ಒನ್ಪ್ಲಸ್ ಕಂಪನಿ (OnePlus Company) ಎಂದಾಗ ಮೊದಲು ನೆನಪಾಗೋದೇ ಈ ಕಂಪನಿಯ ಪ್ರೀಮಿಯಂ ಸ್ಮಾರ್ಟ್ಫೋನ್ಗಳು. ಈ ಕಂಪನಿ ಉತ್ತಮ ಗುಣಮಟ್ಟದ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಎಲ್ಲರ ಗಮನಸೆಳೆದಿತ್ತು. ಇದೀಗ ಹೊಸ ವರ್ಷದಲ್ಲಿ ಕಂಪನಿಯ ಬ್ರಾಂಡ್ನ ಅಡಿಯಲ್ಲಿ ಒನ್ಪ್ಲಸ್ 11 ಸ್ಮಾರ್ಟ್ಫೋನ್ (OnePlus 11 Smartphone) ಅನ್ನು ಬಿಡುಗಡೆ ಮಾಡುವ ಮೂಲಕ ಮಾರಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೀಗ ತನ್ನ ಗ್ರಾಹಕರಿಗಾಗಿ ಕಂಪನಿ ಮತ್ತೊಂದು ಗುಡ್ನ್ಯೂಸ್ ನೀಡಿದೆ. ಇದೀಗ ಒನ್ಪ್ಲಸ್ ಕಂಪನಿ ಹೊಸ ಇಯರ್ಬಡ್ಸ್ (OnePlus Earbuds) ಅನ್ನು ಮಾರುಕಟ್ಟೆಗೆ ಅನಾವರಣ ಮಾಡಿದೆ. ಒನ್ಪ್ಲಸ್ ಈ ಹಿಂದೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಮಾತ್ರ ಬಿಡುಗಡೆ ಮಾಡುವ ಮೂಲಕ ಜನಪ್ರಿಯವಾಗಿತ್ತು. ಆದರೆ ಇದೀಗ ಒನ್ಪ್ಲಸ್ನಿಂದ ಸ್ಮಾರ್ಟ್ ಟಿವಿ, ಮ್ಯೂಸಿಕ್ ಗ್ಯಾಜೆಟ್ಗಳು, ಲ್ಯಾಪ್ಟಾಪ್ ಈ ರೀತಿಯ ಹಲವಾರು ಸಾಧನಗಳು ಬಿಡುಗಡೆಯಾಗುತ್ತಿದೆ.
ಹೌದು, ಒನ್ಪ್ಲಸ್ ಕಂಪನಿ 2023ರಲ್ಲಿ ಹೊಸ ಇಯರ್ಬಡ್ಸ್ ಅನ್ನು ಅನಾವರಣ ಮಾಡಿದೆ. ಇದಕ್ಕೆ ಒನ್ಪ್ಲಸ್ ಬಡ್ಸ್ ಪ್ರೋ 2 ಎಂದು ಹೆಸರಿಡಲಾಗಿದೆ. ಈ ಇಯರ್ಬಡ್ಸ್ ಈ ವರ್ಷದ ಕಂಪನಿಯ ಮೊದಲನೆಯದ್ದಾಗಿದ್ದು, ಇದು ಬಹಳಷ್ಟ ಫೀಚರ್ಸ್ನೊಂದಿಗೆ, ಗ್ರಾಹಕರಿಕೆ ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಒನ್ಪ್ಲಸ್ ಬಡ್ಸ್ ಪ್ರೋ 2 ಫೀಚರ್ಸ್
ಒನ್ಪ್ಲಸ್ ಬಡ್ಸ್ ಪ್ರೊ 2 ಇಯರ್ಬಡ್ಸ್ ಡಾಲ್ಬಿ ಅಟ್ಮಾಸ್ ಆಡಿಯೋ ಬೆಂಬಲ ಹಾಗೂ ಡೈನಾಡಿಯೊ ಟ್ಯೂನಿಂಗ್ ಫೀಚರ್ಸ್ ಅನ್ನು ಅಳವಡಿಸಲಾಗಿದೆ. ಈ ಇಯರ್ಬಡ್ಗಳು 11 ಎಂಎಂ ಡೈನಾಮಿಕ್ ಡ್ರೈವರ್ ಮತ್ತು 6 ಎಂಎಂ ಪ್ಲ್ಯಾನರ್ ಡಯಾಫ್ರಾಮ್ನೊಂದಿಗೆ ಬಿಡುಗಡೆಯಾಗಿದೆ.
ಇದನ್ನೂ ಓದಿ: ಒನ್ಪ್ಲಸ್ ಕಂಪನಿಯ ಹೊಸ ಮೊಬೈಲ್ ಅನಾವರಣ! 100W ಚಾರ್ಜಿಂಗ್ ಸ್ಪೀಡ್
ಹಾಗೆಯೇ ಈ ಒನ್ಪ್ಲಸ್ ಬಡ್ಸ್ ಪ್ರೋ 2, ವಾಲ್ಯೂಮ್, ಟ್ರ್ಯಾಕ್ ಚೇಂಜರ್ ಮತ್ತು ಕಾಲ್ ಬಂದಾಗ ಸ್ವೀಕರಿಸುವ ಮತ್ತು ಕಟ್ ಮಾಡುವಂತಹ ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಈ ಇಯರ್ ಬಡ್ಸ್ ಬ್ಲೂಟೂತ್ ವರ್ಷನ್ 5.3 ನ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದೆ. ಜೊತೆಗೆ ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
![]()
ಒನ್ಪ್ಲಸ್ ಬಡ್ಸ್ ಪ್ರೋ 2
ವಾಟರ್ಪ್ರೂಫ್ ಇಯರ್ಬಡ್ಸ್
ಇದರೊಂದಿಗೆ ಈ ಹೊಸ ಇಯರ್ಬಡ್ಸ್ IPX4 ರೇಟಿಂಗ್ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿದೆ. ಇಯರ್ಬಡ್ಗಳು ಡ್ಯುಯಲ್ ಕನೆಕ್ಷನ್ ಫೀಚರ್ಸ್ ಅನ್ನು ಹೊಂದಿದೆ. ಇನ್ನು ವಿವಿಧ ಡಿವೈಸ್ಗಳೊಂದಿಗೆ ವೇಗದಲ್ಲಿ ಕನೆಕ್ಟ್ ಆಗುತ್ತದೆ.
ಆರೋಗ್ಯದ ಕಾಳಜಿ
ಒನ್ಪ್ಲಸ್ ಬಡ್ಸ್ ಪ್ರೋ 2 ವಿಶೇಷವಾಗಿ ಸರ್ವಿಕಲ್ ಸ್ಪಿನ್ ಆರೋಗ್ಯ ಸಂಬಂಧಿ ಮೇಲ್ವಿಚಾರಣೆ ಮಾಡಲಿದ್ದು, ಈ ಮೂಲಕ ನಿಮ್ಮ ಭಂಗಿಯನ್ನು ಇದು ಪರಿಶೀಲಿಸುತ್ತದೆ. ಈ ಸೌಲಭ್ಯ ನಿಮಗೆ ಬೇಕು ಎಂದರೆ ಕಲರ್ ಓಎಸ್ 11.0 ಚಾಲಿತ ಸ್ಮಾರ್ಟ್ಫೋನ್ ಅನ್ನು ಬಳಕೆ ಮಾಡಿಕೊಂಡು ಈ ಇಯರ್ಬಡ್ಸ್ ಅನ್ನು ಬಳಸಬೇಕು. ಇದರಿಂದ ನಿಮ್ಮ ಆರೋಗ್ಯದ ಮಾಹಿತಿಯನ್ನು ತಿಳಿಯಬಹುದಾಗಿದೆ.
![]()
ಒನ್ಪ್ಲಸ್ ಬಡ್ಸ್ ಪ್ರೋ 2
ಬ್ಯಾಟರಿ ಫೀಚರ್ಸ್ ಹೇಗಿದೆ?
ಒನ್ಪ್ಲಸ್ ಬಡ್ಸ್ ಪ್ರೋ 2 ಇಯರ್ಬಡ್ಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 39 ಗಂಟೆಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಇನ್ನು ಇದರಲ್ಲಿ ಚಾರ್ಜಿಂಗ್ ಕೇಸ್ ಅನ್ನು ನೀಡಲಾಗಿದ್ದು, ವಾಯರ್ಲೆಸ್ ಚಾರ್ಜಿಂಗ್ ಸಾಮರ್ಥ್ಯವನ್ನು ಇದು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಒನ್ಪ್ಲಸ್ ಬಡ್ಸ್ ಪ್ರೋ 2 ಇಯರ್ಬಡ್ಸ್ಗೆ 2 899 ಯುವಾನ್ ಅಂದರೆ ಭಾರತದಲ್ಲಿ 10,821 ರೂಪಾಯಿಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಗ್ರಾಹಕರು ಈ ಇಯರ್ಬಡ್ಗಳನ್ನು ಅಬ್ಸಿಡಿಯನ್ ಬ್ಲಾಕ್ ಮತ್ತು ಆರ್ಬರ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಈ ಡಿವೈಸ್ ಜನವರಿ 9 ರಿಂದ ಚೀನಾದಲ್ಲಿ ಮಾರಾಟ ಪ್ರಾರಂಭಿಸುತ್ತದೆ. ಹಾಗೆಯೇ ಒನ್ಪ್ಲಸ್ 11 ಸ್ಮಾರ್ಟ್ಫೋನ್ನೊಂದಿಗೆ ಫೆಬ್ರವರಿ 7 ರಂದು ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ಕಂಪನಿ ಹೇಳಿದೆ.