಲಿ ಉದ್ಯೋಗಿಗಳು ಔದ್ಯೋಗಿಕ ನೆಲೆಯಲ್ಲಿ ಇನ್ನಷ್ಟು ಸಕ್ರಿಯರಾಗಿರಬೇಕೆಂಬ ಹಿನ್ನಲೆಯಲ್ಲಿ ತಮ್ಮ ಯೋಜನೆಯನ್ನು ಬೆಂಬಲಿಸುವ ಮೂಲಕ ಉದ್ಯೋಗಿಗಳು ರಾತ್ರಿ ದೀರ್ಘಾವಧಿಯವರೆಗೆ ಕೆಲಸ ಮಾಡಬೇಕೆಂಬ ಷರತ್ತನ್ನು ವಿಧಿಸಿದರು ಹಾಗೂ ಕಂಪನಿಯಿಂದ ವಜಾಗೊಂಡಿರುವ ಉದ್ಯೋಗಿಗಳಿಗೆ ಎಲೋನ್ ಮಸ್ಕ್ ಇನ್ನೂ ಹಣಪಾವತಿಸಿಲ್ಲ ಎಂಬ ಆಪಾದನೆ ಕೂಡ ಇವರ ಮೇಲಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು