Light year 0 Car: ಈ ಇಲೆಕ್ಟ್ರಿಕ್ ಕಾರು ಕೇವಲ ಒಂದೇ ಚಾರ್ಜಿನಲ್ಲಿ 7 ತಿಂಗಳು ಚಲಿಸುತ್ತದೆಯಂತೆ!

ನಿಧಾನವಾಗಿ ಸಕ್ರಿಯವಾಗಿದೆ ಮತ್ತು ಈಗಾಗಲೇ ಇಲೆಕ್ಟ್ರಿಕ್ ಚಾಲಿತ ವಾಹನಗಳು ರೂಪಗೊಂಡಿದ್ದು ಭಾರತ ಸೇರಿದಂತೆ ವಿವಿಧ ದೇಶಗಳ ಮಾರುಕಟ್ಟೆಗಳಲ್ಲಿ ಲಗ್ಗೆ ಇಡಲು ಪ್ರಾರಂಭಿಸಿವೆ. ಈ ನಿಟ್ಟಿನಲ್ಲಿ ಹಲವು ಇಲೆಕ್ಟ್ರಿಕ್ ಶಕ್ತಿ ಚಾಲಿತ ಕಾರುಗಳು ಹಾಗೂ ದ್ವಚಕ್ರ ವಾಹನಗಳು ನಮಗಿಂದು ಲಭ್ಯವಿದೆ. ಈ ನಿಟ್ಟಿನಲ್ಲಿ ದಿನೇ ದಿನೇ ಶಕ್ತಿಯ ಪರಿಣಾಮಕಾರಿ ಬಳಕೆಗಾಗಿ ಹೊಸ ಹೊಸ ಆವಿಷ್ಕಾರಗಳನ್ನುಮಾಡಲಾಗುತ್ತಿದೆ. ಈ ದೀಸೆಯಲ್ಲಿ ಈಗಾಗಲೇ ವಿನ್ಯಾಸಗೊಳಿಸಲಾಗಿರುವ 'ಲೈಟ್ ಇಯರ್ 0' ಎಂಬ ವಿದ್ಯುತ್ ಶಕ್ತಿ ಚಾಲಿತ ಕಾರು ಹಲವರ ಹುಬ್ಬು ಏರಿಸುವಂತೆ ಮಾಡಿದೆ.

ಲೈಟ್ ಇಯರ್ 0 ಕಾರು

ಲೈಟ್ ಇಯರ್ 0 ಕಾರು

  • Share this:
ಇಂದು ಅಟೋದ್ಯಮದಲ್ಲೂ ಹೆಚ್ಚಿನ ಕ್ರಾಂತಿಕಾರಿ ಬದಲಾವಣೆ ಆಗುತ್ತಿರುವುದನ್ನು ಗಮನಿಸಬಹುದು. ಹಾಗೇ ನೋಡಿದರೆ ಹಲವು ವರ್ಷಗಳ ಹಿಂದೆಯೇ ಮರುನವೀಕರಿಸಲಾಗದ ಇಂಧನ ತೈಲಕ್ಕೆ (Fuel oil) ಪರ್ಯಾಯವಾಗಿ ಶಕ್ತಿಯ ಬಳಕೆಯ ಬಗ್ಗೆ ಕೂಗು ಎದ್ದಿತ್ತು. ಅದೀಗ ನಿಧಾನವಾಗಿ ಸಕ್ರಿಯವಾಗಿದೆ ಮತ್ತು ಈಗಾಗಲೇ ಇಲೆಕ್ಟ್ರಿಕ್ ಚಾಲಿತ ವಾಹನಗಳು (Electric powered vehicle) ರೂಪಗೊಂಡಿದ್ದು ಭಾರತ ಸೇರಿದಂತೆ ವಿವಿಧ ದೇಶಗಳ ಮಾರುಕಟ್ಟೆಗಳಲ್ಲಿ (Market) ಲಗ್ಗೆ ಇಡಲು ಪ್ರಾರಂಭಿಸಿವೆ. ಈ ನಿಟ್ಟಿನಲ್ಲಿ ಹಲವು ಇಲೆಕ್ಟ್ರಿಕ್ ಶಕ್ತಿ ಚಾಲಿತ ಕಾರುಗಳು ಹಾಗೂ ದ್ವಚಕ್ರ ವಾಹನಗಳು (Two Wheeler Vehicles) ನಮಗಿಂದು ಲಭ್ಯವಿದೆ. ಈ ನಿಟ್ಟಿನಲ್ಲಿ ದಿನೇ ದಿನೇ ಶಕ್ತಿಯ ಪರಿಣಾಮಕಾರಿ ಬಳಕೆಗಾಗಿ ಹೊಸ ಹೊಸ ಆವಿಷ್ಕಾರಗಳನ್ನುಮಾಡಲಾಗುತ್ತಿದೆ. ಈ ದೀಸೆಯಲ್ಲಿ ಈಗಾಗಲೇ ವಿನ್ಯಾಸಗೊಳಿಸಲಾಗಿರುವ 'ಲೈಟ್ ಇಯರ್ 0' (Lightyear 0) ಎಂಬ ವಿದ್ಯುತ್ ಶಕ್ತಿ ಚಾಲಿತ ಕಾರು ಹಲವರ ಹುಬ್ಬು ಏರಿಸುವಂತೆ ಮಾಡಿದೆ.

ಒಂದೊಮ್ಮೆ ಚಾರ್ಜ್ ಮಾಡಿದರೆ ಏಳು ತಿಂಗಳುಗಳ ಕಾಲ ಚಲಿಸುವ ಕಾರು
ಇದನ್ನು ಅಭಿವೃದ್ಧಿಪಡಿಸಿರುವ ಕಂಪನಿಯು ವಿಶ್ವಾಸದ ಹೇಳಿಕೆ ಏನೆಂದರೆ, ಸೌರಶಕ್ತಿ ಪ್ರಬಲವಾಗಿರುವ ದೇಶಗಳಲ್ಲಿ ಈ ಕಾರನ್ನುಒಂದೊಮ್ಮೆ ಚಾರ್ಜ್ ಮಾಡಿದರೆ ಅದು ಏಳು ತಿಂಗಳುಗಳ ಕಾಲ ಚಲಿಸಬಹುದಂತೆ. ಇದು ನಿಜಕ್ಕೂ ಅದ್ಭುತವಾದ ಹೇಳಿಕೆಯಾಗಿದ್ದು ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಲೈಟ್ ಇಯರ್ ಹೇಳಿರುವಂತೆ ಈ ವಿದ್ಯುತ್ ಚಾಲಿತ ಕಾರು ನೆದರ್ಲ್ಯಾಂಡ್ ನಂತಹ ದೇಶದಲ್ಲೂ ಒಂದೇ ಚಾರ್ಜಿನಲ್ಲಿ ಎರಡು ತಿಂಗಳ ಕಾಲ ಚಲಿಸಬಹುದು.

ಸೂರ್ಯನ ಕಿರಣ ಅಧಿಕವಾಗಿ ಬೀಳುವ ಕಡೆ ಕಾರ್ ಪಾರ್ಕ್ ಮಾಡಬೇಕು
ಅಷ್ಟಕ್ಕೂ, 'ಇಷ್ಟು ಅವಧಿ ಚಲಿಸಬಹುದು' ಎಂಬುವ ಲೆಕ್ಕಾಚಾರವನ್ನು ಕೆಲವು ಮಾದರಿ ದತ್ತಾಂಶಗಳ ಮೇಲೆ ಲೆಕ್ಕ ಹಾಕಲಾಗಿದ್ದು ಅದರಲ್ಲಿ ದಿನಕ್ಕೆ 35 ಕಿ.ಮೀ ಚಾಲನೆಯನ್ನು ಪರಿಗಣಿಸಲಾಗಿದೆ. ಅಲ್ಲದೆ, ಇದನ್ನು ಓಡಿಸುವ ಗ್ರಾಹಕರು ಕಾರನ್ನು ಪಾರ್ಕ್ ಮಾಡುವ ಸಂದರ್ಭದಲ್ಲಿ ಅದು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವಂತೆ ಪಾರ್ಕ್ ಮಾಡಿರಬೇಕು ಎಂಬುದನ್ನು ಲೆಕ್ಕಾಚಾರದಲ್ಲಿ ಪರಿಗಣಿಸಲಾಗಿದೆ.

ಇದನ್ನೂ ಓದಿ:  Cars: 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಕಾರುಗಳಿವು! ವಿನ್ಯಾಸ ಮಾತ್ರವಲ್ಲ, ಮೈಲೇಜ್ ಕೂಡ ಅದ್ಭುತ

ಈ ಎಲ್ಲ ಮಾನದಂಡಗಳನ್ನು ನಿಷ್ಠೆಯಿಂದ ಪೂರೈಸಿದಾಗ ಮಾತ್ರ ಈ ಕಾರು ಕಂಪನಿ ಹೇಳಿರುವಂತೆ ಒಂದೇ ಚಾರ್ಜಿನಲ್ಲಿ ಏಳು ತಿಂಗಳು ಚಲಿಸಬಹುದು ಎನ್ನಲಾಗಿದೆ.

ಸೌರಶಕ್ತಿಯ ಮೂಲಕ 11,000 ಕಿ.ಮೀ ಚಲಿಸಬಹುದಾದ ಸಾಮರ್ಥ್ಯ ಹೊಂದಿರುವ ಕಾರು
ಕೇವಲ ವಿದ್ಯುತ್ ಮಾತ್ರವಲ್ಲದೆ 'ಲೈಟ್ ಇಯರ್ 0' ವರ್ಷಕ್ಕೆ ಸೌರಶಕ್ತಿಯ ಮೂಲಕ ಸುಮಾರು 11,000 ಕಿ.ಮೀ ಚಲಿಸಬಹುದಾದ ಸಾಮರ್ಥ್ಯ ಹೊಂದಿದೆ ಎಂದು ಕ್ಲೈಮ್ ಮಾಡಿಕೊಂಡಿದೆ. ಕಂಪನಿಯು ಹೇಳಿಕೊಂಡಿರುವಂತೆ ಅದು ಈ ಕಾರಿನಲ್ಲಿ 54 ಚ. ಅಡಿಗಳ ಪೇಟೆಂಟ್ ಮಾಡಲಾಗಿರುವ ಡಬಲ್ ಕರ್ವ್ ಉಳ್ಳ ಅರ್‍ರೆಗಳನ್ನು ಬಳಸಿರುವುದರಿಂದ ಯಾವುದೇ ಸಮಯದಲ್ಲೂ ಸೂರ್ಯನಿಂದ ಶಕ್ತಿಯನ್ನು ಪಡೆಯಲು ಸಮರ್ಥವಾಗಿದೆ ಎನ್ನಲಾಗಿದೆ. ಸೂರ್ಯ ಮೂಲದ ಶಕ್ತಿಯಿಂದ ಲೈಟ್ ಇಯರ್ 70ಕಿ.ಮೀ ವರೆಗೂ ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಈ ಬಗ್ಗೆ ಕಂಪನಿ ಏನು ಹೇಳಿದೆ ನೋಡಿ
ಕಂಪನಿಯ ಪ್ರಕಾರ, ಕೇವಲ ಸೌರಶಕ್ತಿಯ ಚಾರ್ಜಿಂಗ್ ಅಲ್ಲದೆ ಒಂದೊಮ್ಮೆ ಈ ಕಾರಿನ ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಅದು 625 ಕಿ.ಮೀ ವರೆಗೂ ಚಲಿಸಬಹುದಾಗಿದೆ. ಹೈವೇಗಳಲ್ಲಿ 110 ಕಿ.ಮೀ ಪ್ರತಿ ಗಂಟೆಯ ವೇಗದಲ್ಲಿ ಲೈಟ್ ಇಯರ್ ಪೂರ್ಣವಾಗಿ ಚಾರ್ಜ್ ಮಾಡಲಾದ ಲಿಥಿಯಮ್-ಐಯಾನ್ ಬ್ಯಾಟರಿಯಿಂದ ಶಕ್ತಿಯನ್ನು ಬಳಸುತ್ತ 560 ಕಿ.ಮೀವರೆಗೂ ಚಲಿಸಬಹುದೆಂದು ಕಂಪನಿ ಹೇಳಿದೆ.

ಕಂಪನಿಯ ಪ್ರಕಾರ, ಈ ಕಾರಿನಲ್ಲಿ ಅಳವಡಿಸಲಾಗಿರುವ ಅತ್ಯಂತ ಸಕ್ಷಮ ಹಾಗೂ ದಕ್ಷವಾದ ಮೋಟರ್ ಗಳು ಹಾಗೂ ಅದಕ್ಕೆ ಪೂರಕವಾಗಿರುವಂತಹ ಇದರ ಏರೋಡೈನಮಿಕ್ಸ್ ವಿನ್ಯಾಸದಿಂದಾಗಿ ಇಷ್ಟೊಂದು ದೂರದವರೆಗೆ ಈ ಕಾರು ಚಲಿಸುವಂತೆ ಮಾಡಲು ನೆರವಾಗುತ್ತವೆ ಎನ್ನಲಾಗಿದೆ.

ಇದನ್ನೂ ಓದಿ:  Volkswagen Virtus: ಬೆಲೆಗೆ ತಕ್ಕಂತೆ ಫೀಚರ್ಸ್​! ಸಖತ್ತಾಗಿದೆ ಗುರು ವರ್ಟಸ್​ ಕಾರು

ಪ್ರಸ್ತುತ, ಲೈಟ್ ಇಯರ್ ಜಗತ್ತಿನಲ್ಲಿ ಸದ್ಯ ಲಭ್ಯವಿರುವ ಅತ್ಯಂತ ಸಕ್ಷಮ ವಿದ್ಯುತ್ ಚಾಲಿತ ಕಾರು ಎನ್ನಾಲಾಗಿದ್ದು ತನ್ನ ಹೈವೇಯ ನೂರು ಕಿ.ಮೀ ಪ್ರತಿ ಗಂಟೆಯ ವೇಗಕ್ಕೆ ಕೇವಲ 10.5 kWh ಬಳಸುತ್ತದೆ ಎನ್ನಲಾಗಿದೆ. ಲೈಟ್ ಇಯರ್ ಡಚ್ ಮೂಲದ ನವೋದ್ಯಮವಾಗಿದ್ದು ತಾನು ವಿನ್ಯಾಸಗೊಳಿಸಿರುವ ಈ ಕಾರು ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನ ಕ್ಷೇತ್ರವನ್ನು ಮತ್ತಷ್ಟು ಬೂಸ್ಟ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತದೆ. ಈ ವರ್ಷದ ಅಂತ್ಯದಿಂದ ಈ ಕಾರುಗಳನ್ನು ಉತ್ಪಾದಿಸಲಾಗುವುದೆಂದು ಲೈಟ್ ಇಯರ್ ಈ ಸಂದರ್ಭದಲ್ಲಿ ಹೇಳಿಕೊಂಡಿದೆ.
Published by:Ashwini Prabhu
First published: