• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Spam Calls: ನಿಮಗೆ ಆಗಾಗ ಫ್ರಾಡ್ ಕಾಲ್ಸ್ ಬರುತ್ತಾ? ಹಾಗಾದ್ರೆ ಸ್ಪ್ಯಾಮ್ ಕರೆ ಬ್ಲಾಕ್ ಮಾಡೋದಕ್ಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್

Spam Calls: ನಿಮಗೆ ಆಗಾಗ ಫ್ರಾಡ್ ಕಾಲ್ಸ್ ಬರುತ್ತಾ? ಹಾಗಾದ್ರೆ ಸ್ಪ್ಯಾಮ್ ಕರೆ ಬ್ಲಾಕ್ ಮಾಡೋದಕ್ಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಎಲ್ಲಿ ನೋಡಿದ್ರೂ ಮೊಬೈಲ್​ ಹ್ಯಾಕ್​, ಸ್ಪ್ಯಾಮ್​​ ಕರೆಗಳ ಸುದ್ದಿಯೇ ಕಾಣ ಸಿಗುತ್ತಿದೆ. ಆದರೆ ಇದೀಗ ಟ್ರಾಯ್​ ಸಂಸ್ಥೆ ಇದನ್ನು ನಿರ್ಬಂಧಿಸುವ ಉದ್ದೇಶದಿಂದ ಹೊಸ ಟೆಕ್ನಾಲಜಿಯನ್ನು ಕಂಡುಕೊಂಡಿದೆ. ಹಾಗಿದ್ರೆ ನಿಮಗೆ ಬರುವಂತಹ ಸ್ಪ್ಯಾಮ್​​ ಕರೆಯನ್ನು ತಪ್ಪಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್.

ಮುಂದೆ ಓದಿ ...
  • Share this:

ಇತ್ತೀಚೆಗಂತೂ ದೇಶದ ಹೆಚ್ಚಿನ ಜನರು ಅನಗತ್ಯ ಫೋನ್ ಕರೆಗಳು (Spam Phone Calls) ಅಥವಾ ಎಸ್​​ಎಮ್​​ಎಸ್​ ನಿಂದ ತೊಂದರೆಗೊಳಗಾಗಿದ್ದಾರೆ. ಸ್ಥಳೀಯ ವಲಯಗಳ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಸಮೀಕ್ಷೆಯಲ್ಲಿ ಒಳಪಟ್ಟಿರುವ ಶೇಕಡಾ 64 ರಷ್ಟು ಭಾರತೀಯರು ಪ್ರತಿದಿನ 3 ಅಥವಾ ಹೆಚ್ಚಿನ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ ಎಂದು ಕಂಡುಬಂದಿದೆ. ಟೆಲಿಮಾರ್ಕೆಟಿಂಗ್ ಕರೆಗಳ (Telemarketing Calls) ಕಾರಣದಿಂದಾಗಿ, ಕೆಲವೊಮ್ಮೆ ಪ್ರಮುಖ ಕರೆಗಳು ಸಹ ತಪ್ಪಿಹೋಗುತ್ತವೆ. ಇನ್ನು ಈ ಮಧ್ಯೆ ಹ್ಯಾಕರ್ಸ್​​ಗಳು ಸಹ ಬಳಕೆದಾರರನ್ನು ಹ್ಯಾಕ್ ಮಾಡಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಎಲ್ಲಿ ಹೋದರೂ ಹ್ಯಾಕ್ (Hack)​, ಸ್ಪ್ಯಾಮ್​ ಕಾಲ್​ಗಳು ಎಂಬ ದೂರುಗಳೇ ಕೇಳಿಬರುತ್ತಿದೆ.


ಇತ್ತೀಚೆಗೆ ಎಲ್ಲಿ ನೋಡಿದ್ರೂ ಮೊಬೈಲ್​ ಹ್ಯಾಕ್​, ಸ್ಪ್ಯಾಮ್​​ ಕರೆಗಳ ಸುದ್ದಿಯೇ ಕಾಣ ಸಿಗುತ್ತಿದೆ. ಆದರೆ ಇದೀಗ ಟ್ರಾಯ್​ ಸಂಸ್ಥೆ ಇದನ್ನು ನಿರ್ಬಂಧಿಸುವ ಉದ್ದೇಶದಿಂದ ಹೊಸ ಟೆಕ್ನಾಲಜಿಯನ್ನು ಕಂಡುಕೊಂಡಿದೆ. ಹಾಗಿದ್ರೆ ನಿಮಗೆ ಬರುವಂತಹ ಸ್ಪ್ಯಾಮ್​​ ಕರೆಯನ್ನು ತಪ್ಪಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್.


ಸ್ಪ್ಯಾಮ್ ಕರೆ ಎಂದರೇನು?


ಸ್ಪ್ಯಾಮ್ ಕರೆಗಳು ಅಸಂಬದ್ಧ ಕರೆಗಳು ಮತ್ತು ಸಾಕಷ್ಟು ಫೋನ್ ಸಂಖ್ಯೆಗಳಿಗೆ ಬರುವ ಸಂದೇಶಗಳಾಗಿವೆ. ಕೆಲವು ಸ್ಪ್ಯಾಮ್ ಕರೆಗಳು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಮತ್ತು ಇನ್ನೂ ಅನೇಕ ವಿಷಯಗಳಿಗಾಗಿ ಬರುತ್ತವೆ. ಆದರೆ ಸ್ಪ್ಯಾಮ್ ಕರೆಗಳಿಂದ ಉಪಯೋಗದ ಬದಲು ಹೆಚ್ಚಿನ ಗ್ರಾಹಕರಿಗೆ ಕಿರಿಕಿರಿಯಾಗುತ್ತದೆ. ಅವುಗಳನ್ನು ತಪ್ಪಿಸುವುದು ಹೇಗೆ ಅಂತಾನೇ ಚಿಂತಿಸುತ್ತಿರುತ್ತಾರೆ. ಇನ್ನೂ ಮುಖ್ಯವಾಗಿ ಡೆಟಾದ ಪ್ರಕಾರ ಅತಿ ಹೆಚ್ಚು ಸ್ಪ್ಯಾಮ್ ಕರೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಎಂದು ಟ್ರೂ ಕಾಲರ್ ಹೇಳಿದೆ.


ಇದನ್ನೂ ಓದಿ: ಇತ್ತೀಚಿನ ಸ್ಮಾರ್ಟ್​​ಫೋನ್​ಗಳಲ್ಲಿ ಹೆಡ್​​ಫೋನ್​ ಜ್ಯಾಕ್​ ಏಕೆ ಇಲ್ಲ ಗೊತ್ತಾ? ಇದಕ್ಕೂ ಒಂದು ಕಾರಣವಿದ್ಯಂತೆ


  1. ಡು ನಾಟ್​ ಡಿಸ್ಟರ್ಬ್ (DND) ಆನ್ ಮಾಡಿ


ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಅನಗತ್ಯ ಕರೆಗಳನ್ನು ನಿರ್ಬಂಧಿಸುವ ರಾಷ್ಟ್ರೀಯ ಗ್ರಾಹಕರ ಆದ್ಯತೆಯ ನೋಂದಣಿ (NPCR) ಅನ್ನು ಪ್ರಾರಂಭಿಸಿದೆ. ಈ ಟೆಕ್ನಾಲಜಿ ಮೂಲಕ ನೀವು ಟೆಲಿಮಾರ್ಕೆಟರ್ಸ್ ಅಥವಾ ಯಾವುದೇ ಸ್ಪ್ಯಾಮ್​ ಕರೆಗಳನ್ನು ಬ್ಲಾಕ್​ ಮಾಡಿಡಬಹುದು. DND ಅನ್ನು ಸಕ್ರಿಯಗೊಳಿಸಲು ಕೆಳಗಿನ ಹಂತಗಳನ್ನು ಫಾಲೋ ಮಾಡಿ.


ಸಾಂಕೇತಿಕ ಚಿತ್ರ


  • ಮೊದಲು ಮೆಸೇಜ್​ ಆಯ್ಕೆಗೆ ಹೋಗಿ. ನಂತರ ಅಲ್ಲಿ START ಎಂದು ಟೈಪ್ ಮಾಡಿ1909 ನಂಬರ್​​ಗೆ ಕಳುಹಿಸಿ.  ನಂತರ ಅಲ್ಲಿ ಕೋಡ್​ಗಳು ಸಹ ನಿಮಗಾಗಿ ಬರುತ್ತದೆ.

  • ಅಲ್ಲಿ ನೀವು ಬ್ಲಾಕ್​ ಮಾಡಲು ಬಯಸುವಂತಹ ಕೋಡ್ ಅನ್ನು ಆಯ್ಕೆ ಮಾಡಿ. ಅದಕ್ಕೆ ಕಾರಣವನ್ನೂ ನೀಡ್ಬೇಕು.

  • 24 ಗಂಟೆಗಳ ಒಳಗೆ ನಿಮ್ಮ ಫೋನ್​ನಲ್ಲಿ ಡಿಎನ್​ಡಿ ಆಯ್ಕೆ ಆನ್ ಆಗುತ್ತದೆ.


ಸ್ಪ್ಯಾಮ್​ ಕಾಲ್​ಗಳನ್ನು ಹಸ್ತಚಾಲಿತವಾಗಿಯೂ ಬ್ಲಾಕ್ ಮಾಡ್ಬಹುದು


ಇನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಇದಕ್ಕಾಗಿ ಕಾಲ್​​ ಟ್ಯಾಬ್‌ಗೆ ಹೋಗ್ಬೇಕು. ನಂತರ ನಿಮಗೆ ಕರೆ ಬಂದ ನಂಬರ್​ ಅನ್ನು ಹೋಲ್ಡ್​ ಮಾಡಿಟ್ಟುಕೊಳ್ಳಿ. ಅಲ್ಲಿ ನಿಮಗೆ ಬ್ಲಾಕ್​ ಮತ್ತು ರಿಪೋರ್ಟ್ ಆಯ್ಕೆ ಸಿಗುತ್ತದೆ.




ಟ್ರೂ ಕಾಲರ್​ ಬಳಸಿ

top videos


    ಟ್ರೂಕಾಲರ್‌ನಂತಹ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುತ್ತವೆ. ಆದಾಗ್ಯೂ, ಅವರ ವೈಶಿಷ್ಟ್ಯಗಳನ್ನು ಬಳಸಲು ಗ್ರಾಹಕರು ಹಣ ಪಾವತಿಸಬೇಕಾಗುತ್ತದೆ. ಚಂದಾದಾರಿಕೆ ಶುಲ್ಕದ ಮೇಲೆ, ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಸಂಖ್ಯೆ ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸುತ್ತವೆ. ಈ ಕ್ಲೌಡ್-ಆಧಾರಿತ ಡೇಟಾಬೇಸ್ ಗೌಪ್ಯತೆಯ ದೃಷ್ಟಿಕೋನದಿಂದ ಕೆಲವು ಅನಾನುಕೂಲಗಳನ್ನು ಉಂಟುಮಾಡಬಹುದು. ಆದ್ದರಿಂದ, ನೀವು ಅಂತಹ ಅಪ್ಲಿಕೇಶನ್‌ಗಳನ್ನು ಬಳಸಲು ಬಯಸದಿದ್ದರೆ, ಬೇರೆ ಮಾರ್ಗಗಳನ್ನು ಅನುಸರಿಸಬಹುದು. .

    First published: