ಐಫೋನ್ಗಳು (IPhones) ಎಂದರೆ ಎಲ್ಲರಿಗೂ ಇಷ್ಟನೇ. ಐಫೋನ್ಗಳು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದದ್ದು ಅವುಗಳ ಫೀಚರ್ಸ್ ಮೂಲಕ ಅಂತಾನೇ ಹೇಳ್ಬಹುದು. ಹೆಚ್ಚಿನ ಜನರಿಗೆ ಐಫೋನ್ನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಎಂಬುದೇ ಗೊತ್ತಿಲ್ಲಾ. ಈ ಮೆಸೇಜಿಂಗ್ ಆ್ಯಪ್ಗಳಲ್ಲೇ (Messaging Apps) ಹಲವಾರು ಫೀಚರ್ಸ್ಗಳು ಲಭ್ಯವಿದೆ. ಅದರಲ್ಲಿ ಐಮೆಸೇಜಸ್ ಆ್ಯಪ್ನಲ್ಲೂ ಒಂದು ಸ್ಪೆಷರ್ಲ ಫೀಚರ್ ಅನ್ನು ಅಳವಡಿಸಿದ್ದಾರೆ. ಅದೇ ಇನ್ನಿಸಿಬಲ್ ಇಂಕ್ ಎಂಬ ಫೀಚರ್. ನೀವು ಎಷ್ಟೋ ವರ್ಷಗಳಿಂದ ಐಫೋನ್ ಅನ್ನು ಬಳಸುತ್ತಿರಬಹುದು ಆದರೆ ಐಮೆಸೇಜ್ನಲ್ಲಿ (IMessage) ಇಂತಹ ಫೀಚರ್ ನೀವು ಎಂದಿಗೂ ನೋಡದೇ ಇರಬಹುದು. ಇನ್ವಿಸಿಬಲ್ ಇಂಕ್ ಫೀಚರ್ (Invisible Inc Features) ಅನ್ನು ಬಳಸಿಕೊಂಡು ನೀವು ಆ್ಯಪಲ್ ಸಾಧನವನ್ನು ಹೊಂದಿರುವ ನಿಮ್ಮ ಸ್ನೇಹಿತರಿಗೆ ಇನ್ವಿಸಿಬಲ್ ಮೆಸೇಜ್ ಅನ್ನು ಸುಲಭವಾಗಿ ಕಳುಹಿಸಬಹುದು.
ಹೌದು, ಹೆಚ್ಚಿನವರು ಐಫೋನ್ ಬಳಕೆ ಮಾಡ್ತಾರೆ. ಆದರೆ ಕೆಲವರಿಗೆ ಐಮೆಸೇಜ್ ಆ್ಯಪ್ ಮೂಲಕ ಇನ್ವಿಸಿಬಲ್ ಮೆಸೇಜ್ ಕಳುಹಿಸುವ ಟೆಕ್ನಾಲಜಿ ಗೊತ್ತಿಲ್ಲ. ಈಗ ಐಮೆಸೇಜ್ ಮೂಲಕವೂ ಐಫೋನ್ಗಳನ್ನು ಹೊಂದಿರುವವರಿಗೆ ಈ ಫೀಚರ್ಗಳನ್ನು ಬಳಕೆ ಮಾಡಬಹುದಾಗಿದೆ. ಹಾಗಿದ್ರೆ ಇದನ್ನು ಹೇಗೆ ಬಳಕೆ ಮಾಡುವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಯಾವ ರೀತಿ ಇನ್ವಿಸಿಬಲ್ ಮೆಸೇಜ್ ಕಳುಹಿಸುವುದು?
ಏನು ಲಾಭ?
ಈ ಇನ್ವಿಸಿಬಲ್ ಇಂಕ್ ಫೀಚರ್ ಮೂಲಕ ನಿಮ್ಮ ಚಾಟ್ ಅನ್ನು ಇನ್ನೊಬ್ಬರು ಓದದಂತೆ ಮಾಡಬಹುದು. ಕೆಲವೊಂದು ಬಾರಿ ಅನಿವಾರ್ಯವಾಗಿ ನಾವು ಇನ್ನೊಬ್ಬರ ಕೈಗೆ ಮೊಬೈಲ್ ಅನ್ನು ನೀಡುತ್ತೇವೆ. ಆದರೆ ಅವರು ನಮ್ಮ ಮೊಬೈಲ್ನಲ್ಲಿ ನಮ್ಮ ಚಾಟ್ ಓದುವ ಸಾಧ್ಯತೆಗಳಿರುತ್ತದೆ. ಆದರೆ ಇನ್ವಿಸಿಬಲ್ ಮೆಸೇಜ್ ಕಳುಹಿಸಿದರೆ ಮತ್ತೊಮ್ಮೆ ಓದುವಂತಹ ಅವಕಾಶಗಳು ಕಾಣುವುದಿಲ್ಲ. ಈ ಫೀಚರ್ ಮೂಲಕ ಇದು ಚಾಟ್ ಮರೆಯಾಗುವಂತೆ ಮಾಡುತ್ತದೆ.
ನಿಮ್ಮ ಚಾಟ್ ಅನ್ನು ಅನಿಮೇಟ್ ಕೂಡ ಮಾಡಬಹುದು
ಹೌದು, ಇತ್ತೀಚಿನ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಅಂದರೆ ನೀವು ಐಫೋನ್ ಬಳಸುತ್ತಿದ್ದರೆ ನಿಮ್ಮ ಐಮೆಸೇಜಸ್ ಆ್ಯಪ್ನಲ್ಲಿ ನಿಮ್ಮ ಚಾಟ್ ಅನ್ನು ಅನಿಮೇಟ್ ಮಾಡಿಯೂ ಕಳುಹಿಸಬಹುದಾಗಿದೆ. ಈ ಫೀಚರ್ ಅನ್ನು ಕೂಡ ಇನ್ವಿಸಿಬಲ್ ಇಂಕ್ ಫೀಚರ್ನಂತೆಯೇ ಸಕ್ರಿಯಗೊಳಿಸಬಹುದು ಮತ್ತು ಅದೇ ರೀತಿ ಕಾರ್ಯನಿರ್ವಹಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ