• Home
 • »
 • News
 • »
 • tech
 • »
 • Tech Tips: ಆನ್​ಲೈನ್​ ಆಫರ್​ನಿಂದ ಮೋಸ ಹೋಗ್ಬೇಡಿ,​ ಬುಕ್​ ಮಾಡೋ ಮುನ್ನ ಎಚ್ಚರ!

Tech Tips: ಆನ್​ಲೈನ್​ ಆಫರ್​ನಿಂದ ಮೋಸ ಹೋಗ್ಬೇಡಿ,​ ಬುಕ್​ ಮಾಡೋ ಮುನ್ನ ಎಚ್ಚರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಆನ್​ಲೈನ್​ನಲ್ಲಿಇಕಾಮರ್ಸ್​ ವೆನ್​ಸೈಟ್​ನಲ್ಲೊಂದು ಆಫರ್​ ಇದೆ ಎಂದು ಹೇಳಿ ಮಂಡ್ಯದ ಆಟೋ ಚಾಲಕರೊಬ್ಬರು ಪ್ರೊಡಕ್ಟ್​ ಬುಕ್​ ಮಾಡಿದ್ದರು. ಆದರೆ ಆರ್ಡರ್ ಮಾಡಿದ್ದೇನೋ, ಕೊನೆಗೆ ಬಂದಿದ್ದೇನೋ. ಹಾಗಿದ್ರೆ ಅಷ್ಟಕ್ಕೂ ಆ ವ್ಯಕ್ತಿಗೆ ಬಂದ ಪ್ರೊಡಕ್ಟ್​ ಏನು, ಸೈಬರ್ ವಂಚಕರು ಯಾವ ರೀತಿ ವಂಚನೆ ಮಾಡ್ತಾರೆ ಎಂಬುದನ್ನೆಲ್ಲಾ ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
 • Share this:

  ಇತ್ತೀಚೆಗೆ ಟೆಕ್ನಾಲಜಿ (Technology) ಬಹಳಷ್ಟು ಮುಂದುವರೆದಿದೆ ಅಂತಾನೇ ಹೇಳ್ಬಹುದು. ಯಾವುದೇ ಆಹಾರ, ಪ್ರೊಡಕ್ಟ್​, ಇನ್ನಿತರ ಸಾಮಾಗ್ರಿಗಳು ಬೇಕಾದ್ರೂ ಆನ್​ಲೈನ್​ನಲ್ಲಿ (Online Booking) ಬುಕ್​ ಮಾಡಿದ್ರೆ ಸಾಕು ಕ್ಷಣಮಾತ್ರದಲ್ಲಿ ನಿಮ್ಮ ಕೈಗೆ ಬಂದು ಸೇರುತ್ತೆ. ಆದರೆ ಇತ್ತೀಚೆಗೆ ಆನ್​ಲೈನ್​ನಲ್ಲಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.ಟೆಕ್ನಾಲಜಿ ಎಷ್ಟು ಮುಂದುವರೆಯುತ್ತಿದೆಯೋ ಅಷ್ಟೇ ಅದರ ದುರ್ಬಳಕೆಯೂ ಆಗ್ತಾಇದೆ. ಜನರನ್ನು ಮೋಸ ಮಾಡುವ ಜಾಲಕ್ಕೆ ಕೆಲ ವಂಚಕರು ಪ್ರಯತ್ನ ಪಡ್ತಾ ಇದ್ದಾರೆ. ಇದೀಗ ಆನ್​ಲೈನ್​ ಮೂಲಕ ಆರ್ಡರ್ (Online Order) ಮಾಡಿ ಮೋಸ ಹೋದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಆಟೋ ಚಾಲಕರೊಬ್ಬರು ಆಫರ್ (Offers) ​ನೋಡಿ ಪ್ರೊಡಕ್ಟ್​ ಬುಕ್​ ಮಾಡಿದ್ದು ಏನೋ, ಆದರೆ ಬಂದದ್ದೇನೋ. ಈ ಮೂಲಕ ಆಟೋ ಚಾಲಕರು ಆನ್​ಲೈನ್​ನಲ್ಲಿ ಪ್ರೊಡಕ್ಟ್​ ಬುಕ್ ಮಾಡುವಾಗ ಎಚ್ಚರವಹಿಸಿ ಎಂದಿದ್ದಾರೆ.


  ಹೌದು, ಆನ್​ಲೈನ್​ನಲ್ಲಿ ನಾವು ಏನಾದರೂ ಆಫರ್​ ಕಂಡಾಗ ಬೇಗನೆ ಅದನ್ನು ಬುಕ್​ ಮಾಡಲು ಮುಂದಾಗ್ತೇವೆ. ಆದರೆ ಅದರ ನೈಜತೆಯನ್ನು ನಾವು ನೋಡಲು ಹೋಗುವುದಿಲ್ಲ. ಈ ಸಂದರ್ಭದಲ್ಲಿ ಸೈಬರ್​ ವಂಚಕರಿಗೆ, ಆನ್​ಲೈನ್​ನಲ್ಲಿ ವಂಚನೆ ಮಾಡುವವರಿಗೆ ತುಂಬಾನೇ ಸಹಕಾರಿಯಾಗುತ್ತದೆ.


  ಅಪರಿಸಚಿತ ನಂಬರ್​ನಿಂದ ಕಾಲ್​ ಬಂದ್ರೆ ಎಚ್ಚರ


  ಈ ಹಿಂದೆ ಸೈಬರ್ ವಂಚನೆಗಳನ್ನು ಆನ್​ಲೈನ್​ ಮೆಸೇಜ್ ಮೂಲಕ, ಲಿಂಕ್ ಸೆಂಡ್​ ಮಾಡುವ ಮೂಲಕ ಮಾಡುತ್ತಿದ್ದರು. ಇದೀಗ ಕೇವಲ ಒಂದು ಕಾಲ್​ನಲ್ಲಿ, ಓಟಿಪಿ ನಂಬರ್ ಮೂಲಕ ವಂಚನೆ ಮಾಡಲಾರಂಬಿಸಿದ್ದಾರೆ. ಯಾರೇ ಆಗಲಿ ಆಫರ್​ ಇದೆ ಎಂದು ಕಾಲ್​ ಮಾಡಿದಾಗ ಸಾವಿರ ಬಾರಿ ಯೋಚಿಸಿ. ಇಲ್ಲವಾದ್ರೆ ಮೋಸ ಹೋಗೋದು ಮಾತ್ರ ಗ್ಯಾರಂಟಿ. ಆನ್​ಲೈನ್ ಪ್ರೊಡಕ್ಟ್​ ಮೇಲೆ ಆಫರ್​​ ಇದೆ ಎಂದು ಕಾಲ್ ಮಾಡ್ತಾರೆ ಅದನ್ನು ನಂಬಿ ಹಣ ಪಾವತಿಸಿದ್ರೆ ನಿಮಗೆ ಇನ್ನೇನೋ ಪ್ರೊಡಕ್ಟ್​ಗಳನ್ನು ಕಳುಹಿಸಿಕೊಡ್ತಾರೆ. ಇದೇ ರೀತಿಯ ಘಟನೆ ಇದೀಗ ಮಂಡ್ಯ ಜಿಲ್ಲೆಯ ಜಗನ್ನಾಥ ಎಂಬ ಆಟೋ ಚಾಲಕರೊಬ್ಬರಲ್ಲಿ ನಡೆದಿದೆ.


  ಇದನ್ನೂ ಓದಿ: ಟೆಕ್ನೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ನ ಫಸ್ಟ್​​ ಸೇಲ್ ಆರಂಭ! ಭರ್ಜರಿ ಆಫರ್ಸ್​ ಲಭ್ಯ


  ಘಟನೆಯ ವಿವರ


  ನ್ಯಾಪ್​​ಟೋಲ್ ಎಂಬ ಕಂಪನಿಯಿಂದ ಕಾಲ್​ ಮಾಡಿದ್ದು ಎಂದು ಹೇಳಿ ಸೈಬರ್ ವಂಚಕರು ಆಟೋ ಚಾಲಕರನ್ನ ಮೋಸ ಮಾಡಿದ್ದಾರೆ. ಈ ಮೂಲಕ ಕೇವಲ 2700 ರೂಪಾಯಿಗೆ ಸ್ಯಾಮ್​ಸಂಗ್​ ಎ50 ಸ್ಮಾರ್ಟ್​ಫೋನ್​, ಬ್ಲೂಟೂತ್ ಇಯರ್​ಬಡ್ಸ್​ ಹಾಗೂ ಪವರ್​ ಬ್ಯಾಂಕ್​ ನೀಡುವುದಾಗಿ ಆಫರ್ ನೀಡಿ ವಂಚನೆ ಮಾಡಿದ್ದಾರೆ. ಈ ಆಫರ್​ ಅನ್ನು ನಂಬಿದ್ದ ಆಟೋ ಚಾಲಕ ತಕ್ಷಣ ಹಿಂದುಮುಂದು ನೋಡದೇ ಹಣ ಪಾವತಿಸಿದ್ದಾರೆ.


  ಸಾಂಕೇತಿಕ ಚಿತ್ರ


  ಆಟೋಚಾಲಕನಿಗೆ ಡೆಲಿವರಿ ಬಾಕ್ಸ್​ ನೋಡಿ ಬಿಗ್​ ಶಾಕ್​


  ಕಂಪನಿ ಕೊಟ್ಟ ಆಫರ್ ನೋಡಿ ಆಟೋ ಚಾಲಕರು ಕಂಪನಿಗೆ ಹಣ ಪಾವತಿ ಮಾಡಿದ್ದರು. ನಂತರ ಪಾರ್ಸಲ್​ ಬಂತು. ಪಾರ್ಸಲ್ ಓಪನ್​ ಮಾಡಿದ ಬಳಿಕ ಆಟೋ ಚಾಲಕನಿಗೆ ಪ್ರಾಡಕ್ಟ್​ ನೋಡಿ ಶಾಕ್​ ಆಗಿದೆ.


  ಅಷ್ಟಕ್ಕೂ ಆ ಬಾಕ್ಸ್​ನಲ್ಲಿ ಏನಿತ್ತು?


  ಹೌದು, ಅಷ್ಟಕ್ಕೂ ಆಟೋ ಚಾಲಕ ಶಾಕ್ ಆಗಲು ಕಾರಣವೇನೆಂದರೆ ಅವರು ಬುಕ್​ ಮಾಡಿದ್ದು ಸ್ಯಾಮ್​ಸಂಗ್​ ಮೊಬೈಲ್​ ಅನ್ನು ಆದರೆ ಆ ಬಾಕ್ಸ್​ನಲ್ಲಿ ಇದ್ದದ್ದು ಮಾತ್ರ ಟಾರ್ಚ್​ ಮತ್ತು ಚೈನಾ ಕಂಪೆನಿಯ ಪವರ್​​ ಬ್ಯಾಂಕ್​. ಈ ಎರಡು ಸಾಧನಗಳನ್ನು ನೀಡಿ ನ್ಯಾಪ್​ಟೋಲ್​ ಕಂಪೆನಿಯ ಹೆಸರನ್ನು ಹೇಳಿ ವಂಚನೆ ಮಾಡಿದ್ದಾರೆ ಎಂದು ಕಂಪೆನಿಯನ್ನು ಜಗನ್ನಾಥ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು