ಟೆಕ್ ದೈತ್ಯ ಕಂಪೆನಿಯಾಗಿರುವ ಗೂಗಲ್ (Google) ತನ್ನ ಟೆಕ್ನಾಲಜಿ ಯುಗದಲ್ಲಿ ಭಾರೀ ಮುನ್ನಡೆಯಲ್ಲಿದೆ. ಇದರ ಭಾಗವಾಗಿ ಬಂದಂತಹ ಹಲವಾರು ಅಪ್ಲಿಕೇಶನ್ಗಳು, ಟೆಕ್ ಡಿವೈಸ್ಗಳಿಗೆ ಸಹ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಇದರಲ್ಲಿ ಗೂಗಲ್ ಫೋಟೋ ಆ್ಯಪ್ಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಸ್ಮಾರ್ಟ್ಫೋನ್ಗಳಲ್ಲಿ ಸ್ಟೋರೇಜ್ ಫುಲ್ (Storage Full) ಆದಾಗ ಈ ಅಪ್ಲಿಕೇಶನ್ ಮಾತ್ರ ತುಂಬಾನೇ ಸಹಕಾರಿಯಾಗುತ್ತದೆ. ಯಾಕೆಂದರೆ ಇಲ್ಲಿ ನಮ್ಮ ಮೊಬೈಲ್ನಲ್ಲಿರುವಂತಹ ಯಾವುದೇ ಫೋಟೋ, ವಿಡಿಯೋವನ್ನು ಆ್ಯಡ್ ಮಾಡಬಹುದಾಗಿದೆ. ಇದರಿಂದ ಸ್ಮಾರ್ಟ್ಫೋನ್ನಲ್ಲಿರುವಂತಹ ಸ್ಟೋರೇಜ್ ಸಮಸ್ಯೆಯನ್ನು ನಿವಾರಿಸಬಹುದು. ಇದೀಗ ಹೊಸ ಫೀಚರ್ ಒಂದು ಗೂಗಲ್ ಫೋಟೋ ಆ್ಯಪ್ನಲ್ಲಿ (Google Photos App) ಬಂದಿದ್ದು, ಇನ್ಮುಂದೆ ಈ ಅಪ್ಲಿಕೇಶನ್ನಲ್ಲು ಆಲ್ಬಮ್ ರೀತಿಯಲ್ಲಿ ಫೋಲ್ಡರ್ ಕ್ರಿಯೇಟ್ ಮಾಡಬಹುದು.
ಗೂಗಲ್ ಫೋಟೋ ಅಪ್ಲಿಕೇಶನ್ ಅನೇಕರಿಗೆ ಸ್ಟೋರೇಜ್ ಸಮಸ್ಯೆಯಲ್ಲಿ ಸಿಲುಕಿಕೊಂಡವರಿಗೆ ಸಹಕಾರಿಯಾಗಿದೆ. ಕಾರಣವೇನೆಂದರೆ ಇಲ್ಲಿ ಯಾವುದೇ ಫೋಟೋ, ವಿಡಿಯೋವನ್ನು ಜೀಮೇಲ್ ಮೂಲಕ ಆ್ಯಡ್ ಮಾಡಿಟ್ಟುಕೊಳ್ಳಬಹುದು. ಸದ್ಯ ಇನ್ಮುಂದೆ ಈ ಆ್ಯಪ್ನಲ್ಲಿ ಆಲ್ಬಮ್ ಮೂಲಕ ಫೋಲ್ಡರ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.
ಗೂಗಲ್ ಫೋಟೋ ಆ್ಯಪ್ನಲ್ಲಿ ಆಲ್ಬಮ್ ಕ್ರಿಯೇಟ್ ಮಾಡುವುದು ಹೇಗೆ?
ಗೂಗಲ್ ಫೋಟೋ ಆ್ಯಪ್ನಲ್ಲಿ ಎಷ್ಟು ಫೋಟೋ ಆ್ಯಡ್ ಮಾಡ್ಬಹುದು?
ಗೂಗಲ್ ಫೋಟೋ ಆ್ಯಪ್ ಸ್ಮಾರ್ಟ್‌ಫೋನ್ ಬಳಕೆದಾರರ ಸ್ಟೋರೇಜ್ ಸಮಸ್ಯೆಯನ್ನು ನಿವಾರಿಸಲಿರುವಂತಹ ಒಂದು ದೊಡ್ಡ ವೇದಿಕೆ ಎಂದು ಹೇಳ್ಬಹುದು. ಇನ್ನು ಈ ಆ್ಯಪ್ ಮೂಲಕ ಫೋಟೋ ಅಥವಾ ವಿಡಿಯೋವನ್ನು ಆ್ಯಡ್ ಮಾಡಿದ್ರೆ ಬೇರೆ ಯಾವುದೇ ಡಿವೈಸ್ನಲ್ಲೂ ನೋಡಬಹುದಾಗಿದೆ. ಆದರೆ ನಿಮ್ಮ ಗೂಗಲ್ ಅಕೌಂಟ್ಗೆ ಸೈಟ್ ಇನ್ ಆಗಬೇಕು ಅನ್ನೋದನ್ನು ಗಮನದಲ್ಲಿಡಿ. ಇನ್ನು ಈ ಗೂಗಲ್ ಆ್ಯಪ್ನಲ್ಲಿ ಬಳಕೆದಾರರು ಒಟ್ಟು 20 ಸಾವಿರ ಫೋಟೋ ಮತ್ತು ವಿಡಿಯೋಗಳನ್ನು ಆ್ಯಡ್ ಮಾಡಬಹುದಾಗಿದೆ.
ಗೂಗಲ್ನಿಂದ ಕ್ವಿಕ್ ಡಿಲೀಟ್ ಫೀಚರ್ ಬಿಡುಗಡೆ
ಗೂಗಲ್ ಕ್ರೋಮ್ ಪರಿಚಯಿಸಿರುವ ಕ್ವಿಕ್ ಡಿಲೀಟ್ ಫೀಚರ್ನ ಆ್ಯಕ್ಟಿವೇಶನ್ ಫೀಚರ್ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ಕಂಪೆನಿ ಬಿಡುಗಡೆ ಮಾಡಿಲ್ಲ. ಇದರ ಬಳಕೆ ಸಹ ಹೇಗೆ ಮಾಡುವುದು ಎನ್ನುದರ ಬಗ್ಗೆಯೂ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಆಯ್ಕೆಯು ಬಳಕೆದಾರು ಗೂಗಲ್ ಕ್ರೋಮ್ನಲ್ಲಿ ಮಾಡಿದಂತಹ ಸರ್ಚ್ ಹಿಸ್ಟರಿಯನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಬಹುದಾಗಿದೆ. ಇದರಿಂದ ಇನ್ಮುಂದೆ ನಿಮ್ಮ ಗೌಪ್ಯತೆಯನ್ನುಕಾಪಾಡಲು ಸುಲಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ