• Home
 • »
 • News
 • »
 • tech
 • »
 • Youtube Ad: ಯೂಟ್ಯೂಬ್​ನಲ್ಲಿ ಜಾಹೀರಾತು ಬಾರದಂತೆ ಮಾಡ್ಬೇಕಾ? ಈ ಟ್ರಿಕ್ಸ್‌ ಬಳಸಿ ಆ್ಯಡ್ಸ್​ ಬ್ಲಾಕ್‌ ಮಾಡಿ!

Youtube Ad: ಯೂಟ್ಯೂಬ್​ನಲ್ಲಿ ಜಾಹೀರಾತು ಬಾರದಂತೆ ಮಾಡ್ಬೇಕಾ? ಈ ಟ್ರಿಕ್ಸ್‌ ಬಳಸಿ ಆ್ಯಡ್ಸ್​ ಬ್ಲಾಕ್‌ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬರದೇ ಇರುವಂತೆ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್ಸ್. ‌ಇಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಪಾಲಿಸಿ ನೋಡಿ.

 • Share this:

  ಇತ್ತೀಚಿನ ಯುಗದಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು (Youtube Videos) ನೋಡುವವರು ಹೆಚ್ಚಾಗಿದ್ದಾರೆ. ಇದಲ್ಲದೆ ಈಗ ಯೂಟ್ಯೂಬ್‌ ಟಿವಿಯಂತೆಯೇ ಹಾಗಿದೆ. ಇದು ವಿಡಿಯೋಗಳನ್ನು ಟಿವಿಯಂತೆಯೇ ಪ್ರದರ್ಶಿಸುತ್ತದೆ. ಆದರೆ ಈಗ ಜಾಹೀರಾತು (Advertisement) ಕೂಡ ದೂರದರ್ಶನದಂತೆಯೇ (Television) ನೀಡುತ್ತಾರೆ. ಈಗ  ಯೂಟ್ಯೂಬ್‌ನಲ್ಲಿ ನಿರರ್ಗಳವಾಗಿ ಯಾವುದೇ ವಿಡಿಯೋವನ್ನು ನೋಡಲು ಸಾಧ್ಯವೇ ಇಲ್ಲ. ಏನಾದರು ಕುತೂಹಲ ಹುಟ್ಟಿಸುವ ವಿಡಿಯೋಗಳನ್ನು ನೋಡುತ್ತಿರುವಾಗ ಜಾಹೀರಾತುಗಳು ಹೆಚ್ಚಾಗಿ ಬರುತ್ತದೆ. ಈ ರೀತಿ ಆದಾಗ ವಿಡಿಯೋಗಳನ್ನು ನೋಡಲು ಇಷ್ಟವಾಗುವುದಿಲ್ಲ. ಯೂಟ್ಯೂಬ್‌ ಆದಾಯವನ್ನು ಮೂಲವಾಗಿ ಜಾಹೀರಾತಿನಿಂದಲೇ ಗಳಿಸುತ್ತದೆ. ಆದರೆ ಈಗ ವಿಡಿಯೋ ಮಧ್ಯೆ ಬರುವಂತಹ  ಜಾಹೀರಾತುಗಳನ್ನು ಬ್ಲಾಕ್‌ (Add Block) ಮಾಡಬಹುದಾಗಿದೆ.


  ಹಾಗಿದ್ರೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬರದೇ ಇರುವಂತೆ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್ಸ್. ‌ಇಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಪಾಲಿಸಿ ನೋಡಿ. ನಿಮಗೆ ಆರಾಮವಾಗಿ ಕುಳಿತುಕೊಂಡು ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಬಹುದಾಗಿದೆ.


  ಆ್ಯಡ್ ಬ್ಲಾಕರ್‌ ಅನ್ನು ಬಳಸಿ:


  ಬ್ರೌಸರ್‌ನಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಗುಣಮಟ್ಟದ ಜಾಹೀರಾತು ಬ್ಲಾಕರ್‌ಗಳನ್ನು ಉಪಯೋಗಿಸಿದರೆ ನಿಮಗೆ ಆ್ಯಡ್‌ ಇಲ್ಲದೆಯೇ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಬಹುದಾಗಿದೆ. ಆಡ್‌ಬ್ಲಾಕ್‌, ಸ್ಟಾಪ್‌ ಆಡ್‌ಗಳಂತಹ ಆಡ್‌ ಬ್ಲಾಕರ್‌ಗಳು ಬ್ರೌಸರ್‌ನಲ್ಲಿ ದೊರೆಯುತ್ತವೆ. ನೀವು ಇಂತಹ ಆ್ಯಡ್ ಬ್ಲಾಕರ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ಆನಂದಿಸಬಹುದು.


  Do you want to prevent ads while watching videos on YouTube Block ads using these tricks
  ಸಾಂದರ್ಭಿಕ ಚಿತ್ರ


  ಆ್ಯಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆಡ್‌ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್‌ ಇಂಜಿನ್‌ಗಳಲ್ಲಿ ನೀವು ಜಾಹೀರಾತು ಮುಕ್ತ ವಿಡಿಯೋಗಳನ್ನು ನೋಡಬಹುದು.


  ಇದನ್ನೂ ಓದಿ: ಏನಾಯ್ತು Apple ಕಂಪೆನಿಗೆ? ಇನ್ನು ಮುಂದೆ ಮಾರುಕಟ್ಟೆಗೆ ಬರಲ್ವಾ ಐಫೋನ್‌?


  ಯೂಟ್ಯೂಬ್ ಪರ್ಯಾಯ ಆ್ಯಪ್​ಗಳನ್ನು ಬಳಸಿ:


  ಜಾಹೀರಾತು ಬೇಡ ಎಂದರೆ ಯೂಟ್ಯೂಬ್‌ನಂತೆಯೇ ಇರುವ ಪರ್ಯಾಯ ಆ್ಯಪ್‌ಗಳನ್ನು ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ವಿಡಿಯೋಗಳನ್ನು ನೋಡಬಹುದು.


  ಇಲ್ಲಿ ನಿಮಗೆ ಬೇಕಾದ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದು.ಇದಲ್ಲದೆ ನೀವು ಯೂಟ್ಯೂಬ್‌ನಲ್ಲಿ ನಿಮಗೆ ಬೇಕಾದ ವಿಡಿಯೋವನ್ನು ಮೊದಲೇ ಡೌನ್‌ಲೋಡ್‌ ಮಾಡಿ ಇಟ್ಟುಕೊಂಡರೆ ಇಂಟರ್ನೆಟ್‌ ಸಂಪರ್ಕ, ಯಾವುದೇ ಜಾಹಿರಾತು ತೊಂದರೆಯಿಲ್ಲದೆಯೇ ವೀಕ್ಷಿಸಬಹುದು.


  Do you want to prevent ads while watching videos on YouTube Block ads using these tricks
  ಸಾಂದರ್ಭಿಕ ಚಿತ್ರ


  ಇನ್ನು ನೀವು ನೋಡಲು ಬಯಸುವ ವಿಡಿಯೋ ಲಿಂಕ್‌ನಲ್ಲಿ Youtube.com ನ ನಂತರ  ಬರುವ ʼ/ʼ ಚಿಹ್ನೆಗೂ ಮೊದಲು (.) ಈ ರೀತಿಯ ಒಂದು ಚುಕ್ಕಿಯನ್ನು ಹಾಕಿ ವಿಡಿಯೋ ಪ್ಲೇ ಮಾಡಿದಾಗ ಆ ವಿಡಿಯೋದ ಎಲ್ಲಾ ಜಾಹಿರಾತುಗಳೂ ಬ್ಲಾಕ್‌ ಆಗುತ್ತದೆ.


  ಚಂದಾದಾರಿಕೆ ಮಾಡಿಕೊಳ್ಳಿ:


  ನಿಮಗೆ ಯೂಟ್ಯೂಬ್‌ನಲ್ಲಿ ಬರುವಂತಹ ಜಾಹೀರಾತನ್ನು ನಿಲ್ಲಿಸಬೇಕಾದರೆ ನಿಮ್ಮ ಯೂಟ್ಯೂಬ್‌ ಖಾತೆಗೆ ಹಣ ಪಾವತಿಸಿ ಪ್ರೀಮಿಯಂ ಖಾತೆಯನ್ನಾಗಿ ಪರಿವರ್ತಿಸಿ. ಇಲ್ಲಿ ಯೂಟ್ಯೂಬ್‌ನ ಫ್ರೀ ಖಾತೆಯಲ್ಲಿ ಇಲ್ಲದ ಫೀಚರ್‌ಗಳು ಪ್ರೀಮಿಯಂ ಖಾತೆಯಲ್ಲಿ ಪಡೆಯಬಹುದಾಗಿದೆ. ಇಲ್ಲಿಯವರೆಗೆ ಯೂಟ್ಯೂಬ್‌ ಪ್ರೀಮಿಯಮ್‌ ಅನ್ನು ಕ್ರೆಡಿಟ್‌ ಕಾರ್ಡ್, ಡೆಬಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡುತ್ತಿದ್ದರು.


  ಆದರೆ ಈಗ ಯುಪಿಐ ಮೂಲಕವೂ ಹಣ ಪಾವತಿ ಮಾಡಬಹುದಾಗಿದೆ. ಯೂಟ್ಯೂಬ್‌ನಲ್ಲಿ ಮ್ಯೂಸಿಕ್‌ ಕೂಡ ಕೇಳಬಹುದು. ಜೊತೆಗೆ ಯೂಟ್ಯೂಬ್‌ನಲ್ಲಿ ಒರಿಜಿನಲ್‌ ಧಾರಾವಾಹಿ ಸೀರಿಸ್‌ಗಳನ್ನು ವೀಕ್ಷಿಸಬಹುದು.


  ಇದನ್ನೂ ಓದಿ: ಈ ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ರೆ ಡೇಂಜರ್, ಹಂಗೇ ಬಿಟ್ರೆ ಬ್ಯಾಟರಿ ಆಗುತ್ತೆ ಬ್ಲಾಸ್ಟ್‌!


  ಜಾಹೀರಾತುಗಳ ಕಿರಿಕಿರಿ ಬೇಡ ಎನ್ನುವವರು, ಹಣ ತೆತ್ತು ಯೂಟ್ಯೂಬ್‌ ಪ್ರೀಮಿಯಂ ಖಾತೆಯ ಚಂದಾದಾರಿಕೆ ಪಡೆದುಕೊಳ್ಳಬಹುದು. ಫ್ರೀ ಖಾತೆಯಲ್ಲಿ ಇಲ್ಲದ ಸವಲತ್ತುಗಳು, ಯೂಟ್ಯೂಬ್‌ ಪ್ರೀಮಿಯಂನಲ್ಲಿವೆ. ಇದುವರೆಗೂ ಅದಕ್ಕೆ ಹಣ ತೆರಲು ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ಆಯ್ಕೆಗಳು ಮಾತ್ರವೇ ಇದ್ದವು. ಆದರೆ ಈಗ ಯುಪಿಐ ಮೂಲಕವೂ ಶುಲ್ಕ ಸಂದಾಯ ಮಾಡಬಹುದಾಗಿದೆ. ಇದರಲ್ಲಿ ಯೂಟ್ಯೂಬ್‌ ಮ್ಯೂಸಿಕ್‌ನ ಭಂಡಾರದಲ್ಲಿರುವ ಹಾಡುಗಳನ್ನು ಕೇಳಬಹುದು. ಜೊತೆಗೆ ಯೂಟ್ಯೂಬ್‌ ಒರಿಜಿನಲ್ಸ್‌ ಸರಣಿಯಲ್ಲಿರುವ ಧಾರಾವಾಹಿಗಳನ್ನು ವೀಕ್ಷಿಸಬಹುದು.

  Published by:Harshith AS
  First published: