ಸಾಮಾನ್ಯವಾಗಿ ಗೂಗಲ್ ಕ್ರೋಮ್ (Google Chrome) ಮೂಲಕ ಇಂಟರ್ನೆಟ್ (Internet) ಪ್ರವೇಶಿಸುತ್ತೇವೆ. ಆದರೀಗ ಗೂಗಲ್ ಕ್ರೋಮ್ ನಂಬಲರ್ಹವಲ್ಲ ಎಂಬ ಮಾಹಿತಿಯನ್ನು ಮೈಕ್ರೋಸಾಫ್ಟ್ (Microsoft) ಹೊರಹಾಕಿದೆ. ಅಷ್ಟು ಮಾತ್ರವಲ್ಲ, ಗೂಗಲ್ ಕ್ರೋಮ್ ಬಳಸುತ್ತಿದ್ದರೆ ತಕ್ಷವೇ ಆಫ್ ಮಾಡಿ. ಇದು ಹಳೆಯದು ಮತ್ತು ನಂಬಲಸಾಧ್ಯವಾದದ್ದು ಎಂದು ಕಂಪನಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಎಚ್ಚರಿಕೆಯ ಸಂದೇಶ ರವಾನಿಸಿದ ಮೈಕ್ರೋಸಾಫ್ಟ್!
ದಿ ಸನ್ ವರದಿಯ ಪ್ರಕಾರ, ಪ್ರಪಂಚದಾದ್ಯಂತ ಬಹುತೇಕ ಜನರು ಗೂಗಲ್ ಕ್ರೋಮ್ ಬಳಸುತ್ತಿದ್ದಾರೆ. ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ (Smartphone) ಪ್ರಿಯರು ಮತ್ತು ಲ್ಯಾಪ್ಟಾಪ್ (Laptop) ಬಳಕೆದಾರರು ಇಂಟರ್ನೆಟ್ ಪ್ರವೇಶಿಸಲು ಗೂಗಲ್ ಮೊರೆ ಹೋಗುತ್ತಾರೆ. ಆದರೀಗ ಗೂಗಲ್ ಕ್ರೋಮ್ ಬಳಕೆದಾರರಿಗೆ ಈ ಫ್ಲಾಟ್ಫಾರ್ಮ್ ಬಳಸದಂತೆ ಮೈಕ್ರೋಸಾಫ್ಟ್ ಸಂದೇಶ ಕಳುಹಿಸಿದೆ. ವಿಂಡೋಸ್ 10 (Windows 10) ಮತ್ತು 11ನಲ್ಲಿರುವ ಡಿಫಾಲ್ಟ್ ಬ್ರೌಸರ್ ಮೂಲಕ ಈ ಸಂದೇಶವನ್ನು ಸಾರಿದೆ.
ಇದನ್ನು ಓದಿ: Flipkart Offer: ಕೇವಲ 6 ಸಾವಿರಕ್ಕೆ ಸಿಗುತ್ತಿದೆ 40 ಇಂಚಿನ ಈ ಸ್ಮಾರ್ಟ್ಟಿವಿ!
ಎಚ್ಚರಿಕೆಯ ಸಂದೇಶ!
ಗೂಗಲ್ ಕ್ರೋಮ್ ಡೌನ್ಲೋಡ್ ಮಾಡಿ ಬಳಸಿದಾಗ ಪರದೆಯ ಮೇಲೆ ಎಚ್ಚರಿಕೆಯ ಸಂದೇಶ ಬರುತ್ತದೆ. ಗೂಗಲ್ ಕ್ರೋಮ್ ಅವಧಿ ಮುಗಿದೆ, ಇದು ವಿಶ್ವಾಸರ್ಹವಲ್ಲ ಎಂದು ಸಂದೇಶ ಕಾಣಿಸುತ್ತದೆ. ವೇಗದ ಇಂಟರ್ನೆಟ್ ಬಳಕೆಗಾಗಿ ಮೈಕ್ರೋಸಾಫ್ಟ್ ಡೌನ್ಲೋಡ್ ಮಾಡಿ ಎಂದು ಸಂದೇಶದಲ್ಲಿ ಹೇಳಿದೆ.
ಗೂಗಲ್ ಕ್ರೋಮ್ ಸುರಕ್ಷತೆ ಒದಗಿಸುತ್ತಿದೆಯೇ?
ಬಹುತೇಕ ಜನರು ಗೂಗಲ್ ಕ್ರೋಮ್ ಬಳಸುತ್ತಾರೆ. ಆದರೆ ಗೌಪ್ಯತೆ, ಉತ್ತಮ ಸೇವೆಗೆ ಮೈಕ್ರೋಸಾಫ್ಟ್ ಹೆಚ್ಚು ಒತ್ತು ನೀಡುತ್ತದೆ. ಜಾಗತಿಕ ಡೆಸ್ಕ್ಟಾಪ್ ಬ್ರೌಸರ್ ಮಾರುಕಟ್ಟೆಯಲ್ಲಿ ಗೂಗಲ್ ಕ್ರೋಮ್ 67.56 ಶೇ. ಖಾತೆಯನ್ನು ಹೊಂದಿದೆ. ಅಂದರೆ 3,2 ಶತಕೋಟಿ ಜನರು ಇದನ್ನು ಪ್ರತಿನಿತ್ಯ ಬಳಸುತ್ತಾರೆ.
ಇದನ್ನು ಓದಿ: ಇನ್ಮುಂದೆ WhatsAppನಲ್ಲಿಯೇ ಸಿಗುತ್ತಾರೆ ವೈದ್ಯರು, ಒಂದು ಮೆಸೇಜ್ ನಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ! ಬಳಸೋಕೆ ಹೀಗೆ ಮಾಡಿ…
ಮೈಕ್ರೋ ಸಾಫ್ಟ್ ಮತ್ತು ಗೂಗಲ್ ಕ್ರೋಮ್ ಅಂರತಾಷ್ಟ್ರಿಯ ಕಂಪನಿಯಾಗಿ ಗುರುತಿಸಿಕೊಂಡಿದೆ. ಐಡಿ ವಲಯದಲ್ಲಿ ಇವೆರಡು ಕಂಪನಿಗಳ ಮಧ್ಯೆ ನಿರಂತರ ಪೈಪೋಟಿ ನಡೆಯುತ್ತಿರುತ್ತದೆ. ಮೈಕ್ರೋಸಾಫ್ಟ್ ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಶ್ರಮಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ