• Home
  • »
  • News
  • »
  • tech
  • »
  • Technology: ಈ ಆ್ಯಪ್ ಡೌನ್​ಲೋಡ್ ಮಾಡಿದರೆ ನೀವು ಸುಲಭವಾಗಿ ಹಣ ಗಳಿಸಬಹುದು!

Technology: ಈ ಆ್ಯಪ್ ಡೌನ್​ಲೋಡ್ ಮಾಡಿದರೆ ನೀವು ಸುಲಭವಾಗಿ ಹಣ ಗಳಿಸಬಹುದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಚಿಂಗಾರಿ ಅಪ್ಲಿಕೇಶನ್ ಒಂದು ವಿಡಿಯೋ ಕ್ರಿಯೇಟ್​ ಮಾಡುವವರಿಗೆ ಇರುವಂತಹ ವೇದಿಕೆಯಾಗಿದೆ. ಇದೀಗ ಈ ಅಪ್ಲಿಕೇಶನ್​ನಲ್ಲಿ ಹಣಗಳಿಸುವಂತಹ ಮಾದರಿಯನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಿದೆ. ಹಾಗಿದ್ರೆ ಈ ಯೋಜನೆ ಯಾವ ರೀತಿ ಇದೆ? ಹೇಗೆ ಹಣ ಗಳಿಸುವುದು ಎಂಬುದನ್ನು ನೋಡೋಣ.

  • Share this:

    ಇತ್ತೀಚೆಗೆ ಬಹಳಷ್ಟು ಮುಂಚೂಣಿಯಲ್ಲಿರುವುದು ವಿಡಿಯೋ ಕಂಟೆಂಟ್ (Video Content) ಎಂದು ಹೇಳ್ಬಹುದು. ಅದ್ರಲ್ಲೂ ಟಿಕ್​ಟಾಕ್ (Tiktok) ನಿಷೇಧಿಸಿದ ನಂತರ ಟಿಕ್​ಟಾಕ್​ನಂತಹ  ಬೇರೆ ಯಾವ ವಿಡಿಯೋ ಅಪ್ಲಿಕೇಶನ್​ಗಳು (Video App) ಬರ್ಲಿಲ್ಲ. ಇದರ ನಿಷೇಧದ ಬಳಿಕ ಕಿರು ವೀಡಿಯೊ ಅಪ್ಲಿಕೇಶನ್‌ಗಳಿಗೆ ಉತ್ತಮ ಸ್ವಾಗತ ಸಿಕ್ಕಿತು. ಅನೇಕ ಜನರು ಈ ಅಪ್ಲಿಕೇಶನ್‌ಗಳನ್ನೇ ಬಳಸುತ್ತಿದ್ದರು. ಹೀಗೆ ಅಪ್ಲಿಕೇಶನ್​ನಲ್ಲಿ(Apps) ಚಿಂಗಾರಿ ಕೂಡ ಒಂದು. ಚಿಂಗಾರಿ ಅಪ್ಲಿಕೇಶನ್ (Chingari App) ಅನ್ನು ಅನೇಕ ಜನರು ಬಳಸುತ್ತಾರೆ. ಆದರೆ ಇದೀಗ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ವಿಷಯ ಅಂದರೆ ಹಣಗಳಿಸುವ ಯೋಜನೆಯನ್ನು ಪರಿಚಯಿಸಲಾಗಿದೆ. ಕ್ರಿಯೇಟರ್ಸ್​​ಗಳಿಗೆ ಇದರಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ.


    ಚಿಂಗಾರಿ ಅಪ್ಲಿಕೇಶನ್ ಒಂದು ವಿಡಿಯೋ ಕ್ರಿಯೇಟ್​ ಮಾಡುವವರಿಗೆ ಇರುವಂತಹ ವೇದಿಕೆಯಾಗಿದೆ. ಇದೀಗ ಈ ಅಪ್ಲಿಕೇಶನ್​ನಲ್ಲಿ ಹಣಗಳಿಸುವಂತಹ ಮಾದರಿಯನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಿದೆ. ಹಾಗಿದ್ರೆ ಈ ಯೋಜನೆ ಯಾವ ರೀತಿ ಇದೆ? ಹೇಗೆ ಹಣ ಗಳಿಸುವುದು ಎಂಬುದನ್ನು ನೋಡೋಣ.


    ಚಿಂಗಾರಿ ಆ್ಯಪ್​​ನ ಸಬ್​​ಸ್ಕ್ರಿಪ್ಷನ್ ಪ್ಲಾನ್:


    ಚಿಂಗಾರಿ ಇತ್ತೀಚೆಗೆ ಮೂರು ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದೆ. ಪ್ರತಿದಿನ, ವಾರದ ಮತ್ತು ಮಾಸಿಕ ಈ ರೀತಿಯ ಮೂರು ಯೋಜನೆಗಳಿವೆ. ಒಂದು ದಿನದ ಯೋಜನೆಗೆ  20 ರೂಪಾಯಿ ಪಾವತಿಸಬೇಕು. ವಾರದ ಚಂದಾದಾರಿಕೆ ಮಾಡುವುದಾದರೆ 100 ರೂಪಾಯಿ ಕಟ್ಟಬೇಕು. ಮಾಸಿಕ ಚಂದಾದಾರಿಕೆ  ಮಾಡುವುದಾದರೆ 300 ರೂಪಾಯಿಯನ್ನು ಪಾವತಿಸಬೇಕು.


    ಇದನ್ನೂ ಓದಿ: ಇನ್ಮುಂದೆ ಸಿಮ್​ಗಳ ವಂಚನೆ ಅಸಾಧ್ಯ! ಟೆಲಿಕಾಂ ಇಲಾಖೆಯಿಂದ ಹೊಸ ನಿಯಮ


    ಹೀಗೆ ಮಾಡುವುದರಿಂದ ಚಂದಾದಾರರು ಹಣ ಗಳಿಸುವ ಅವಕಾಶವಿದೆ. ಈ ಯೋಜನೆ ಮೂಲಕ ಆದಾಯವನ್ನು ಡಬಲ್ ಮಾಡುತ್ತದೆ. ಗೊಳಿಸಬಹುದು. ಸಕ್ರಿಯ ಚಂದಾದಾರಿಕೆಯ ಯೋಜನೆಯ ಮುಕ್ತಾಯದ ಸಮಯದಲ್ಲಿ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು.


    Download this app and you can earn money easily pjl
    ಸಾಂಕೇತಿಕ ಚಿತ್ರ


    ಚಿಂಗಾರಿಯಿಂದ ಕ್ರಿಪ್ಟೋ ಟೋಕನ್:


    ಚಿಂಗಾರಿ ಗರಿ ಮೈನಿಂಗ್ ಕಾರ್ಯಕ್ರಮವನ್ನು ಮಾಡುತ್ತಾ ಹೋದಾಗ ಅದರ ಕ್ರಿಯೇಟರ್ಸ್ ಮತ್ತು ಬಳಕೆದಾರರಿಗೆ ಕ್ರಿಪ್ಟೋ ಟೋಕನ್‌ಗಳನ್ನು ನೀಡುತ್ತದೆ. ಅಪ್‌ಲೋಡ್ ಮಾಡುವುದು, ನೋಡುವುದು, ಇಷ್ಟಪಡುವುದು, ಕಾಮೆಂಟ್ ಮಾಡುವುದು, ಹಂಚಿಕೊಳ್ಳುವ ಮೂಲಕ ಕ್ರಿಪ್ಟೋ ಟೋಕನ್‌ಗಳನ್ನು ಗಳಿಸಬಹುದು. ಇವುಗಳನ್ನು ಕ್ರಿಪ್ಟೋ ಎಕ್ಸ್​​​ಚೇಂಜ್ ಕೇಂದ್ರಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ನಂತರ ಕ್ರಿಪ್ಟೋ ವ್ಯಾಲೆಟ್‌ಗೆ ಹಿಂತೆಗೆದುಕೊಳ್ಳಬಹುದು. ನಂತರ ಚಂದಾದಾರಿಕೆ ಯೋಜನೆಯ ಭಾಗವಾಗಿ, ರಚನೆಕಾರರು ಮತ್ತು ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಆ ಹಣವನ್ನು ವರ್ಗಾಯಿಸಬಹುದು.


    ಚಿಂಗಾರಿ ಸಿಇಒ ಅವರ ಅಭಿಪ್ರಾಯ:


    ಚಿಂಗಾರಿಯ ಸಿಇಒ ಮತ್ತು ಸಹಸಂಸ್ಥಾಪಕ ಸುಮಿತ್ ಘೋಷ್ ಅವರು ಈ ಹಣಗಳಿಕೆಯು ಇನ್ನೂ ಅನೇಕ ಕ್ರಿಯೇಟರ್ಸ್​​ಗೆ ಸವಾಲಾಗಿದೆ ಎಂದು ಹೇಳಿದರು. ಆದರೆ ಚಂದಾದಾರಿಕೆ ಯೋಜನೆ ಮೂಲಕ ಪರಿಹಾರ ನೀಡಲು ತೀರ್ಮಾನ ಕೈಗೊಂಡಿದ್ದೇವೆ ಎಂದರು. ರ‍್ಯಾಂಕ್ 2 ಮತ್ತು ರ‍್ಯಾಂಕ್ 3 ಯಲ್ಲಿರುವ ಕ್ರಿಯೇಟರ್ಸ್ ತಮ್ಮ ವಿಡಿಯೋಗಳಿಗೆ ಕಡಿಮೆ ವೆಚ್ಚದಲ್ಲಿ ಹಣಗಳಿಸಬಹುದು ಎಂದು ಅವರು ವಿವರಿಸಿದರು.


    Download this app and you can earn money easily pjlDownload this app and you can earn money easily pjl
    ಸಾಂಕೇತಿಕ ಚಿತ್ರ


    ಚಿಂಗಾರಿ ಬಿಟ್ಟು ಹಲವಾರು ಆ್ಯಪ್​ಗಳು ಬ್ಯಾನ್:


    ಇದಲ್ಲದೆ, ಎಲ್ಲಾ ಇತರ ಪ್ರಮುಖ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದು ಹೇಳಲಾಗುತ್ತದೆ. ಆದರೆ ಚಿಂಗಾರಿ ಅಪ್ಲಿಕೇಶನ್ ಅನ್ನು ಬಳಸುವುದಕ್ಕಾಗಿ ಬಳಕೆದಾರರು ನಗದು ರೂಪದಲ್ಲಿ ಬಹುಮಾನ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಚಿಂಗಾರಿ ಕ್ರಿಯೇಟರ್ಸ್ ಮತ್ತು ಬಳಕೆದಾರರಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ಹಲವು ಆ್ಯಪ್​ಗಳನ್ನು ಬ್ಯಾನ್ ಮಾಡಿರುವುದು ಗೊತ್ತೇ ಇದೆ. ಟಿಕ್ ಟಾಕ್, ಹಲೋ, ಯುಸಿಯಂತಹ ಜನಪ್ರಿಯ ಆಪ್ ಗಳೂ ಈ ಪಟ್ಟಿಯಲ್ಲಿವೆ ಎಂದು ಹೇಳಬಹುದು. ಇದಲ್ಲದೆ PubG ಕೂಡ ಈ ಸಾಲಿಗೆ ಸೇರಿದೆ.

    Published by:Prajwal B
    First published: