HOME » NEWS » Tech » DOMINOS INDIA HACK 7 YEARS OF INTERNAL DOCS 10 LAKH CREDIT CARDS ON SALE FOR RS 3 4 CRORE HG

Dominos India Hack: ಪಿಜ್ಜಾ ಆರ್ಡರ್​ ಮಾಡಿದವರ ಮಾಹಿತಿ ಲೀಕ್​!

Dominos India Hack: ಹ್ಯಾಕರ್ಸ್​ ಟ್ವಿಟ್ಟರ್​ ಮೂಲಕ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕ್ರಿಪ್ಟೊಕರೆನ್ಸಿ ಓಮ್ನಿಕಾಯಿನ್​ ಎಸ್ಕೋ ಮಾಡೆಲ್​ ಮೂಲಕ 7.5 ಲಕ್ಷ ರೂ ಪಾವತಿಸಲು ಕೇಳಿದ್ದಾರೆ.

news18-kannada
Updated:April 20, 2021, 2:41 PM IST
Dominos India Hack: ಪಿಜ್ಜಾ ಆರ್ಡರ್​ ಮಾಡಿದವರ ಮಾಹಿತಿ ಲೀಕ್​!
ಪಿಜ್ಜಾ
  • Share this:
ಜನಪ್ರಿಯ ಪಿಜ್ಜಾ ವಿತರಣಾ ಕಂಪನಿಯಾದ ಡೊಮಿನೊಸ್ ಗ್ರಾಹಕರ ಡೇಟಾ ಲೀಕ್ ಆಗಿದೆ ಎಂಬ ಮಾಹಿತಿ ವರದಿಯಾಗಿದೆ. ಕಳೆದ ಏಳು ವರ್ಷಗಳಿಂದ ಕಂಪನಿಯು ಒಳಗೊಂಡ ದಾಖಲೆ, 250ಕ್ಕೂ ಹೆಚ್ಚು  ಉದ್ಯೋಗಿಗಳಿಗೆ ಸೇರಿದ ಡೇಟಾ ಮಾತ್ರವಲ್ಲದೆ, 18 ಕೋಟಿಗೂ ಹೆಚ್ಚಾ ಆಹಾರ ಆರ್ಡರ್​ ಮಾಡಿದ ಗ್ರಾಹಕ ವಿವರ ಮತ್ತು 10 ಲಕ್ಷಕ್ಕೂ ಹೆಚ್ಚು ಕ್ರೆಡಿಟ್​ ಕಾರ್ಡ್​ಗಳ ಮಾಹಿತಿ ಒಳಗೊಂಡ ಡೇಟಾ ಲೀಕ್​ ಆಗಿದೆ ಎಂದು ತಿಳಿದುಬಂದಿದೆ.

ಸೌರಜೀತ್​ ಮಜುಂದರ್​ ಎಂಬವರು ಈ ಡೇಟಾ ಲೀಕ್​ ಆಗಿರುವ ಬಗ್ಗೆ ವರದಿ ಮಾಡಿದ್ದಾರೆ. ಡೊಮಿನೊಸ್​ ಪಿಜ್ಜಾ ಕಂಪನಿ ಮತ್ತು ಸೆರ್ಟ್​-ಇನ್​ ಅಧಿಕಾರಿಗಾಳಿಗೆ ತಿಳಿಸಿದ್ದಾರೆ.  ಮಾಹಿತಿಗಳ ಪ್ರಕಾರ ಹ್ಯಾಕರ್ಸ್​ ಡೊಮಿನೊಸ್​ ಇಂಡಿಯಾದ 50 ಟಿಬಿಸಿ (ಪ್ರಕಟನೆ ಅಂದಾಜು 21,3 ಕೋಟಿ) ಯಷ್ಟು ಸುಲಿಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಜುಂದರ್​ ತಿಳಿಸಿರುವಂತೆ  ಹ್ಯಾಕರ್ಸ್​ ಟ್ವಿಟ್ಟರ್​ ಮೂಲಕ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕ್ರಿಪ್ಟೊಕರೆನ್ಸಿ ಓಮ್ನಿಕಾಯಿನ್​ ಎಸ್ಕೋ ಮಾಡೆಲ್​ ಮೂಲಕ 7.5 ಲಕ್ಷ ರೂ ಪಾವತಿಸಲು ಕೇಳಿದ್ದಾರೆ. 5ಜಿಬಿ ಗಾತ್ರದ ಡೇಟಾವನ್ನು ಹ್ಯಾಕರ್ಸ್​ ಒಳಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಕಳೆದ ಹಲವು ದಿನಗಳ ಹಿಂದೆ ಮೊಬಿಕ್ವಿಕ್​ ಕಂಪನಿಯ ಡೇಟಾ ಉಲ್ಲಂಘನೆಯಾಗಿತ್ತು. ಇದೀಗ ಡೊಮಿನೊಸ್​ ಕಂಪೆನಿಯ ಡೇಟಾ ಲೀಕ್ ಆಗಿದೆ.

ಡೊಮಿನೊಸ್​ 7 ವರ್ಷಗಳಿಂದ ಹೊಂದಿರುವ 13 ಟಿಬಿ ಗಾತ್ರದ ಡೇಟಾಬೇಸ್​ ಒಳಗೊಂಡಿತ್ತು. 2015ರಿಂದ ಗ್ರಾಹಕರ ಡೇಟಾ ಸೇವ್​ ಆಗಿತ್ತು. ಅದರಲ್ಲಿ ವಸತಿ ವಿಳಾಸ, ಪಾವತಿ ವಿವರಗಳನ್ನು ಒಳಗೊಂಡಿತ್ತು. ಅದರಲ್ಲಿ ಎರಡು ಪ್ಯಾಕೇಜ್​ ಹೊಂದಿರುವ  ಡೇಟಾ ಸೆಟ್​ ಅನ್ನು ಡಾರ್ಕ್​ ವೆಬ್​ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಡೊಮಿನಾಸ್​ ಏನು ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
Published by: Harshith AS
First published: April 20, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories