Phone Screen: ಮೊಬೈಲ್ ಸ್ಕ್ರೀನ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ನಿಮ್ಮ ಮೊಬೈಲ್ ಫೋನ್ ನ ಸ್ಕ್ರೀನ್ ಅನ್ನು ನಿಯಯಮಿತವಾಗಿ ಸ್ವಚ್ಛವಾಗಿ ಇರಿಸಿಕೊಳ್ಳದೆ ಹೋದರೆ ಅದು ತುಂಬಾನೇ ಮಬ್ಬಾಗಿ ಕಾಣುತ್ತದೆ ಮತ್ತು ಅದರ ಜೊತೆಗೆ ನಮ್ಮ ಕೈ ಬೆರಳುಗಳ ಗುರುತುಗಳು ಹಾಗೆಯೇ ಪರದೆಯ ಮೇಲೆ ಇದ್ದು, ಅದು ಒಂದು ರೀತಿಯಲ್ಲಿ ಜಿಗುಟಾಗಿ ರೂಪಗೊಳ್ಳುತ್ತದೆ. ಇದೆಲ್ಲವುದರಿಂದ ನಿಮ್ಮ ಫೋನ್ ಒಂದು ಕೀಟಾಣುಗಳ ಫಾರ್ಮ್ ಆಗಿ ಪರಿವರ್ತನೆಯಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಈ ಫೋನ್ ಸ್ಕ್ರೀನ್ ಗಳನ್ನು (Phone Screen) ಹೆಚ್ಚಾಗಿ ಮುಟ್ಟುವುದರಿಂದ ಸಹ ಸೋಂಕು ತಗಲುವ ಅವಕಾಶಗಳು ತುಂಬಾನೇ ಇವೆ ಎಂದು ಜನರು ಹೇಳುತ್ತಿದ್ದುದ್ದನ್ನು ನಾವೆಲ್ಲಾರೂ ಕೇಳಿರುತ್ತೇವೆ ಅಲ್ಲವೇ? ಹೌದು.. ಈ ಸ್ಕ್ರೀನ್ ಅನ್ನು ನಾವು ಹಾಗೆಯೇ ಕೈ ಬೆರಳುಗಳಿಂದ (Fingers) ಮುಟ್ಟುತ್ತೇವೆ ಮತ್ತು ಅದೇ ಬೆರಳುಗಳನ್ನು ನಾವು ಊಟ ಮಾಡಲು ಸಹ ಬಳಸುತ್ತೇವೆ, ಕೆಲವೊಮ್ಮೆ ನಮ್ಮ ಕಣ್ಣುಜ್ಜಿಕೊಳ್ಳಲು ಮತ್ತು ಮುಖದ ಇತರೆ ಭಾಗವನ್ನು ಉಜ್ಜಿಕೊಳ್ಳಲು ಸಹ ಬಳಸುತ್ತೇವೆ. ಇದರಿಂದಾಗಿ ಮೊಬೈಲ್ ಸ್ಕ್ರೀನ್ ಅನ್ನು ನಾವು ಈ ಎರಡು ವರ್ಷಗಳಿಂದ ತುಂಬಾನೇ ಸ್ವಚ್ಚವಾಗಿರಿಸಿಕೊಳ್ಳಲು (Clean) ಪ್ರಯತ್ನ ಮಾಡುತ್ತಿರುವುದಂತೂ ಸುಳ್ಳಲ್ಲ.

ಅಷ್ಟೇ ಅಲ್ಲದೆ, ನಿಮ್ಮ ಮೊಬೈಲ್ ಫೋನ್ ನ ಸ್ಕ್ರೀನ್ ಅನ್ನು ನಿಯಯಮಿತವಾಗಿ ಸ್ವಚ್ಛವಾಗಿ ಇರಿಸಿಕೊಳ್ಳದೆ ಹೋದರೆ ಅದು ತುಂಬಾನೇ ಮಬ್ಬಾಗಿ ಕಾಣುತ್ತದೆ ಮತ್ತು ಅದರ ಜೊತೆಗೆ ನಮ್ಮ ಕೈ ಬೆರಳುಗಳ ಗುರುತುಗಳು ಹಾಗೆಯೇ ಪರದೆಯ ಮೇಲೆ ಇದ್ದು, ಅದು ಒಂದು ರೀತಿಯಲ್ಲಿ ಜಿಗುಟಾಗಿ ರೂಪಗೊಳ್ಳುತ್ತದೆ. ಇದೆಲ್ಲವುದರಿಂದ ನಿಮ್ಮ ಫೋನ್ ಒಂದು ಕೀಟಾಣುಗಳ ಫಾರ್ಮ್ ಆಗಿ ಪರಿವರ್ತನೆಯಾಗುತ್ತದೆ.

ವಾಸ್ತವವಾಗಿ, ಅರಿಜೋನಾ ವಿಶ್ವವಿದ್ಯಾಲಯದ ಅಧ್ಯಯನವು ನಿಮ್ಮ ಫೋನ್ ನ ಪರದೆಯ ಮೇಲೆ ಎಷ್ಟು ಕೀಟಾನುಗಳಿರುತ್ತವೆ ಎಂದರೆ ನೀವು ಒಮ್ಮೆ ಶೌಚಾಲಯಕ್ಕೆ ಹೋಗಿ ಬಂದರೆ ನಿಮ್ಮ ಕೈಗೆ ಅಂಟಿಕೊಳ್ಳುವ ಕೀಟಾನುಗಳಷ್ಟೇ ಇರುತ್ತವೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ನಿಮ್ಮ ಮೊಬೈಲ್ ಫೋನ್ ಅನ್ನು ಅವಕಾಶ ಸಿಕ್ಕಾಗಲೆಲ್ಲಾ ಸ್ವಚ್ಚಗೊಳಿಸುತ್ತಿರುವುದು ಒಳ್ಳೆಯದು.

ನಿಮ್ಮ ಫೋನ್ ಪರದೆಯನ್ನು ಸ್ವಚ್ಛಗೊಳಿಸಲು ಇಲ್ಲಿವೆ ನೋಡಿ ನಾಲ್ಕು ವಿಧಾನಗಳು:
ನಿಮ್ಮ ಮೊಬೈಲ್ ಫೋನ್ ನ ಪರದೆಯನ್ನು ಸ್ವಚ್ಛಗೊಳಿಸಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ಕೆಲವು ವಿಧಾನಗಳು ನಿಮ್ಮ ಪರದೆಯನ್ನು ಹೊಳೆಯುವಂತೆ ಮತ್ತು ಹೊಸದಾಗಿ ಕಾಣುವಂತೆ ಮಾಡುತ್ತದೆಯಾದರೂ, ಅವು ನಿಮ್ಮ ಫೋನ್ ನ ಮೇಲ್ಮೈಯಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಿಲ್ಲ.

1. ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಸ್ವಚ್ಛ ಮಾಡಿರಿ
ನೀವು ಜಿಡ್ಡಿನ ಬೆರಳಚ್ಚುಗಳು ಮತ್ತು ಧೂಳನ್ನು ತೊಡೆದು ಹಾಕಲು ನೋಡುತ್ತಿದ್ದರೆ, ಮೈಕ್ರೋಫೈಬರ್ ಬಟ್ಟೆ ನಿಮ್ಮ ಅತ್ಯುತ್ತಮ ಆಯ್ಕೆಯಾಗಿರುತ್ತದೆ. ನಿಮ್ಮ ಫೋನ್ ಗೆ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಅನ್ವಯಿಸುವ ಮೊದಲು ಸಾಮಾನ್ಯ ಕೊಳಕು ಮತ್ತು ಅವಶೇಷಗಳನ್ನು ದೂರವಿರಿಸಲು ನೀವು ಒಣ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬಹುದು. ಅದು ಗ್ರೀಸ್ ಮತ್ತು ಕೊಳೆಯನ್ನು ಹೋಗಲಾಡಿಸಿ ಸ್ವಚ್ಚತೆಯನ್ನು ನೀಡುತ್ತದೆ. ನೀವು ಅದನ್ನು ಸ್ವಲ್ಪ ಭಟ್ಟಿ ಇಳಿಸಿದ ನೀರಿನಿಂದ ಅಥವಾ ಸ್ಕ್ರೀನ್ ಕ್ಲೀನಿಂಗ್ ಉತ್ಪನ್ನದಿಂದ ಒದ್ದೆ ಮಾಡಬೇಕಾಗುತ್ತದೆ.

ಭಟ್ಟಿ ಇಳಿಸಿದ ನೀರು ಕಲ್ಮಶಗಳಿಂದ ಮುಕ್ತವಾಗಿರುತ್ತದೆ ಮತ್ತು ಇದರಿಂದ ನೀವು ಆ ಬಟ್ಟೆಯನ್ನು ಸ್ವಲ್ಪ ಒದ್ದೆ ಮಾಡಿಕೊಂಡು ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುವುದರಿಂದ ಯಾವುದೇ ರೀತಿಯ ಕೊಳಕು ಅದರ ಮೇಲೆ ಉಳಿಯುವುದಿಲ್ಲ.

ಇದನ್ನೂ ಓದಿ: Google Pay ಬಳಕೆದಾರರೇ ಅಲರ್ಟ್, ಹೊಸ ಸೆಟ್ಟಿಂಗ್ ಬಂದಿದ್ದು ಅದನ್ನು ಈ ರೀತಿ ಬಳಸಿ

ನಿಮ್ಮ ಮೊಬೈಲ್ ಫೋನ್ ನ ಸ್ಕ್ರೀನ್ ಅನ್ನು ಶುಚಿಗೊಳಿಸುವಿಕೆಯು ಇನ್ನಷ್ಟು ಪರಿಣಾಮಕಾರಿಯಾಗಿರಲು ನೀವು ನಿಮ್ಮ ಸಾಧನವನ್ನು ನೀರಿನಲ್ಲಿ ಮುಳುಗಿಸುವ ಅಗತ್ಯವಿಲ್ಲ. ಬಟ್ಟೆಯನ್ನು ಸ್ವಲ್ಪ ಒದ್ದೆ ಮಾಡಿ. ನೀವು ಮೈಕ್ರೋಫೈಬರ್ ಬಟ್ಟೆಯನ್ನು ಹೊಂದಿಲ್ಲದಿದ್ದರೆ, ಮೃದುವಾದ ಹತ್ತಿ ಬಟ್ಟೆ ಅತ್ಯುತ್ತಮ ಪರ್ಯಾಯವಾಗಿದೆ.

2. ಸ್ಕ್ರೀನ್ ಕ್ಲೀನಿಂಗ್ ವೈಪ್ ಗಳನ್ನು ಬಳಸಿ
ಮೀಸಲಾದ ಸ್ಕ್ರೀನ್ ಕ್ಲೀನಿಂಗ್ ವೈಪ್ ಗಳು ಮೈಕ್ರೋಫೈಬರ್ ಬಟ್ಟೆ ಮತ್ತು ಡಿಸ್ಟಿಲ್ಡ್ ವಾಟರ್ ನ ಹೆಚ್ಚು ಅನುಕೂಲಕರ ಆವೃತ್ತಿಯಾಗಿದೆ. ಅವು ಆಗಾಗ್ಗೆ ಏಕ-ಬಳಕೆಯ ಸ್ಯಾಶೆಗಳಲ್ಲಿ ಬರುತ್ತವೆ ಮತ್ತು ನಿಮ್ಮ ಸಾಧನಕ್ಕೆ ಸಮಸ್ಯೆಗಳನ್ನು ಉಂಟು ಮಾಡದೆ ನಿಮ್ಮ ಪರದೆಯಿಂದ ಕೊಳೆಯನ್ನು ತೆಗೆದುಹಾಕಲು ಸಂಪೂರ್ಣವಾಗಿ ಸಹಾಯ ಮಾಡುತ್ತವೆ.

ಸ್ಕ್ರೀನ್ ಕ್ಲೀನಿಂಗ್ ವೈಪ್ ಗಳನ್ನು ಬಳಸುವಾಗ, ಮೊದಲು ನಿಮ್ಮ ಫೋನ್ ಸ್ಕ್ರೀನ್ ಅನ್ನು ಧೂಳಿನಿಂದ ಮುಕ್ತಿ ಮಾಡಿ, ಏಕೆಂದರೆ ಗಾಜಿನ ಮೇಲ್ಮೈಯಲ್ಲಿ ಗ್ರಿಟ್ ನ ಯಾವುದೇ ಸಣ್ಣ ಕಣಗಳು ಗೀರುಗಳಿಗೆ ಕಾರಣವಾಗಬಹುದು.

3. ಸೋಂಕು ನಿವಾರಕ ಸ್ಕ್ರೀನ್ ವೈಪ್ ಗಳನ್ನು ಬಳಸಿ
ಮೈಕ್ರೋಫೈಬರ್ ಬಟ್ಟೆ, ಭಟ್ಟಿ ಇಳಿಸಿದ ನೀರು ಪರದೆ ಸ್ವಚ್ಛಗೊಳಿಸುವ ವೈಪ್ ಗಳು ನಿಮ್ಮ ಫೋನ್ ಪರದೆಯಿಂದ ಕೊಳೆಯನ್ನು ಸ್ವಚ್ಛಗೊಳಿಸುತ್ತವೆ, ಆದರೆ ಅವು ಕೀಟಾಣುಗಳು ಅಥವಾ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಿಲ್ಲ. ನಿಮ್ಮ ಫೋನ್ ಪರದೆಯನ್ನು ನೀವು ಸೋಂಕು ರಹಿತಗೊಳಿಸಲು ಬಯಸಿದರೆ, ನೀವು ಸೋಂಕು ನಿವಾರಕ ಸ್ಕ್ರೀನ್ ವೈಪ್ ಗಳು ಅಥವಾ ಸೋಂಕು ರಹಿತ ಸ್ಕ್ರೀನ್ ಕ್ಲೀನರ್ ಅನ್ನು ಹುಡುಕಬೇಕು.

ಗಮನಿಸಬೇಕಾದ ಒಂದು ವಿಷಯವೆಂದರೆ ಹೆಚ್ಚಿನ ಸೋಂಕು ನಿವಾರಕ ಸ್ಕ್ರೀನ್ ಕ್ಲೀನರ್ ಗಳು ಆಲ್ಕೋಹಾಲ್ ಅನ್ನು ಹೊಂದಿರುತ್ತವೆ. ದುರ್ಬಲಗೊಳಿಸಿದ ಆಲ್ಕೋಹಾಲ್ ಅನ್ನು ಮಿತವಾಗಿ ಬಳಸಿದಾಗ ನಿಮ್ಮ ಪರದೆಗೆ ಸುರಕ್ಷಿತವಾಗಿದ್ದರೂ, ಅದನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಪರದೆಯ ಓಲಿಯೋಫೋಬಿಕ್ ಲೇಪನವನ್ನು ಹಾನಿಗೊಳಿಸಬಹುದು. ಈ ಕಾರಣಕ್ಕಾಗಿ, ನಿಮ್ಮ ಫೋನ್ ಪರದೆಯನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ಸ್ಕ್ರೀನ್ ವೈಪ್ ಗಳನ್ನು ಅವಲಂಬಿಸುವ ಬದಲು ನೀವು ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು ಉತ್ತಮ.

4. ಯುವಿ ಫೋನ್ ಸ್ಯಾನಿಟೈಸರ್ ಖರೀದಿಸಿ
ಅಂತಿಮವಾಗಿ, ನಿಮ್ಮ ಮೊಬೈಲ್ ಫೋನ್ ನ ಪರದೆಯನ್ನು ಸಾಧ್ಯವಾದಷ್ಟು ಸ್ವಚ್ಚವಾಗಿರಿಸಿಕೊಳ್ಳಲು ನೀವು ಬದ್ಧರಾಗಿದ್ದರೆ, ನೀವು ಯುವಿ ಫೋನ್ ಸ್ಯಾನಿಟೈಸರ್ ಗಳನ್ನು ನೋಡಬೇಕು. ನೇರಳಾತೀತ ಸ್ಯಾನಿಟೈಜರ್ ಗಳು ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸಲು ಯುವಿ-ಸಿ ಬೆಳಕನ್ನು ಬಳಸುತ್ತವೆ ಮತ್ತು ನಿಮ್ಮ ಫೋನ್ ನಲ್ಲಿರುವ 99 ಪ್ರತಿಶತದಷ್ಟು ಕೀಟಾಣುಗಳನ್ನು ಕೊಲ್ಲುತ್ತವೆ ಎಂದು ಸಾಬೀತಾಗಿದೆ.

ಇದನ್ನೂ ಓದಿ: Gadget: ಬೇಸಿಗೆಯಲ್ಲಿ ನಿಮ್ಮ ಗ್ಯಾಜೆಟ್‌ಗಳನ್ನು ಹೇಗೆ ಕಾಪಾಡಿಕೊಳ್ಳುವುದು? ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್

ನಿಮ್ಮ ಸ್ವಂತ ಫೋನ್ ಸ್ಕ್ರೀನ್ ಕ್ಲೀನಿಂಗ್ ದ್ರಾವಣವನ್ನು ಹೇಗೆ ತಯಾರಿಸುವುದು


  • ಮಾರುಕಟ್ಟೆಯಲ್ಲಿ ಫೋನ್ ಸ್ಕ್ರೀನ್ ಕ್ಲೀನರ್ ಗಳ ಕೊರತೆ ಇಲ್ಲದಿದ್ದರೂ, ಮನೆಯಲ್ಲಿಯೇ ನೀವು ಸ್ವಂತವಾಗಿ ಇದನ್ನು ತಯಾರಿಸಿಕೊಳ್ಳಬಹುದು.

  • ಸರಳವಾದ ಫೋನ್ ಸ್ಕ್ರೀನ್ ಕ್ಲೀನರ್ ತಯಾರಿಸುವುದು ಭಟ್ಟಿ ಇಳಿಸಿದ ನೀರು ಮತ್ತು ಬಿಳಿ ವಿನೆಗರ್ ನ ದುರ್ಬಲ ದ್ರಾವಣವನ್ನು ತಯಾರಿಸುವಷ್ಟೇ ಸುಲಭ. ನೀವು ವಿನೆಗರ್ ಅನ್ನು 70 ಪ್ರತಿಶತ ಐಸೋಪ್ರೊಪೈಲ್ ಆಲ್ಕೋಹಾಲ್ ಗೆ ಬದಲಿಯಾಗಿ ಬಳಸಬಹುದು.

  • ಮನೆಯಲ್ಲಿ ನಿಮ್ಮದೇ ಆದ ಫೋನ್ ಸ್ಕ್ರೀನ್ ಕ್ಲೀನರ್ ಮಾಡಲು, ನೀವು ಮಾಡಬೇಕಾಗಿರುವುದು ಭಟ್ಟಿ ಇಳಿಸಿದ ನೀರು ಮತ್ತು ವಿನೆಗರ್ ಅನ್ನು 50:50 ಅನುಪಾತದಲ್ಲಿ ಮಿಶ್ರಣ ಮಾಡುವುದು. ಇದನ್ನು ಸ್ಪ್ರೇ ಬಾಟಲಿಗೆ ಸೇರಿಸಿ ಮತ್ತು ನಿಮ್ಮ ವಿನೆಗರ್ ಅಥವಾ ಐಸೋಪ್ರೊಪೈಲ್ ಆಲ್ಕೋಹಾಲ್ ಅನ್ನು ದುರ್ಬಲಗೊಳಿಸಲು ನೆನಪಿಟ್ಟುಕೊಳ್ಳುವುದು ನಿರ್ಣಾಯಕವಾಗಿದೆ, ಇಲ್ಲದಿದ್ದರೆ, ನೀವು ನಿಮ್ಮ ಫೋನ್ ಪರದೆಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಹುದು.

  • ನಿಮ್ಮ ಫೋನ್ ಅನ್ನು ಸ್ವಚ್ಛಗೊಳಿಸುವಾಗ ಯಾವೆಲ್ಲಾ ಅಂಶಗಳ ಮೇಲೆ ಗಮನ ಇಡಬೇಕು?


ನಿಮ್ಮ ಫೋನ್ ಅನ್ನು ಸ್ವಚ್ಛಗೊಳಿಸುವಾಗ ಏನು ಮಾಡಬಾರದು ಎಂದು ಕೆಲವು ಅಂಶಗಳನ್ನು ಇಲ್ಲಿ ನಿಮಗಾಗಿ ಪಟ್ಟಿ ಮಾಡಿದ್ದೇವೆ ನೋಡಿ.

  1. ಮೊಬೈಲ್ ಸ್ಕ್ರೀನ್ ಸ್ವಚ್ಛಗೊಳಿಸುವುದಕ್ಕೆ ಮನೆಯಲ್ಲಿರುವ ವಿಂಡೋ ಕ್ಲೀನರ್ ಗಳು

  2. ಅಥವಾ ಮನೆಯ ಗಾಜಿನ ಕ್ಲೀನರ್ ಗಳನ್ನು ಬಳಸಬೇಡಿ.

  3. ಸ್ಕ್ರೀನ್ ಸ್ವಚ್ಛಗೊಳಿಸುವುದಕ್ಕೆ ಅಸಿಟೋನ್ ನಂತಹ ಕಠಿಣ ದ್ರಾವಕಗಳನ್ನು ಬಳಸಬೇಡಿ

  4. ಸ್ಕ್ರೀನ್ ಅನ್ನು ಡಿಶ್ ಸೋಪ್ ಹಚ್ಚಿ ಸ್ವಚ್ಛಗೊಳಿಸಬೇಡಿ.

  5. ಬ್ಲೀಚ್ ಅನ್ನು ಸಹ ಎಂದಿಗೂ ಬಳಸಬೇಡಿ.

  6. ಅಬ್ರೇಸಿವ್ ಪೌಡರ್ ಬಳಸಬೇಡಿ.

  7. ನಿಮ್ಮ ಫೋನ್ ಪರದೆಯ ಮೇಲೆ ತುಂಬಾ ಜೋರಾಗಿ ಒತ್ತಬೇಡಿ; ಸೌಮ್ಯವಾದ ಒತ್ತಡ ಸಾಕು.

  8. ನಿಮ್ಮ ಫೋನ್ ಪರದೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.

  9. ನಿಮ್ಮ ಫೋನ್ ಅನ್ನು ಸ್ವಚ್ಛಗೊಳಿಸುವ ದ್ರವದಲ್ಲಿ ಮುಳುಗಿಸಬೇಡಿ ಎಂದರೆ ಹೆಚ್ಚು ದ್ರವವನ್ನು ಪೋನ್ ಸ್ಕ್ರೀನ್ ನ ಮೇಲೆ ಹಾಕಿ ಸ್ವಚ್ಛ ಮಾಡಬೇಡಿ.

  10. ಮೂಲತಃ, ನಿಮ್ಮ ಫೋನ್ ಸ್ಕ್ರೀನ್ ಅನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.

  11. ಹೆಚ್ಚಿನ ಜನರು ಪ್ರತಿದಿನ 50ಕ್ಕೂ ಹೆಚ್ಚು ಬಾರಿ ತಮ್ಮ ಫೋನ್ ಗಳನ್ನು ಪರಿಶೀಲಿಸುತ್ತಾರೆ.

  12. ನಿಮ್ಮ ಫೋನ್ ನ ಶುಚಿತ್ವದ ಬಗ್ಗೆ ನೀವು ಚಿಂತಿತರಾಗಿದ್ದರೆ, ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವುದು, ಯುವಿ ಫೋನ್ ಸ್ಯಾನಿಟೈಸರ್ ಅನ್ನು ಖರೀದಿಸಿ ಮತ್ತು ಅದನ್ನು ಬಳಸಿರಿ.

  13. ನಿಮ್ಮ ಫೋನ್ ಅನ್ನು ನಿಮ್ಮೊಂದಿಗೆ ಬಾತ್ ರೂಮ್ ಗೆ ಕೊಂಡೊಯ್ಯುವುದನ್ನು ಮೊದಲು ನಿಲ್ಲಿಸಿರಿ.

Published by:Ashwini Prabhu
First published: