Muslim Dating Apps: ಮುಸಲ್ಮಾನರಿಗಾಗೇ ಇದೆ ವಿಶೇಷ Dating App! ಸಂಗಾತಿ ಹುಡಕಾಟದಲ್ಲಿರುವವರು ಒಂದು ಬಾರಿ ನೋಡಿ

Muslim Dating Apps: ಆಯಾಯಾ ಜಾತಿಗೆ ಅನುಸಾರವಾಗಿ ಕೆಲವು ಸಂಗಾತಿಯನ್ನು ಹುಡುಕುವ ಆ್ಯಪ್​ಗಳು ತಲೆಯೆತ್ತಕೊಂಡಿವೆ. ಅದರಂತೆಯೇ ಮುಸ್ಲಿಂಮರಿಗಾಗಿ ಮತ್ತು ಸೂಕ್ತ ಜೋಡಿಯನ್ನು ಹುಡುಕಲು ಕೆಲವು ಡೇಟಿಂಗ್​ ಆ್ಯಪ್​ಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Muslim Dating App

Muslim Dating App

  • Share this:
    ಸರಿಯಾದ ಸಂಗಾತಿ ಜತೆಗಿದ್ದರೆ ಜೀವನ ಸಂತೋಷವಾಗಿರಲು ಸಾಧ್ಯ. ಹಾಗಾಗಿ ವಿವಾಹವಾಗುವುದಕ್ಕೂ ಮುನ್ನ ಸರಿಯಾದ ಸಂಗಾತಿಯ ಹುಡುಕಾಟ ಅವಶ್ಯಕ. ಸದ್ಯಕ್ಕಂತೂ ಸಂಗಾತಿ ಹುಡುಕಾಟದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಬಿಡಿ. ಏಕೆಂದರೆ, ಅನೇಕ ಆ್ಯಪ್​ಗಳು ಇದಕ್ಕೆಂದೆ ಹುಟ್ಟಿಕೊಂಡಿದೆ. ಇದರ ಮೂಲಕ ತಮಗೆ ಸೂಕ್ತ ಎನಿಸುವ ಸಂಗಾತಿಯನ್ನು ಅರಿಸಬಹುದಾಗಿದೆ.

    ಅಂದಹಾಗೆಯೇ, ಆಯಾಯಾ ಜಾತಿಗೆ ಅನುಸಾರವಾಗಿ ಕೆಲವು ಸಂಗಾತಿಯನ್ನು ಹುಡುಕುವ ಆ್ಯಪ್​ಗಳು ತಲೆಯೆತ್ತಕೊಂಡಿವೆ. ಅದರಂತೆಯೇ ಮುಸಲ್ಮಾನರಿಗಾಗಿ ಮತ್ತು ಸೂಕ್ತ ಜೋಡಿಯನ್ನು ಹುಡುಕಲು ಕೆಲವು ಡೇಟಿಂಗ್​ ಆ್ಯಪ್​ಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

    ತಮ್ಮಿಷ್ಟ ಪ್ರಕಾರ, ತನಗೆ ಸೂಕ್ತವೆಂದು ಆರಿಸುವ ಮತ್ತು ಈಕೆ ತನಗೆ ಸರಿಯಾದ ಹೆಂಡತಿ ಎಂದು ಸ್ಟಷ್ಟಪಡಿಸಲು ಸಹಾಯ ಮಾಡುವ 11 ಜನಪ್ರಿಯ ಮುಸ್ಲಿಂ ಡೇಟಿಂಗ್​ ಆ್ಯಪ್​ಗಳನ್ನು ಇಲ್ಲಿ ನೀಡಲಾಗಿದೆ.

    eHarmony: ಈ ಡೇಟಿಂಗ್​ ಆ್ಯಪ್​ ಮೂಲಕ ಯುಎಸ್ಎ, ಕೆನಡಾ, ಆಸ್ಟ್ರೇಲಿಯಾ, ಐರ್ಲ್ಯಾಂಡ್​, ಯುಕೆ ಮತ್ತಿತರ ದೇಶವನ್ನು ಸಂಪರ್ಕಿಸುತ್ತದೆ. ಜತೆಗೆ ಜೋಡಿಗಳು ಮುಖಮುಖಿಯಾಗುವ ಮೂಲಕ ಸಂವಹನ ನಡೆಸಲು ಸಹಾಯ ಮಾಡುತ್ತದೆ.

    Muslima: ಮುಖ್ಯವಾಗಿ ಕಟ್ಟುನಿಟ್ಟಿನ ವೆರಿಫೀಕೇಶನ್ ಮೂಲಕ ಅಲ್ಜೀರಿಯಾ, ಫ್ರಾನ್ಸ್, ಯುಕೆ ಮತ್ತು ಸೌದಿ ಅರೇಬಿಯಾದ ಚಂದಾದಾರರೊಂದಿಗೆ ಸಂವಹನ ಮಾಡಬಹುದಾಗಿದೆ. ಇದು ಉಚಿತ ಮತ್ತು ಪಾವತಿಸಿದ ಯೋಜನೆಗಳನ್ನು ಒಳಗೊಂಡದೆ. ಬಳಕೆದಾರರು ಪ್ರಶ್ನೆಗಳಿಗೆ ನೀಡುವ ಉತ್ತರದ ಆಧಾರದ ಮೇಲೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

    Muslimfriends: ಮುಸ್ಲಿಂ ಡೇಟಿಂಗ್ ಅಪ್ಲಿಕೇಶನ್​ಗಲ್ಲಿ ಇದು ಕೂಡ ಹೆಸರುವಾಸಿಯಾಗಿದೆ. ಮಧ್ಯಪ್ರಾಚ್ಯ, ಆಫ್ರಿಕಾ, ಏಷ್ಯಾ, ಯುರೋಪ್, ಕೆನಡಾ ಮತ್ತು ಯುಎಸ್ಎಗಳಲ್ಲಿ ಇದರ ಪ್ರಮುಖ ಬಳಕೆದಾರರಿದ್ದಾರೆ.

    Elitesingles: ಅಮೆರಿಕದಲ್ಲಿ ಈ ಅಪ್ಲಿಕೇಶನ್​ ಐದು ಮಿಲಿಯನ್ ಬಳಕೆದಾರರನ್ನು ಹೊಂದಿದೆ, ಅವರಲ್ಲಿ ಹೆಚ್ಚಿನವರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

    Muzmatch: ನಗರ, ಸ್ಥಳ, ಉಡುಗೆ, ಪಂಥ ಮತ್ತು ದಿನದಲ್ಲಿ ಒಬ್ಬರು ಎಷ್ಟು ಬಾರಿ ಪ್ರಾರ್ಥಿಸುತ್ತಾರೆ ಎಂಬುದರ ಆಧಾರದ ಮೇಲೆ ಹೊಂದಾಣಿಕೆ ಮಾಡಲು ಸಹಾಯ ಮಾಡುತ್ತದೆ. ಈ ಆ್ಯಪ್​​ 190 ದೇಶಗಳಲ್ಲಿ ನಾಲ್ಕು ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ.

    Eshq: ಮಹಿಳೆಯರನ್ನು ಸಬಲೀಕರಣದ ವಿಚಾರವಾಗಿ ಈ ಆ್ಯಪ್​ ಹೆಚ್ಚು ಜನಪ್ರಿಯವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಐಫೋನ್ ಬಳಕೆದಾರರಿಗೆ ಮಾತ್ರ ಈ ಅಪ್ಲಿಕೇಶನ್​ ಲಭ್ಯವಿದೆ. ಡೇಟಿಂಗ್ ಜೊತೆಗೆ, ಇದು ಸ್ನೇಹಿತರನ್ನು ಹುಡುಕುವ ಆಯ್ಕೆಯನ್ನು ನೀಡುತ್ತದೆ.

    Salams: ಸರಳ ಮತ್ತು ಸುರಕ್ಷಿತ ಡೇಟಿಂಗ್ ಆ್ಯಪ್​ ಇದಾಗಿದೆ. ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ನಂತರ ಸಲಾಮ್ಸ್​ ಆ್ಯಪ್​ ಸುದ್ದಿಯಲ್ಲಿತ್ತು. ಇದು ಶಿಕ್ಷಣ, ಪಂಥ, ವೃತ್ತಿ, ಎತ್ತರ, ಪ್ರಾರ್ಥನೆ ಮಟ್ಟಗಳು ಆಧರಿಸಿ ಸಂಗಾತಿಯನ್ನು ಹುಡುಕುವ ಅವಕಾಶ ಮಾಡಿಕೊಡುತ್ತದೆ.

    Singlemuslim: ಬಳಕೆದಾರರ ಗೌಪ್ಯತೆಗೆ ಹೆಚ್ಚು ಒತ್ತು ನೀಡುತ್ತಾ, 2.5 ಮಿಲಿಯನ್ ಬಳಕೆದಾರರನ್ನು ಈ ಡೇಟಿಂಗ್ ಅಪ್ಲಿಕೇಶನ್ ಹೊಂದಿದೆ.ಛಾಯಾಚಿತ್ರ ನಿರ್ಬಂಧಿತ ಪ್ರವೇಶವನ್ನು ಒದಗಿಸುತ್ತದೆ.

    Qiran: ಇದು ಮುಸ್ಲಿಂ ಜನಾಂಗಕ್ಕೆ ಸರಿಯಾದ ಸಂಗಾತಿ ಹುಡುಕಾಡುವ ಆ್ಯಪ್ ಆಗಿದೆ. ಎರಡು ಮಿಲಿಯನ್ ಬಳಕೆದಾರರನ್ನು ಈ ಅಪ್ಲಿಕೇಶನ್​ ಹೊಂದಿದೆ.

    Salaam Love: ಸಂಗಾತಿಯ ಹುಡುಕಾಟವನ್ನು ಸುಲಭಗೊಳಿಸಲು ಚಾಟ್‌ರೂಮ್‌ಗಳು, ಬ್ಲಾಗ್‌ಗಳು ಮತ್ತು ಫೋರಮ್‌ಗಳು ಲಭ್ಯವಿದೆ.

    Muslim Matrimony: ಇದು ಭಾರತೀಯ ಡೇಟಿಂಗ್ ಆ್ಯಪ್​. ಇದರಲ್ಲಿ ಬಳಕೆದಾರನ ಚಿತ್ರಗಳು, ಫೋನ್ ಸಂಖ್ಯೆಗಳು ಮತ್ತು ಜಾತಕಗಳನ್ನು ನೀಡಲು ಅವಕಾಶವಿದೆ.
    First published: