Truth Social: ಇನ್​​ಸ್ಟಾಗ್ರಾಂ. ಟ್ವಿಟ್ಟರ್​ ಅನ್ನು ಮೂಲೆಗುಂಪು ಮಾಡಲು ಬರುತ್ತಿದೆ ಹೊಸ ಅಪ್ಲಿಕೇಶನ್​! ಹೇಗಿದೆ ಗೊತ್ತಾ?

Truth Social: ಶೀಘ್ರದಲ್ಲೇ ಹೊಸ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಶಿಯಲ್ ಬಳಕೆದಾರಿಗೆ ಸಿಗಲಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡ ಈ ಆ್ಯಪ್​ ಸಸ್ಯದಲ್ಲೇ ಲಾಂಚ್​ ಆಗಲಿದೆ. ಆದರೆ ಇದರಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..

ಟ್ರುತ್​ ಸೋಷಿಯಲ್​ / Truth Social

ಟ್ರುತ್​ ಸೋಷಿಯಲ್​ / Truth Social

 • Share this:
  ಇಂದಿನ ಯುಗದಲ್ಲಿ ಹೆಚ್ಚಿನ ಜನರು, ವಿಶೇಷವಾಗಿ ಯುವ ಪೀಳಿಗೆ, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು (Social Media Application) ಬಳಸುತ್ತಾರೆ. ಸದ್ಯಕ್ಕಂತೂ ನಾನಾ ವಿಶೇಷತೆಯುಳ್ಳ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಡೌನ್​ಲೋಡ್​​ ಮಾಡಲು ಮತ್ತು ಬಳಕೆಗೆ ಸಿಗುತ್ತಿವೆ. ಅದರಲ್ಲೂ ಫೇಸ್​ಬುಕ್ (Facebook)​, ವಾಟ್ಸ್​ಆ್ಯಪ್ (Whatsapp)​, ಟ್ವಿಟ್ಟರ್ (Twitter)​​, ಇನ್​ಸ್ಟಾಗ್ರಾಂ (Instagram), ಟೆಲಿಗ್ರಾಂ (Telegram) ಆ್ಯಪ್​ಗಳು ಭಾರೀ ಜನಪ್ರಿಯತೆ ಪಡೆದ ಮತ್ತು ಬಹು ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್​ಗಳಾಗಿವೆ. ಆದರೀಗ ಈ ಅಪ್ಲಿಕೇಶನ್​ ಅನ್ನು ಮೀರಿಸಿ ಜನಪ್ರಿಯತೆ ಪಡೆಯಲು ಹೊಸ ಅಪ್ಲಿಕೇಶನ್​ ಒಂದು ಬರಲು ಸಿದ್ಧವಾಗಿದೆ. ನೂತನ ಅಪ್ಲಿಕೇಶನ್​ "ಟ್ರುತ್​​ ಸೋಷಿಯಲ್" (Truth Social)​ ಎಂಬ ಹೆಸರನ್ನು ಹೊಂದಿದೆ.

  ಶೀಘ್ರದಲ್ಲೇ ಹೊಸ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಶಿಯಲ್ ಬಳಕೆದಾರಿಗೆ ಸಿಗಲಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡ ಈ ಆ್ಯಪ್​ ಸಸ್ಯದಲ್ಲೇ ಲಾಂಚ್​ ಆಗಲಿದೆ. ಆದರೆ ಇದರಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..

  ಹೊಸ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟ್ರುತ್​ ಸೋಷಿಯಲ್​

  ಫೆಬ್ರವರಿ 21 ರಂದು, 'ಟ್ರುತ್ ಸೋಶಿಯಲ್ ' ಹೆಸರಿನ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಅನ್ನು ಮುನ್ನೆಲೆಗೆ ತರಲಾಗುತ್ತಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಈಗಾಗಲೇ ಆಪ್ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಪ್ರಸ್ತುತ ಈ ಅಪ್ಲಿಕೇಶನ್ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಮಾಹಿತಿಯ ಪ್ರಕಾತರ ನೂತನ ಅಪ್ಲಿಕೇಶನ್ Twitter ಗೆ ಹೋಲುವಂತಿದೆ ಎಂದು ಹೇಳಲಾಗುತ್ತಿದೆ.

  'ಟ್ರೂತ್ ಸೋಶಿಯಲ್' ಸೃಷ್ಠಿಕರ್ತ ಯಾರು?

  ಈ ಆ್ಯಪ್‌ನ ಹಿಂದೆ ಯಾರಿದ್ದಾರೆ?, ಯಾರು ಪ್ರಾರಂಭಿಸಿರೋದು? ಎಂದು ತಿಳಿದರೆ ಆಶ್ಚರ್ಯ ಆಗೋದರಲ್ಲಿ ಅನುಮಾನವೇ ಇಲ್ಲ. ಈ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಅನ್ನು ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡುತ್ತಿದ್ದಾರೆ. ವಾಸ್ತವವಾಗಿ ಟ್ರಂಪ್ ಅವರನ್ನು ಕೆಲವು ಕಾರಣಗಳಿಗಾಗಿ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ನಿಷೇಧಿಸಲಾಗಿದೆ ಮತ್ತು ಇದೀಗ ಅವರು ತಮ್ಮದೇ ಆದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುತ್ತಿದ್ದಾರೆ.

  ಟ್ವಿಟರ್‌ನಂತೆಯೇ, ಬಳಕೆದಾರರು ಈ ಅಪ್ಲಿಕೇಶನ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಾಕಬಹುದಾಗಿದೆ. ವೈಯ್ಯಕ್ತಿಕ ಪೋಸ್ಟ್‌ಗಳಿಗೂ ಅವಕಾಶ ತೆರೆದಿಟ್ಟಿದೆ, ಅಂದಹಾಗೆಯೇ ಇಲ್ಲಿ ಸತ್ಯಾಂಶಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಂದರೆ ಇಲ್ಲಿ ಸತ್ಯವನ್ನು ಮಾತ್ರ ಬರೆಯುವ ಅಥವಾ ಮಾತನಾಡುವ ಅಪ್ಲಿಕೇಶನ್ ಆಗಿದೆ. ಬಳಕೆದಾರರು ಪರಸ್ಪರ ಅನುಸರಿಸಲು ಮತ್ತು ಇತ್ತೀಚಿನ ಟ್ರೆಂಡ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಡೊನಾಲ್ಡ್ ಟ್ರಂಪ್ ಈ ಅಪ್ಲಿಕೇಶನ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಾರೆ.

  ಇದನ್ನು ಓದಿ: Flipkart Big Bachat Dhamaal Sale: ಬರೀ 24 ರೂ.ಗೆ ಸ್ಯಾಮ್​ಸಂಗ್​ ಗ್ಯಾಲಕ್ಸಿ F​12 ಸ್ಮಾರ್ಟ್​ಫೋನ್​ ಖರೀದಿಸಿ

  ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ (ಟಿಎಂಟಿಜಿ) ನಿಂದ 'ಟ್ರೂತ್ ಸೋಶಿಯಲ್' ಅನ್ನು ರಚಿಸಲಾಗಿದೆ, ಆದರೆ ಸದ್ಯಕ್ಕೆ ಈ ಅಪ್ಲಿಕೇಶನ್ ಬಗ್ಗೆ ಎಲ್ಲರೂ ಮೌನ ವಹಿಸಿದ್ದಾರೆ. ಆದಾಗ್ಯೂ, ಫೆಬ್ರವರಿ 21 ರಂದು ಇದನ್ನು ಪ್ರಾರಂಭಿಸಲಾಗುವುದು ಎಂದು ರಾಯಿಟರ್ಸ್ ಖಚಿತಪಡಿಸಿದೆ. ಈ ಅಪ್ಲಿಕೇಶನ್‌ನ ಪೂರ್ವ-ಆರ್ಡರ್‌ಗಳನ್ನು ಪ್ರಾರಂಭಿಸಲಾಗಿದೆ.

  ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್​ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಮುಖ್ಯವಾಗಿ ಉದ್ಯಮಿಯಾದ ಅವರು ಹಲವಾರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಜನರನ್ನು ಹಿಡಿದಿಟ್ಟುಕೊಳ್ಳಲು ಮತ್ತು ತಮ್ಮ ನಿಲುವನ್ನು ತೋರ್ಪಡಿಸುವ ಸಲುವಾಗಿ ತಾನೇ ಹೊಸ ಅಪ್ಲಿಕೇಶನ್​ ಅನ್ನು ಸಿದ್ಧಪಡಿಸಿದ್ದಾರೆ. ಇದೇ ಫೆಬ್ರವರಿ ತಿಂಗಳಿನಲ್ಲಿ ನೂತನ ಅಪ್ಲಿಕೇಶನ್​ ಅನ್ನು ಪರಿಚಯಿಸುತ್ತಿದ್ದಾರೆ.

  ಇದನ್ನು ಓದಿ: Xiaomi 11i ಹೈಪರ್‌ಚಾರ್ಜರ್ ಸ್ಮಾರ್ಟ್‌ಫೋನ್‌ ಎಂಟ್ರಿ, ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತೆ ಈ ಫೋನ್!

  ಈಗಾಗಲೇ ಸಾಕಷ್ಟು ಅಪ್ಲಿಕೇಶನ್​ಗಳನ್ನು ಜನರು ಬಳಸುತ್ತಿದ್ದಾರೆ. ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಂ ಬಹು ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಅತ್ತ ಫೇಸ್​ಬುಕ್​ ತನ್ನ ಹೆಸರು ಬದಲಾಯಿಸಿ ಮೆಟಾ ಎಂದು ಮರು ನಾಮಕರಣ ಮಾಡಿದೆ. ಮತ್ತು ಮೆಟಾವರ್ಸ್​ನತ್ತು ಮಾರ್ಕ್​ ಜುಕರ್​ಬರ್ಗ್​ ಚಿಂತಿಸುತ್ತಿದ್ದಾರೆ. ಇವೆಲ್ಲದರ ನಡುವೆವ ಇದೀಗ ಟ್ರಂಫ್​ ಟ್ರುತ್​ ಸೋಷಿಯಲ್​ ಎಂಬ ಹೊಸ ಅಪ್ಲಿಕೇಶನ್​ ತರುತ್ತಿದ್ದಾರೆ. ಆದರೆ ಇದು ಜನಪ್ರಿಯತೆ ಪಡೆಯಲಿದೆಯಾ ಎಂದು ನೋಡಬೇಕಿದೆ.
  Published by:Harshith AS
  First published: