Tech Tips: ಮೊಬೈಲ್​ ಡೇಟಾ ಬೇಗ ಖಾಲಿಯಾಗುತ್ತದೆಯೇ? ಚಿಂತೆಬಿಡಿ ಇಲ್ಲಿದೆ ಸಿಂಪಲ್​ ಟ್ರಿಕ್ಸ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ಮಾರ್ಟ್​ಫೋನ್​ ಬಳಕೆ ಮಾಡುವವರಿಗೆ ಮುಖ್ಯವಾಗಿ ಕಾಡುವುದು ಡೇಟಾದ ಕೊರತೆ. ಕೆಲವೊಂದು ಬಾರಿ ಮೊಬೈಲ್​ ಬಳಸಿದ ಕೆಲವೇ ನಿಮಿಷಗಳಲ್ಲಿ ದಿನದ ಇಂಟರ್ನೆಟ್​ ಸೌಲಭ್ಯ ಖಾಲಿಯಾಗಿದೆ ಎಂದು ಮೆಸೇಜ್ ಬರುತ್ತದೆ. ಹಾಗಿದ್ರೆ ನಿಮ್ಮ ಸ್ಮಾರ್ಟ್​​ಫೋನ್​ ಡೇಟಾ ಬೇಗನೆ ಮುಗಿಯಲು ಕಾರಣವೇನು?, ಎಷ್ಟು ಬಳಕೆ ಮಾಡಿದರೂ ಡೇಟಾ ಮುಗಿಯದಂತೆ ಮಾಡಲು ಕೆಲವೊಂದು ಟ್ರಿಕ್ಸ್​ಗಳಿವೆ ಈ ಟ್ರಿಕ್ಸ್​ಗಳನ್ನು ಫಾಲೋ ಮಾಡಿ.

ಮುಂದೆ ಓದಿ ...
  • Share this:

    ಪ್ರಸ್ತುತ ದಿನದಲ್ಲಿ ಮಾನವರಿಗೆ ಗಾಳಿ, ನೀರು,  ಆಹಾರ ಹೇಗೆ ಮುಖ್ಯವೋ ಅದೇ ರೀತಿ ಸ್ಮಾರ್ಟ್​ಫೋನ್​ಗಳು (Smartphones) ಸಹ ಅಗತ್ಯ ಸಾಧನವಾಗಿಬಿಟ್ಟಿದೆ. ಕೇವಲ ಸ್ಮಾರ್ಟ್​​ಫೋನ್​ ಇದ್ದರೆ ಸಾಕಾ ಅದರಲ್ಲಿದ್ದಂತಹ ಅಪ್ಲಿಕೇಶನ್​ಗಳನ್ನು (Apps) ಬಳಸಲು ಇಂಟರ್ನೆಟ್​ ಸೌಲಭ್ಯ ಸಹ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡ್ಬಹುದು. ಆದರೆ ಇದಕ್ಕೆ ಮುಖ್ಯವಾಗಿ ಇಂಟರ್ನೆಟ್​ ಸೇವೆ ಮುಖ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ನಾವು ಸ್ಮಾರ್ಟ್​​ಫೋನ್​ ಬಳಸಿದ ಕೆಲವೇ ಕ್ಷಣಗಳಲ್ಲಿ ಡೇಟಾ (Data) ಖಾಲಿಯಾಗಿ ಹೋಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಜನರು ಹೇಗೆ ಖಾಲಿಯಾಯ್ತು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುತ್ತಾರೆ. ಅದಕ್ಕೆ  ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿರುವ ಕೆಲವೊಂದು ಸೆಟ್ಟಿಂಗ್ಸ್​ಗಳು, ಅಪ್ಲಿಕೇಶನ್​ಗಳೇ ಕಾರಣ.


    ಸ್ಮಾರ್ಟ್​ಫೋನ್​ ಬಳಕೆ ಮಾಡುವವರಿಗೆ ಮುಖ್ಯವಾಗಿ ಕಾಡುವುದು ಡೇಟಾದ ಕೊರತೆ. ಕೆಲವೊಂದು ಬಾರಿ ಮೊಬೈಲ್​ ಬಳಸಿದ ಕೆಲವೇ ನಿಮಿಷಗಳಲ್ಲಿ ದಿನದ ಇಂಟರ್ನೆಟ್​ ಸೌಲಭ್ಯ ಖಾಲಿಯಾಗಿದೆ ಎಂದು ಮೆಸೇಜ್ ಬರುತ್ತದೆ. ಹಾಗಿದ್ರೆ ನಿಮ್ಮ ಸ್ಮಾರ್ಟ್​​ಫೋನ್​ ಡೇಟಾ ಬೇಗನೆ ಮುಗಿಯಲು ಕಾರಣವೇನು?, ಎಷ್ಟು ಬಳಕೆ ಮಾಡಿದರೂ ಡೇಟಾ ಮುಗಿಯದಂತೆ ಮಾಡಲು ಕೆಲವೊಂದು ಟ್ರಿಕ್ಸ್​ಗಳಿವೆ ಈ ಟ್ರಿಕ್ಸ್​ಗಳನ್ನು ಫಾಲೋ ಮಾಡಿ.


    ಆ್ಯಪ್ಸ್ ಆಟೋ​ ಅಪ್ಡೇಟ್​ ಡೇಟಾ ಖಾಲಿಯಾಗಲು ಕಾರಣ


    ನಿಮ್ಮ ಮೊಬೈಲ್ ಡೇಟಾ(mobile data ) ತ್ವರಿತವಾಗಿ ಖಾಲಿ ಆಗಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಹೈ ಡೆಫಿನಿಶನ್ ಗೇಮ್ಸ್, ಹೆಚ್ಚು ಹೆಚ್ಚು ವಿಡಿಯೋ ನೋಡುವುದು ಸಹ ಒಂದು ಕಾರಣವಿರಬಹುದು. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ವೇಗವಾಗಿ ಕಾರಣಗಳು ಮೊಬೈಲ್​ನಲ್ಲಿರುವ ಅಪ್ಲಿಕೇಶನ್​ಗಳನ್ನು ಅಪ್ಡೇಟ್​ ಮಾಡುವುದು ಸಹ ಒಂದು ಕಾರಣವಾಗಿದೆ.


    ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಭಕ್ತರೇ ಅಲರ್ಟ್​! ಇಂದಿನಿಂದ ಫೇಸ್​​ ರೆಕಗ್ನೈಸೇಶನ್​ ಟೆಕ್ನಾಲಜಿ ಜಾರಿ


    ಡೀಫಾಲ್ಟ್ ಸೆಟ್ಟಿಂಗ್‌ಗಳಿಂದಾಗಿ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ಅಪ್ಡೇಟ್​ ಆಗುತ್ತಿರುತ್ತದೆ. ಕೆಲವೊಮ್ಮೆ ಯಾವುದೋ ಕಾರಣಕ್ಕೋ ಒಂದು ಆ್ಯಪ್​ ಅನ್ನು ಡೌನ್​ಲೋಡ್ ಮಾಡಿರುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ಅದು ಬ್ಯಾಕ್​ರೌಂಡ್​ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ಡೇಟಾ ಖಾಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.


    ಮೊಬೈಲ್​ ಡೇಟಾ ಖಾಲಿಯಾಗದಂತೆ ಹೀಗೆ ಮಾಡಿ


    • ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಬೇಕು.

    • ಇಲ್ಲಿ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಅಲ್ಲಿ ಆಟೋ ಅಪ್ಡೇಟ್​ ಆನ್​ ಆಗಿದ್ದರೆ ಅದನ್ನು ಮೊದಲಿಗೆ ಆಫ್​ ಮಾಡ್ಬೇಕು.

    • ಡೌನ್‌ಲೋಡ್ ಮಾಡಿದ ಎಲ್ಲಾ ಅಪ್ಲಿಕೇಶನ್‌ಗಳಿಗೆ ಆಟೋ ಅಪ್ಡೇಟ್​ ಆಪ್ಷನ್​ ಅನ್ನು ಸೆಲೆಕ್ಟ್​ ಮಾಡ್ಬಹುದು. ಆದರೆ ಇದು ಡೇಟಾವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ಆಫ್​ ಮಾಡಿದರೆ ಒಳ್ಳೆಯದು.

    • ಕೆಲವೊಂದು ಅಪ್ಲಿಕೇಶನ್​ಗಳು ಆಗಾಗ ಅಪ್ಡೇಟ್​ ಆಗುತ್ತಿರುತ್ತದೆ.


    ಸಾಂಕೇತಿಕ ಚಿತ್ರ


    ಮೊಬೈಲ್​  ಮುಗಿಯದಂತೆ ಇನ್ನೂ ಹಲವಾರು ಟಿಪ್ಸ್​ಗಳಿವೆ:


    • ನೀವು ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಈ ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳ ಪ್ರಮುಖ ವೈಶಿಷ್ಟ್ಯವೆಂದರೆ ಇವು ಕಡಿಮೆ ಡೇಟಾವನ್ನು ಬಳಸುತ್ತವೆ. ಇದರಿಂದ ನಿಮ್ಮ ಡೇಟಾವನ್ನು ಉಳಿಸಬಹುದು.

    • ಡೇಟಾ ಸೇವರ್ ಮೋಡ್ ಸಹ ನಿಮ್ಮ ಡೇಟಾವನ್ನು ಉಳಿಸಲು ಉತ್ತಮ ಆಯ್ಕೆಯಾಗಿದೆ. ಡೇಟಾ ಬಳಕೆಯನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ.




    • ಮೊಬೈಲ್ ಡೇಟಾ ರನ್ ಆಗುತ್ತಿರುವಾಗ, ಕೆಲವು ಆ್ಯಪ್ ಗಳು ಗೊತ್ತಿಲ್ಲದೆ ಅಪ್ಡೇಟ್ ಆಗುತ್ತದೆ. ಸೆಟ್ಟಿಂಗ್ ಗಳಿಗೆ ಹೋಗುವ ಮೂಲಕ ಇದನ್ನು ಬದಲಾಯಿಸಬಹುದು. ಇದಕ್ಕಾಗಿ ವೈಫೈ ಮೂಲಕ ಆಟೋ ಅಪ್ಡೇಟ್ ಆ್ಯಪ್​ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಮಾಡುವುದರಿಂದ, ನಿಮ್ಮ ಫೋನ್​ನ ಆ್ಯಪ್​ಗಳು ಕೇವಲ ವೈ-ಫೈನಲ್ಲಿ ಮಾತ್ರ ಅಪ್ಡೇಟ್​ ಆಗುವಂತೆ ಸೆಟ್​ ಮಾಡಬಹುದು.

    • ಸ್ಮಾರ್ಟ್​​ಫೋನ್​ ಬಳಕೆದಾರರು ಸೆಟ್ಟಿಂಗ್​ನಲ್ಲಿ ಡೇಟಾ ಮಿತಿಯನ್ನು ಹೊಂದಿಸುವುದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ, ಡೇಟಾ ಬಳಕೆಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ಡೇಟಾ ಮಿತಿ ಮತ್ತು ಬಿಲ್ಲಿಂಗ್ ಸೈಕಲ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ 1GB ಮಾಡಿದರೆ, 1ಜಿಬಿಯಷ್ಟು ಡೇಟಾ ಬಳಕೆ ಮಾಡಿದ ನಂತರ ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿ ಇಂಟರ್ನೆಟ್​ ವರ್ಕ್ ಆಗುವುದಿಲ್ಲ. ಈ ರೀತಿಯು ನೀವು ದೈನಂದಿನ ಡೇಟಾವನ್ನು ಉಳಿಸಬಹುದು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು