ಬ್ಲೂವೇಲ್, ಕೀ ಕೀ ಹಳೇದಾಯ್ತು: ಶುರುವಾಗಿದೆ ಹೊಸ ಹುಚ್ಚಾಟ ಬರ್ಡ್​ ಬಾಕ್ಸ್​ ಚಾಲೆಂಜ್..!

ಇದೊಂದು ಸಿನಿಮಾ ಪ್ರೇರಿತ ಚಾಲೆಂಜ್ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿರುವ ಬರ್ಡ್​ ಬಾಕ್ಸ್​ ಚಿತ್ರದಲ್ಲಿ ನಾಯಕಿ ದುಷ್ಟ ಶಕ್ತಿಯನ್ನು ನೋಡದೇ ಪಾರಾಗಲು ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾಳೆ.

zahir | news18
Updated:January 13, 2019, 6:41 PM IST
ಬ್ಲೂವೇಲ್, ಕೀ ಕೀ ಹಳೇದಾಯ್ತು: ಶುರುವಾಗಿದೆ ಹೊಸ ಹುಚ್ಚಾಟ ಬರ್ಡ್​ ಬಾಕ್ಸ್​ ಚಾಲೆಂಜ್..!
ಚಾಲೆಂಜ್​ನಲ್ಲಿ ಅಪಘಾತಗೊಂಡಿರುವ ವಾಹನಗಳು
  • News18
  • Last Updated: January 13, 2019, 6:41 PM IST
  • Share this:
ಸಾಮಾಜಿಕ ಜಾಲತಾಣದಲ್ಲಿ ಹೊಸ ಚಾಲೆಂಜ್​ ಟ್ರೆಂಡ್​ ಶುರುವಾಗಿದೆ. ಈ ಹಿಂದೆ ಸಾಕಷ್ಟು ವೈರಲ್​ ಆಗಿದ್ದ ಬ್ಲೂವೆಲ್​ ಮತ್ತು ಕೀ ಕೀ ಚಾಲೆಂಜ್​ ಅನ್ನು ಮೀರಿಸುವಂತೆ ಬರ್ಡ್​ ಬಾಕ್ಸ್​ ಚಾಲೆಂಜ್​ ಶುರುವಾಗಿದೆ. ಇದರ ಪರಿಣಾಮ ಆರಂಭದಲ್ಲೇ ಕಾಣಿಸಿದ್ದು, ಚಾಲೆಂಜ್​ನಿಂದ ಅನೇಕ ಅವಘಡಗಳು ಸಂಭವಿಸುತ್ತಿದೆ.

ಈ ಹಿಂದೆ ಬ್ಲೂ ವೇಲ್ ಗೇಮ್ ಚಾಲೆಂಜ್​ ಮೂಲಕ ಅನೇಕರ ಪ್ರಾಣ ಬಲಿ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಆರಂಭವಾದ ಕೀ ಕೀ ಫಿವರ್​ರಿಂದ ನಡೆದ ಅಪಘಾತಗಳಿಗೆ ಲೆಕ್ಕವಿಲ್ಲ. ಈ ಎರಡು ಚಾಲೆಂಜ್​ಗಳ ಕಹಿ ನೆನಪುಗಳು ಮಾಸುವ ಮುನ್ನವೇ ಬರ್ಡ್​​ ಬಾಕ್ಸ್​ ಚಾಲೆಂಜ್​ ಸಾಕಷ್ಟು ಸುದ್ದಿ ಮಾಡುತ್ತಿದೆ.

ಬರ್ಡ್​ ಬಾಕ್ಸ್​ ಚಾಲೆಂಜ್​ನಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅದರಂತೆ ಅಮೆರಿಕದ ಉಟಾಹ್ ನಗರ 17 ವರ್ಷದ ಯುವತಿಯೊಬ್ಬಳು ಚಾಲೆಂಜ್​ ಸ್ವೀಕರಿಸಿದ್ದಾಳೆ. ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಾಹನ ಚಾಲನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಳು. ಇದರಿಂದ ಮತ್ತೊಂದು ವಾಹನಕ್ಕೆ ಹೋಗಿ ಗುದ್ದಿದ್ದಾಳೆ. ಈ ಅಪಘಾತದಿಂದ ಎರಡು ವಾಹನಗಳಿಗೂ ಹಾನಿಯಾಗಿದ್ದು, ಯುವತಿಯನ್ನು ವಿಚಾರಿಸಿದಾಗ ಚಾಲೆಂಜ್​ ಪೂರ್ತಿಗೊಳಸಿಲು ಇಂತಹ ಸಾಹಕ್ಕೆ ಕೈ ಹಾಕಿರುವುದಾಗಿ ತಿಳಿಸಿದ್ದಾಳೆ.

ಇದನ್ನೂ ಓದಿ: ಬೈಕ್​ ಸವಾರರಿಗೆ ಸಿಹಿ ಸುದ್ದಿ: ಟೆನ್ಶನ್​ ಇಲ್ಲದೆ ಈ ಹೆಲ್ಮೆಟ್​ ಧರಿಸಬಹುದು

ಆಗಲೇ ಪೊಲೀಸರಿಗೂ ಇಂತಹದೊಂದು ಚಾಲೆಂಜ್ ಪ್ರಾರಂಭವಾಗಿರುವುದು ಗೊತ್ತಾಗಿದೆ. ಈ ಅಪಘಾತದ ಫೊಟೋಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಪೊಲೀಸರು, ಡ್ರೈವಿಂಗ್​ ಮಾಡುವಾಗ ಬರ್ಡ್​ ಬಾಕ್ಸ್​ ಚಾಲೆಂಜ್ ಮಾಡಿದರೆ ಆಗುವ ಪರಿಣಾಮ ಇದು ಎಂದು ತಿಳಿಸಿದ್ದಾರೆ.

ಏನಿದು ಬರ್ಡ್​​ ಬಾಕ್ಸ್​ ಚಾಲೆಂಜ್​​?
ಇದೊಂದು ಸಿನಿಮಾ ಪ್ರೇರಿತ ಚಾಲೆಂಜ್ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿರುವ ಬರ್ಡ್​ ಬಾಕ್ಸ್​ ಚಿತ್ರದಲ್ಲಿ ನಾಯಕಿ ದುಷ್ಟ ಶಕ್ತಿಯನ್ನು ನೋಡದೇ ದೈರ್ಯ ತಂದುಕೊಳ್ಳಲು ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾಳೆ. ಅಲ್ಲದೆ ಇದೇ ಚಿತ್ರದ ಸೀನ್​ಗಳಲ್ಲಿ ಮಕ್ಕಳಿಗೂ ಕಣ್ಣಿ ಬಟ್ಟೆ ಸಾಹಸ ಮಾಡುತ್ತಾಳೆ. ಈ ದೃಶ್ಯಗಳ ಪ್ರೇರಣೆಯಿಂದ ಬರ್ಡ್​ ಬಾಕ್ಸ್​ ಚಾಲೆಂಜ್ ಶುರುವಾಗಿದೆ.

ಈ ಹೊಸ ಚಾಲೆಂಜ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಲಾಗುತ್ತಿದ್ದು, ಚಾಲೆಂಜ್​ ಸ್ವೀಕರಿಸಿದ ವ್ಯಕ್ತಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆಲಸಗಳನ್ನು ಮಾಡಬೇಕಾಗುತ್ತದೆ. ಬರ್ಡ್​ ಬಾಕ್ಸ್​ ಚಾಲೆಂಜ್​ ವೈರಲ್​ ಆಗುತ್ತಿದ್ದಂತೆ ಅಪಘಾತಗಳ ಸುದ್ದಿಗಳೂ ಕೂಡ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡಿರುವ ನೆಟ್​ಫ್ಲಿಕ್ಸ್​ ವೀಕ್ಷಕರಿಗೆ ಇದನ್ನು ಪ್ರಯತ್ನಿಸದಿರಿ ಎಂಬ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್​ ವಾಹನಗಳನ್ನು ಉತ್ತೇಜಿಸಲು ಹೊಸ ಕ್ರಮ: ಪ್ರತಿ 10-20 ಕಿ.ಮೀ.ಗೆ ಚಾರ್ಜಿಂಗ್ ಸ್ಟೇಷನ್!

ಒಂದು ಬ್ರೆಡ್​ ಬೆಲೆ 1 ಲಕ್ಷ ರೂ: ಇಲ್ಲಿ ಬಡವರೂ ಕೂಡ ಕೋಟ್ಯಾಧಿಪತಿಗಳು..!

First published:January 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ