ಸ್ಮಾರ್ಟ್ಫೋನ್ (Smartphone) ಬಳಸದೇ ಇರುವವರು ಯಾರಿದ್ದಾರೆ ಹೇಳಿ. ಸ್ಮಾರ್ಟ್ಫೋನ್ ಎಂಬುದು ಪ್ರತಿಯೊಬ್ಬರ ಜೀವನದ ಅಗತ್ಯ ಸಾಧನವಾಗಿಬಿಟ್ಟಿದೆ. ಯಾಕೆಂದರೆ ಈಗಿನ ಟೆಕ್ನಾಲಜಿ (Technology) ಅಷ್ಟು ಮುಂದುವರೆದಿದೆ. ಕಾರಣ ಮನೆಯಲ್ಲಿಯೇ ಕುಳಿತು ಯಾವುದೇ ವಸ್ತು ಆಹಾರವನ್ನು ಆರ್ಡರ್ ಮಾಡುವುದು, ಬ್ಯಾಂಕ್ ವಹಿವಾಟು ಮಾಡುವುದು ಇವೆಲ್ಲವೂ ಈ ಮೊಬೈಲ್ನಲ್ಲಿಯೇ ಮಾಡಬಹುದಾಗಿದೆ. ಆದರೆ ಸ್ಮಾರ್ಟ್ಫೋನ್ ಬಳಸುವಾಗಲೂ ಅಷ್ಟೇ ಎಚ್ಚರದಿಂದ ಇರಬೇಕು. ಟಕ್ನಾಲಜಿಗಳು ಬೆಳೆಯುವುದನ್ನು ನೋಡಿ ಹ್ಯಾಕರ್ಸ್ಗಳು ಸಹ ತುಂಬಾ ಬೆಳವಣಿಗೆಯಾಗುತ್ತಿದ್ದಾರೆ. ಆದರೆ ಇದಕ್ಕೆ ಕೆಲವು ಕಾರಣಗಳಿವೆ. ಆದರೆ ಕೆಲವೊಮ್ಮೆ ಬಳಕೆದಾರರಿಂದಲೇ ತಪ್ಪುಗಳು ಸಂಭವಿಸುತ್ತದೆ. ಆದ್ದರಿಂದ ನಿಮ್ಮ ಮೊಬೈಲ್ನ ಗೌಪ್ಯತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿರುತ್ತದೆ.
ಇತ್ತೀಚೆಗೆ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದ್ದೇ ಇದೆ. ಆದರೆ ಕೆಲವರು ಮಾತ್ರ ತಮ್ಮ ಗೌಪ್ಯತೆಯನ್ನು ಸ್ಮಾರ್ಟ್ಫೋನ್ನಲ್ಲಿ ಕಾಪಾಡುವುದರಲ್ಲಿ ವಿಫಲವಾಗುತ್ತಾರೆ. ಇದೀಗ ನಾವು ನಿಮಗೊಂದು ಉತ್ತಮ ಸ್ಮಾರ್ಟ್ಫೋನ್ ಟಿಪ್ಸ್ ಒಂದನ್ನು ಹೇಳಿಕೊಡ್ತೀವಿ. ಒಂದು ವೇಳೆ ಇದನ್ನು ನೀವು ಬಳಸಿದ್ರೆ ಗ್ಯಾರಂಟಿ ಶಾಕ್ ಆಗ್ತೀರಾ.
ಸ್ಕ್ರೀನ್ ಪಿನ್ನಿಂಗ್ ಮೂಲಕ ಮೊಬೈಲನ್ನು ಲಾಕ್ ಮಾಡಿ
ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಇತರರ ಕೈ ಗೆ ನಾವು ಮೊಬೈಲ್ ಅನ್ನು ನೀಡುತ್ತೇವೆ. ಇದು ನಿಮ್ಮ ಗೌಪ್ಯತೆಯನ್ನು ಕಾಪಾಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ನೀವು ಇತರರಿಗೆ ಮೊಬೈಲ್ ನೀಡುವ ಮುನ್ನ ಸ್ಕ್ರೀನ್ ಪಿನ್ನಿಂಗ್ ಅನ್ನು ಆನ್ ಮಾಡಿದ್ರೆ ನಿಮ್ಮ ಸೀಮಿತ ಆ್ಯಪ್ಗಳು ಮಾತ್ರ ಓಪನ್ ಆಗುವಂತೆ ಇದು ಮಾಡುತ್ತದೆ. ಈ ಮೂಲಕ ನೀವು ನಿಗದಿ ಪಡಿಸಿದ ಆ್ಯಪ್ಗಳನ್ನು ಬಿಟ್ಟು ಬೇರೆ ಆ್ಯಪ್ಗಳನ್ನು ಓಪನ್ ಮಾಡಲಾಗುವುದಿಲ್ಲ.
ಇದನ್ನೂ ಓದಿ: 55 ಇಂಚಿನ ಸ್ಮಾರ್ಟ್ ಟಿವಿ ಮೇಲೆ 1 ಲಕ್ಷಕ್ಕೂ ಹೆಚ್ಚು ರಿಯಾಯಿತಿ ಲಭ್ಯ! ಯಾವುದು ಆ ಸಾಧನ?
ವಿಶೇಷವಾಗಿ ಇದು ಪೋಷಕರು ತಮ್ಮ ಮಕ್ಕಳಿಗೆ ಫೋನ್ ಕೊಡುವಾಗ ಸಹ ಈ ಸ್ಕ್ರೀನ್ ಪಿನ್ನಿಂಗ್ ಆಯ್ಕೆಯು ಉಪಯುಕ್ತ ಎನಿಸುತ್ತದೆ. ಹಾಗಾದರೆ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಈ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಈ ಕೆಳಗಿನ ಲೇಖನದ ಮೂಲಕ ತಿಳಿಯಿರಿ.
ಆಂಡ್ರಾಯ್ಡ್ನಲ್ಲಿ ಸ್ಕ್ರೀನ್ ಪಿನ್ನಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಸ್ಕ್ರೀನ್ ಪಿನ್ನಿಂಗ್ ಆಯ್ಕೆಯು ಸ್ಮಾರ್ಟ್ಫೋನ್ನಲ್ಲಿ ಪಿನ್ ಮಾಡಿರುವ ಸ್ಕ್ರೀನ್ ಬಿಟ್ಟು ಫೋನಿನಲ್ಲಿ ಇತರೆ ಯಾವುದೇ ಆ್ಯಪ್ಗಳನ್ನಾಗಲಿ, ಫೋಲ್ಡರ್ಗಳನ್ನಾಗಲೀ ಓಪನ್ ಮಾಡಲು ಅವರಿಗೆ ಅನುಮತಿ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಸಂದರ್ಭದಲ್ಲಿ ಬೇರೆಯವರ ಕೈಗೆ ಸ್ಮಾರ್ಟ್ಫೋನ್ ಕೊಡುವಾಗ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಯನ್ನು ಸಕ್ರಿಯ ಮಾಡಿ ಕೊಡುವುದು ಉತ್ತಮ. ಇದರಿಂದ ಏನೆಲ್ಲಾ ನೋಡಬಹುದು ಎಂಬುದು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಹಾಗೇ ನೀವು ಪಿನ್ ಮಾಡಿಟ್ಟ ಸ್ಕ್ರೀನ್ ಬಿಟ್ಟು ಬೇರೆ ಯಾವುದನ್ನೂ ಓಪನ್ ಮಾಡಲಾಗುವುದಿಲ್ಲ.
ಆಂಡ್ರಾಯ್ಡ್ನಲ್ಲಿ ಸ್ಕ್ರೀನ್ ಪಿನ್ನಿಂಗ್ ಆಯ್ಕೆ
ಸ್ಕ್ರೀನ್ ಪಿನ್ನಿಂಗ್ ಆಪ್ಷನ್ ಇತ್ತೀಚೆಗೆ ಆಂಡ್ರಾಯ್ಡ್ ಫೋನ್ಗಳಲ್ಲಿಅಳವಡಿಸಲಾದ ಫೀಚರ್ಗಳಲ್ಲಿ ಬಹಳಷ್ಟು ವಿಶೇಷ ಎನಿಸಿಕೊಂಡಿದೆ. ಈ ಆಯ್ಕೆಯು ಇತ್ತೀಚಿನ ಹೊಸ ಆಂಡ್ರಾಯ್ಡ್ ಓಎಸ್ ವರ್ಷನ್ಗಳಲ್ಲಿ ಮಾತ್ರ ಲಭ್ಯವಿದೆ. ಹೀಗಾಗಿ ಈ ರೀತಿಯ ಸೌಲಭ್ಯ ಪಡೆಯಲು ಬಳಕೆದಾರರು ಪ್ರತ್ಯೇಕವಾಗಿ ಯಾವುದೇ ಥರ್ಡ್ಪಾರ್ಟಿ ಆಪ್ಗಳನ್ನು ಇನ್ಸ್ಟಾಲ್ ಮಾಡುವ ಅಗತ್ಯವೇ ಇರುವುದಿಲ್ಲ.
ಮೊಬೈಲ್ನಲ್ಲಿ ಸ್ಕ್ರೀನ್ ಪಿನ್ನಿಂಗ್ ಹೇಗೆ ಮಾಡುವುದು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ