ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳ (Mobile) ಬಳಕೆ ವ್ಯಾಪಕವಾಗಿ ಹಬ್ಬಿದೆ. ಅದೇ ರೀತಿ ಇಂಟರ್ನೆಟ್ ಅನ್ನು ಬಳಕೆ ಮಾಡುವವರು ಸಹ ಹೆಚ್ಚಾಗಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಇಂಟರ್ನೆಟ್ಗಳು (Internet) ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ಮುಖ್ಉವಾಗಿ ಕಾಣುವ ಸಮಸ್ಯೆಯೆಂದರೆ ನೆಟ್ವರ್ಕ್ ಸಮಸ್ಯೆ (network Problem). ಎಷ್ಟೇ ಡೇಟಾ ಪ್ಯಾಕ್ ಇದ್ದರೂ ಕೆಲವೊಂದಿ ಬಾರಿ ಇಂಟರ್ನೆಟ್ ಕೆಲಸವೇ ಮಾಡುದಿಲ್ಲ. ಹೆಚ್ಚಾಗಿ ಏನಾದರೂ ತುರ್ತು ಕೆಲಸದಲ್ಲಿದ್ದಾಗ, ಏನಾದರೂ ಬ್ರೌಸ್ ಮಾಡುತ್ತಿರುವಾಹ ಈ ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಆದರೆ ಇದಕ್ಕೆ ಕೆಲವೊಂದು ಕಾರಣಗಳಿವೆ. ಕೆಲವೊಮ್ಮೆ ಮೊಬೈಲ್ನ ಸೆಟ್ಟಿಂಗ್ಸ್ನಿಂದ ನಿಮ್ಮ ಇಂಟರ್ನೆಟ್ ಅನ್ನು ಸ್ಪೀಡ್ ಮಾಡ್ಬಹುದು. ಆದರೆ ಅದಕ್ಕೆ ಕೆಲವೊಂದಿ ಟ್ರಿಕ್ಸ್ಗಳಿವೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?, ಇದಕ್ಕೇ ಏನು ಮಾಡೋದು ಅನ್ನೋ ಚಿಂತೆಯಲ್ಲಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್. ಈ ಟ್ರಿಕ್ಸ್ ಸರಿಯಾಗಿ ಫಾಲೋ ಮಾಡಿದ್ರೆ ಗ್ಯಾರಂಟಿ ನಿಮ್ಮ ಇಂಟರ್ನೆಟ್ ಸ್ಪೀಡ್ ಆಗಿ ಕಾರ್ಯನಿರ್ವಹಿಸುತ್ತದೆ.
ನಿಮ್ಮ ಸ್ಮಾರ್ಟ್ಫೋನ್ನ ಇಂಟರ್ನೆಟ್ ಸ್ಪೀಡ್ ಮಾಡೋದು ಹೇಗೆ?
ಮೊಬೈಲ್ ಅನ್ನು ರೀಸ್ಟಾರ್ಟ್ ಮಾಡಿ
ನಿಮ್ಮ ಮೊಬೈಲ್ನಲ್ಲಿ ಡೇಟಾ ಇದ್ದರೂ ಇಂಟರ್ನೆಟ್ ಸರಿಯಾಗಿ ಕೆಲಸಮಾಡುತ್ತಿಲ್ಲ ಎಂದಾಗ ಮೊದಲು ನಿಮ್ಮ ಸ್ಮಾರ್ಟ್ಫೋನ್ ಅನ್ನು ರೀಸ್ಟಾರ್ಟ್ ಮಾಡಿ. ಇದರಿಂದ ನಿಮ್ಮ ಸ್ಮಾರ್ಟ್ಫೋನ್ ಫ್ರೀ ಆಗುತ್ತದೆ. ಕೆಲವೊಮ್ಮೆ ಮೊಬೈಲ್ ಬಳಕೆ ಹೆಚ್ಚಾದಾಗ ಈ ರೀತಿಯ ತೊಂದರೆಗಳು ಎದುರಾಗುತ್ತದೆ. ಹಾಗಿದ್ದಾಗ ರೀಸ್ಟಾರ್ಟ್ ಮಾಡುವುದು ಉತ್ತಮ.
ಇದನ್ನೂ ಓದಿ: ಒಂದೇ ಕಂಪೆನಿಯಿಂದ 2 ಸ್ಮಾರ್ಟ್ವಾಚ್ಗಳು ಭಾರತದಲ್ಲಿ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್?
ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ
ನಿಮ್ಮ ಮೊಬೈಲ್ನಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾದಾಗ ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ. ಆದರೆ ಸ್ವಲ್ಪ ನಂತರದ ನಂತರ ಅದನ್ನು ಆಫ್ ಮಾಡಿ. ಇದರಿಂದ ನಿಮ್ಮ ಮೊಬೈಲ್ ನೆಟ್ವರ್ಕ್ ಸೆಟ್ಟಿಂಗ್ಗಳು ಒಮ್ಮೆ ಸರಿಯಾಗುವ ಚಾನ್ಸಸ್ ಇರುತ್ತದೆ.
ಮೊಬೈಲ್ನ ನೆಟ್ವರ್ಕ್ ಆಯ್ಕೆಯನ್ನು ಬದಲಾಯಿಸಿ
ಪ್ರತಿಯೊಂದು ಮೊಬೈಲ್ನಲ್ಲಿ ನೆಟ್ವರ್ಕ್ ಆಯ್ಕೆಗಳು ಇರುತ್ತವೆ. ಆದರೆ ಬಳಕೆದಾರರ ಸ್ಥಳಗಳಿಗೆ ತಕ್ಕಂತೆ ಅದು ಕಾರ್ಯನಿರ್ವಹಿಸುತ್ತದೆ. ಕೆಲವರು ತಮ್ಮ ಮೊಬೈಲ್ಗಳಲ್ಲಿ 2 ಸಿಮ್ಗಳನ್ನು ಹೊಂದಿರುತ್ತಾರೆ. ನೆಟ್ವರ್ಕ್ ಸಮಸ್ಯೆ ಎದುರಾದಾಗ ಬಳಕೆದಾರರಿಗೆ ಸೂಕ್ತ ಎನಿಸುವ ನೆಟ್ವರ್ಕ್ ಅನ್ನು ಸೆಲೆಕ್ಟ್ ಮಾಡುವುದು ಉತ್ತಮ.
ಮೊಬೈಲ್ನಲ್ಲಿರುವ ಸಿಮ್ ಅನ್ನು ಒಮ್ಮೆ ಪರಿಶೀಲಿಸಿ
ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಮೊಬೈಲ್ಗಳು ಕೆಳಗೆ ಬೀಳುತ್ತವೆ. ಆಗ ಸಿಮ್ನ ಜಾಗ ಬದಲಾವಣೆಯಾಗುತ್ತದೆ. ಅಥವಾ ಕೆಲವೊಂದು ಸಂದರ್ಭದಲ್ಲಿ ನೆಟ್ವರ್ಕ್ ಇಲ್ಲದೇ ಇರುವಾಗ ಸಿಮ್ ಅನ್ನು ಒಮ್ಮೆ ತೆಗೆದು ಮತ್ತೆ ಸೇರಿಸಬೇಕು. ಯಾಕೆಂದರೆ ಇದರಿಂದ ನಿಮ್ಮ ನೆಟ್ವರ್ಕ್ ಸರಿಹೊಂದುವ ಚಾನ್ಸಸ್ ಹೆಚ್ಚಿರುತ್ತದೆ.
ಮೊಬೈಲ್ ಅಪ್ಡೇಟ್ ಮಾಡಿದ್ದೀರಾ ಎಂದು ಪರೀಕ್ಷಿಸಿ
ಸ್ಮಾರ್ಟ್ಫೋನ್ ಹೊಂದಿರುವವರು ಸಾಫ್ಟ್ವೇರ್ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಇದರಿಂದ ಸ್ಮಾರ್ಟ್ಫೋನ್ನಲ್ಲಿರುವಂತ ಫೀಚರ್ಸ್ ಇನ್ನೂ ಗುಣಮಟ್ಟದಲ್ಲಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಹಾಗೇ ಈ ಸ್ಮಾರ್ಟ್ಫೋನ್ಗಳಲ್ಲಿ ಕೆಲವೊಮ್ಮೆ ಇಂಟರ್ನೆಟ್ ಸಮಸ್ಯೆಗಳು ಸಾಫ್ಟ್ವೇರ್ ಅಪ್ಡೇಟ್ ಆಗದೇ ಇರುವ ಸಂದರ್ಭಗಳಲ್ಲಿ ಎದುರಾಗುತ್ತದೆ. ಇದಕ್ಕೆ ಮೊದಲು ಬಳಕೆದಾರರು ಸಾಫ್ಟ್ವೇರ್ ಅಪ್ಡೇಟ್ ಆಗಿದೇಯೋ? ಇಲ್ಲವೋ? ಎಂದು ಚೆಕ್ ಮಾಡಿಕೊಳ್ಳಬೇಕು.
ಸೆಟ್ಟಿಂಗ್ಸ್ನಲ್ಲಿ ನೆಟ್ವರ್ಕ್ ಲಿಮಿಟ್ ಅನ್ನು ಚೆಕ್ ಮಾಡಿ
ಪ್ರತಿಯೊಂದು ಸ್ಮಾರ್ಟ್ಫೋನ್ಗಳಲ್ಲಿ ಅದರದೇ ಆದಂತಹ ನೆಟ್ವರ್ಕ್ ಲಿಮಿಟ್ಗಳ ಸೆಟ್ಟಿಂಗ್ಗಳಿರುತ್ತದೆ. 4ಜಿ, 3ಜಿ ಈ ರೀತಿಯ ನೆಟ್ವರ್ಕ್ ಅನ್ನು ಆಯ್ಕೆ ಮಾಡಿದ್ದಾಗ ಅದರ ವೇಗ ಕೂಡ ಅಷ್ಟೇ ಮಿತಿಯಲ್ಲಿರುತ್ತದೆ. ಅದಕ್ಕಾಗಿ ಅದರ ಮಿತಿ ಎಷ್ಟಿದೆ ಎಂದು ನೋಡಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ