• Home
  • »
  • News
  • »
  • tech
  • »
  • Telegram Features: ಟೆಲಿಗ್ರಾಮ್​ನಲ್ಲಿ ಹೊಸ ಅಪ್ಡೇಟ್ಸ್​! ಫೀಚರ್ಸ್​ ನೋಡಿ ಗಾಬರಿಯಾಗ್ಬೇಡಿ

Telegram Features: ಟೆಲಿಗ್ರಾಮ್​ನಲ್ಲಿ ಹೊಸ ಅಪ್ಡೇಟ್ಸ್​! ಫೀಚರ್ಸ್​ ನೋಡಿ ಗಾಬರಿಯಾಗ್ಬೇಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಟೆಲಿಗ್ರಾಮ್​ ಅಪ್ಲಿಕೇಶನ್​ ದೊಡ್ಡ ಮಟ್ಟಿನ ಫೈಲ್​ಗಳನ್ನು ಶೇರ್ ಮಾಡಲು, ಸಿನೆಮಾಗಳನ್ನು ಶೇರ್​ ಮಾಡಲು, ಡೌನ್​ಲೋಡ್​ ಮಾಡಲು ಬಹಳಷ್ಟು ಸಹಕಾರಿಯಾಗುವಂತಹ ಆ್ಯಪ್ ಆಗಿದೆ. ಈ ಹಿಂದೆಯೂ ಈ ಅಪ್ಲಿಕೇಶನ್ ಹಲವಾರು ಫೀಚರ್ಸ್​ ಅನ್ನು ಬಿಡುಗಡೆ ಮಾಡಿದೆ. ಇದೀಗ ಮತ್ತೆ ಹೊಸ ಫೀಚರ್ಸ್​​ಗಳನ್ನು ಪರಿಚಯಿಸಿದೆ. ಹಾಗಿದ್ರೆ ಈ ಬಾರಿ ಬಿಡುಗಡೆ ಮಾಡಿದ ಸ್ಪೆಷಲ್​ ಫೀಚರ್ಸ್​ಗಳು ಯಾವುದೆಲ್ಲಾ ಎಂಬುದನ್ನು ಇಲ್ಲಿ ತಿಳಿಯಿರಿ.

ಮುಂದೆ ಓದಿ ...
  • Share this:

    ಮೊಬೈಲ್​ ಅಪ್ಲಿಕೇಶನ್​ಗಳಲ್ಲಿ (Mobile Application) ಸಾಕಷ್ಟು ಮೆಸೇಜಿಂಗ್ ಅಪ್ಲಿಕೇಶನ್​ಗಳಿವೆ. ಅದ್ರಲ್ಲಿ ಟೆಲಿಗ್ರಾಂ ಕೂಡ (Telegram) ಒಂದು. ವಾಟ್ಸಾಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಅಪ್ಲಿಕೇಶನ್​​ಗಳು ಬರುವುದಕ್ಕಿಂತ ಮೊದಲು ಒಂದು ಜನಪ್ರಿಯ ಮೆಸೇಜಿಂಗ್​ ಅಪ್ಲಿಕೇಶನ್​ ಇದ್ದರೆ ಅದು ಟೆಲಿಗ್ರಾಮ್ ಅಂತಾನೇ ಹೇಳ್ಬಹುದು. ಸ್ವಲ್ಪ ದಿನಗಳ ನಂತರ ಮೊಬೈಲ್​ಗಳಲ್ಲಿ ವಾಟ್ಸಾಪ್ (WhatsApp)​ ಮೆಸೇಜಿಂಗ್ ಆ್ಯಪ್ ಆಗಿ ಬಹಳಷ್ಟು ಬಳಕೆದಾರರನ್ನು ಸೆಳೆಯಿತು. ತದನಂತರ ಟೆಲಿಗ್ರಾಮ್​ಅನ್ನು ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಯ್ತು. ಇದೀಗ ಕೆಲ ವರ್ಷಗಳಿಂದ ಟೆಲಿಗ್ರಾಮ್ ಮತ್ತೆ ಪ್ರಚಲಿತದಲ್ಲಿದೆ. ಅದೇ ರೀತಿ ಈ ಅಪ್ಲಿಕೇಶನ್ ಕೂಡ ಬಳಕೆದಾರರಿಗೆ ಇತ್ತೀಚೆಗೆ ಫೀಚರ್ಸ್​ಗಳನ್ನು ಬಿಡುಗಡೆ ಮಾಡಿದೆ. ಈ ಫೀಚರ್ಸ್​ಗಳೆಲ್ಲವೂ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಅಪ್ಲಿಕೇಶನ್​ನ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಪರಿಚಯಿಸಿದೆ ಎಂದು ಹೇಳಬಹುದು.


    ಟೆಲಿಗ್ರಾಮ್​ ಅಪ್ಲಿಕೇಶನ್​ ದೊಡ್ಡ ಮಟ್ಟಿನ ಫೈಲ್​ಗಳನ್ನು ಶೇರ್ ಮಾಡಲು, ಸಿನೆಮಾಗಳನ್ನು ಶೇರ್​ ಮಾಡಲು, ಡೌನ್​ಲೋಡ್​ ಮಾಡಲು ಬಹಳಷ್ಟು ಸಹಕಾರಿಯಾಗುವಂತಹ ಆ್ಯಪ್ ಆಗಿದೆ. ಈ ಹಿಂದೆಯೂ ಈ ಅಪ್ಲಿಕೇಶನ್ ಹಲವಾರು ಫೀಚರ್ಸ್​ ಅನ್ನು ಬಿಡುಗಡೆ ಮಾಡಿದೆ. ಇದೀಗ ಮತ್ತೆ ಹೊಸ ಫೀಚರ್ಸ್​​ಗಳನ್ನು ಪರಿಚಯಿಸಿದೆ. ಹಾಗಿದ್ರೆ ಈ ಬಾರಿ ಬಿಡುಗಡೆ ಮಾಡಿದ ಸ್ಪೆಷಲ್​ ಫೀಚರ್ಸ್​ಗಳು ಯಾವುದೆಲ್ಲಾ ಎಂಬುದನ್ನು ಇಲ್ಲಿ ತಿಳಿಯಿರಿ.


    ಬ್ಲರ್​ ಮಾಡುವ ಆಯ್ಕೆ


    ಎನ್‌ಕ್ರಿಪ್ಟ್ ಫೀಚರ್ಸ್‌ ಆಯ್ಕೆ ಇರುವ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ನ ಹೊಸ ಅಪ್ಡೇಟ್​​ ಆಗಿದೆ. ಇನ್ಮುಂದೆ ಬಳಕೆದಾರರು ಫೋಟೋ ಮತ್ತು ವಿಡಿಯೋಗಳ ಫೈಲ್​ಗಳನ್ನು ಹೈಡ್‌ ಮಾಡಲು ಅಥವಾ ಬ್ಲರ್‌ ಮಾಡಲು ಹೊಸ ಟೂಲ್ಸ್‌ ಅನ್ನು ಪರಿಚಯಿಸಲಾಗಿದೆ.z


    ಇದನ್ನೂ ಓದಿ: ಮೊಬೈಲ್​ನಲ್ಲಿರುವ ಕಾಂಟ್ಯಾಕ್ಟ್​ ಡಿಲೀಟ್​​ ಆಗಿದ್ಯಾ? ಈ ಟ್ರಿಕ್ಸ್​ ಮೂಲಕ ಸುಲಭದಲ್ಲಿ ಬ್ಯಾಕಪ್​ ಮಾಡಿ


    ಹೈಡ್​ ಮಾಡಬಹುದು 


    ಕೆಲವು ನೀತಿ ನಿಯಮಗಳ ಅನುಸಾರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಸೂಕ್ಷ್ಮ ಮಾಹಿತಿಯನ್ನು ಇದ್ದ ಹಾಗೆಯೇ ತೋರಿಸಬಾರದು. ಇದನ್ನು ಮರೆಮಾಚಲೆಂದೇ ಹಲವಾರು ಪ್ಲಾಟ್‌ಫಾರ್ಮ್‌ಗಳು ಇದಕ್ಕೆ ಸಂಬಂಧಿಸಿದ ಟೂಲ್ಸ್‌ಗಳನ್ನು ನೀಡಿದೆ. ಹಾಗೆಯೇ ಈಗ ಟೆಲಿಗ್ರಾಮ್‌ನಲ್ಲಿ ಈ ಹೊಸ ಸೌಲಭ್ಯ ಕಲ್ಪಿಸಲಾಗಿದ್ದು, ಅನಗತ್ಯ ಹಾಗೂ ಸೂಕ್ಷ್ಮ ವಿಷಯಗಳನ್ನು ಸುಲಭವಾಗಿ ಬ್ಲರ್‌ ಮಾಡಬಹುದಾಗಿದೆ.


    ಸಾಂಕೇತಿಕ ಚಿತ್ರ


    ಬ್ಲರ್​ ಮಾಡುವ ಟೂಲ್ಸ್​


    ಇನ್ನು ಸೂಕ್ಷ್ಮ ವಿಷಯವನ್ನು ಬ್ಲರ್‌ ಮಾಡಲು ಅಥವಾ ಇಮೇಜ್‌ಗೆ ಬ್ಲರ್ ಬ್ರಷ್‌ನ ಬಣ್ಣವನ್ನು ಹೊಂದಿಸಲು ಐಡ್ರಾಪರ್ ಟೂಲ್ಸ್‌ಗಳನ್ನು ಬಳಕೆ ಮಾಡಬಹುದು ಎಂದು ಟೆಲಿಗ್ರಾಮ್‌ ಮಾಹಿತಿ ನೀಡಿದೆ. ಹಾಗೆಯೇ ಚಿತ್ರಗಳು ಅಥವಾ ವಿಡಿಯೋಗಳಿಗೆ ಟೆಕ್ಸ್ಟ್​ ಆ್ಯಡ್ ಮಾಡುವಾಗ, ಟೆಕ್ಸ್ಟ್​​ನ ಗಾತ್ರ, ಫಾಂಟ್ ಮತ್ತು ಬ್ಯಾಕ್‌ಡ್ರಾಪ್ ಅನ್ನು ಹೊಂದಿಸುವ ಅವಕಾಶವನ್ನು ಟೆಲಿಗ್ರಾಮ್ ಈ ಫೀಚರ್ಸ್‌ ನಲ್ಲಿ ನೀಡಿದೆ.


    ಎಡಿಟಿಂಗ್‌ ಆಯ್ಕೆಯಲ್ಲಿ ಪ್ಲಸ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಆಯತಾಕಾರ, ಬಾಣದ ಆಕಾರ, ನಕ್ಷತ್ರದಾಕಾರ ಮತ್ತು ಬಬಲ್‌ಗಳಂತಹ ಆಕಾರಗಳನ್ನು ನಿಮ್ಮ ಚಿತ್ರ, ವಿಡಿಯೋಗಳಿಗೆ ಸೇರಿಸಬಹುದಾಗಿದೆ. ಹಾಗೆಯೇ ಬ್ಲರ್ ಮಾಡಲಾಗುವ ಚಿತ್ರ ಅಥವಾ ವಿಡಿಯೋಗೆ ಮಿನುಗುವ ಲೇಯರ್ ಆಯ್ಕೆ ಇರುವ ಸ್ಪಾಯ್ಲರ್ ಎಫೆಕ್ಟ್‌ ಅನ್ನು ಸಹ ಬಳಕೆದಾರರು ಹಾಕಬಹುದು ಎಂದು ಟೆಲಿಗ್ರಾಂ ಹೇಳಿದೆ.


    ಸಾಂಕೇತಿಕ ಚಿತ್ರ


    ಸ್ಟೋರೇಜ್​ ಸೆಲೆಕ್ಷನ್​ ಫೀಚರ್ಸ್​


    ಟೆಲಿಗ್ರಾಮ್​ ಇತ್ತೀಚೆಗೆ ಸ್ಟೋರೇಜ್​ ಗೆ ಸಂಬಂಧಿಸಿದ ಫೀಚರ್ಸ್​ಗಳನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ಬಿಡುಗಡೆ ಮಾಡಿದೆ. ಈ ಮೂಲಕ ಖಾಸಗಿ ಚ್ಯಾಟ್​ಗಳು, ಗ್ರೂಪ್‌ಗಳು ಮತ್ತು ಚಾನಲ್‌ಗಳಲ್ಲಿ ನೀವು ಆಯ್ಕೆ ಮಾಡಿದ ಚ್ಯಾಟ್​ಗಳನ್ನು ಹೊರತುಪಡಿಸಿ, ಬೇರೆ ಚ್ಯಾಟ್​ ಫೈಲ್​​ಗಳನ್ನು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುವಂತೆ ಮಾಡಬಹುದು. ಇದಲ್ಲದೆ ವಿಶೇಷವಾಗಿ ಈ ಡಿಲೀಟ್​ ಆದ ಫೈಲ್​ಗಳನ್ನು ಯಾವುದೇ ಸಂದರ್ಭದಲ್ಲೂ ರೀ ಡೌನ್​ಲೋಡ್​ ಮಾಡಿಕೊಳ್ಳುವ ಅವಕಾಶವೂ ಇದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು