ಸ್ಮಾರ್ಟ್ಫೋನ್ಗಳು (Smartphone) ಎಷ್ಟು ಅಗತ್ಯ ಸಾಧನವಾಗಿದೆ ಎಂದರೆ, ಈಗ ಮನೆಯಲ್ಲಿಯೇ ಇದ್ದು ಲಕ್ಷಗಟ್ಟಲೆ ಹಣ ಸಂಪಾದನೆ ಮೊಬೈಲ್ ಮೂಲಕವೇ ಮಾಡ್ಬಹುದು. ಆದರೆ ಅದಕ್ಕೆ ಕೆಲವೊಂದು ಟಿಪ್ಸ್ಗಳು (Tech Tips) ಇವೆ. ಅದನ್ನು ಫಾಲೋ ಮಾಡಿದ್ರೆ ತಿಂಗಳಿಗೆ ಲಕ್ಷಗಟ್ಟಲೆ ದುಡಿಬಹುದು. ಹೆಚ್ಚಿನ ಜನರು ಬೇರೆ ಊರಿಗೆ ಹೋಗದೆ ಮನೆಯಲ್ಲಿಯೇ ಕೆಲಸ ಮಾಡ್ಬೇಕು ಅಂದುಕೊಳ್ತಾರೆ. ಆದರೆ ಕೆಲವೊಂದು ಬಾರಿ ಕೆಲಸವೇ ಸಿಗಲ್ಲ. ಆದರೆ ಇಂದಿನ ದಿನದಲ್ಲಿ ಮನೆಯಲ್ಲೇ ಕುಳಿತು ದುಡಿಯಲು ಹಲವಾರು ಮಾರ್ಗಗಳಿವೆ. ಹಾಗಿದ್ರೆ ಆನ್ಲೈನ್ (Online Job) ಮೂಲಕ ದುಡಿಯೋದು ಹೇಗೆ ಎಂದು ಇಲ್ಲಿ ಕೆಲವೊಂದು ಟಿಪ್ಸ್ಗಳನ್ನು ನೀಡಿದ್ದೇವೆ.
ಮನೆಯಲ್ಲೇ ಕುಳಿತು ದುಡಿಬೇಕು ಅನ್ನೋರಿಗೆ ಇಂದಿನ ಟೆಕ್ನಾಲಜಿ ಯುಗದಲ್ಲಿ ಹಲವಾರು ವೇದಿಕೆಗಳಿವೆ. ಆದರೆ ಅದನ್ನು ಸರಿಯಾಗಿ ಉಪಯೋಗಿಸಿದ್ರೆ ಮಾತ್ರ ಹಣ ಸಂಪಾದನೆ ಮಾಡಲು ಸಾಧ್ಯ. ಹಾಗಿದ್ರೆ ಆನ್ಲೈನ್ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡಲಿರುವ ಉದ್ಯೋಗದ ವೇದಿಕೆಗಳು ಯಾವುದು ಎಂದು ಲೇಖನದಲ್ಲಿ ಓದಿ.
ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಸ್ ಹೆಚ್ಚಿರಬೇಕು
ಹೆಚ್ಚಿನ ಜನರು ಇನ್ಸ್ಟಾಗ್ರಾಮ್ ಅನ್ನು ಟೈಮ್ ಪಾಸ್ಗಾಗಿ ಬಳಕೆ ಮಾಡ್ತಾರೆ. ಆದರೆ ಇದರಿಂದಲೂ ಹಣ ಸಂಪಾದನೆ ಮಾಡ್ಬಹುದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೌದುನ, ಇನ್ಸ್ಟಾಗ್ರಾಮ್ನಲ್ಲೂ ಹಣ ಸಂಪಾದನೆ ಮಾಡ್ಬಹುದು ಎಂದರೆ ನಂಬಲೇ ಬೇಕಾದ ವಿಚಾರ. ಆದರೆ ಮುಖ್ಯವಾಗಿ ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿರಬೇಕು.
ಇದನ್ನೂ ಓದಿ: ಈ ಸ್ಮಾರ್ಟ್ಫೋನ್ ಒಮ್ಮೆ ಚಾರ್ಜ್ ಆದ್ರೆ ಸಾಕು 100 ದಿನ ಯೂಸ್ ಮಾಡ್ಬಹುದು! 21000mAh ಬ್ಯಾಟರಿ ಬ್ಯಾಕಪ್
ಎಷ್ಟೋ ಜನರು ಇನ್ಸ್ಟಾದಲ್ಲಿ ಪೋಸ್ಟ್, ರೀಲ್ಸ್ ಶೇರ್ ಮಾಡುವ ಮೂಲಕ ಸೆಲೆಬ್ರಿಟಿಗಳಾಗಿಬಿಟ್ಟಿದ್ದಾರೆ. ಅದೇ ರೀತಿ ಹಣನೂ ಗಳಿಸ್ತಾ ಇದ್ದಾರೆ. ಈ ರೀತಿಯಾಗಿ ಇನ್ಸ್ಟಾಗ್ರಾಮ್ನಲ್ಲಿ ಜನಪ್ರಿಯತೆಯನ್ನು ಪಡೆದವರು ತಿಂಗಳಿಗೆ 5 ರಿಂದ 15 ಸಾವಿರದವರೆಗೆ ಹಣ ಸಂಪಾದನೆ ಮಾಡ್ಬಹುದು. ಆದರೆ ಸ್ಪಾನ್ಸರ್ ಪೋಸ್ಟ್ ಮೂಲಕ ಹಣ ಗಳಿಸಬಹುದು.
ಫೋಟೋಗ್ರಫಿ ಮೂಲಕ ಹಣ ಸಂಪಾದನೆ ಮಾಡಿ
ಇಂದಿನ ದಿನಗಳಲ್ಲಿ ಫೋಟೋಗ್ರಫಿ ಮಾಡುವುದೇ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಇನ್ನು ಸ್ಮಾರ್ಟ್ಫೋನ್ಗಳ ಬಗ್ಗೆ ಹೇಳುವ ಹಾಗೆನೇ ಇಲ್ಲ. ಇತ್ತೀಚಿನ ಸ್ಮಾರ್ಟ್ಫೋನ್ಗಳು ಡಿಎಸ್ಎಲ್ಆರ್ನಂತೆಯೇ ಕ್ಯಾಮೆರಾ ಫೀಚರ್ಸ್ಗಳನ್ನು ಹೊಂದಿದೆ. ಕೆಲವರು ಡಿಎಸ್ಎಲ್ಆರ್ ಮೂಲಕವೇ ಫೋಟೋಶೂಟ್ ಮಾಡುತ್ತಾರೆ. ಅನೇಕರು ಮೊಬೈಲ್ ಮೂಲಕ ಜನಪ್ರಿಯತೆಯನ್ನು ಪಡೆದರೆ, ಇನ್ನು ಕೆಲವರು ಡಿಎಸ್ಎಲ್ಆರ್ ಕ್ಯಾಮೆರಾದಲ್ಲಿ ಫೋಟೋಗ್ರಫಿ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದಿದ್ದಾರೆ.
ಆದರೆ ಉತ್ತಮ ಫೋಟೋಗ್ರಫಿ ಕೌಶಲ್ಯ ಹೊಂದಿರುವವರು ಈಗ ಕೇವಲ ಫೋಟೋಶೂಟ್ ಮಾಡುವ ಮೂಲಕವೂ ಹಣ ಸಂಪಾದನೆ ಮಾಡ್ಬಹುದು. ನೀವು ಪ್ರಕೃತಿ, ಪ್ರಾಣಿಗಳು ಮತ್ತು ನಿಮ್ಮ ಸುತ್ತಲಿನ ವಸ್ತುಗಳ ಸೃಜನಶೀಲ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಇದಕ್ಕಾಗಿ, Imagesbazaar.com, Shutterstock.com, Gettyimages.com ಮತ್ತು Stock.adobe.com ನಂತಹ ಸ್ಟಾಕ್ ಫೋಟೋಗ್ರಫಿ ತಾಣಗಳಲ್ಲಿ ಫೋಟೋಗಳಿಗೆ ಪರವಾನಗಿ ನೀಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು.
ಬ್ಲಾಗ್ ಮೂಲಕ ಹಣ ಸಂಪಾದಿಸಿ
ಆನ್ಲೈನ್ ಹಣ ಸಂಪಾದನೆ ಮಾಡಲು ಉತ್ತಮ ವೇದಿಕೆಯೆಂದರೆ ಅದು ಸ್ವಂತ ಬ್ಲಾಗ್ ಬರೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದು. ಆದರೆ ಇದನ್ನು ಪ್ರಾರಂಭಿಸಲು ಯಾವುದೇ ಖರ್ಚು ವೆಚ್ಚಗಳಾಗುವುದಿಲ್ಲ. ಕೇವಲ ಬರವಣಿಗೆಯ ಕೌಶಲ್ಯ ಇದ್ದರೆ ಸಾಕು. ಇನ್ನು ನೀವು ಬರೆಯುವಂತಹ ಬ್ಲಾಗ್ ಯಾವಾಗಲು ಹೆಚ್ಚಿನ ಜನರು ಓದುವಂತೆ ಇರಬೇಕು. ಇದರಿಂದ ನೀವು ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ನಿಮ್ಮ ಅಕೌಂಟ್ಗೆ ಎಷ್ಟು ಜನ ಬೇಟಿ ನೀಡುತ್ತಾರೆ, ನಿಮ್ಮ ಲೇಖನವನ್ನು ಎಷ್ಟು ಜನರು ಓದುತ್ತಾರೆ ಎಂಬುದನ್ನು ನೋಡಿಕೊಂಡು ನಿಮಗೆ ಆದಾಯ ಬರುತ್ತದೆ.
ಯೂಟ್ಯೂಬ್
ಹಣ ಸಂಪಾದಿಸಲಿರುವ ಬಹಳ ಜನಪ್ರಿಯ ವೇದಿಕೆಯೆಂದರೆ ಅದು ಯೂಟ್ಯೂಬ್. ಕೇವಲ ಒಮದು ಚಾನೆಲ್ ಕ್ರಿಯೇಟ್ ಮಾಡುವ ಮೂಲಕ ಸಾವಿರದಿಂದ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು. ಆದರೆ ಮುಖ್ಯವಾಗಿ ಇದರಲ್ಲಿ ನಾವು ಶೇರ್ ಮಾಡುವಂತಹ ಕಂಟೆಂಟ್ ಉತ್ತಮವಾಗಿರಬೇಕು. ಇದರಿಂದ ನಮ್ಮ ಸಬ್ಸ್ಕ್ರೈಬರ್, ವೀವರ್ಸ್ಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರ ಲೆಕ್ಕಾಚಾರದ ಮೇಲೆ ನಿಮಗೆ ಯೂಟ್ಯೂಬ್ ಹಣ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ