• Home
  • »
  • News
  • »
  • tech
  • »
  • Twitter Issue: ತನ್ನ ಸ್ನೇಹಿತನ ಟ್ವಿಟರ್​ ಅಕೌಂಟ್​ ಅನ್ನೇ ಬ್ಯಾನ್ ಮಾಡಿದ ಎಲಾನ್ ಮಸ್ಕ್! ಇಷ್ಟಕ್ಕೂ ಕಾರಣಗಳೇನು?

Twitter Issue: ತನ್ನ ಸ್ನೇಹಿತನ ಟ್ವಿಟರ್​ ಅಕೌಂಟ್​ ಅನ್ನೇ ಬ್ಯಾನ್ ಮಾಡಿದ ಎಲಾನ್ ಮಸ್ಕ್! ಇಷ್ಟಕ್ಕೂ ಕಾರಣಗಳೇನು?

ಎಲಾನ್ ಮಸ್ಕ್ ಮತ್ತು ಪ್ರಣಯ್ ಪಾಥೋಲ್

ಎಲಾನ್ ಮಸ್ಕ್ ಮತ್ತು ಪ್ರಣಯ್ ಪಾಥೋಲ್

ಇತ್ತೀಚೆಗೆ ಟ್ವಿಟರ್​​ನ ಕೆಲವು ಬದಲಾವಣೆಗಳಿಂದ ಕೆಲವು ಟ್ವಿಟರ್​​ ಬಳಕೆದಾರರ ಅಕೌಂಟ್​ಗಳು ಬ್ಯಾನ್ ಆದವು. ಇದೀಗ ಎಲಾನ್ ಮಸ್ಕ್ ಅವರ ಟ್ವಿಟರ್​ ಸ್ನೇಹಿತರಾಗಿದ್ದ ಭಾರತೀಯ ವಿದ್ಯಾರ್ಥಿ ’ ಪ್ರಣಯ್​ ಪಾಥೋಲ್’ ಅವರ ಟ್ವಿಟರ್ ಅಕೌಂಟ್ ಕೂಡ ಬ್ಯಾನ್ ಆಗಿದೆ. ಕಾರಣವೇನು ಎಂಬುದನ್ನು ನೀವೇ ಓದಿ.

ಮುಂದೆ ಓದಿ ...
  • Share this:

    ಸೋಶಿಯಲ್ ಮೀಡಿಯಾದಲ್ಲಿ (Social Media) ಬಹಳಷ್ಟು ಚರ್ಚೆಯಲ್ಲಿದ್ದ ಅಪ್ಲಿಕೇಶನ್ (Application) ಎಂದರೆ ಅದು ಟ್ವಿಟರ್ (Twitter). ಅದ್ರಲ್ಲೂ ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿದ್ದ ಎಲಾನ್ ಮಸ್ಕ್ ಬಹಳಷ್ಟು ಟೀಕೆಗೆ ಒಳಗಾಗಿದ್ದರು. ಎಲಾನ್ ಮಸ್ಕ್ (Elon Musk) ಒಡೆತನದಲ್ಲಿದ್ದ ಟ್ವಿಟರ್ ಅನ್ನು ಬದಲಾವಣೆ ಮಾಡುವ ಉದ್ದೇಶವನ್ನು ಹೊಂದಿದ್ದರು. ಅದೇ ರೀತಿ ಬದಲಾವಣೆಗಳನ್ನು ಮಾಡಲು ತೊಡಗಿದರು. ಆದರೆ ಕೆಲವೊಂದು ವಿಚಾರಗಳು ಕೆಲವೊಬ್ಬರಿಗೆ ದುರ್ಬಳಕೆ ಮಾಡಲು ಸುಲಭವಾಯಿತು. ಇದರಿಂದ ಕೆಲವರ ಟ್ವಿಟರ್ ಅಕೌಂಟ್​ಗಳು (Twitter Account) ಕೂಡ ಬ್ಯಾನ್ (Ban) ಆದವು. ಇದರಿಂದ ನೊಂದ ಟ್ವಿಟರ್ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಟ್ವಿಟರ್ ಖಾತೆ ಬಗ್ಗೆ ಎಲಾನ್ ಮಸ್ಕ್ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


    ಇತ್ತೀಚೆಗೆ ಟ್ವಿಟರ್​​ನ ಕೆಲವು ಬದಲಾವಣೆಗಳಿಂದ ಕೆಲವು ಟ್ವಿಟರ್​​ ಬಳಕೆದಾರರ ಅಕೌಂಟ್​ಗಳು ಬ್ಯಾನ್ ಆದವು. ಇದೀಗ ಎಲಾನ್ ಮಸ್ಕ್ ಅವರ ಟ್ವಿಟರ್​ ಸ್ನೇಹಿತರಾಗಿದ್ದ ಭಾರತೀಯ ವಿದ್ಯಾರ್ಥಿ ’ ಪ್ರಣಯ್​ ಪಾಥೋಲ್’ ಅವರ ಟ್ವಿಟರ್ ಅಕೌಂಟ್ ಕೂಡ ಬ್ಯಾನ್ ಆಗಿದೆ. ಕಾರಣವೇನು ಎಂಬುದನ್ನು ನೀವೇ ಓದಿ.


    ಟ್ವಿಟರ್​ನ ನಿಯಮ ಉಲ್ಲಂಘಿಸಿದ್ದಕ್ಕೆ ಅಕೌಂಟ್​ ಬ್ಯಾನ್


    ಟ್ವಿಟರ್​ನಲ್ಲಿ ಪ್ರಣಯ್​ ಅವರು ಬಹಳಷ್ಟು ಸಕ್ರಿಯವಾಗಿದ್ದರು ಆದರೆ ಇವರು ಟ್ವಿಟರ್​ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.


    ಇದನ್ನೂ ಓದಿ: ಇಲ್ಲಿದೆ ನೋಡಿ ಹೈಗ್ರಾಫಿಕ್ಸ್​ ಹೊಂದಿದ 10MB ಒಳಗಿನ ಗೇಮ್ಸ್​ಗಳು! ಕಡಿಮೆ ರ್‍ಯಾಮ್​ನ ಮೊಬೈಲ್​ನಲ್ಲಿಯೂ ಆಡ್ಬಹುದು


    ಎಲಾನ್ ಮಸ್ಕ್ ಅವರ ಟ್ವಿಟರ್ ಸ್ನೇಹಿತ ಪ್ರಣಯ್ ಪಾಥೋಲ್


    ಹೌದು ಪ್ರಣಯ್ ಪಾಥೋಲ್ ಅವರು ಟ್ವಿಟರ್​​ನಲ್ಲಿ ಬಹಳಷ್ಟು ಸಕ್ರಿಯವಾಗಿದ್ದರು. ಇವರು ಜೊತೆಗೆ ಎಲಾನ್ ಮಸ್ಕ್ ಜೊತೆ ಸಂಪರ್ಕದಲ್ಲಿಯೂ ಇದ್ದರು. ಇದಲ್ಲದೆ ಪ್ರಣಯ್ ಅವರು ಟ್ವೀಟ್​ ಮಾಡುವ ಮುಖಾಂತರ ಟ್ವಿಟರ್ ಅಕೌಂಟ್​ ಅನ್ನು ಬಹಳಷ್ಟು ಉಪಯೋಗಿಸುತ್ತಿದ್ದರು.


    ಎಲಾನ್ ಮಸ್ಕ್ ಮತ್ತು ಪ್ರಣಯ್ ಪಾಥೋಲ್


    ಆದರೆ ಕೆಲದಿನಗಳ ಹಿಂದೆ ಟ್ವಿಟರ್​ನಲ್ಲಿ ಹೊಸ ಬದಲಾವಣೆಗಳನ್ನು ಎಲಾನ್ ಮಸ್ಕ್​ ಅವರು ತಂದರು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪ್ರಣಯ್ ಪಾಥೋಲ್ ಅವರ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಯಾವೆಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಮದು ಇದುವರೆಗೂ ತಿಳಿಸಿಲ್ಲ.


    ಪ್ರಣಯ್ ಪಾಥೋಲ್ ಮತ್ತು ಎಲಾನ್ ಮಸ್ಕ್ ಅವರ ಗೆಳೆತನ:


    2018 ರಲ್ಲಿ ಪ್ರಣಯ್​ ಪಾಥೋಲ್ ಅವರು ಮೊದಲ ಬಾರಿ ಎಲಾನ್ ಮಸ್ಕ್ ಅವರನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದರು. ಇಲ್ಲಿ ಪ್ರಣಯ್ ಅವರು ಟೆಸ್ಲಾ ಕಂಪನಿಯ ಸ್ವಯಂಚಾಲಿತ ವಿಂಡ್​ಸ್ಕ್ರೀನ್​ ವೈಪರ್​​​ಗಳ ಸಮಸ್ಯೆಯ ಕುರಿತು ತನ್ನ ಟ್ವೀಟ್​ನಲ್ಲಿ ಎಲಾನ್ ಮಸ್ಕ್ ಅವರಿಗೆ ಬರೆದಿದ್ದರು. ಆದರೆ ಎಲಾನ್ ಮಸ್ಕ್​ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಪ್ರಣಯ್ ಅವರು ಊಹೆಯೂ ಮಾಡಿರಲಿಲ್ಲ. ಆದರೆ ಪ್ರಣಯ್ ಅವರ ಟ್ವೀಟ್​ಗೆ ಸ್ವಯಂಚಾಲಿತ ವಿಂಡ್​​ಸ್ಕ್ರೀನ್​ ವೈಪರ್​​​ಗಳ ಸಮಸ್ಯೆಯನ್ನು ಮುಂದಿನ ಅಪ್​ಡೇಟ್​​ನಲ್ಲಿ ಸರಿಪಡಿಸಲಾಗುವುದು ಎಮದು ಎಲಾನ್ ಮಸ್ಕ್ ಅವರು ಪ್ರತಿಕ್ರಿಯಿಸಿದರು. ಆದರೆ ಈ ಮಾತುಕತೆ ಇಲ್ಲಿಗೆ ನಿಲ್ಲಲಿಲ್ಲ.


    ಎಲಾನ್ ಮಸ್ಕ್​ ಜೊತೆಗಿನ ಫೋಟೋ ಫುಲ್ ವೈರಲ್


    ಇವೆಲ್ಲ ಮಾತುಕತೆಯ ನಂತರ ಪ್ರಣಯ್ ಪಾಥೋಲ್ ಅವರು ಎಲಾನ್ ಮಸ್ಕ್ ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಮತ್ತು ಟ್ವಿಟರ್​ನಲ್ಲಿ ನೇರ ಸಂದೇಶ ನಡೆಸುತ್ತೇವೆ ಎಂದು ಹೆಳಿದ್ದರು. ಆದರೆ ಪ್ರಣಯ್ ಅವರ ಈ ಮಾತನ್ನು ಯಾರೂ ನಂಬಿರಲಿಲ್ಲ.


    ಎಲಾನ್ ಮಸ್ಕ್ ಮತ್ತು ಪ್ರಣಯ್ ಪಾಥೋಲ್


    ಆದರೆ ಈ ವರ್ಷದ ಆರಂಭದಲ್ಲಿ ಟೆಕ್ಸಾಸ್‌ನ ಟೆಸ್ಲಾ ಗಿಗಾಫ್ಯಾಕ್ಟರಿಗೆ ಪ್ರಣಯ್ ಫಾಥೋಲ್ ಅವರು ಭೇಟಿ ನೀಡಿದಾಗ ಎಲಾನ್ ಮಸ್ಕ್ ಜೊತೆ ಫೋಟೋ ತೆಗೆದಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಾಗ ಆ ಫೋಟೋ ಫುಲ್ ವೈರಲ್ ಆಗಿತ್ತು.


    ಪ್ರಣಯ್​ ಅವರ ಟ್ವಿಟರ್ ಅಕೌಂಟ್ ಬ್ಯಾನ್ ಬಗ್ಗೆ ಜನರ ಅಭಿಪ್ರಾಯ


    ಪ್ರಣಯ್ ಪಾಥೋಲ್ ಅವರ ಟ್ವಿಟ್ಟರ್ ಖಾತೆ ಬ್ಯಾನ್ ಆದ ನಂತರ ಪ್ರಣಯ್ ಪಾಥೋಲ್ ಅವರು ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಟ್ವಿಟ್ಟರ್ ಖಾತೆ ಬ್ಯಾನ್ ಆಗಿರುವ ಬಗ್ಗೆ ಪ್ರಣಯ್ ಪಾಥೋಲ್ ಅವರು ಎಲಾನ್ ಮಸ್ಕ್ ಅವರಿಗೆ ನೇರವಾಗಿ ದೂರು ನೀಡುತ್ತಾರೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇತ್ತ 24ರ ಹರೆಯದ 1,98,000 ಕ್ಕೂ ಹೆಚ್ಚು ಟ್ವಿಟ್ಟರ್ ಪಾಲೋವರ್ಸ್ ಹೊಂದಿರುವ ಪ್ರಣಯ್ ಅವರು ಈಗ ಡಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ವ್ಯವಹಾರ ವಿಶ್ಲೇಷಣೆಯಲ್ಲಿ ಎಂಎಸ್ ಓದುತ್ತಿದ್ದಾರೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು