ಇನ್ನು ಆನ್​ಲೈನ್​ ಶಾಪಿಂಗ್​ನಲ್ಲಿ ಕ್ವಿಕ್​ ಡೆಲಿವರಿ ಸಿಗಲ್ಲ!

ಈ ನೀತಿಯ ಪ್ರಭಾವ ಆನ್​ಲೈನ್​ ದಿಗ್ಗಜ ಅಮೇಜಾನ್​ ಸಂಸ್ಥೆ ಮೇಲೆ ಬೀರಿದೆ. ಈ ನೀತಿಯಿಂದಾಗಿ ಕೆಲ ಮೊಬೈಲ್​, ಎಲೆಕ್ಟ್ರಾನಿಕ್​ ವಸ್ತುಗಳು ಸೇರಿ ಸಾಕಷ್ಟು ಐಟಂ​ಗಳ ಮಾರಾಟವನ್ನು ನಿಲ್ಲಿಸಿದೆ.

Rajesh Duggumane | news18
Updated:February 2, 2019, 2:25 PM IST
ಇನ್ನು ಆನ್​ಲೈನ್​ ಶಾಪಿಂಗ್​ನಲ್ಲಿ ಕ್ವಿಕ್​ ಡೆಲಿವರಿ ಸಿಗಲ್ಲ!
ಸಾಂದರ್ಭಿಕ ಚಿತ್ರ
Rajesh Duggumane | news18
Updated: February 2, 2019, 2:25 PM IST
ನಿಮ್ಮ ಆತ್ಮೀಯರೊಬ್ಬರಿಗೆ ಉಡುಗೊರೆ ನೀಡಬೇಕು. ಮಾರುಕಟ್ಟೆಯ ಮೊರೆಹೋದರೆ, ಅಲ್ಲಿ ವಸ್ತುಗಳ ಬೆಲೆ ತುಂಬಾನೇ ದುಬಾರಿ. ಆನ್​ಲೈನ್​ ಶಾಪಿಂಗ್​ ಮೊರೆಹೋದರೆ, ನಮಗೆ ಅಗತ್ಯವಿರುವ ವಸ್ತುಗಳು ಮನೆ ಬಾಗಿಲಿಗೆ ಬರುತ್ತವೆ. ಅದರಲ್ಲೂ ಕ್ವಿಕ್​ ಡೆಲಿವರಿ ಆಯ್ಕೆ ಮಾಡಿಕೊಂಡರೆ ಒಂದೇ ದಿನಕ್ಕೆ ವಸ್ತು ನಿಮ್ಮ ಕೈ ಸೇರುತ್ತದೆ. ಆದರೆ ಇನ್ನುಮುಂದೆ ಇದು ಸಾಧ್ಯವಾಗದು! ಸರ್ಕಾರ ಹೊಸ ನೀತಿ ತಂದಿದ್ದು, ಇನ್ನುಮುಂದೆ ವಸ್ತುಗಳು ಡೆಲಿವರಿ ಆಗಲು 4-7 ದಿನ ಕಾಯಲೇಬೇಕು.

ಶುಕ್ರವಾರದಿಂದ ಇ-ಕಾಮರ್ಸ್​​ನಲ್ಲಿ ಹೊಸ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೆ ಬಂದಿದೆ. ಇದರನ್ವಯ ಕ್ವಿಕ್​ ಡೆಲಿವರಿ ಆಯ್ಕೆ ಸಿಗುವುದಿಲ್ಲ. ಇದು ಆನ್​ಲೈನ್​ ವಸ್ತುಗಳ ಮಾರಾಟ ತಾಣಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ. ಈ ನೀತಿಯ ಪರಿಣಾಮ ಆನ್​ಲೈನ್​ ದಿಗ್ಗಜ ಅಮೇಜಾನ್​ ಸಂಸ್ಥೆ ಮೇಲೆ ಬೀರಿದೆ. ಈ ನೀತಿಯಿಂದಾಗಿ ಕೆಲ ಮೊಬೈಲ್​, ಎಲೆಕ್ಟ್ರಾನಿಕ್​ ವಸ್ತುಗಳು ಸೇರಿ ಸಾಕಷ್ಟು ಐಟಂಗಳ ಮಾರಾಟವನ್ನು ನಿಲ್ಲಿಸಿದೆ.

ಇದನ್ನೂ ಓದಿ: ಮುಂದಿನ ತಿಂಗಳಿಂದ ವಿಮಾನದಲ್ಲಿ ಮೊಬೈಲ್, ಇಂಟರ್​ನೆಟ್ ಬಳಕೆಗೆ ಅನುಮತಿ

ಈ ನೀತಿಯಿಂದಾಗಿ ಡೆಲಿವರಿಗೆ ಹೆಚ್ಚಿನ ಶುಲ್ಕ ಪಡೆಯಲು ಸಂಸ್ಥೆಗಳು ಮುಂದಾಗಿವೆ. ಇದು ಗ್ರಾಹಕರ ಜೇಬಿಗೆ ಭಾರವಾಗಿ ಪರಿಣಮಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೇಜಾನ್​ ಸಂಸ್ಥೆ, “ಈ ನೀತಿಯಿಂದಾಗಿ ಭಾರತೀಯ ಗ್ರಾಹಕರು ಹಾಗೂ ಮಾರಾಟಗಾರರ ಮೇಲೆ ಪ್ರಭಾವ ಉಂಟಾಗಲಿದೆ. ಆದಾಗ್ಯೂ ಕಡಿಮೆ ದರದಲ್ಲಿ ವಸ್ತುಗಳನ್ನು ನೀಡಲು ಸಂಸ್ಥೆ ಬದ್ಧವಾಗಿದೆ” ಎಂದು ಸಂಸ್ಥೆ ಹೇಳಿದೆ.

ಆನ್‌ಲೈನ್ ವಹಿವಾಟಿಗೆ ಕಡಿವಾಣ ಹಾಕೋ ಮೋದಿ ಸರ್ಕಾರದ ಕ್ರಮ ಒಂದು ರೀತಿಯಲ್ಲಿ ಒಳ್ಳೆಯದು ಎನ್ನುವ ಮಾತಿದೆ. ಇದರಿಂದ ಮಧ್ಯಮ ಗಾತ್ರದ ಉದ್ಯಮ ಮಾಡುವವರಿಗೆ ಆನ್‌ಲೈನ್ ವಹಿವಾಟಿನಿಂದ ಸಾಕಷ್ಟು ಹೊಡೆತ ಬಿದ್ದಿತ್ತು. ಈಗ ಅವರು ಸ್ವಲ್ಪ ನಿರಾಳ ಆಗಬಹುದು. ಅಲ್ಲದೆ, ಇನ್ಮುಂದೆ ಆನ್‌ಲೈನ್ ವಹಿವಾಟು ಸೊರಗಲೂಬಹುದು.

ಇದನ್ನೂ ಓದಿ: ನೋಕಿಯಾ 8.1 ಸ್ಮಾರ್ಟ್​ಫೋನ್​​ ಮಾರುಕಟ್ಟೆಗೆ; ಬುಕ್ಕಿಂಗ್​ ಪಕ್ರೀಯೆ ಪ್ರಾರಂಭ

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ