Stay and Play at Home: ಗೂಗಲ್​ ಡೂಡಲ್​ನಲ್ಲಿ ಲೊಟೆರಿಯಾ ಕಾರ್ಡ್​ ಗೇಮ್​; ಮೆಕ್ಸಿಕೊ ಜನರಿಗೆ ವಿಶೇಷ ಗೌರವ

Popular Google Doodle Games: ಮೆಕ್ಸಿಕೋದ ಜನರಿಗೆ ಮೇ. 5 ವಿಶೇಷ ದಿನ. ಪಿಂಬ್ಲಾ ಯುದ್ಧದಲ್ಲಿ ಫ್ರೆಂಚ್​​ ಸಾಮ್ರಾಜ್ಯದ ಮೇಲೆ ಮೆಕ್ಸಿಕನ್​ ಸೈನ್ಯ ವಿಜಯವನ್ನು ಸಾಧಿಸಿತ್ತು. ಹಾಗಾಗಿ ಸಿನ್ಕೊ ಡಿ ಮಾಯೋದಲ್ಲಿ ಮೇ. 5ರಂದು ವಾರ್ಷಿಕ ಆಚರಣೆಯನ್ನು ಮಾಡಲಾಗುತ್ತದೆ. ಈ ವಿಶೇಷ ದಿನವನ್ನು ಸ್ಮರಿಸುವ ಸಲುವಾಗಿ ಗೂಗಲ್​ ಡೂಲಡ್​ ಅಲ್ಲಿನ ಪ್ರಸಿದ್ಧ ಲೊಟೆರಿಯಾ ಗೇಮ್​ ಅನ್ನು ಡೂಡಲ್​ನಲ್ಲಿ ಪರಿಚಯಿಸಿದೆ.

ಗೂಗಲ್​ ಡೂಡಲ್

ಗೂಗಲ್​ ಡೂಡಲ್

  • Share this:
    ಕೊರೋನಾ ಲಾಕ್​​ಡೌನ್​ ಅವಧಿಯಲ್ಲಿ ಗೂಗಲ್​ ಡೂಡಲ್​​ ವಿಶೇಷ ಗೇಮ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಜನಪ್ರಿಯ ಮೆಕ್ಸಿಕನ್​​​​ ಬೋರ್ಡ್​​ ಲೊಟೆರಿಯಾ ಗೇಮ್​ ಅನ್ನು ಡೂಡಲ್​ನಲ್ಲಿ ಬಿಡುಗಡೆ ಮಾಡಿದೆ. ಡಿಸೆಂಬರ್​​ 9, 2019ರಂದು ಡೂಡಲ್​​ ಮೆಕ್ಸಿಕಟ್​​ ಲೊಟೆರಿಯಾ ಗೇಮ್​ ಅನ್ನು ಡೂಡಲ್​ನಲ್ಲಿ ಪ್ರಕಟಿಸಿತ್ತು. ಇದೀಗ ಮತ್ತೊಮ್ಮೆ ನೆನಪಿಸಿಕೊಂಡಿದೆ. ಮೆಕ್ಸಿಕೋದ ಜನರಿಗೆ ಮೇ. 5 ವಿಶೇಷ ದಿನ. ಪಿಂಬ್ಲಾ ಯುದ್ಧದಲ್ಲಿ ಫ್ರೆಂಚ್​​ ಸಾಮ್ರಾಜ್ಯದ ಮೇಲೆ ಮೆಕ್ಸಿಕನ್​ ಸೈನ್ಯ ವಿಜಯವನ್ನು ಸಾಧಿಸಿತ್ತು. ಹಾಗಾಗಿ ಸಿನ್ಕೊ ಡಿ ಮಾಯೋದಲ್ಲಿ ಮೇ. 5ರಂದು ವಾರ್ಷಿಕ ಆಚರಣೆಯನ್ನು ಮಾಡಲಾಗುತ್ತದೆ. ಈ ವಿಶೇಷ ದಿನವನ್ನು ಸ್ಮರಿಸುವ ಸಲುವಾಗಿ ಗೂಗಲ್​ ​​​ ಅಲ್ಲಿನ ಪ್ರಸಿದ್ಧ ಲೊಟೆರಿಯಾ ಗೇಮ್​ ಅನ್ನು ಡೂಡಲ್​ನಲ್ಲಿ ಬಿಡುಗಡೆಮಾಡಿದೆ.

    ಗೂಗಲ್ ಹೇಳುವಂತೆ ಇದೊಂದು ಕಾರ್ಡ್​ ಗೇಮ್​ ಆಗಿದೆ. ಲೊಟೆರಿಯಾ ಆಟದ ನಿಯಮವು ಬಿಂಗೋ ಗೇಮ್​ ಅನ್ನು ಹೋಲುತ್ತದೆ. ಈ ಆಟದಲ್ಲಿ ಗೆದ್ದವರನ್ನು ಲೊಟೆರಿಯಾ ಎಂದು ಕರೆಯಲಾಗುತ್ತದೆ.

    ತಂತ್ರಜ್ಞಾನ ದೈತ್ಯ ಗೂಗಲ್ ತನ್ನ ಜನಪ್ರಿಯ ಮತ್ತು ಹಳೆಯ ಡೂಡಲ್‌ಗಳ ಸರಣಿಯನ್ನು ಮತ್ತೆ ಪ್ರಸ್ತುತಪಡಿಸುತ್ತಿದೆ. ಇದರಲ್ಲಿ ವಿಶೇಷತೆ ಏನೆಂದರೇ ಗೇಮಿಂಗ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿದ್ದು ದಿನಕ್ಕೊಂದು ಆಟವನ್ನು ಆಡುವ ಮೂಲಕ ಮನರಂಜನೆಯನ್ನು ಪಡೆಯಬಹುದು.

    ಲಾಕ್‌ಡೌನ್ ಇರುವುದರಿಂದ, ಮನೆಯಲ್ಲೇ ಇರುವ ಸಂದರ್ಭದಲ್ಲಿ, ಹೊರಗಡೆ ಹೋಗಬೇಡಿ, ಒಳಾಂಗಣ ಆಟದಲ್ಲಿ ತೊಡಗಿಸಿಕೊಳ್ಳಿ ಎಂದು ಗೂಗಲ್ ಹೇಳಿದೆ. ಜತೆಗೆ ದಿನಕ್ಕೊಂದು ಆಕರ್ಷಕ, ಜನಪ್ರಿಯ ಹಳೆಯ ಡೂಡಲ್ ಸರಣಿಯನ್ನು ಕೂಡ ಪ್ರಕಟಿಸುತ್ತಿದೆ.

    Apple MacBook Pro: ಮ್ಯಾಜಿಕ್​ ಕೀಬೋರ್ಡ್​​ ಅಳವಡಿಸಿರುವ​ 13 ಇಂಚಿನ ಮ್ಯಾಕ್​ಬುಕ್​ ಪ್ರೊ; ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ
    First published: