ಎಲೆಕ್ಟ್ರಾನಿಕ್​ ಕಾರು ಖರೀದಿ ಮಾಡಿದರೆ ನಿಮ್ಮ ಖಾತೆಗೆ ಬೀಳಲಿದೆ ಲಕ್ಷ ರೂಪಾಯಿ

ಎಲೆಕ್ಟ್ರಾನಿಕ್​ ಆಟೋ ರಿಕ್ಷಾ ಖರೀದಿಸುವ ಗ್ರಾಹಕರಿಗೆ 12 ಸಾವಿರ ರೂಪಾಯಿ ಹಾಗೂ ಕಾರು ಖರೀದಿಸುವ ಗ್ರಾಹಕರಿಗೆ ಗರಿಷ್ಠ 1 ಲಕ್ಷ ರೂಪಾಯಿ ಸಬ್ಸಿಡಿ ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

news18
Updated:May 2, 2019, 3:52 PM IST
ಎಲೆಕ್ಟ್ರಾನಿಕ್​ ಕಾರು ಖರೀದಿ ಮಾಡಿದರೆ ನಿಮ್ಮ ಖಾತೆಗೆ ಬೀಳಲಿದೆ ಲಕ್ಷ ರೂಪಾಯಿ
ಎಲೆಕ್ಟ್ರಿಕ್​ ವಾಹನ
  • News18
  • Last Updated: May 2, 2019, 3:52 PM IST
  • Share this:
ಮಹಾರಾಷ್ಟ್ರ(ಮೇ.2): ದೇಶದಲ್ಲಿ ಮಾಲಿನ್ಯ ನಿಯಂತ್ರಕ್ಕಾಗಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕಾಗಿ ‘ಫೇಮ್​ ಯೋಜನೆ‘ ಕೂಡ ಜಾರಿಗೆ ತಂದಿದೆ. ಎಲೆಕ್ಟ್ರಾನಿಕ್​ ವಾಹನ ಖರೀದಿಸುವ ಗ್ರಾಹಕರಿಗೆ 1 ಲಕ್ಷ ರೂಪಾಯಿ ಸಬ್ಸಿಡಿ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಫೋಷಿಸಿದೆ.

ವಾಯು ಮಾಲಿನ್ಯ ನಿಯಂತ್ರಕ್ಕಾಗಿ ಎಲೆಕ್ಟ್ರಾನಿಕ್​ ವಾಹನ​ಗಳನ್ನು ಮಾರುಕಟ್ಟೆಗೆ ತರಲಾಗಿದ್ದು, ಎಲೆಕ್ಟ್ರಾನಿಕ್​ ಸ್ಕೂಟರ್​​​​ ಮತ್ತು ಬೈಕ್​​ ಖರೀದಿಸುವ ಗ್ರಾಹಕರಿಗೆ ಗರಿಷ್ಠ 5,000 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಎಲೆಕ್ಟ್ರಾನಿಕ್​ ಆಟೋ ರಿಕ್ಷಾ ಖರೀದಿಸುವ ಗ್ರಾಹಕರಿಗೆ 12,000 ರೂಪಾಯಿ ಹಾಗೂ ಕಾರು ಖರೀದಿಸುವ ಗ್ರಾಹಕರಿಗೆ ಗರಿಷ್ಠ 1 ಲಕ್ಷ ರೂಪಾಯಿ ಸಬ್ಸಿಡಿ ನೀಡಲು ಮಹರಾಷ್ಟ್ರ ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ ಇಲೆಕ್ಟ್ರಾನಿಕ್​ ವಾಹನಗಳ ಬಳಕೆಗೆ ಸಬ್ಸಿಡಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರವು ಎಲೆಕ್ಟ್ರಾನಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಎಲೆಕ್ಟ್ರಾನಿಕ್​ ವಾಹನಗಳ ಚಾರ್ಜಿಂಗ್​ ಸ್ಟೇಷನ್​ಗಳನ್ನು ಸ್ಥಾಪಿಸಲಾಗುತ್ತಿದ್ದು. ಮುಂಬರುವ ದಿನಗಳಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಮಹತ್ತರ ಬದಲಾವಣೆ ಮಾಡಿಕೊಂಡಿದೆ.

First published: May 2, 2019, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading