ಡಬ್​ಸ್ಮ್ಯಾಶ್ ಸೇರಿದಂತೆ 16 ಆ್ಯಪ್​ಗಳು​ ಹ್ಯಾಕ್! ಈ ಅಪ್ಲಿಕೇಶನ್ ನಿಮ್ಮಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳಿ

ಈ 16 ಆ್ಯಪ್​ಗಳಿಗೆ ಈಗಾಗಲೇ ಮಿಲಿಯನ್​ಗಟ್ಟಲೇ ಬಳಕೆದಾರರಿದ್ದು, ಅಪ್ಲಿಕೇಶನ್​ ಇನ್​ಸ್ಟಾಲ್ ವೇಳೆ ನೀವು ನೀಡುವ ಮಾಹಿತಿಗಳು ಹ್ಯಾಕರುಗಳ ಪಾಲಾಗುತ್ತಿದೆ.

news18
Updated:February 14, 2019, 3:20 PM IST
ಡಬ್​ಸ್ಮ್ಯಾಶ್ ಸೇರಿದಂತೆ 16 ಆ್ಯಪ್​ಗಳು​ ಹ್ಯಾಕ್! ಈ ಅಪ್ಲಿಕೇಶನ್ ನಿಮ್ಮಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳಿ
@The Leader Newspaper
  • News18
  • Last Updated: February 14, 2019, 3:20 PM IST
  • Share this:
ಸ್ಮಾರ್ಟ್​ಫೋನ್​ ಬಳಕೆದಾರರೇ ಪ್ಲೇಸ್ಟೋರ್​ನಲ್ಲಿ ಸಿಗುವ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡುವ ಮುನ್ನ ಎಚ್ಚರವಿರಲಿ. ಏಕೆಂದರೆ ಬ್ರಿಟನಿನ 'ದಿ ರಿಜಿಸ್ಟರ್'​ ಎಂಬ ಸೈಬರ್​ ವೈಬ್​ಸೈಟ್​ ನೀಡಿದ ವರದಿ ಪ್ರಕಾರ ಜನಪ್ರಿಯ 16 ಆ್ಯಪ್​ಗಳಿಂದ ನಿಮ್ಮ ಮಾಹಿತಿಗಳು ಸೋರಿಕೆಯಾಗುತ್ತಿದೆ. ಅಲ್ಲದೆ ಈ ಡೇಟಾವನ್ನು ಡಾರ್ಕ್ ವೆಬ್​ ಮೂಲಕ ವಿವಿಧ ಕಂಪೆನಿಗಳಿಗೆ ಮಾರಾಟ ಮಾಡುತ್ತಿದೆ ಎಂಬ ಅಚ್ಚರಿಯ ಸುದ್ದಿಯನ್ನು ಬಹಿರಂಗಪಡಿಸಿದೆ.

ಭಾರತ ಸೇರಿದಂತೆ ವಿಶ್ವದಾದ್ಯಂತ ಜನಪ್ರಿಯವಾಗಿರುವ Dubsmash(ಡಬ್​ಸ್ಮ್ಯಾಶ್​ ), MyFitnessPal, 500px ಹಾಗೂ ShareThis ಅಪ್ಲಿಕೇಶನ್​ಗಳನ್ನೊಳಗೊಂಡ ಆ್ಯಪ್​ಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಈ ಮೂಲಕ ಬಳಕೆದಾರರ ಹೆಸರು, ಇಮೇಲ್ ವಿಳಾಸ ಮತ್ತು ಪಾಸ್​ವರ್ಡ್​ಗಳನ್ನು ಎಗರಿಸಲಾಗುತ್ತಿದೆ. ಅಲ್ಲದೆ ನಿಮ್ಮ ಸ್ಥಳ ಹಾಗೂ ವೈಯುಕ್ತಿಕ ವಿಚಾರಗಳು ಇಲ್ಲೂ ಸೋರಿಕೆಯಾಗುತ್ತಿದೆ ಎಂದು ದಿ ರಿಜಿಸ್ಟರ್​ ವೆಬ್​ನಲ್ಲಿ ತಿಳಿಸಲಾಗಿದೆ.

ಈ 16 ಆ್ಯಪ್​ಗಳಿಗೆ ಈಗಾಗಲೇ ಮಿಲಿಯನ್​ಗಟ್ಟಲೇ ಬಳಕೆದಾರರಿದ್ದು, ಅಪ್ಲಿಕೇಶನ್​ ಇನ್​ಸ್ಟಾಲ್ ವೇಳೆ ನೀವು ನೀಡುವ ಮಾಹಿತಿಗಳು ಹ್ಯಾಕರುಗಳ ಪಾಲಾಗುತ್ತಿದೆ. ಹಲವು ಕಂಪೆನಿಗಳು ಗ್ರಾಹಕರ ಅಭಿರುಚಿಯನ್ನು ತಿಳಿಯಲು ಡೇಟಾಗಳ ಬೇಡಿಕೆಯಿಡುತ್ತಿದೆ. ಇದನ್ನೇ ಬಂಡವಾಳವಾಗಿಸಿರುವ ಡಾರ್ಕ್​ ವೆಬ್​ಸೈಟ್​ಗಳು ಇಂತಹ ಆ್ಯಪ್​ ಬಳಕೆದಾರರ ಸಂಪೂರ್ಣ ಮಾಹಿತಿಗಳನ್ನು ಮಾರಾಟ ಮಾಡುತ್ತಿದೆ ಎಂದು ತಿಳಿಸಿದೆ. ಹಾಗೆಯೇ ಹಲವು ಆ್ಯಪ್​ಗಳು ನೇರವಾಗಿ ಹ್ಯಾಕ್​ ಆಗಿರುವುದು ಬಳಕೆದಾರರ ಅನುಭವಕ್ಕೂ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರದಿಯಲ್ಲಿ​ ಹ್ಯಾಕ್ ಆಗಿರುವ 16 ಆ್ಯಪ್​ಗಳು ಯಾವುವು, ಅದರಿಂದ ಎಷ್ಟು ಪ್ರಮಾಣದ ಮಾಹಿತಿ ಸೋರಿಕೆಯಾಗಿವೆ ಎಂದು ತಿಳಿಸಿದೆ.

16 ಆ್ಯಪ್​ಗಳ ಪಟ್ಟಿ ಮತ್ತು ಸೋರಿಕೆಯಾದ ಮಾಹಿತಿ ಪ್ರಮಾಣ

Dubsmash (162 million details)
MyFitnessPal (151 million details)
Loading...

MyHeritage (92 million details)
ShareThis (41 million details)
HauteLook (28 million details)
Animoto (25 million details)
EyeEm (22 million details)
8fit (20 million details)
Whitepages (18 million details)
Fotolog (16 million details)
500px (15 million details)
Armor Games (11 million details)
BookMate (8 million details)
CoffeeMeetsBagel (6 million details)
Artsy (1 million details)
DataCamp (700,000 details)

ಏನು ಮಾಡುವುದು?
ದಿ ರಿಜಿಸ್ಟರ್ ತಿಳಿಸಿರುವ ಆ್ಯಪ್​ಗಳು ನಿಮ್ಮಲ್ಲಿದ್ದರೆ, ಅಂತಹ ಅಪ್ಲಿಕೇಶನ್​ಗಳನ್ನು ಡಿಲೀಟ್​ ಮಾಡುವುದು ಉತ್ತಮ. ಇದರ ಹೊರತಾಗಿ ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಪ್ರತಿಯೊಂದು ಖಾತೆಯ ಪಾಸ್​ವರ್ಡ್​ಗಳನ್ನು ಬದಲಿಸಬೇಕು ಎಂದು ತಿಳಿಸಿದೆ.
First published:February 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...