PubG: ಪಬ್​ಜಿ ಬ್ಯಾನ್​ ವಿಚಾರ; ಫೇವರಿಟ್​ ಗೇಮ್​ ಇಲ್ಲದೆ ಯುವಜನತೆಗೆ ಕಾಡುತ್ತಿದೆ ಖಿನ್ನತೆ!

ನಮ್ಮ ದೇಶದಲ್ಲಿ 1.5 ಕೋಟಿ ಗೂ ಅಧಿಕ ಜನರು ಈ ಪಬ್ಜಿ ಗೇಮ್ ಆಡುತ್ತಿದ್ದರು.  ಕೂತ್ರೂ, ನಿಂತ್ರು ಈ ಗೇಮ್ ನಲ್ಲೇ ಮುಳುಗಿ ಹೋಗಿದ್ದರು. ಆದರೆ, ಈ ಗೇಮ್ ಬ್ಯಾನ್ ಮಾಡಿದ್ದರಿಂದ ಕೆಲ ಯುವಕರು ಮಾನಸಿಕವಾಗಿ ಹುಚ್ಚರಂತೆ ವರ್ತಿಸುತ್ತಿದ್ದಾರೆ.

news18-kannada
Updated:September 8, 2020, 11:02 AM IST
PubG: ಪಬ್​ಜಿ ಬ್ಯಾನ್​ ವಿಚಾರ; ಫೇವರಿಟ್​ ಗೇಮ್​ ಇಲ್ಲದೆ ಯುವಜನತೆಗೆ ಕಾಡುತ್ತಿದೆ ಖಿನ್ನತೆ!
ಪಬ್​ಜಿ
  • Share this:
ಪಬ್​ಜಿ ಗೇಮ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಬಹುತೇಲ ಎಲ್ಲ ವಯಸ್ಸಿನವರಿಗೂ ಇದೂ ಫೇವರೇಟ್ ಗೇಮ್. ಅದರಲ್ಲೂ ಯುವಜನರನ್ನ ಬೇಗ ಅಟ್ರ್ಯಾಕ್ಟ್ ಮಾಡಿದ ಟಾಪ್ ಗೇಮ್ ಗಳಲ್ಲಿ ಪಬ್​ಜಿಗೆ ಅಗ್ರ ಸ್ಥಾನ. ಹೀಗಿರುವಾಗಲೇ ಚೀನಾದ ಮತ್ತೊಂದು ತಂಟೆಯಿಂದ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ಮಾಡಿದೆ. ಪಬ್ ಜಿ ಸೇರಿ ಚೀನಾದ 118 ಆ್ಯಪ್​ಗಳನ್ನು ನಿಷೇಧಿಸಿದೆ. ಈ ಮೂಲಕ ಡ್ರ್ಯಾಗನ್ ರಾಷ್ಟ್ರಕ್ಕೆ ಬಿಗ್ ತಿರುಗೇಟು ನೀಡಿದೆ. ಆದರೆ, ಈ ಆ್ಯಪ್ ಬ್ಯಾನ್ ಮಾಡಿದಾಗಿನಿಂದ ಪಬ್ಜಿ ಪ್ರಿಯರು ಮಾನಸಿಕವಾಗಿ ಅಪ್ ಸೆಟ್ ಆಗಿದ್ದಾರಂತೆ.

ನಮ್ಮ ದೇಶದಲ್ಲಿ 1.5 ಕೋಟಿ ಗೂ ಅಧಿಕ ಜನರು ಈ ಪಬ್ಜಿ ಗೇಮ್ ಆಡುತ್ತಿದ್ದರು.  ಕೂತ್ರೂ, ನಿಂತ್ರು ಈ ಗೇಮ್ ನಲ್ಲೇ ಮುಳುಗಿ ಹೋಗಿದ್ದರು. ಆದರೆ, ಈ ಗೇಮ್ ಬ್ಯಾನ್ ಮಾಡಿದ್ದರಿಂದ ಕೆಲ ಯುವಕರು ಮಾನಸಿಕವಾಗಿ ಹುಚ್ಚರಂತೆ ವರ್ತಿಸುತ್ತಿದ್ದಾರೆ. ಕೋಪ, ಬೇಜಾರು, ಡಿಪ್ರೆಷನ್ ಸೇರಿದಂತೆ ನಾನಾ ಸಮಸ್ಯೆ ಎದುರಿಸ್ತಿದ್ದು, ಈ ಗೇಮ್ ನ ಗುಂಗಿನಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಇನ್ನು ಇದಕ್ಕೆಲ್ಲಾ ಫುಲ್ ಸ್ಟಾಪ್ ಇಡಬೇಕಂದ್ರೆ, ನುರಿತ ವೈದ್ಯರನ್ನ ಕಾಣೋದು ಸೂಕ್ತ ಅಂತಾರೆ ಮನೋವೈದ್ಯರು.


ಇನ್ನು ಸಮಯ ಸಿಕ್ಕಾಗೆಲ್ಲಾ ಟೈಂ ಪಾಸ್ ಮಾಡೋರಿಗಿಂತ, ಪಬ್ಜಿ ಗೇಮ್ ಆಡೋಕೆ ಅಂತಲೇ ಅನೇಕರು ಸಮಯ ಮೀಸಲಿಡ್ತಿದ್ರು. ಈ ಗೇಮ್ ನ ಹೊರತುಪಡಿಸಿದರೆ, ಇನ್ಯಾವ ಗೇಮ್ ಗಳು ಕೂಡ ಇಷ್ಟು ರಿಚ್ಚಾಗಿಲ್ಲ. ಮತ್ತೆ ಕೆಲವರು ಪಬ್ಜಿ ಆಡೋದಿಕಂತಲೇ 3 ಜಿಬಿ, 6 ಜಿಬಿ ರ್ಯಾಮ್​ ಸೌಕರ್ಯ ಇರೋ ದುಬಾರಿ ಮೊಬೈಲ್ ಗಳನ್ನ ಕೊಂಡು ಕೊಳ್ಳುತ್ತಿದ್ದರು ಅಂದ್ರೆ ನೀವು ನಂಬ್ಲೇಬೇಕು. ಒಟ್ಟಿನಲ್ಲಿ ಪಬ್ಜಿ ಗೇಮ್ ಬ್ಯಾನ್ ಮಾಡಿದ್ರಿಂದ ಗೇಮ್ ಪ್ರಿಯರಿಗೆ ಭಾರೀ ನಿರಾಸೆಯಾಗಿದೆ. ಟೈಂ ಪಾಸ್ ಗೆ ಆಡ್ತಿದ್ದ ಗೇಮ್ ಮತ್ತೆ ಬೇಕು ಅಂತ ಡಿಮ್ಯಾಂಡ್ ಮಾಡ್ತಿರೋದಂತೂ ಸುಳ್ಳಲ್ಲ.
Published by: Rajesh Duggumane
First published: September 8, 2020, 11:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading