ಎಚ್ಚರ..! ಪ್ಯಾಂಟ್​ ಜೇಬಿನಲ್ಲಿ ಸ್ಮಾರ್ಟ್​ಫೋನ್​​ ಇಡುತ್ತೀರಾ? ಹಾಗದ್ರೆ ಅಪಾಯ ಗ್ಯಾರಂಟಿ

ಫೋನ್ ಹಾಗೂ ವಿದ್ಯುತ್ಕಾಂತೀಯ ಚಟುವಟಿಕೆ ವೀರ್ಯಾಣು ಮೇಲೆ ಪ್ರಭಾವ ಬೀರುತ್ತದೆ. ಅಧ್ಯಯನದ ಪ್ರಕಾರ ವರ್ಷವೊಂದಕ್ಕೆ 100ಕ್ಕೂ ಹೆಚ್ಚು ಪುರುಷರು ಮಕ್ಕಳನ್ನು ಪಡೆಯಲು ವಿಫಲರಾಗುತ್ತಿದ್ದು, ಚಿಕಿತ್ಸೆಗೆ ಬರುತ್ತಾರೆ ಎಂದು ತಿಳಿಸಿದ್ದಾರೆ.

news18-kannada
Updated:September 2, 2019, 10:52 AM IST
ಎಚ್ಚರ..! ಪ್ಯಾಂಟ್​ ಜೇಬಿನಲ್ಲಿ ಸ್ಮಾರ್ಟ್​ಫೋನ್​​ ಇಡುತ್ತೀರಾ? ಹಾಗದ್ರೆ ಅಪಾಯ ಗ್ಯಾರಂಟಿ
.
  • Share this:
ಸ್ಮಾರ್ಟ್​ಫೋನ್​ ಇಂದಿನ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್​ಫೋನ್​ ಓಡಾಡುತ್ತಿರುತ್ತದೆ. ಜನರಿಗೆ ಅತ್ಯಗತ್ಯ ಎನಿಸಿರುವ ಈ ಸ್ಮಾರ್ಟ್​ಫೋನ್​ ಬಳಕೆಯಿಂದ ಆರೋಗ್ಯದ ಮೇಲೂ ಕುತ್ತು ತರುತ್ತಿದೆ. ಅತಿ ಹೆಚ್ಚು ಸ್ಮಾರ್ಟ್​ಫೋನ್​ ಬಳಸುವುದರಿಂದ ಲೈಂಗಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ಸಂಶೋಧನೆಯಿಂದ ಬಯಲಾಗಿದೆ.

ಬ್ರಿಟಿಷ್ ಫರ್ಟಿಲಿಟಿ ತಜ್ಞರು ನಡೆಸಿದ ಸಂಶೋಧನೆಯ ಪ್ರಕಾರ, ಜೇಬಿನಲ್ಲಿ ಸ್ಮಾರ್ಟ್​ಫೋನ್​ ಅನ್ನು ಇಡುವುದರಿಂದ ಕೆಲವು ಲೈಂಗಿಕ ಸಮಸ್ಯೆ ಕಾರಣವಾಗುತ್ತಿದೆ. ಸ್ಮಾರ್ಟ್​ಫೋನ್ ಹೊರ ಸೂಸುವ ವಿಕಿರಣದಿಂದ ವೀರ್ಯಾಣು ಸಂಖ್ಯೆಯನ್ನು ಕುಗ್ಗಿಸುತ್ತದೆ ಎಂದು ತಿಳಿಸಿದ್ದಾರೆ.

ಸ್ಮಾರ್ಟ್​ಫೋನ್​ ಅನ್ನು ಪ್ಯಾಂಟ್​ ಜೇಬಿನಲ್ಲಿಡುವುದರಿಂದ ಸಕ್ರಿಯ ವೀರ್ಯ ಹಾಗೂ ಗುಣಮಟ್ಟದ ವೀರ್ಯದ ಕೊರತೆ ಕಂಡು ಬರುತ್ತದೆಯಂತೆ. ಫೋನ್ ಹಾಗೂ ವಿದ್ಯುತ್ಕಾಂತೀಯ ಚಟುವಟಿಕೆ ವೀರ್ಯಾಣು ಮೇಲೆ ಪ್ರಭಾವ ಬೀರುತ್ತದೆ. ಅಧ್ಯಯನದ ಪ್ರಕಾರ ವರ್ಷವೊಂದಕ್ಕೆ 100ಕ್ಕೂ ಹೆಚ್ಚು ಪುರುಷರು ಮಕ್ಕಳನ್ನು ಪಡೆಯಲು ವಿಫಲರಾಗುತ್ತಿದ್ದು, ಚಿಕಿತ್ಸೆಗೆ ಬರುತ್ತಾರೆ ಎಂದು ತಿಳಿಸಿದ್ದಾರೆ.

ಇನ್ನು ಅತಿ ಹೆಚ್ಚಾಗಿ ಸ್ಮಾರ್ಟ್​ಫೋನ್​ ಬಳಸಿದರೆ ಕಣ್ಣು, ಮೆದುಳು, ಹೃದಯ ಸಂಬಂಧಿತ ಕಾಯಿಲೆಗಳು ತುತ್ತಾಗಬಹುದು. ಅಂತೇಯೆ, ಸ್ಮಾರ್ಟ್​ಫೋನ್​ ಬಿಡುಗಡೆ ಮಾಡುವ ರೇಡಿಯೇಷನ್​ನಿಂದಾಗಿ ಕ್ಯಾನ್ಸರ್​ನಂತಹ ಕಾಯಿಲೆಗಳಿಗೂ ಕಾರಣವಾಗಬಹುದು ಎಂದು ಹೇಳಿದ್ದಾರೆ.
First published:September 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...