DogPhone: ಸಾಕು ಪ್ರಾಣಿ ಜೊತೆ ವಿಡಿಯೋ ಕರೆ ಮಾಡಿ ಮಾತನಾಡ್ಬೋದು! ಅದಕ್ಕೆಂದೇ ಬಂದಿದೆ ಈ ಡಾಗ್​​ಫೋನ್

Pet: ಸುತ್ತಲೂ ಯಾರೂ ಇಲ್ಲದೇ ಇದ್ದಾಗ, ನಾವು ಸಾಕಿದ ನಾಯಿಗಳು ನಿಜವಾಗಿಯೂ ಏಕಾಂಗಿತನ ಅನುಭವಿಸಬಹುದು. ನಾಯಿಗಳ ಮಾಲೀಕರು ಅವುಗಳಿಂದ ದೂರವಿದ್ದಾಗ, ಅವು ಮಾಡುವ ಕೆಲಸವೆಂದರೆ ಆತಂಕದಿಂದ ಕಾಯುವುದು. ಇದೀಗ ಮನೆಯಲ್ಲಿ ಅವುಗಳ ಒಂಟಿತನ ಕಡಿಮೆ ಮಾಡಲು ಸಾಧನವೊಂದನ್ನು ತಯಾರಿಸಲಾಗಿದೆ. ಅದುವೇ ಡಾಗ್ ಫೋನ್.

ಸಾಕುನಾಯಿ

ಸಾಕುನಾಯಿ

 • Share this:
  ಆತಂಕ (Anxious) ಎಂಬುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ, ಸಾಕು ಪ್ರಾಣಿಗಳಿಗೂ ಆತಂಕಕ್ಕೆ ಒಳಗಾಗಲು ಹಲವಾರು ಕಾರಣಗಳಿವೆ. ಹೊಸ ಮನೆಗೆ ಹೋಗಿ ನೆಲೆಸಿದಾಗ, ಕುಟುಂಬದಿಂದ ಬೇರ್ಪಟ್ಟಾಗ, ಕೆಟ್ಟ ಹವಾಮಾನ ಇದ್ದಾಗ, ಪಟಾಕಿ ಅಥವಾ ಮಾಲೀಕರು ಮನೆಯಿಂದ ಹೊರ ಬಂದಾಗ ಕೆಲವೊಮ್ಮೆ ಸಾಕು ಪ್ರಾಣಿಗಳು (Pet) ಕೂಡ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದರೆ ಸಾಕು ಪ್ರಾಣಿಗಳು ಅವುಗಳ ಅಸಮಧಾನವನ್ನು ನಮಗೆ ವ್ಯಕ್ತಪಡಿಸಲು ಸಾಧ್ಯವಾಗದೆ ಇರಬಹುದು. ಆದರೆ ನಾವು ಹಲವರು ಲಕ್ಷಣಗಳ ಮೂಲಕ ಅವುಗಳನ್ನು ಗಮನಿಸಲು ಸಾಧ್ಯವಿದೆ.

  ಹೌದು, ನಾಯಿಗಳು ಕೂಡ ಆತಂಕಕ್ಕೆ ಒಳಗಾಗಬಹುದು. ನಾಯಿಗಳ ಆತಂಕದ ಮಟ್ಟವು ಅವುಗಳ ಒಟ್ಟಾರೆ ಬದುಕಿನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. 2020ರ ಮಾರ್ಚ್‍ನಲ್ಲಿ ಪ್ರಕಟವಾದ ವೈಜ್ಞಾನಿಕ ವರದಿಯಲ್ಲಿ, ಸುಮಾರು ಶೇಕಡಾ 70ರಷ್ಟು ನಾಯಿಗಳು ಆತಂಕದ ರೀತಿಯ ವರ್ತನೆಯನ್ನು ಪ್ರದರ್ಶಿಸುತ್ತವೆ ಎಂಬುವುದನ್ನು ಸಂಶೋಧಕರು ತಿಳಿಸಿದ್ದಾರೆ.

  ಸುತ್ತಲೂ ಯಾರೂ ಇಲ್ಲದೇ ಇದ್ದಾಗ, ನಾವು ಸಾಕಿದ ನಾಯಿಗಳು ನಿಜವಾಗಿಯೂ ಏಕಾಂಗಿತನ ಅನುಭವಿಸಬಹುದು. ನಾಯಿಗಳ ಮಾಲೀಕರು ಅವುಗಳಿಂದ ದೂರವಿದ್ದಾಗ, ಅವು ಮಾಡುವ ಕೆಲಸವೆಂದರೆ ಆತಂಕದಿಂದ ಕಾಯುವುದು.
  ಇದೀಗ ಮನೆಯಲ್ಲಿ ಅವುಗಳ ಒಂಟಿತನ ಕಡಿಮೆ ಮಾಡಲು ಸಾಧನವೊಂದನ್ನು ತಯಾರಿಸಲಾಗಿದೆ. ಅದುವೇ ಡಾಗ್ ಫೋನ್.

  Read Also:  Instagram: ಶೀಘ್ರದಲ್ಲೇ ಸಿಗಲಿದೆ ಈ ಫೀಚರ್ಸ್​! ಆದ್ರೆ ನೂತನ ಫೀಚರ್ಸ್​ ಬಗ್ಗೆ ತಿಳಿಯದೇ ಹೋದರೆ ನಿಮಗೇ ನಷ್ಟ!

  ಡಾಗ್ ಫೋನ್ ಒಂದು ವಿಶಿಷ್ಟ ಸಾಧನವಾಗಿದ್ದು, ಬ್ರಿಟನ್ ಮತ್ತು ಫಿನ್‍ಲ್ಯಾಂಡ್‍ನ ಪ್ರಾಣಿ ತಂತ್ರಜ್ಞಾನ ವಿಜ್ಞಾನಿಗಳು, ಸಾಕು ಪ್ರಾಣಿ ಮತ್ತು ಅದರ ಮಾಲೀಕರ ನಡುವೆ ತುರ್ತು ಸಂವಹನಕ್ಕಾಗಿ ಈ ಸಾಧನ ಕಂಡು ಹಿಡಿದಿದ್ದಾರೆ. ಅಕ್ಸೆಲೆರೋಮಿಟರ್ ಅಳವಡಿಸಲಾಗಿರುವ ಚೆಂಡನ್ನು ಸಾಕು ಪ್ರಾಣಿ ಎತ್ತಿಕೊಂಡು ಅಲ್ಲಾಡಿಸಿದಾಗ, ಅದು ಕಾರ್ಯ ನಿರ್ವಹಿಸಲು ಅರಂಭಿಸುತ್ತದೆ ಎಂದು ಎಎಫ್‍ಪಿ ವರದಿ ಮಾಡಿದೆ.

  ಅಕ್ಸೆಲೆರೋಮೀಟರ್ ಚಲನೆಯನ್ನು ಗ್ರಹಿಸಿದಾಗ, ಮಾಲೀಕರ ಸಾಧನಕ್ಕೆ ವಿಡಿಯೋ ಕರೆ ಮಾಡುವಂತೆ, ಹತ್ತಿರ ಇರುವ ಇನ್ನೊಂದು ಸಾಧನವನ್ನು ಪ್ರಚೋದಿಸುತ್ತದೆ. ಇಂತಹ ಸಾಧನವನ್ನು ಇದೇ ಮೊದಲ ಬಾರಿಗೆ ಕಂಡು ಹಿಡಿಯಲಾಗಿದೆ ಎಂದು ನಂಬಲಾಗುತ್ತಿದ್ದು, ಗ್ಲಾಸ್ಗೊ ಇಲ್ಯೆನಾ ಹಿಸ್ರ್ಕಿಜ್ ಅವರು , ಫಿನ್‍ಲ್ಯಾಂಡ್‍ನ ಆಲ್ಟೋ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೊಗಿಗಳ ಸಹಾಯದಿಂದ ಈ ಸಾಧನ ಕಂಡು ಹಿಡಿದಿದ್ದಾರೆ.

  ಅದು ಆಕೆಯ ಲ್ಯಾಬ್ರಡರ್ ಮತ್ತು “ಲ್ಯಾಬ್ ಅಸಿಸ್ಟೆಂಟ್” ಜ್ಯಾಕ್‍ನಿಂದ ಪ್ರಮುಖ ಮಾಹಿತಿ ಹೊಂದಿತ್ತು. ಹಿಸ್ರ್ಕಿಜ್-ಡೊಗ್ಲಸ್ ಅವರು ಒಂದು ಚೆಂಡನ್ನು ಬಳಸಿಕೊಂಡು ಕರೆ ಮಾಡುವುದು ಹೇಗೆ ಎಂಬುವುದನ್ನು ಮೊದಲು ತೋರಿಸಿಕೊಟ್ಟರು.

  Read Also: Video Viral: ಅಭಿಮಾನಿಯನ್ನು ವೇದಿಕೆ ಮೇಲೆ ಕರೆದು ಮುಖದ ಮೇಲೆ ಮೂತ್ರ ಮಾಡಿದ ಖ್ಯಾತ ಗಾಯಕಿ!

  ಹಾಗೂ ಆ ಬಳಿಕ 16 ದಿನಗಳವರೆಗೆ ಆಟವಾಡಲು ಆ ಆಟಿಕೆ ನೀಡಲಾಯಿತು. ಹಿಸ್ರ್ಕಿಜ್-ಡೊಗ್ಲಸ್ ಹಲವಾರು ಆಕಸ್ಮಿಕ ಕರೆಗಳನ್ನು ಸ್ವೀಕರಿಸಿದರೂ, ಲ್ಯಾಬ್ರಡಾರ್‌ನಿಂದ ತನ್ನ ಮಾಲೀಕರನ್ನು ಯಶಸ್ವಿಯಾಗಿ ಸಂಪರ್ಕಿಸಲು ಮೂಲ ಮಾದರಿಯ ಸಾಧನ ಬಳಸಲು ಸಾಧ್ಯವಾಯಿತು. ಅಂತಹ ಒಂದು ಕರೆಯಲ್ಲಿ, ಹಿಸ್ರ್ಕಿಜ್-ಡೊಗ್ಲಸ್ ಜ್ಯಾಕ್‍ಗೆ ತಮ್ಮ ಕಚೇರಿ ಮತ್ತು ರೆಸ್ಟೋರೆಂಟನ್ನು ತೋರಿಸಿದರು. ವಿಭಿನ್ನ ದೃಶ್ಯಗಳು ಜ್ಯಾಕ್ ಪರದೆಯನ್ನು ಸಮೀಪಿಸುವಂತೆ ಮಾಡಿದವು.

  ಡಾಗ್ ಫೋನ್‍ನೊಂದಿಗೆ ಜ್ಯಾಕ್‍ನ ಸಂವಾದಗಳಿಗೆ ಸಂಬಂಧಿಸಿದ ಫಲಿತಾಂಶಗಳ ಬಗ್ಗೆ ಇನ್ನೂ ವಿಶ್ಲೇಷಣೆ ನಡೆಯುತ್ತಿದೆ ಮತ್ತು ಅದನ್ನು ಹೆಚ್ಚಿನ ಪ್ರಯೋಗಗಳಿಗೆ ಒಳಪಡಿಸಲಾಗುತ್ತಿದೆ. ಇದರ ಫಲಿತಾಂಶವು, ಫೋಲ್ಯಾಂಡ್‍ನ 2021ರ ಎಸಿಎಂ ಇಂಟರ್‌ಆ್ಯಕ್ಟೀವ್‌ ಸ್ಪೇಸ್ ಮತ್ತು ಸರ್ಫೇಸ್‌ಗಳ ಸಮ್ಮೇಳನದಲ್ಲಿ ಹೊಸ ಸಂಶೋಧನಾ ಪ್ರಬಂಧದ ಕೇಂದ್ರಬಿಂದು ಆಗಿತ್ತು.
  Published by:Harshith AS
  First published: