• Home
 • »
 • News
 • »
 • tech
 • »
 • Technology: ಟಿವಿ, ಫ್ರಿಡ್ಜ್‌ ಅಂತ ದುಂದು ವೆಚ್ಚ ಬೇಡ, ಹಣ ಉಳಿಸಿಕೊಳ್ಳಿ: ಅಮೆಜಾನ್‌ ಸಂಸ್ಥಾಪಕ ಎಚ್ಚರಿಕೆ

Technology: ಟಿವಿ, ಫ್ರಿಡ್ಜ್‌ ಅಂತ ದುಂದು ವೆಚ್ಚ ಬೇಡ, ಹಣ ಉಳಿಸಿಕೊಳ್ಳಿ: ಅಮೆಜಾನ್‌ ಸಂಸ್ಥಾಪಕ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಏರಿಕೆ ಮುಂತಾದ ಬಿಗಿ ವಿತ್ತೀಯ ಕ್ರಮಗಳ ಮೊರೆ ಹೋಗುತ್ತಿರುವುದರ ಹಿನ್ನೆಲೆ ಮುಂದಿನ ವರ್ಷ ಆರ್ಥಿಕ ಹಿಂಜರಿತ ಉಂಟಾಗಬಹುದು ಎಂದು ಸ್ವತಃ ವಿಶ್ವಬ್ಯಾಂಕ್‌ ಕೂಡ ಎಚ್ಚರಿಕೆ ನೀಡಿದೆ.

 • Share this:

  ಆರ್ಥಿಕ ಹಿಂಜರಿತ ಭೀತಿ ಈಗ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಕೋವಿಡ್ (Covid) ಸಾಂಕ್ರಾಮಿಕದ ನಂತರದಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಪೂರೈಕೆ ಸರಿಯಾಗಿ ಇಲ್ಲದಿರುವ ಕಾರಣ ಜಗತ್ತಿನ ಎಲ್ಲೆಡೆ ಹಣದುಬ್ಬರ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ ರಷ್ಯಾ - ಉಕ್ರೇನ್ (Russia - Ukrane War) ಯುದ್ಧ, ಚೀನಾದ ಮರು ಲಾಕ್​ಡೌನ್ (Lockdown) ಹೀಗೆ ಎಲ್ಲವೂ ಹಣದುಬ್ಬರದ ಸಮಸ್ಯೆಯನ್ನು ತೀವ್ರಗೊಳಿಸಿದೆ. ಅದ್ರಲ್ಲೂ ಈ ಕೋವಿಡ್ ಲಾಕ್​ಡೌನ್ ಆದಾಗಿನಿಂದ ಪ್ರಪಂಚದಾದ್ಯಂತ ಸಮಸ್ಯೆಗಳ ಮಧ್ಯೆ ಸಮಸ್ಯೆಗಳು ಬರುತ್ತನೇ ಇವೆ. ಇದರಿಂದ ಉದ್ಯೋಗ ಸಮಸ್ಯೆ, ವ್ಯವಹಾರದಲ್ಲಿ ನಷ್ಟ ಇವೆಲ್ಲವನ್ನೂ ಜನರು ಅನುಭವಿಸುತ್ತಿದ್ದಾರೆ.


  ಆರ್ಥಿಕ ಹಿಂಜರಿತ ಭೀತಿ


  ಹಲವಾರು ಪ್ರತಿಷ್ಠಿತ ಕಂಪನಿಗಳು ಸಹ ಮುಂದೆ ಆರ್ಥಿಕ ಹಿಂಜರಿತ ಎದುರಿಸಬೇಕಾಗುವ ದೃಷ್ಟಿಕೋನದಿಂದ ನೌಕರರನ್ನು ವಜಾಗೊಳಿಸುತ್ತಿದೆ. ಈಗಾಗಲೇ ಟ್ವಿಟರ್‌, ಫೇಸ್‌ಬುಕ್‌, ಮೈಕ್ರೋಸಾಫ್ಟ್‌ ಸೇರಿದಂತೆ ದೈತ್ಯ ಕಂಪನಿಗಳೆಲ್ಲಾ ಉದ್ಯೋಗ ಕಡಿತ ಘೋಷಿಸಿವೆ, ಅಮೆಜಾನ್‌ ಕೂಡ ಉದ್ಯೋಗಿಗಳನ್ನು ತೆಗೆದುಹಾಕುವ ಬಗ್ಗೆ ಯೋಜಿಸಿದೆ.


  ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಏರಿಕೆ ಮುಂತಾದ ಬಿಗಿ ವಿತ್ತೀಯ ಕ್ರಮಗಳ ಮೊರೆ ಹೋಗುತ್ತಿರುವುದರ ಹಿನ್ನೆಲೆ ಮುಂದಿನ ವರ್ಷ ಆರ್ಥಿಕ ಹಿಂಜರಿತ ಉಂಟಾಗಬಹುದು ಎಂದು ಸ್ವತಃ ವಿಶ್ವಬ್ಯಾಂಕ್‌ ಕೂಡ ಎಚ್ಚರಿಕೆ ನೀಡಿದೆ.


  ಇದನ್ನೂ ಓದಿ: 2022 ರಲ್ಲಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ 10 ದೇಶಗಳ ಪಟ್ಟಿ!


  ದುಂದು ವೆಚ್ಚ ಬೇಡ.. ಹಣ ಉಳಿತಾಯ ಮಾಡಿ - ಜೆಫ್ ಬೆಜೋಸ್


  ವಿಶ್ವಬ್ಯಾಂಕ್‌ ಎಚ್ಚರಿಕೆಯ ಬೆನ್ನಲ್ಲೇ ಅಮೆಜಾನ್ ಸಂಸ್ಥಾಪಕ ಮತ್ತು ಬಿಲಿಯನೇರ್ ಜೆಫ್ ಬೆಜೋಸ್ ಕೂಡ ಮತ್ತೊಂದು ಎಚ್ಚರಿಕೆಯನ್ನು ಜನರಿಗೆ ರವಾನಿಸಿದ್ದಾರೆ. ಜೆಫ್ ಬೆಜೋಸ್ ಗ್ರಾಹಕರು ಮತ್ತು ವ್ಯವಹಾರಗಳಿಗೆ ಎಚ್ಚರಿಕೆ ನೀಡಿದ್ದು, ಜಾಗತಿಕ ಹಿಂಜರಿತ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ, ದೊಡ್ಡ ಖರ್ಚುಗಳನ್ನು ಮುಂದೂಡಿ ಎಂಬ ಸಲಹೆ ಮೂಲಕ ಎಚ್ಚರಿಕೆ ನೀಡಿದ್ದಾರೆ.


   Don t splurge on TV fridge save money Amazon founder warns
  ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್


  ‘ನಿಮ್ಮ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಮುಂದಿನ ತಿಂಗಳುಗಳಲ್ಲಿ ಅನಗತ್ಯ ಖರ್ಚುಗಳನ್ನುಮಾಡಬೇಡಿ. ಹೊಸ ಕಾರು, ಟಿವಿ, ಫ್ರಿಡ್ಜ್ ಖರೀದಿ ಮಾಡಬೇಡಿ. ರಜಾ ದಿನಗಳಲ್ಲಿ ಅನಗತ್ಯ ವೆಚ್ಚ ಬೇಡ ಎಂದು ಸಲಹೆ ನೀಡಿದ್ದಾರೆ.


  ಸಿಎನ್‌ಎನ್‌ನೊಂದಿಗೆ ಮಾತನಾಡುತ್ತಾ, ಜೆಫ್ ಬೆಜೋಸ್ ಗ್ರಾಹಕರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಮತ್ತು ಮುಂಬರುವ ತಿಂಗಳುಗಳಲ್ಲಿ ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಲು ಸಲಹೆ ನೀಡಿದರು.


  ಯುನೈಟೆಡ್ ಸ್ಟೇಟ್ಸ್ ಆರ್ಥಿಕ ಹಿಂಜರಿತವನ್ನು ನೋಡುತ್ತಿರುವ ಕಾರಣ ಹೊಸ ಕಾರುಗಳು ಮತ್ತು ಟಿವಿಗಳಂತಹ ದೊಡ್ಡ ಮೊತ್ತದ ವಸ್ತುಗಳ ಖರೀದಿಯನ್ನು ಅಮೆರಿಕನ್ ಕುಟುಂಬಗಳು ಸೇರಿ ಎಲ್ಲರೂ ತಪ್ಪಿಸಬೇಕೆಂದು ಅವರು ಶಿಫಾರಸು ಮಾಡಿದರು.


  ದೊಡ್ಡ ಮೊತ್ತದ ವಸ್ತುಗಳ ಖರೀದಿ ತಡೆಯಿಡಿಯಿರಿ


  "ನೀವು ದೊಡ್ಡ ಸ್ಕ್ರೀನ್‌ ಟಿವಿ ಖರೀದಿಸಲು ಪರಿಗಣಿಸುವ ವ್ಯಕ್ತಿಯಾಗಿದ್ದರೆ, ನಿಮ್ಮ ಯೋಜನೆಯನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳಿ. ಮತ್ತು ಕೈಯಲ್ಲಿ ಹಣವನ್ನು ಇಟ್ಟಕೊಳ್ಳಿ ಆಟೋಮೊಬೈಲ್, ರೆಫ್ರಿಜರೇಟರ್ ಅಥವಾ ಇನ್ನಾವುದೇ ದೊಡ್ಡ ಮೊತ್ತದ ವಸ್ತುಗಳ ಖರೀದಿಯಲ್ಲಿ ಒಂದು ಕ್ಷಣ ಯೋಚಿಸುವುದು ಒಳಿತು. ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಕೆಲವು ಅಪಾಯಗಳನ್ನು ಕಡಿಮೆ ಮಾಡಿದರೆ, ಸಣ್ಣ ಉದ್ಯಮದಲ್ಲಿ ಅಗಾಧ ಬದಲಾವಣೆ ಉಂಟಾಗಲಿದೆ‘ ಎಂದು ಅವರು ಹೇಳಿದ್ದಾರೆ.


  "ಆರ್ಥಿಕತೆ ಸ್ಥಿತಿ ಸರಿ ಇಲ್ಲ"


  ಪ್ರಸ್ತುತ ಆರ್ಥಿಕತೆ ಸರಿಯಾದ ಸ್ಥಿತಿಯಲ್ಲಿ ಇಲ್ಲ. ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಹಲವಾರು ಕಂಪನಿಗಳು ಕೆಲಸದಿಂದ ಈಗಾಗ್ಲೇ ನೂರಾರು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಹೀಗಾಗಿ ಹಣ ಉಳಿಸಿ. ರಜಾ ದಿನಗಳಲ್ಲಿ ಅನಗತ್ಯ ವೆಚ್ಚ ಬೇಡ ಎಂದು ಬೆಜೋಸ್ ಹೇಳಿದ್ದಾರೆ.


  ನಿವ್ವಳ ಮೌಲ್ಯದ ಬಹುಪಾಲು ಹಣವನ್ನು ದಾನ ಮಾಡಲು ನಿರ್ಧಾರ


  ಅದೇ ಸಂದರ್ಶನದಲ್ಲಿ ಇನ್ನಷ್ಟು ಮಾತನಾಡಿದ ಅಮೆಜಾನ್ ಸಂಸ್ಥಾಪಕರು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಬೆಳೆಯುತ್ತಿರುವ ಸಾಮಾಜಿಕ ಮತ್ತು ರಾಜಕೀಯ ವಿಭಜನೆಗಳ ನಡುವೆ ಮಾನವೀಯತೆಯನ್ನು ಏಕೀಕರಿಸುವ ಜನರನ್ನು ಬೆಂಬಲಿಸುವ ಸಲುವಾಗಿ ತನ್ನ $ 124 ಶತಕೋಟಿ ನಿವ್ವಳ ಮೌಲ್ಯದ ಬಹುಪಾಲು ಹಣವನ್ನು ದತ್ತಿಗಳಿಗೆ ದಾನ ಮಾಡುವುದಾಗಿ ಹೇಳಿದರು.

  Published by:Prajwal B
  First published: