Tesla: ಇನ್ನು ಡಾಜ್ ಕಾಯಿನ್‌ ಮೂಲಕ ಖರೀದಿಸಬಹುದು ಟೆಸ್ಲಾ ಕಾರು; ಎಲೋನ್ ಮಸ್ಕ್ ಸುಳಿವು

Dogecoin | 2013 ರಲ್ಲಿ ಸೋಷಿಯಲ್ ಮೀಡಿಯಾ ಜೋಕ್ ಆಗಿ ಪ್ರಾರಂಭವಾದ ಡಾಜ್ ಕಾಯಿನ್‌ ಕರೆನ್ಸಿಯೊಂದಿಗೆ ಮಸ್ಕ್‌ನ ಸಂಬಂಧದಿಂದಾಗಿ, ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಡಾಜ್ ಫಾದರ್ ಎಂದೂ ಕರೆಯಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟೆಸ್ಲಾ ಎಲೆಕ್ಟ್ರಿಕ್ ಕಾರು ತಯಾರಕ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್, ಡಾಜ್ ಕಾಯಿನ್‌ ಕರೆನ್ಸಿ ಮೂಲಕ ಟೆಸ್ಲಾ ವಾಹನ ಖರೀದಿಸಲು ಪಾವತಿ ವಿಧಾನವಾಗಿ ಸ್ವೀಕರಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ. ಈ ಸಂಬಂಧ ಅವರು ಟ್ವಿಟ್ಟರ್‌ನಲ್ಲಿ ಸಮೀಕ್ಷೆ ನಡೆಸಿದ್ದಾರೆ. ಅವರ 53.8 ಮಿಲಿಯನ್‌ ಅನುಯಾಯಿಗಳಿಗೆ ಡಾಜ್ ಕಾಯಿನ್‌ ಅನ್ನು ಟೆಸ್ಲಾ ಕಾರು ಖರೀದಿಸಲು ಪಾವತಿ ವಿಧಾನವಾಗಿ ಮಾಡುವ ಬಗ್ಗೆ ಟ್ವಿಟ್ಟರ್ ಪೋಲ್‌ ಮಾಡಿದ್ದರು. ಈ ಪೋಲ್‌ ಪೋಸ್ಟ್ ಮಾಡಿದ 20 ನಿಮಿಷಗಳಲ್ಲಿ ಅವರು ಸುಮಾರು ಐದು ಲಕ್ಷ ಮತಗಳನ್ನು ಪಡೆದರು. ಅದರಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿರುವ ಹೆಚ್ಚಿನವರು ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಉತ್ತರಿಸಿದ್ದಾರೆ.

ಅವರ ವಾಣಿಜ್ಯ ರಾಕೆಟ್ ಕಂಪನಿಯು ಕ್ರಿಪ್ಟೋಕರೆನ್ಸಿಯನ್ನು ಪಾವತಿ ವಿಧಾನವಾಗಿ ಸ್ವೀಕರಿಸುವುದಾಗಿ ಹೇಳಿದ ಕೆಲವೇ ದಿನಗಳಲ್ಲಿ ಎಲೋನ್‌ ಮಸ್ಕ್‌ ಈ ಟ್ವೀಟ್‌ ಮಾಡಿದ್ದಾರೆ. 2013 ರಲ್ಲಿ ಸೋಷಿಯಲ್ ಮೀಡಿಯಾ ಜೋಕ್ ಆಗಿ ಪ್ರಾರಂಭವಾದ ಡಾಜ್ ಕಾಯಿನ್‌ ಕರೆನ್ಸಿಯೊಂದಿಗೆ ಮಸ್ಕ್‌ನ ಸಂಬಂಧದಿಂದಾಗಿ, ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಡಾಜ್ ಫಾದರ್ ಎಂದೂ ಕರೆಯಲಾಗುತ್ತದೆ. ಕಾರ್ಪೊರೇಟ್ ರಂಗದಲ್ಲಿ ಕ್ರಿಪ್ಟೋಕರೆನ್ಸಿಯ ಮುಖ್ಯ ಪ್ರತಿಪಾದಕರಲ್ಲಿ ಒಬ್ಬರು ಎಲೋನ್‌ ಮಸ್ಕ್‌.

ಕಳೆದ ಫೆಬ್ರವರಿಯಲ್ಲಿ ಮತ್ತು ಈ ವರ್ಷದ ಮಾರ್ಚ್‌ನಲ್ಲಿ ಕಂಪನಿಯು 1.5 ಬಿಲಿಯನ್ ಡಾಲರ್‌ (BTC) ಖರೀದಿಸಿತು: ಅದು ತನ್ನ ವೆಬ್‌ಸೈಟ್‌ನಲ್ಲಿ ನೇರವಾಗಿ ತನ್ನ ಕಾರುಗಳಿಗೆ ಪಾವತಿ ವಿಧಾನವಾಗಿ BTCಯನ್ನು ಸ್ವೀಕರಿಸಲು ಪ್ರಾರಂಭಿಸಿತು. ಇದು ಕ್ರಿಪ್ಟೋಕರೆನ್ಸಿಯನ್ನು ತನ್ನ ಮೀಸಲು ಭಾಗವಾಗಿ ಹೊಂದಿದೆ. ಇಲ್ಲಿಯವರೆಗೆ, ಇದು ನಗದು ಹಣದ ಪರ್ಯಾಯವಾಗಿ ಲಿಕ್ವಿಡಿಟಿಯನ್ನು ಸಾಬೀತುಪಡಿಸಲು ತನ್ನ 10% ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್‌ಗಳನ್ನು ಮಾರಾಟ ಮಾಡಿದೆ.



ಎಲೆಕ್ಟ್ರಿಕ್ ವಾಹನ ತಯಾರಕ ಈಗ ಪ್ರಸಿದ್ಧ ಮೀಮ್ಸ್ ಕಾಯಿನ್‌ ಡಾಜ್ ಕಾಯಿನ್‌ (DOGE) ಅನ್ನು ಸ್ವೀಕರಿಸಲು ಪ್ರಾರಂಭಿಸಿದರೆ, ಅದು ಅದರ ಸ್ವೀಕೃತ ಕ್ರಿಪ್ಟೋಕರೆನ್ಸಿ ರೋಸ್ಟರ್‌ನ ಭಾಗವಾಗಲಿದೆ. ಆದರೆ, BTCಗೆ ಹೋಲಿಸಿದರೆ ಡಾಜ್ ಕಾಯಿನ್‌ ತುಲನಾತ್ಮಕವಾಗಿ ಅಸ್ಥಿರವಾದ ಕರೆನ್ಸಿಯಾಗಿದೆ ಮತ್ತು ಎಲೆಕ್ಟ್ರಿಕ್ ವಾಹನ ತಯಾರಕರಿಂದ ಸ್ವೀಕರಿಸಲ್ಪಟ್ಟರೆ, ಅದನ್ನು ಫ್ಲಾಟ್ ಹಣಕ್ಕೆ ಮಾರಾಟ ಮಾಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ಎಲೋನ್‌ ಮಸ್ಕ್‌ ಪೋಲ್‌ ಮಾಡಿ ಟ್ವೀಟ್‌ ಮಾಡಿದ ನಂತರ ಡಾಜ್ ಕಾಯಿನ್‌ನ ಮೌಲ್ಯ 20% ಹೆಚ್ಚಾಗಿದೆ. 24 ಗಂಟೆಗಳ ಕನಿಷ್ಠ 44 ಸೆಂಟ್ಸ್‌ನಿಂದ ಡಾಜ್ ಕಾಯಿನ್‌ನ ಮೌಲ್ಯ 53 ಸೆಂಟ್‌ಗಳಿಗೆ ಏರಿತು. ನಂತರ ಮತ್ತೆ ಸುಮಾರು 51 ಸೆಂಟ್‌ಗಳಿಗೆ ಕುಸಿಯಿತು. ಭಾನುವಾರ, ಕ್ರಿಪ್ಟೋಕರೆನ್ಸಿಯ ಬೆಲೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿತ್ತು ಎಂಬುದು ಸಹ ಇಲ್ಲಿ ಪ್ರಮುಖವಾದ ವಿಚಾರವಾಗಿದೆ.
Published by:Sushma Chakre
First published: