Tech Tips: ಮನೆಯಲ್ಲಿರುವ ಟಿವಿಯನ್ನು ರಿಮೋಟ್​ ಮೂಲಕ ಆಫ್​ ಮಾಡ್ತೀರಾ? ಏನಾಗುತ್ತೆ ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿಶೇಷವಾಗಿ ಶೇ.70 ರಷ್ಟು ಜನರು ಟಿವಿಯನ್ನು ಮೇನ್ ಸ್ವಿಚ್​ ಮೂಲಕ ಆಫ್​ ಮಾಡುವ ಬದಲು, ರಿಮೋಟ್​ ಮೂಲಕ ಆಫ್​ ಮಾಡಿ ಸ್ಟ್ಯಾಂಡ್​ ಬೈ ಮೋಡ್​ನಲ್ಲಿ ಇಡುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ವಿದ್ಯುತ್​ ಬಿಲ್​ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಜೊತೆಗೆ ಟಿವಿಗೂ ತೊಂದರೆಯುಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಹಾಗಿದ್ರೆ ಈ ರೀತಿ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಾಳಗುತ್ತದೆ ಎಂದು ಈ ಲೇಖನದಲ್ಲಿದೆ ಓದಿ.

ಮುಂದೆ ಓದಿ ...
 • Share this:

  ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಎಲೆಕ್ಟ್ರಾನಿಕ್ಸ್​ ಸಾಧನಗಳು (Electronics Device) ತುಂಬಿಹೋಗಿವೆ. ಅದ್ರಲ್ಲೂ ಬೇಸಿಗೆ ಕಾಲ (Summer) ಬಂದ್ರೆ ಸಾಕು ಮನೆಯಲ್ಲಿ ಫ್ಯಾನ್​, ಎಸಿ, ಏರ್ ಕೂಲರ್ ಈ ರೀತಿಯ ಸಾಧನಗ್ಳು ರನ್ ಆಗುತ್ತಿರುತ್ತದೆ. ಅದಕ್ಕಾಗಿಯೇ ಬೇಸಿಗೆ ಸಮಯದಲ್ಲಿ ವಿದ್ಯುತ್​ ಬಿಲ್ (Curtrent Bill)​ ಸಹ ಹೆಚ್ಚೇ ಬರುತ್ತದೆ. ಹೆಚ್ಚಿನ ಜನರು ಯಾವುದೇ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಆನ್ ಮಾಡಿದ್ರೆ ನಂತರ ಅದನ್ನು ಸಂಪೂರ್ಣವಾಗಿ ಆಫ್ ಮಾಡುವ ಬದಲಿಗೆ ಸ್ಟ್ಯಾಂಡ್​ ಬೈ ಮೋಡ್​ನಲ್ಲಿಟ್ಟು, ರಿಮೋಟ್​ನಲ್ಲಿ ಆಫ್​ ಮಾಡಿಡುತ್ತಾರೆ. ಆದರೆ ಈ ರೀತಿ ಯಾವತ್ತೂ ಮಾಡ್ಬಾರ್ದು ಎನ್ನುತ್ತಾರೆ ತಜ್ಞರು. ಇನ್ನು ಟಿವಿಯನ್ನು (TV) ಸಹ ರಿಮೋಟ್​ ಮೂಲಕ ಆಫ್​ ಮಾಡುವುದರಿಂದ ಅನೇಕ ಸಮಸ್ಯೆಗಳು, ವಿದ್ಯುತ್​ ಬೆಲೆಯಲ್ಲಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.


  ವಿಶೇಷವಾಗಿ ಶೇ.70 ರಷ್ಟು ಜನರು ಟಿವಿಯನ್ನು ಮೇನ್ ಸ್ವಿಚ್​ ಮೂಲಕ ಆಫ್​ ಮಾಡುವ ಬದಲು, ರಿಮೋಟ್​ ಮೂಲಕ ಆಫ್​ ಮಾಡಿ ಸ್ಟ್ಯಾಂಡ್​ ಬೈ ಮೋಡ್​ನಲ್ಲಿ ಇಡುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ವಿದ್ಯುತ್​ ಬಿಲ್​ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಜೊತೆಗೆ ಟಿವಿಗೂ ತೊಂದರೆಯುಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಹಾಗಿದ್ರೆ ಈ ರೀತಿ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಾಳಗುತ್ತದೆ ಎಂದು ಈ ಲೇಖನದಲ್ಲಿದೆ ಓದಿ.


  ವಿದ್ಯುತ್ ಉಳಿಸಲು ಐಡಿಯಾ


  ಹೆಚ್ಚಿನ ಜನರು ಮನೆಯಲ್ಲಿ ಟಿವಿ, ಫ್ಯಾನ್, ಎಸಿ ಈ ತರಹದ ಹಲವಾರು ಎಲೆಕ್ಟ್ರಾನಿಕ್ಸ್​ ಸಾಧನಗಳನ್ನು ಬಳಸುತ್ತಾರೆ. ಇವೆಲ್ಲವೂ ಬೇಸಿಗೆಯ ಸಮಯದಲ್ಲಿ ನಿರಂತರವಾಗಿ ರನ್ ಆಗುತ್ತಿರುತ್ತದೆ. ಆದರೆ ಈ ಸಾಧನಗಳನ್ನು ಕೆಲವೊಂದು ಬಾರಿ ರಿಮೋಟ್​ ಮೂಲಕ ಆಫ್​ ಮಾಡಿ ಸ್ಟ್ಯಾಂಡ್ ಬೈ ಮೋಡ್​ನಲ್ಲಿಡುತ್ತಾರೆ. ಮೇನ್​ ಸ್ವಿಚ್​ ಆಫ್ ಮಾಡೋದೆ ಇಲ್ಲ. ಆದ್ದರಿಂದ ಈ ರೀತಿ ಮಾಡುವುದರಿಂದ ವಿದ್ಯುತ್​ ಬಿಲ್​ ಸಹ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ರಿಮೋಟ್​ ಮೂಲಕ ಆಫ್​ ಮಾಡುವ ಬದಲು, ಮೇನ್​ ಸ್ವಿಚ್​ನಲ್ಲಿ ಆಫ್​ ಮಾಡ್ಲೇ ಬೇಕು.


  ಇದನ್ನೂ ಓದಿ: ಮನೆಯಲ್ಲಿ ಎಸಿ ಇದ್ರೂ ಸರಿಯಾಗಿ ಗಾಳಿ ಬರ್ತಿಲ್ವಾ? ಈ ಟ್ರಿಕ್ಸ್ ಫಾಲೋ ಮಾಡಿ


  ಸ್ಟ್ಯಾಂಡ್​ ಬೈ ಮೋಡ್​​ನಲ್ಲಿ ಟಿವಿ ಎಷ್ಟು ವಿದ್ಯುತ್​ ಅನ್ನು ಬಳಸುತ್ತದೆ?


  ಇನ್ನು ಸಾಮಾನ್ಯವಾಗಿ ಒಂದು ಟಿವಿಯನ್ನು ಸ್ಟ್ಯಾಂಡ್​ ಬೈ ಮೋಡ್​ನಲ್ಲಿ ಇರಿಸಿದಾಗ ವಿದ್ಯುತ್​ ಮಾತ್ರ ಕಾರ್ಯನಿರ್ವಹಸುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಗಂಟೆಗೆ 10 ವ್ಯಾಟ್​​ಗಳಷ್ಟು ವಿದ್ಯುತ್​ ಅನ್ನು ಬಳಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇನ್ನು ಈ ವಿದ್ಯುತ್​ ಬಳಕೆ ನೀವಿರುವಂತಹ ಸ್ಥಳದ ವೋಲ್ಟೇಜ್​ಗೆ ತಕ್ಕಂತೆ ಬದಲಾಗುತ್ತದೆ.


  ಸಾಂಕೇತಿಕ ಚಿತ್ರ


  ಇನ್ನು ನಿಮ್ಮ ಸಾಧನದ ಗುಣಮಟ್ಟದ ಮೇಲೂ ಈ ಸ್ಟ್ಯಾಂಡ್​ ಬೈ ಮೋಡ್​​ ನಲ್ಲಿಡುವುದರಿಂದ ಪರಿಣಾಮ ಬೀರಬಹುದು. ಇನ್ನು ಟಿವಿಯನ್ನು ಸ್ಟ್ಯಾಂಡ್ ಬೈ ಮೋಡ್​ನಲ್ಲಿರಿಸಿ ಕೇವಲ ರಿಮೋಟ್​​  ಮೂಲಕ ಆಫ್​ ಮಾಡಿ, ಮೇನ್​ ಸ್ವಿಚ್​ನಲ್ಲಿ ಆಫ್ ಮಾಡದಿದ್ದರೆ, ವರ್ಷಕ್ಕೆ 1200 ರೂಪಾಯಿಯಂತೆ ಪಾವತಿಸುತ್ತೀರಿ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಯಾವತ್ತೂ ಟಿವಿಯನ್ನು ಆಫ್​ ಮಾಡುವಾಗ ಮೇನ್​ ಸ್ವಿಚ್ ಅನ್ನು ಆಫ್ ಮಾಡುವುದನ್ನು ಮರೆಯಬೇಡಿ.
  ಬೇಸಿಗೆ ಕಾಲ ಬಂದಾಗ ಎಷ್ಟೋ ಜನರು ಹೊಸ ಎಸಿ, ಫ್ಯಾನ್​ ಖರೀದಿಸಲು ರೆಡಿಯಾಗುತ್ತಾರೆ. ಖರೀದಿಸಿದ ಕೆಲದಿನಗಳ ನಂತರ ಎಸಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ನಿಮ್ಮ ಮನೆಯಲ್ಲೇ ಎಸಿಯನ್ನು ಸರಿ ಮಾಡ್ಬಹುದು.


  ಎಸಿ ಮೋಟಾರ್​ ಚೆಕ್​ ಮಾಡ್ತಾ ಇರಿ


  ಎಸಿ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಮುಖ್ಯವಾಗಿ ಅದರ ಮೋಟಾರ್​ ಸರಿಯಾಗಿ ಕಾರ್ಯನಿರ್ವಹಿಸಬೇಕು. ಎಸಿಯಲ್ಲಿನ ಮೋಟಾರ್​  ಬಹಳ ಮುಖ್ಯವಾಗಿರುತ್ತದೆ. ಎಸಿಯಲ್ಲಿನ ಮೋಟಾರ್​ ಹಾಳಾಗಲು ಮುಖ್ಯ ಕಾರಣ ಮನೆಯಲ್ಲಾಗುವ ವಿದ್ಯುತ್​​ನ ಏರಿಳಿತಗಳು. ಈ ರೀತಿಯಾದಾಗ ಎಸಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಎಸಿ ಮೆಕ್ಯಾನಿಕ್​ ಅನ್ನು ಅಥವಾ ಎಸಿ ಕಂಪೆನಿಯನ್ನು ಸಂಪರ್ಕಿಸಬೇಕು.

  Published by:Prajwal B
  First published: